ಮದ್ವೆಯಾದ 7 ತಿಂಗಳಿಗೇ ಅಮ್ಮನಾದ ಆಲಿಯಾ ಭಟ್ ಕುರಿತ ಇಂಟರೆಸ್ಟಿಂಗ್ ವಿಷ್ಯ ಇದೀಗ ರಿವೀಲ್!
ನಟಿ ಆಲಿಯಾ ಭಟ್ ಗರ್ಭಿಣಿಯಾದ ಸಮಯದಲ್ಲಿ ಹಲವು ಫ್ಯಾನ್ಸ್ ತಲೆ ಕೆಡಿಸಿಕೊಂಡ ವಿಷಯವನ್ನು ಇದೀಗ ಬಹಿರಂಗಗೊಳಿಸಿದ್ದಾರೆ ನ್ಯೂಟ್ರೀಷನ್ ಸುಮನ್. ಅವರು ಹೇಳಿದ್ದೇನು?
ಬಾಲಿವುಡ್‌ನ ಕ್ಯೂಟ್ ಜೋಡಿಗಳಲ್ಲಿ ಒಂದು ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಅವರದ್ದು. ಆಲಿಯಾ ಭಟ್ ಬಾಲಿವುಡ್‌ನ ಅತ್ಯಂತ ಯಶಸ್ವಿ ಮತ್ತು ಜನಪ್ರಿಯ ನಟಿಯರಲ್ಲಿ ಒಬ್ಬರು. ವೃತ್ತಿಜೀವನದುದ್ದಕ್ಕೂ, ಅವರು ಹಲವು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಆಲಿಯಾ ಭಟ್ ಎರಡು ವರ್ಷಗಳ ಹಿಂದೆ ರಣಬೀರ್ ಕಪೂರ್ ಅವರನ್ನು ಮದುವೆಯಾಗಿದ್ದು, ಸುಂದರವಾದ ಹೆಣ್ಣು ಮಗುವಿಗೆ ರಾಹಾಗೆ ಅಮ್ಮನಾಗಿದ್ದಾರೆ. ಇದರ ಹೊರತಾಗಿಯೂ ಈಕೆ ಈಗಲೂ ಮೋಸ್ಟ್ ವಾಂಟೆಡ್ ನಟಿಯಾಗಿದ್ದಾರೆ. ರಣಬೀರ್ ಕಪೂರ್ ಜೊತೆಗಿನ ತಮ್ಮ ಪ್ರೇಮ ಸಂಬಂಧದ ಬಗ್ಗೆ ಕೆಲ ವರ್ಷಗಳ ಹಿಂದೆ ಹೇಳಿದ್ದ ಆಲಿಯಾ ಭಟ್, ನನ್ನ 11ನೇ ವಯಸ್ಸಿನಲ್ಲಿ ನಾನು ರಣಬೀರ್‌ರನ್ನು ಭೇಟಿಯಾಗಿದ್ದೆ. ಬ್ಲ್ಯಾಕ್ ಸಿನಿಮಾದ ಆಡಿಷನ್‌ನಲ್ಲಿ ಅವರ ಪರಿಚಯವಾಗಿತ್ತು. ಅಂದಿನಿಂದಲೇ ನನಗೆ ಅವರ ಮೇಲೆ ಕ್ರಶ್ ಆಗಿತ್ತು ಎಂದು ವಿವರಿಸಿದ್ದರು. ನಂತರ ಮದುವೆಯಾದ ಏಳೇ ತಿಂಗಳಿಗೆ ರಾಹಾ ಎಂಬ ಪುಟಾಣಿಗೆ ಜನ್ಮ ನೀಡಿ ಸಕತ್ ಸದ್ದು ಮಾಡಿದ್ದರು.
