ಆಲಿಯಾ ಭಟ್‌, ಬಾಲಿವುಡ್‌ನ ಖ್ಯಾತ ನಟಿಯರಲ್ಲೊಬ್ಬರು. ಕೇವಲ 11 ವರ್ಷಗಳ ಅವಧಿಯಲ್ಲಿ, ಆಲಿಯಾ ಭಟ್ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರೆಂದು ಗುರುತಿಸಲ್ಪಟ್ಟಿದ್ದಾರೆ. ಹೀಗಿರುವಾಗ ನಟಿಯ ಲೈಫ್‌ಸ್ಟೈಲ್‌ ಕೂಡಾ ಸಖತ್ ಲಕ್ಸುರಿಯಸ್ ಆಗಿದೆ. ಹಲವು ದುಬಾರಿ ವಸ್ತುಗಳ ಒಡತಿ ಆಲಿಯಾ..

ಆಲಿಯಾ ಭಟ್‌, ಬಾಲಿವುಡ್‌ನ ಖ್ಯಾತ ನಟಿಯರಲ್ಲೊಬ್ಬರು. ಹಲವು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ತಮ್ಮ ಅದ್ಭುತವಾದ ಅಭಿನಯದಿಂದಾಗಿ ನಟಿಸಿದ ಹಲವು ಚಿತ್ರಗಳಿಗೆ ರಾಜ್ಯ, ರಾಷ್ಟ್ರೀಯ ಪ್ರಶಸ್ತಿಯನ್ನು ಸಹ ಪಡೆದುಕೊಂಡಿದ್ದಾರೆ. 19ನೇ ವಯಸ್ಸಿನಲ್ಲಿ ಹಿಂದಿ ಚಲನಚಿತ್ರೋದ್ಯಮಕ್ಕೆ ಪಾದಾರ್ಪಣೆ ಮಾಡಿದರು. ಆಲಿಯಾ ಭಟ್ 2012ರಲ್ಲಿ ಕರಣ್ ಜೋಹರ್ ಅವರ 'ಸ್ಟೂಡೆಂಟ್ ಆಫ್ ದಿ ಇಯರ್' ಚಿತ್ರದ ಮೂಲಕ ಜನಮನ್ನಣೆ ಗಳಿಸಿದರು. ಆದರೆ ಇದಕ್ಕೂ ಮೊದಲು ಬಾಲ ಕಲಾವಿದೆಯಾಗಿ ಆಲಿಯಾ ಹಲವು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು. 

ಚಿಕ್ಕ ವಯಸ್ಸಿನಿಂದಲೂ, ಆಲಿಯಾ ಭಟ್ ನಟಿಯಾಗಬೇಕೆಂದು ಬಯಸಿದ್ದರು. ಹೀಗಾಗಿ ತಮ್ಮ ಕನಸನ್ನು ಈಡೇರಿಸಿಕೊಳ್ಳಲು ಪಿಯುಸಿಯಲ್ಲಿಯೇ ವಿದ್ಯಾಭ್ಯಾಸ ನಿಲಿಸಿದರು. 12ನೇ ತರಗತಿಯಲ್ಲಿದ್ದಾಗ, 'ಸ್ಟೂಡೆಂಟ್ ಆಫ್ ದಿ ಇಯರ್‌' ಸಿನಿಮಾಗೆ ಅಡಿಷನ್ ನೀಡಿದರು. ಈ ಚಿತ್ರ ಬಾಕ್ಸಾಫೀಸಿನಲ್ಲಿ ಹಿಟ್ ಆಯಿತು.

250 ಕೋಟಿ ಬಂಗಲೆಯ ಒಡತಿ ಈ ಪುಟಾಣಿ! ಕಿರಿಯ ಶ್ರೀಮಂತ ಸ್ಟಾರ್‌ ಕಿಡ್ ಇವಳ್ಯಾರು ಗೊತ್ತಾ?

ನಂತರದ ವರ್ಷಗಳಲ್ಲಿ ಹೈವೇ, 2 ಸ್ಟೇಟ್ಸ್, ಹಂಪ್ಟಿ ಶರ್ಮಾ ಕಿ ದುಲ್ಹನಿಯಾ, ಉಡ್ತಾ ಪಂಜಾಬ್, ಡಿಯರ್ ಜಿಂದಗಿ, ಬದರಿನಾಥ್ ಕಿ ದುಲ್ಹನಿಯಾ, ರಾಝಿ, ಝೀರೋ, ಗಂಗೂಬಾಯಿ ಕಥಿಯಾವಾಡಿ, ಆರ್‌ಆರ್‌ಆರ್‌, ಡಾರ್ಲಿಂಗ್ಸ್, ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಮುಂತಾದ ಚಿತ್ರಗಳಲ್ಲಿ ಆಲಿಯಾ, ತಮ್ಮ ನಟನಾ ಸಾಮರ್ಥ್ಯವನ್ನು ಸಾಬೀತುಪಡಿಸಿದರು.

