Asianet Suvarna News Asianet Suvarna News

ಆಲಿಯಾಗೆ ಹುಟ್ಟುಹಬ್ಬದ ಸಂಭ್ರಮ: 30 ವರ್ಷಕ್ಕೇ 550 ಕೋಟಿ ರೂ. ಒಡತಿಯ ಇಂಟರೆಸ್ಟಿಂಗ್​ ಕಹಾನಿ....

 ಬಾಲಿವುಡ್ ನಟಿ ಆಲಿಯಾ ಭಟ್​ಗೆ ಇಂದು ಹುಟ್ಟುಹಬ್ಬದ ಸಂಭ್ರಮ: 30 ವರ್ಷಕ್ಕೇ 550 ಕೋಟಿ ರೂ. ಒಡತಿಯಾಗಿರುವ ನಟಿಯ ಕೆಲವು ಇಂಟರೆಸ್ಟಿಂಗ್​ ವಿಷಯಗಳು ಇಲ್ಲಿವೆ. 
 

Alia Bhatt birthday special  know her net worth film fees business investment house car collection suc
Author
First Published Mar 15, 2024, 5:36 PM IST

ಇಂದು ಅಂದರೆ ಮಾರ್ಚ್ 15  ಬಾಲಿವುಡ್​​ ನಟಿ ಆಲಿಯಾ ಭಟ್ 31 ನೇ ವರ್ಷಕ್ಕೆ ಕಾಲಿಟ್ಟರು. ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ 550 ಕೋಟಿ ರೂಪಾಯಿಗಳ ಒಡತಿಯಾಗಿದ್ದಾರೆ ನಟಿ. ಇವರ ಸಿನಿ ಪಯಣ ಮತ್ತು ವೈಯಕ್ತಿಕ ಜೀವನದ ಕೆಲವೊಂದು ಇಂಟರೆಸ್ಟಿಂಗ್​ ವಿಷಯಗಳನ್ನು ಇಲ್ಲಿ ಹೇಳುತ್ತಿದ್ದೇವೆ. ನಟಿ ಆಲಿಯಾ ಭಟ್​,  ನಟನಾ ಪ್ರಪಂಚಕ್ಕೆ  ಕಾಲಿಟ್ಟು 12 ವರ್ಷಗಳಾಗಿದ್ದು, ಸುಮಾರು 16 ಚಲನಚಿತ್ರಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ, ಅದರಲ್ಲಿ 12 ಹಿಟ್, 2 ಫ್ಲಾಪ್ ಮತ್ತು 2 ಸರಾಸರಿ ಓಡಿವೆ. ಅವರ ಮುಂಬರುವ ನಾಲ್ಕು ಚಿತ್ರಗಳಿಗೆ ಸುಮಾರು 1000 ಕೋಟಿ ರೂ.ಬಂಡವಾಳ ಹಾಕಲಾಗಿದೆ. ಈ ಚಿತ್ರಗಳಲ್ಲಿ ಜಿಗ್ರಾ, ಲವ್ ಆ್ಯಂಡ್ ವಾರ್, ಜೀಲೆ ಜರಾ ಮತ್ತು ಬ್ರಹ್ಮಾಸ್ತ್ರ 2 ಚಿತ್ರಗಳು ಸೇರಿವೆ. ಆಲಿಯಾ ಈಗ ಬಾಲಿವುಡ್‌ನ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರು. ಎರಡನೆಯ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಎಂಬ ಖ್ಯಾತಿ ಈಕೆಯದ್ದು. ಅವರ ಒಂದು ಚಿತ್ರಕ್ಕೆ ಸುಮಾರು 20-25 ಕೋಟಿ ರೂ. ಇದೆ. 'ಗಂಗೂಬಾಯಿ ಕಥಿವಾಡಿ' ಚಿತ್ರಕ್ಕಾಗಿ ಅವರು ಅತ್ಯುತ್ತಮ ನಟಿ ರಾಷ್ಟ್ರ ಪ್ರಶಸ್ತಿಯನ್ನು ಗೆದ್ದಿದ್ದಾರೆ.


