ಡಿವೋರ್ಸ್​ ಬಳಿಕ ನಿಹಾರಿಕಾಗೆ ಶುರುವಾಗಿದೆ ಮಕ್ಕಳ ಬಯಕೆ: ಮರುಮದ್ವೆ ಕುರಿತು ನಟಿ ಹೇಳಿದ್ದೇನು?

ಮೆಗಾಸ್ಟಾರ್ ಚಿರಂಜೀವಿ ಅವರ ಮನೆ ಮಗಳು ನಟಿ ನಿಹಾರಿಕಾ ವಿಚ್ಛೇದನದ ಬಳಿಕ ಮಕ್ಕಳ ಆಸೆ ಹೊಂದಿದ್ದಾರೆ. ಈ ಕುರಿತು ಓಪನ್ನಾಗಿ ಏನು ಹೇಳಿದ್ದಾರೆ? 
 

Niharika Konidela Opens Up About Her Plans To Remarry After Divorce From Chaitanya suc

ಮೆಗಾಸ್ಟಾರ್ ಚಿರಂಜೀವಿ ಅವರ ಮನೆ ಮಗಳು ಅರ್ಥಾತ್​ ಚಿರಂಜೀವಿ ಅವರ ಸಹೋದರನ ಮಗಳು ನಿಹಾರಿಕಾ ಕೊನಿಡೇಲಾ (Niharika Konidela)  ಸಿನಿಮಾ ಮಾಡಿದ್ದು ಕಮ್ಮಿ. ಅವರು ಸಿನಿಮಾಗಿಂತಲೂ ವೈಯಕ್ತಿಕವಾಗಿಯೇ ಹೆಚ್ಚೆಚ್ಚು ಸುದ್ದಿಯಲ್ಲಿರುತ್ತಾರೆ. ಕೆಲ ತಿಂಗಳ ಹಿಂದೆ ಪತಿ ಚೈತನ್ಯ ಅವರಿಂದ ವಿಚ್ಛೇದನ ಪಡೆದುಕೊಂಡಿರುವ ನಿಹಾರಿಕಾ, ಮತ್ತೆ ಸದ್ದು ಮಾಡುತ್ತಲೇ ಇದ್ದಾರೆ. ನಿಹಾರಿಕಾ ಕೊನಿಡೆಲಾ ಅವರು ಚೈತನ್ಯ ಜೊನ್ನಲಗುಡ್ಡ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ರಾಜಸ್ಥಾನದಲ್ಲಿ ಅದ್ದೂರಿಯಾಗಿ ಮದುವೆ ಸಮಾರಂಭ ಕೂಡ ನಡೆದಿತ್ತು. ನಿಹಾರಿಕಾ ಹಾಗೂ ಚೈತನ್ಯ ಮದುವೆಗೆ ಇಡೀ ಮೆಗಾಸ್ಟರ್‌ ಕುಟುಂಬ ಸಾಕ್ಷಿಯಾಗಿತ್ತು. ಆದರೆ, ಅದೇನಾಯಿತೋ ಗೊತ್ತಿಲ್ಲ, ದಾಂಪತ್ಯ ಕೇವಲ ಎರಡೂವರೆ ವರ್ಷಕ್ಕೆ ಅಂತ್ಯವಾಗಿ ಹೋಯ್ತು. 

ನಿಹಾರಿಕಾ ಈಗ ಸಿನಿಮಾ ಕಡೆ ಮುಖ ಮಾಡಿದ್ದಾರೆ. ಸದ್ಯ  ಏಕಾಂಗಿಯಾಗಿ ಲೈಫ್‌ ಲೀಡ್‌ ಮಾಡುತ್ತಿರೋ ನಿಹಾರಿಕಾ 2ನೇ ಮದ್ವೆಗೆ ರೆಡಿಯಾಗಿದ್ದಾರೆ ಎನ್ನುವ ಸುದ್ದಿ ಕೆಲ ತಿಂಗಳಿನಿಂದ ಭಾರಿ ಹರಿದಾಡುತ್ತಿದೆ. ಸೋಶಿಯಲ್‌ ಮೀಡಿಯಾದಲ್ಲಿ ಈ ಕುರಿತಾಗಿ ವ್ಯಾಪಕವಾಗಿ ಸುದ್ದಿಯಾಗಿದ್ದು, ಬಾಲನಟನಾಗಿ ಬಳಿಕ ಹೀರೋ ಆಗಿಯೂ ಮಿಂಚಿರುವ ಸ್ಟಾರ್‌ ನಟನನ್ನು ನಿಹಾರಿಕಾ ಮದುವೆಯಾಗಲಿದ್ದಾರೆ ಎನ್ನಲಾಗಿತ್ತು. ಆದರೆ ಹೆಸರು ರಿವೀಲ್​ ಆಗಲಿಲ್ಲ.  ತೆಲುಗಿನ ನಟ ವರುಣ್‌  ಅವರನ್ನು ನಿಹಾರಿಕಾ ಕೊನಿಡೆಲಾ 2ನೇ ಮದುವೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದ್ದರೂ ಅದರ ಬಗ್ಗೆ ಯಾವುದೇ ಅಧಿಕೃತ ದಾಖಲೆಗಳು ಬಂದಿಲ್ಲ.

ಕುಟುಂಬಕ್ಕಾಗಿ ಸಿನಿಮಾ ತೊರೆಯುವ ನಿರ್ಧರಿಸಿದ್ದ ಆಮೀರ್ ಖಾನ್​ ಇಬ್ಬರೂ ಪತ್ನಿಯರಿಂದ ದೂರವಾಗಿದ್ದೇಕೆ?

ಆದರೆ ಇದೀಗ ಎರಡನೆಯ ಮದುವೆಯ ಬಗ್ಗೆ ನಟಿ ಮೌನ ಮುರಿದಿದ್ದಾರೆ. ಸಿನಿಮಾವೊಂದರ ಪ್ರಚಾರದ ಭಾಗವಾಗಿ ಆಕೆ ಮಾತನಾಡುವ ಸಂದರ್ಭದಲ್ಲಿ ನೀಡಿರುವ ಹೇಳಿಕೆಗಳು ಈಗ ವೈರಲ್​ ಆಗುತ್ತಿವೆ. ಇತ್ತೀಚೆಗೆ ನಿರ್ಮಾಣಕ್ಕೆ ಕಾಲಿಟ್ಟಿರುವ ನಿಹಾರಿಕಾ ಪಿಂಕ್ ಎಲಿಫೆಂಟ್ ಪಿಕ್ಚರ್ಸ್ ಎಂಬ ಬ್ಯಾನರ್ ಸ್ಥಾಪಿಸಿದ್ದಾರೆ. ಈ ಬ್ಯಾನರ್‌ನಲ್ಲಿ ಒಟಿಟಿ ವೆಬ್ ಸೀರೀಸ್ ಮಾಡಲಾಗುತ್ತಿದ್ದು, ಈ ಸಂದರ್ಭದಲ್ಲಿ ತಮ್ಮ ವೈಯಕ್ತಿಯ ಜೀವನದ ಕುರಿತು ಮಾತನಾಡುವ ಸಮಯದಲ್ಲಿ ಎರಡನೆಯ ಮದುವೆಯ ಹಿಂಟ್​ ಕೊಟ್ಟಿದ್ದಾರೆ. ಅಷ್ಟಕ್ಕೂ ನಿಹಾರಿಕಾ ಹೇಳಿದ್ದೇನೆಂದರೆ,  ಎಲ್ಲರೂ ಕೇಳುತ್ತಾರೆ ವಿಚ್ಛೇದನಕ್ಕೆ ಏನು ಕಾರಣ, ಒಂದು ಕಾರಣ ನೀಡು ಎಂದೆಲ್ಲ ಹೇಳುತ್ತಾರೆ. ಆದರೆ ವಿಚ್ಛೇದನಕ್ಕೆ ಒಂದು ಕಾರಣ ಇರಲಿಲ್ಲ. ಬದಲಿಗೆ ಹಲವಾರು ಕಾರಣಗಳಿದ್ದವು. ಅದನ್ನೆಲ್ಲ ವಿವರಿಸುವುದು ತುಸು ಕಷ್ಟ ಎನ್ನುವ ಮೂಲಕ ಡಿವೋರ್ಸ್​ ಬಗ್ಗೆ ಹೆಚ್ಚಿಗೆ ಏನನ್ನೂ ಹೇಳಲಿಲ್ಲ.