ಕೇವಲ 11 ವರ್ಷಗಳ ಅವಧಿಯಲ್ಲಿ, ಆಲಿಯಾ ಭಟ್ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರೆಂದು ಗುರುತಿಸಲ್ಪಟ್ಟಿದ್ದಾರೆ. ವರದಿಯ ಪ್ರಕಾರ ಆಲಿಯಾ, ತಮ್ಮ ಚೊಚ್ಚಲ ಚಿತ್ರ ಸ್ಟೂಡೆಂಟ್ ಆಫ್ ದಿ ಇಯರ್‌ಗಾಗಿ 15 ಲಕ್ಷ ರೂ. ಪಡೆದುಕೊಂಡಿದ್ದರು. ಆದರೆ ನಟಿ ತಮ್ಮ ಇತ್ತೀಚಿಗಿನ ಸಿನಿಮಾ, ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಚಿತ್ರಕ್ಕೆ 10 ಕೋಟಿ ರೂ. ಪಡೆದುಕೊಂಡಿದ್ದಾರೆ. ಬಾಲಿವುಡ್‌ನಲ್ಲಿ ನಟಿಯಾಗಿ ನಿರಂತರವಾಗಿ ಬೆಳೆಯುತ್ತಿರುವ ಆಲಿಯಾ, 2023ರಲ್ಲಿ ಹಾರ್ಟ್ ಆಫ್ ಸ್ಟೋನ್ ಚಿತ್ರದೊಂದಿಗೆ ಹಾಲಿವುಡ್‌ನಲ್ಲೂ ಅಭಿನಯಿಸಿದ್ದಾರೆ.

ಸವಲತ್ತು ಸಿಕ್ತು ಸುಲಭವಾಗಿ ಬಂದೆ ಹಾಗಂತ ಶ್ರಮ ಹಾಕಿಲ್ವಾ?; ಗರಂ ಆದ ಅಲಿಯಾ ಭಟ್

ಆಲಿಯಾ ಭಟ್ ನೆಟ್‌ವರ್ತ್‌ ಎಷ್ಟು?
ವರದಿಯ ಪ್ರಕಾರ, ಆಲಿಯಾ ಭಟ್ ಅವರ ನಿವ್ವಳ ಮೌಲ್ಯವು ಅಂದಾಜು ರೂ. 550 ಕೋಟಿ ರೂ. ಆಗಿದೆ. ಚಲನಚಿತ್ರಗಳಲ್ಲಿ ನಟಿಸುವುದರ ಹೊರತಾಗಿ, ಆಲಿಯಾ ಭಟ್‌, ಮಕ್ಕಳ ಉಡುಪು ಬ್ರಾಂಡ್, ಎಡ್-ಎ-ಮಮ್ಮಾ ಮತ್ತು ನಿರ್ಮಾಣ ಸಂಸ್ಥೆ, ಎಟರ್ನಲ್ ಸನ್‌ಶೈನ್ ಪ್ರೊಡಕ್ಷನ್ಸ್‌ನ ಮಾಲೀಕರಾಗಿದ್ದಾರೆ. ಫೂಲ್, ನೈಕಾ, ಸೂಪರ್‌ಬಾಟಮ್ಸ್ ಮತ್ತು ಸ್ಟೈಲ್ ಕ್ರ್ಯಾಕರ್‌ನಂತಹ ಬ್ರ್ಯಾಂಡ್‌ಗಳ ಸರಣಿಯಲ್ಲಿ ಆಲಿಯಾ ದೊಡ್ಡ ಪ್ರಮಾಣದ ಹಣವನ್ನು ಹೂಡಿಕೆ ಮಾಡಿದ್ದಾರೆ. ಲಕ್ಸುರಿಯಸ್‌ ಲೈಫ್‌ಸ್ಟೈಲ್ ಹೊಂದಿರುವ ಆಲಿಯಾ ಭಟ್ ಹೊಂದಿರುವ ದುಬಾರಿ ಆಸ್ತಿಗಳೇನು ನೋಡೋಣ.