 2023 ಆಲಿಯಾಗೆ ತುಂಬಾ ಚೆನ್ನಾಗಿತ್ತು. ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಚಿತ್ರ ವಿಶ್ವಾದ್ಯಂತ 355 ಕೋಟಿ ಕಲೆಕ್ಷನ್ ಮಾಡಿದೆ. ಇದಲ್ಲದೇ ಗಂಗೂಬಾಯಿ ಕಥಿಯಾವಾಡಿ ಚಿತ್ರಕ್ಕಾಗಿ ಅಲಿಯಾ ಅತ್ಯುತ್ತಮ ನಟಿ ಪ್ರಶಸ್ತಿಯನ್ನೂ ಪಡೆದರು.   ಆಲಿಯಾ YRF ಸ್ಪೈ ಯೂನಿವರ್ಸ್‌ಗೆ ಸೇರಿದ ಮೊದಲ ಮಹಿಳಾ ನಟಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.  ಅಂದಹಾಗೆ ಆಲಿಯಾ ತಂದೆ ಮಹೇಶ್ ಭಟ್ ಪ್ರಸಿದ್ಧ ಚಲನಚಿತ್ರ ನಿರ್ಮಾಪಕರು ಮತ್ತು ತಾಯಿ ಸೋನಿ ರಜ್ದಾನ್ ಬಾಲಿವುಡ್ ನಟಿ. ಸೋನಿ ಮಹೇಶ್ ಭಟ್ ಅವರ ಎರಡನೇ ಪತ್ನಿ. ಪೂಜಾ ಭಟ್ ಆಲಿಯಾ ಅವರ ಮಲತಂಗಿ. ಆಲಿಯಾಗೆ ಬಾಲ್ಯದಲ್ಲಿ ತಂದೆಯಿಂದ ಅಷ್ಟೊಂದು ಪ್ರೀತಿ ಸಿಗಲಿಲ್ಲ. ಈ ಕುರಿತು ಸಂದರ್ಶನವೊಂದರಲ್ಲಿ ಅವರು ಹೇಳಿಕೊಂಡಿದ್ದರು. ಅವರು 6 ವರ್ಷದವಳಿದ್ದಾಗ, ಅವರು ತಮ್ಮ ತಂದೆಯ ನಿರ್ಮಾಣ ಸಂಸ್ಥೆ ವಿಶೇಷ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾದ ಸಂಘರ್ಷ ಚಿತ್ರದಲ್ಲಿ ಬಾಲ ಕಲಾವಿದೆಯಾಗಿ ಕೆಲಸ ಮಾಡಿದರು.  ಈ ಚಿತ್ರದಲ್ಲಿ ಕೆಲಸ ಮಾಡಿದ ನಂತರ ಆಲಿಯಾಗೆ ನಟನೆಯಲ್ಲಿ ಆಸಕ್ತಿ ಮೂಡಿತು. 9 ನೇ ವಯಸ್ಸಿನಲ್ಲಿ, ಅವರು ಸಂಜಯ್ ಲೀಲಾ ಬನ್ಸಾಲಿಯವರ ಬ್ಲಾಕ್ ಚಲನಚಿತ್ರಕ್ಕಾಗಿ ಆಡಿಷನ್ ಮಾಡಿದರು, ಆದರೆ ತಿರಸ್ಕರಿಸಲಾಯಿತು. 

ಮದ್ವೆಯಾದ 7 ತಿಂಗಳಿಗೇ ಅಮ್ಮನಾದ ಆಲಿಯಾ ಭಟ್​ ಕುರಿತ ಇಂಟರೆಸ್ಟಿಂಗ್​ ವಿಷ್ಯ ಇದೀಗ ರಿವೀಲ್​!
 
ನಂತರ ಕರಣ್​ ಜೋಹರ್​ ಅವರ ಸ್ಟುಡೆಂಟ್​ ಆಫ್​ ದಿ ಇಯರ್​ನಲ್ಲಿ ಭಾಗವಹಿಸುವ ಅವಕಾಶ ಬಂತು.  ಆದರೆ ಆಲಿಯಾ ಚಿತ್ರದಲ್ಲಿ ನಟಿಸಲು ಬಯಸುವುದಾದರೆ,  ತೂಕ ಇಳಿಸಿಕೊಳ್ಳಬೇಕು ಎಂಬ ಷರತ್ತು ವಿಧಿಸಿ ಮೂರು ತಿಂಗಳ ಕಾಲಾವಕಾಶ ನೀಡಲಾಗಿತ್ತು.  ತೂಕ ಕಡಿಮೆಯಾಗದಿದ್ದರೆ  ಬೇರೆಯವರನ್ನು ಹಾಕುವುದಾಗಿ ಷರತ್ತು ವಿಧಿಸಲಾಗಿತ್ತು.  ಮೂರು ತಿಂಗಳ ನಂತರ, ಆಲಿಯಾ ಕರಣ್ ಅವರನ್ನು ಭೇಟಿಯಾದರು. ಆ ಸಮಯದಲ್ಲಿ ಈಕೆ  16 ಕೆಜಿ ತೂಕ ಇಳಿಸಿಕೊಂಡಿದ್ದರು. ಇದರ ನಂತರ ಕರಣ್ ಆಲಿಯಾಳನ್ನು ಸ್ಟೂಡೆಂಟ್ ಆಫ್ ದಿ ಇಯರ್ ಚಿತ್ರಕ್ಕೆ ಹಾಕಿದರು. ಅಲ್ಲಿಂದ ಆಲಿಯಾ ಹಿಂದಿರುಗಿ ನೋಡಿದ್ದೇ ಇಲ್ಲ. 