ಆದರೆ ಮರುಮದುವೆಗೆ ಸಂಬಂಧಿಸಿದಂತೆ ಅವರು ನೀಡಿರುವ ಹೇಳಿಕೆ ಸಕತ್​ ಸದ್ದು ಮಾಡುತ್ತಿದೆ.  ‘ನನಗೆ ಮಕ್ಕಳೆಂದರೆ ಇಷ್ಟ, ನಾನು ಮಕ್ಕಳನ್ನು ಹೊಂದಬೇಕು ಎಂಬ ಆಸೆ ಇದೆ. ಅದಕ್ಕಾಗಿ ನಾನು ಮದುವೆಯಾಗಬೇಕು, ಆದರೆ ಅದೊಂದೇ ಕಾರಣಕ್ಕೆ ಮದುವೆ ಆಗುವುದು ಸರಿಯಲ್ಲ ಎನಿಸುತ್ತದೆ’ ಎಂದಿದ್ದಾರೆ. ನಿಹಾರಿಕಾ ಅವರನ್ನು ಮತ್ತೆ ಮದುವೆಯಾದ ಮಗಳಾಗಿ ನೋಡಬಹುದೇ ಎಂದು ನಿರೂಪಕರು ಪ್ರಶ್ನಿಸಿದಾಗ ನಿಹಾರಿಕಾ ಹೀಗೆ ಹೇಳಿದ್ದಾರೆ. ಈ ಮೂಲಕ ಮತ್ತೊಂದು ಮದುವೆಯ ಹಿಂಟ್​ ಕೊಟ್ಟಿದ್ದಾರೆ.  ಈ ಜೀವನ ಚಕ್ರದಲ್ಲಿ ಮದುವೆ ಅಥವಾ ಮಕ್ಕಳನ್ನು ಹೊಂದುವುದು ಏನು ಬೇಕಾದರೂ ಆಗಬಹುದು. ಲವ್ ಬಗ್ಗೆ ನನಗೆ ಯಾವುದೇ ನೆಗೆಟಿವ್ ಇಂಪ್ರೆಶನ್ ಇಲ್ಲ. ಸಂಬಂಧವು ವರ್ಕೌಟ್ ಆಗದ ಹಿಂದೆ ಹಲವು ಕಾರಣಗಳಿವೆ. ಪ್ರೇಮ ವಿವಾಹ ಅಥವಾ ಅರೆಂಜ್ ಮ್ಯಾರೇಜ್ ಏನೇ ಆದರೂ ಅಡ್ಡಿಯಿಲ್ಲ. ಎರಡರ ಬಗ್ಗೆಯೂ ನನಗೆ ಗೌರವವಿದೆ. ಮನುಷ್ಯ ಪ್ರೀತಿಯನ್ನು ಅನುಭವಿಸಲು ಸಾಧ್ಯವಿಲ್ಲ ಎಂದು ಭಾವಿಸುವುದು ಮೂರ್ಖತನ ಎಂದೂ ಅವರು ಹೇಳಿದ್ದಾರೆ.
ಬಾಲಿವುಡ್ ನಿಂತಿರುವುದೇ ನಟಿಯ ಹಿಂದು-ಮುಂದಿನ ಸೈಜ್ ಮೇಲೆ ಎಂದ ಪ್ರಿಯಾಂಕಾ! ನೆಟ್ಟಿಗರು ಏನೆಂದ್ರು?

Latest Videos
Follow Us:
Download App:
  • android
  • ios