ಮುಂಬೈನಲ್ಲಿದೆ 32 ಕೋಟಿ ರೂ. ಮೌಲ್ಯದ ಬಂಗಲೆ
ಆಲಿಯಾ ಭಟ್ ಮುಂಬೈನ ಅತ್ಯಂತ ಹೈಫೈ ಪ್ರದೇಶಗಳಲ್ಲಿ ಒಂದಾದ ಬಾಂದ್ರಾದಲ್ಲಿ 2,460 ಚದರ ಅಡಿ ಅಪಾರ್ಟ್‌ಮೆಂಟ್‌ನ್ನು ಹೊಂದಿದ್ದಾರೆ. ಐಷಾರಾಮಿ ಅಪಾರ್ಟ್ಮೆಂಟ್ ವಾಸ್ತು ಪಾಲಿ ಹಿಲ್ ಸಂಕೀರ್ಣದ ಐದನೇ ಮಹಡಿಯಲ್ಲಿದೆ. ಅಪಾರ್ಟ್‌ಮೆಂಟ್‌ನ ಒಳಾಂಗಣವನ್ನು ಗೌರಿ ಖಾನ್ ವಿನ್ಯಾಸಗೊಳಿಸಿದ್ದಾರೆ. ಆಲಿಯಾ ಅವರ ಐಷಾರಾಮಿ ಅಪಾರ್ಟ್‌ಮೆಂಟ್‌ನ ಬೆಲೆಯ ಬಗ್ಗೆ ಮಾತನಾಡುವುದಾದರೆ ಅದರ ಮೌಲ್ಯ ಬರೋಬ್ಬರಿ 32 ಕೋಟಿ ರೂ.

ಲಂಡನ್‌ನ ಕೋವೆಂಟ್ ಗಾರ್ಡನ್‌ನಲ್ಲಿದೆ ಐಷಾರಾಮಿ ಮನೆ
ಮುಂಬೈನಲ್ಲಿ ಐಷಾರಾಮಿ ಆಸ್ತಿಯನ್ನು ಹೊಂದಿರುವುದರ ಜೊತೆಗೆ, ಆಲಿಯಾ ಭಟ್ ಲಂಡನ್‌ನಲ್ಲಿ ಸಹ ಐಷಾರಾಮಿ ಮನೆಯನ್ನು ಹೊಂದಿದ್ದಾರೆ. 2018 ರಲ್ಲಿ ಲಂಡನ್‌ನ ಕೋವೆಂಟ್ ಗಾರ್ಡನ್‌ನಲ್ಲಿ ಆಲಿಯಾ ಭಟ್ 25 ಕೋಟಿಗೆ ಮನೆಯನ್ನು ಖರೀದಿಸಿದರು.

ಮದ್ವೆಯಾದ 7 ತಿಂಗಳಿಗೇ ಅಮ್ಮನಾದ ಆಲಿಯಾ ಭಟ್​ ಕುರಿತ ಇಂಟರೆಸ್ಟಿಂಗ್​ ವಿಷ್ಯ ಇದೀಗ ರಿವೀಲ್​!

ಆಲಿಯಾ ಭಟ್ ಕಾರುಗಳ ಸಂಗ್ರಹ
ಆಲಿಯಾ ಭಟ್ ಕಾರುಗಳ ಮೇಲೆ ಹುಚ್ಚು ಪ್ರೀತಿಯನ್ನು ಹೊಂದಿದ್ದಾರೆ. ಗ್ಯಾರೇಜ್‌ನಲ್ಲಿ ಅತಿ ದುಬಾರಿ ಕಾರುಗಳ ಸಂಗ್ರಹವಿದೆ. ನಟಿಯು ಐಷಾರಾಮಿ ಕಾರು ತಯಾರಕರಾದ ಆಡಿಯ ಅಪಾರ ಅಭಿಮಾನಿಯಾಗಿದ್ದಾರೆ. ಏಕೆಂದರೆ ಅವರು ಬ್ರಾಂಡ್‌ನ ಮೂರು ಅತ್ಯಾಧುನಿಕ ಕಾರುಗಳಾದ ಆಡಿ ಕ್ಯೂ 7 (ರೂ. 88 ಲಕ್ಷಗಳು), ಆಡಿ ಕ್ಯೂ 5 (ರೂ. 65 ಲಕ್ಷಗಳು), ಮತ್ತು ಆಡಿ ಎ 6 (ರೂ. 64 ಲಕ್ಷ) ಹೊಂದಿದ್ದಾರೆ. ಇದಲ್ಲದೆ BMW 7-ಸರಣಿ (ರೂ. 2 ಕೋಟಿ) ಮತ್ತು ಪ್ರತಿಯೊಬ್ಬ ಕಾರು ಪ್ರೇಮಿಗಳ ಕನಸಿನ ಕಾರು ರೇಂಜ್ ರೋವರ್ ವೋಗ್ (ರೂ. 2 ಕೋಟಿ) ಹೊಂದಿದ್ದಾರೆ.