 ಈ 12 ವರ್ಷಗಳ ಜರ್ನಿಯಲ್ಲಿ ಆಲಿಯಾ  ಅವರ ನಿವ್ವಳ ಮೌಲ್ಯವು ವೇಗವಾಗಿ ಹೆಚ್ಚಾಗಿದೆ. ಮಾಧ್ಯಮಗಳ ವರದಿ ಪ್ರಕಾರ 550 ಕೋಟಿ ರೂಪಾಯಿ ಮಾಲೀಕರು ಇವರು.  ಆಲಿಯಾ  ಆಸ್ತಿಯಲ್ಲಿ ಸಾಕಷ್ಟು ಹೂಡಿಕೆ ಮಾಡಿದ್ದಾರೆ. ಅವರಿಗೆ ಮೂರು ಮನೆಗಳಿವೆ. ಅವರು ತಮ್ಮ ಮೊದಲ ಮನೆಯನ್ನು ಖರೀದಿಸಿದ್ದು ಭಾರತದಲ್ಲಿ ಅಲ್ಲ ಲಂಡನ್‌ನಲ್ಲಿ. ಲಂಡನ್‌ನ ಪಾಶ್ ಏರಿಯಾ ಎಂದು ಕರೆಯಲ್ಪಡುವ ಕೋವೆಂಟ್ ಗಾರ್ಡನ್‌ನಲ್ಲಿರುವ ಆಲಿಯಾ ಮನೆಯ ಬೆಲೆ 25 ಕೋಟಿ ರೂ. 'ಲಂಡನ್‌ನಲ್ಲಿ ಮನೆ ಹೊಂದುವುದು ನನ್ನ ಕನಸಾಗಿತ್ತು. 2018ರಲ್ಲಿ ನನ್ನ ಕನಸನ್ನು ನನಸಾಗಿಸಿದ್ದು ನನಗೆ ಖುಷಿ ತಂದಿದೆ ಎಂದಿದ್ದರು. ನಂತರ ಆಲಿಯಾ 2020 ರಲ್ಲಿ ಕರೋನಾ ಸಮಯದಲ್ಲಿ ಮುಂಬೈನ ಬಾಂದ್ರಾದಲ್ಲಿ ಅಪಾರ್ಟ್ಮೆಂಟ್ ಖರೀದಿಸಿದರು. ವಾಸ್ತು ಪಾಲಿ ಹಿಲ್ಸ್ ಕಾಂಪ್ಲೆಕ್ಸ್ ನ ಐದನೇ ಮಹಡಿಯಲ್ಲಿರುವ ಅಂದಾಜು 2500 ಚದರ ಅಡಿಯ ಈ ಅಪಾರ್ಟ್ ಮೆಂಟ್ ಬೆಲೆ ಅಂದಾಜು 40 ಕೋಟಿ ರೂ. ಆಲಿಯಾ ಅವರ ಹೊಸ ಅಪಾರ್ಟ್‌ಮೆಂಟ್‌ನ ಏಳನೇ ಮಹಡಿಯಲ್ಲಿ ರಣಬೀರ್ ಕಪೂರ್ ಅವರ ಮನೆಯೂ ಇದೆ. ಶಾರುಖ್ ಖಾನ್ ಪತ್ನಿ ಗೌರಿ ಖಾನ್ ಆಲಿಯಾ ಹಾಗೂ ರಣಬೀರ್ ಮನೆಯ ಒಳಾಂಗಣ ವಿನ್ಯಾಸ ಮಾಡಿದ್ದಾರೆ.

ಅನಂತ್​ ಅಂಬಾನಿ ಜೊತೆ ಆಲಿಯಾ ಪುತ್ರಿ ಕ್ಯೂಟ್​ ಮಾತುಕತೆ: ಈಗಲೇ ಸ್ಕೆಚ್ ಹಾಕಿದ್ದಾಳೆ ಎಂದ ಫ್ಯಾನ್ಸ್​...