ಇದೀಗ ಅವರು ಗರ್ಭಿಣಿಯಾಗಿದ್ದಾ ನಡೆದಿರುವ ವಿಷಯವೊಂದು ಬೆಳಕಿಗೆ ಬಂದಿದೆ. ಅಷ್ಟಕ್ಕೂ ಅನೇಕ ಪ್ರಮುಖ ಘಟನೆಗಳು 2022 ರಲ್ಲಿ ಸಂಭವಿಸಿದವು. ಆದರೆ ಅದರಲ್ಲಿ ಬಾಲಿವುಡ್ ನ ಬಹುಚರ್ಚಿತ ಜೋಡಿ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಮದುವೆಯೂ ಒಂದು. ದಂಪತಿಗಳು ಏಪ್ರಿಲ್ 2022 ರಲ್ಲಿ ಮುಂಬೈನ ತಮ್ಮ ಅಪಾರ್ಟ್ಮೆಂಟ್ನಲ್ಲಿ ಸಾಂಪ್ರದಾಯಿಕ ಸಮಾರಂಭದಲ್ಲಿ ವಿವಾಹವಾದರು. ಏಳೇ ತಿಂಗಳಿಗೆ ನಟಿ ಗರ್ಭಿಣಿಯಾದರು ಮತ್ತು ಅದೇ ವರ್ಷ ನವೆಂಬರ್‌ನಲ್ಲಿ ಅವರು ತಮ್ಮ ಮೊದಲ ಮಗುವಿಗೆ ಜನ್ಮ ನೀಡಿದರು. ಈ ಬಗ್ಗೆ ಸೆಲೆಬ್ರಿಟಿ ಪೌಷ್ಟಿಕತಜ್ಞ ಸುಮನ್ ಅಗರ್ವಾಲ್ ಅವರು ಆಲಿಯಾ ಅವರ ಗರ್ಭಾವಸ್ಥೆಯ ಕುರಿತು ಕೆಲವೊಂದು ಮಾಹಿತಿ ಶೇರ್ ಮಾಡಿದ್ದಾರೆ.
ಆಲಿಯಾ ಅಂದ್ರೆ ತುಂಬಾ ಇಷ್ಟ, ಆಕೆಯ ಚಿತ್ರಕ್ಕೆ ಕಣ್ಣೀರು ಹಾಕಿದ್ದೆ ಎಂದು ನಟಿಯನ್ನು ಹೊಗಳಿದ ಸುಧಾ ಮೂರ್ತಿ
ಅಷ್ಟಕ್ಕೂ ಗರ್ಭಿಣಿಯಾದ ಸಂದರ್ಭದಲ್ಲಿ ಏನೇನೋ ತಿನ್ನಬೇಕು ಎಂಬ ಹಂಬಲವಾಗುವುದು ಸಹಜ. ಒಬ್ಬೊಬ್ಬರಿಗೆ ಒಂದೊಂದು ರೀತಿಯ ಬಯಕೆಗಳು ಶುರುವಾಗುತ್ತವೆ. ಇದೀಗ ಆಲಿಯಾ ಭಟ್ಗೂ ಏನು ತಿನ್ನಬೇಕು ಎಂಬ ಬಯಕೆ ಇತ್ತು ಎಂಬ ಬಗ್ಗೆ ಸುಮನ್ ಅವರು ಹೇಳಿದ್ದಾರೆ. ನಟಿ ಹಂಬಲಿಸಿದ ವಿಶೇಷ ಭಾರತೀಯ ಸಿಹಿತಿಂಡಿಯನ್ನು ಬಹಿರಂಗಪಡಿಸಿದ್ದಾರೆ. ಆಲಿಯಾ ಭಟ್ ನಟ ರಣಬೀರ್ ಕಪೂರ್ ಅವರೊಂದಿಗೆ ಮೊದಲ ಮಗುವಿನ ನಿರೀಕ್ಷೆಯಲ್ಲಿ ಇದ್ದಾಗ, ಈಕೆಯ ಫ್ಯಾನ್ಸ್ ಆಲಿಯಾಗೆ ಏನು ಇಷ್ಟ ಎಂಬ ಬಗ್ಗೆ ಸಾಕಷ್ಟು ಗೂಗಲ್ನಲ್ಲಿ ಸರ್ಚ್ ಮಾಡಿದ್ದರಂತೆ. ಆಗ ಅವರಿಗೆ ಬಹುಶಃ ಉತ್ತರ ಸಿಕ್ಕಿರಲಿಲ್ಲ. ಈಗ ಎಲ್ಲವನ್ನೂ ತಿಳಿಸುವುದಾಗಿ ಹೇಳಿದ್ದಾರೆ ಸುಮನ್. ಇದರ ಜೊತೆಗೆ ಗರ್ಭಿಣಿಯಾದಾಗ ಎಲ್ಲಿ ಬಟ್ಟೆ ಖರೀದಿಸುತ್ತಾರೆ ಎನ್ನುವ ಬಗ್ಗೆಯೂ ಫ್ಯಾನ್ಸ್ ತಲೆ ಕೆಡಿಸಿಕೊಂಡಿರುವುದಾಗಿ ತಿಳಿಸಿದ್ದಾರೆ. ಪ್ರೆಗ್ನೆನ್ಸಿ ಪಾಡ್‌ಕ್ಯಾಸ್ಟ್ ಷೋನಲ್ಲಿ ಸುಮನ್ ಈ ವಿಷಯ ತಿಳಿಸಿದ್ದಾರೆ. ನಟಿ ಆಲಿಯಾ ಭಟ್, ಗರ್ಭಾವಸ್ಥೆಯಲ್ಲಿ ಕೋಲ್ಕತಾದ ನೋಲೆನ್ ಗುಡ್ ಸ್ವೀಟ್ ತಿನ್ನಬೇಕು ಎಂದು ಹಂಬಲಿಸಿದ್ದರು ಎಂದಿದ್ದಾರೆ. ಆಲಿಯಾ ಬೆಂಗಾಲಿ ಸಿಹಿತಿಂಡಿಗಳನ್ನು ನಿಯಮಿತವಾಗಿ ಕೇಳುತ್ತಿದ್ದರು ಎಂದಿದ್ದಾರೆ.
ಅಂದಹಾಗೆ ಸುಮನ್ ಅವರು, ಪೌಷ್ಟಿಕತಜ್ಞರಷ್ಟೇ ಅಲ್ಲ, ಆರೋಗ್ಯಕರ ಮತ್ತು ಪೌಷ್ಟಿಕ ಸಿಹಿತಿಂಡಿಗಳನ್ನು ತಯಾರಿಸುವಲ್ಲಿ ಪರಿಣತಿ ಹೊಂದಿರುವ ಸುಮನ್ ಕಂಪನಿಯ ಸಂಸ್ಥಾಪಕರೂ ಹೌದು. ಸುಮನ್, ನನಗೆ ನೆನಪಿದೆ, ಆಲಿಯಾ ಭಟ್ ಗರ್ಭಾವಸ್ಥೆಯಲ್ಲಿ, ಬೆಂಗಾಲಿ ಸ್ವೀಟ್ಸ್ ಕೇಳುತ್ತಿದ್ದರು ಎಂದಿದ್ದಾರೆ. ಅಂದಹಾಗೆ ಆಲಿಯಾ ಪೋಚರ್ ಚಿತ್ರದ ವೇಳೆ ಆಲಿಯಾ ಗರ್ಭಿಣಿಯಾಗಿದ್ದರು.
ಇಂಟರ್ನೆಟ್ ಸೆನ್ಸೇಷನ್ ಉರ್ಫಿ ಜಾವೇದ್ ಬಾಲಿವುಡ್ನಲ್ಲಿ ಮಿಂಚಿಂಗ್! ಮುಂದಿನ ತಿಂಗಳೇ ಚಿತ್ರ ರಿಲೀಸ್...