ಬಟ್ಟೆಗಳ ಬ್ರ್ಯಾಂಡ್
2020ರಲ್ಲಿ, ಆಲಿಯಾ ಭಟ್ ಎಡ್-ಎ-ಮಮ್ಮಾ ಎಂಬ ಹೆಸರಿನಲ್ಲಿ ತಮ್ಮದೇ ಆದ ಬಟ್ಟೆ ಬ್ರಾಂಡ್‌ನ್ನು ಪ್ರಾರಂಭಿಸಿದ ನಂತರ ಉದ್ಯಮಿಯಾಗಿ ತಮ್ಮ ಪ್ರಯಾಣವನ್ನು ಪ್ರಾರಂಭಿಸಿದರು. ವರ್ಷಗಳಲ್ಲಿ, ಆಲಿಯಾ ಭಟ್ ಅವರ ಬಟ್ಟೆ ಲೇಬಲ್, ಎಡ್-ಎ-ಮಮ್ಮಾ ರೂ.ಗಿಂತ ಹೆಚ್ಚು ಮೌಲ್ಯದ್ದಾಗಿದೆ ಎಂದು ವರದಿಯಾಗಿದೆ. ಇದರ ಬೆಲೆ ಬರೋಬ್ಬರಿ 150 ಕೋಟಿ.

ಆಲಿಯಾ ಭಟ್ ನಿರ್ಮಾಣ ಸಂಸ್ಥೆ
ಆಲಿಯಾ ಭಟ್ ಫೆಬ್ರವರಿ 2021ರಲ್ಲಿ ತನ್ನ ಪ್ರೊಡಕ್ಷನ್ ಹೌಸ್ ಆರಂಭಿಸಿದರು. ನಟಿ ಅದಕ್ಕೆ ಎಟರ್ನಲ್ ಸನ್‌ಶೈನ್ ಪ್ರೊಡಕ್ಷನ್ಸ್ ಎಂದು ಹೆಸರಿಸಿದರು. ಬ್ಯಾನರ್ ನಿರ್ಮಿಸಿದ ಮೊದಲ ಚಿತ್ರ ಡಾರ್ಲಿಂಗ್ಸ್. ನೆಟ್‌ಫ್ಲಿಕ್ಸ್‌ನಲ್ಲಿ ಭಾರಿ ಹಿಟ್ ಆಯಿತು. ವರದಿಗಳ ಪ್ರಕಾರ, ಜಿಗ್ರಾ ಎಟರ್ನಲ್ ಸನ್‌ಶೈನ್ ಪ್ರೊಡಕ್ಷನ್ಸ್ 2024ರಲ್ಲಿ ನಿರ್ಮಿಸಿದ ಎರಡನೇ ಚಿತ್ರವಾಗಲಿದೆ. ಪ್ರೊಡಕ್ಷನ್ ಹೌಸ್ ಪ್ರಸ್ತುತ 80 ಕೋಟಿ ರೂ. ಮೌಲ್ಯದ್ದಾಗಿದೆ.

ಆಲಿಯಾ ಭಟ್ ಐಷಾರಾಮಿ ವ್ಯಾನಿಟಿ ವ್ಯಾನ್‌ನ್ನು ಸಹ ಹೊಂದಿದ್ದಾರೆ. ಇದು ಸಣ್ಣ ಅಡುಗೆಮನೆ, ವಾಶ್‌ರೂಮ್, ಆರಾಮದಾಯಕವಾದ ಸಿಂಗಲ್ ಬೆಡ್ ಮತ್ತು ಕಂದು ಬಣ್ಣದ ಡ್ರೆಸ್ಸಿಂಗ್ ರೂಮ್‌ ಹೊಂದಿದೆ. ಆಲಿಯಾಳ ವ್ಯಾನಿಟಿ ವ್ಯಾನ್‌ಗಳು ಅವಳು ಕೆಲಸ ಮಾಡುವಾಗಲೂ ಮನೆಯಲ್ಲೇ ಇರುವಂತೆ ಮಾಡುತ್ತದೆ.