ಆಲಿಯಾ ತನ್ನ ನಿರ್ಮಾಣ ಸಂಸ್ಥೆ ಎಟರ್ನಲ್ ಸನ್‌ಶೈನ್ ಪ್ರೊಡಕ್ಷನ್ಸ್ ಪ್ರೈವೇಟ್ ಲಿಮಿಟೆಡ್ ಮೂಲಕ ಆಸ್ತಿಯಲ್ಲಿ ಹೂಡಿಕೆ ಮಾಡಿದ್ದಾರೆ.  ಅವರ ಈ ಮೂರನೇ ಅಪಾರ್ಟ್‌ಮೆಂಟ್‌ನ ಬೆಲೆ ಸುಮಾರು 38 ಕೋಟಿ ರೂ. ಇಂಡಿಯಾ ಟುಡೇ ವರದಿಗಳ ಪ್ರಕಾರ, ಆಲಿಯಾ ಇನ್ನೂ ಎರಡು ಮನೆಗಳನ್ನು ಖರೀದಿಸಿದ್ದಾರೆ, ಅದನ್ನು ಈಗ ಅವರು ತಮ್ಮ ಸಹೋದರಿ ಶಾಹೀನ್‌ಗೆ ಉಡುಗೊರೆಯಾಗಿ ನೀಡಿದ್ದಾರೆ. ಆಲಿಯಾ ಈ ಎರಡೂ ಫ್ಲಾಟ್‌ಗಳನ್ನು ಅನುಪಮ್ ಖೇರ್ ಮತ್ತು ಅವರ ಪತ್ನಿ ಕಿರಣ್ ಖೇರ್ ಅವರಿಂದ 2015 ರಲ್ಲಿ 8.99 ಕೋಟಿ ರೂಪಾಯಿಗೆ ಖರೀದಿಸಿದ್ದರು. ಆಲಿಯಾ ಭಟ್ ಯಶಸ್ವಿ ಉದ್ಯಮಿಯೂ ಹೌದು. ಅವರು 2020 ರಲ್ಲಿ 'Aid-A-Mama' ಎಂಬ ಬಟ್ಟೆ ಬ್ರಾಂಡ್ ಅನ್ನು ಪ್ರಾರಂಭಿಸಿದರು. ಒಂದು ವರ್ಷದೊಳಗೆ, ಈ ಕಂಪನಿಯ ಮೌಲ್ಯವು 150 ಕೋಟಿ ರೂ.ಗೆ ತಲುಪಿತು. ನಂತರ ಆಲಿಯಾ ಕಂಪೆನಿಯನ್ನು ರಿಲಯನ್ಸ್ ಬ್ರಾಂಡ್ಸ್ ಲಿಮಿಟೆಡ್ 300-350 ಕೋಟಿಗೆ ಖರೀದಿಸಿತು. ಇಶಾ ಅಂಬಾನಿ ಈಗ ಈ ಕಂಪನಿಯಲ್ಲಿ 51 ಪ್ರತಿಶತ ಪಾಲನ್ನು ಹೊಂದಿದ್ದಾರೆ.

ಆಲಿಯಾ 2019 ರಲ್ಲಿ ಎಟರ್ನಲ್ ಸನ್ಶೈನ್ ಪ್ರೊಡಕ್ಷನ್ ಎಂಬ ಪ್ರೊಡಕ್ಷನ್ ಹೌಸ್ ಅನ್ನು ಪ್ರಾರಂಭಿಸಿದರು. 2.5 ಕೋಟಿ ಮೌಲ್ಯದ ಐಷಾರಾಮಿ ರೇಂಜ್ ರೋವರ್ ವೋಗ್ ನಿಂದ ಬಿಎಂಡಬ್ಲ್ಯು 7 ಸಿರೀಸ್ ವರೆಗೆ ಆಲಿಯಾ ಭಟ್ ಕೋಟಿಗಟ್ಟಲೆ ಮೌಲ್ಯದ ಕಾರುಗಳ ಸಂಗ್ರಹವನ್ನು ಹೊಂದಿದ್ದಾರೆ. ಅವರು 3 ಆಡಿಗಳನ್ನು ಹೊಂದಿದ್ದಾರೆ, ಅವುಗಳಲ್ಲಿ ಎರಡು SUV ಗಳು ಮತ್ತು ಒಂದು ಸೆಡಾನ್ ಆಡಿ A6. ಆಲಿಯಾ ಜೊತೆ ರಣಬೀರ್ ಕಪೂರ್ ಅವರ ಕಾರು ಸಂಗ್ರಹವನ್ನು ಸೇರಿಸಿದರೆ, ಅವರು ಸುಮಾರು ಹನ್ನೆರಡು ವಾಹನಗಳನ್ನು ಹೊಂದಿದ್ದಾರೆ.

ಡಿವೋರ್ಸ್​ ಬಳಿಕ ನಿಹಾರಿಕಾಗೆ ಶುರುವಾಗಿದೆ ಮಕ್ಕಳ ಬಯಕೆ: ಮರುಮದ್ವೆ ಕುರಿತು ನಟಿ ಹೇಳಿದ್ದೇನು?
 

Follow Us:
Download App:
  • android
  • ios