ಮೈ ಕೊರೆಯುವ ಚಳಿ ಇತ್ತು ತೆಳು ಸೀರೆ ಧರಿಸಿದ್ದೆ, ರಣ್ವೀರ್ ಸಿಂಗ್ ಜಾಕೆಟ್ ಬಿಚ್ಚಿ ಕೊಟ್ಟಿದ್ರು ಎಂದು ರಾಕಿ ಔಟ್ ರಾಣಿ ಕಿ ಪ್ರೇಮ್ ಕಹಾನಿ ಸಿನಿಮಾದ ಕಾಶ್ಮೀರ ಶೂಟಿಂಗ್ ಅನುಭವ ಬಿಚ್ಚಿಟ್ಟಿದ್ದಾರೆ ನಟಿ ಆಲಿಯಾ ಭಟ್.

ಬಾಲಿವುಡ್ ಸ್ಟಾರ್ ಅಲಿಯಾ ಭಟ್ ಮತ್ತು ರಣ್ವೀರ್ ಸಿಂಗ್ ನಟನೆಯ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಸಿನಿಮಾ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಇಬ್ಬರೂ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾಗೆ ಕರಣ್ ಜೋಹರ್ ನಿರ್ದೇಶನ ಮಾಡಿದ್ದಾರೆ. ಅನೇಕ ವರ್ಷಗಳ ಬಳಿಕ ಕರಣ್ ಆಕ್ಷನ್ ಕಟ್ ಹೇಳಿದ್ದಾರೆ. ಈಗಾಗಲೇ ಟ್ರೈಲರ್ ಮತ್ತು ಹಾಡು ರಿಲೀಸ್ ಆಗಿದ್ದು ಅಭಿಮಾನಿಗಳ ಹೃದಯ ಗೆದ್ದಿವೆ. ಸಿನಿಮಾದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ. ಈ ಸಿನಿಮಾದ ಒಂದು ಹಾಡನ್ನು ಕಾಶ್ಮೀರದಲ್ಲಿ ಚಿತ್ರೀಕರಣ ಮಾಡಲಾಗಿದೆ. ಕಾಶ್ಮೀರದ ಕೊರೆಯುವ ಚಳಿಯಲ್ಲಿ ಶೂಟಿಂಗ್ ಮಾಡಿದ ಅನುಭವವನ್ನು ಅಲಿಯಾ ಭಟ್ ಬಿಚ್ಚಿಟ್ಟಿದ್ದಾರೆ. 

ಅಲಿಯಾ ಭಟ್ ಮಗುವಿಗೆ ಜನ್ಮ ನೀಡಿ 2 ತಿಂಗಳಲ್ಲೇ ಶೂಟಿಂಗ್‌ಗೆ ತೆರಳಿದ್ದರು. ವಿಪರೀತ ಚಳಿಯಲ್ಲಿ ಶೂಟಿಂಗ್ ಮಾಡಿದ್ದರು. ಶೂಟಿಂಗ್ ವೇಳೆ ಇಡೀ ಸಿನಿಮಾತಂಡ ಮತ್ತು ರಣ್ವೀರ್ ಸಿಂಗ್ ಸಿಕ್ಕಾಪಟ್ಟೆ ಕೇರ್ ಮಾಡಿದರು ಎಂದು ಹೇಳಿದ್ದಾರೆ. ತೆಳುವಾದ ಸೀರೆ ಧರಿಸಿ ಶೂಟಿಂಗ್ ಮಾಡುವಾಗ ತುಂಬಾ ಕಷ್ಟವಾಗಿತ್ತು ಎಂದು ಅಲಿಯಾ ಹೇಳಿದ್ದಾರೆ. ಆಗ ರಣ್ವೀರ್ ಸಿಂಗ್ ತನ್ನ ಜಾಕೆಟ್ ಬಿಚ್ಚಿ ಕೊಡುತ್ತಿದ್ದರು ಎಂದು ಹೇಳಿದ್ದಾರೆ. ಈ ಬಗ್ಗೆ ಮಾತನಾಡಿದ ಆಲಿಯಾ, ಇಡೀ ಸೆಟ್ ತನ್ನನ್ನು ಹೆಚ್ಚು ಕಾಳಜಿಯಿಂದ ನೋಡಿಕೊಂಡಿತು ಎಂದು ಹೇಳಿದ್ದಾರೆ.

ತಿಳಿನೀಲಿ ಸ್ಯಾರಿಯಲ್ಲಿ ಮಿಂಚಿದ ಆಲಿಯಾ, ಸೀರೆಯುಟ್ಟ ನವಿಲು ನೀನು ಎಂದ ಫ್ಯಾನ್ಸ್‌

'ಆ ಪರಿಸ್ಥಿತಿಗಳಲ್ಲಿ, ನಾನು ಶಿಫಾನ್ ಸೀರೆಗಳನ್ನು ಧರಿಸಬೇಕಾಗಿತ್ತು. ಇಡೀ ತಂಡ ಹೆಚ್ಚು ಕಾಳಜಿ ವಹಿಸಿತ್ತು. ಸುತ್ತಮುತ್ತಲಿನ ಹೀಟರ್‌ಗಳು, ನಾನು ಹಾಕಿಕೊಂಡಿದ್ದ ಲೆಗ್ ವಾರ್ಮರ್‌ಗಳು. ರಮ್ವೀರ್ ಸಿಂಗ್ ಧರಿಸಿದ್ದ ಜಾಕೆಟ್ ಅನ್ನು ಆಗಾಗ ನೀಡುತ್ತಿದ್ದರು. ಇದು ಯಾವುದು ಯಾರಿಗೂ ಗೊತ್ತಿರುವುದಿಲ್ಲ. ಆದರೆ ನಾನು ನನ್ನನ್ನು ಸ್ವಲ್ಪ ಹೊಗಳಿಕೊಳ್ಳಬೇಕು, ಆ ಅರ್ಥದಲ್ಲಿ ನಾನು ಒಬ್ಬಳು ಸೈನಿಕ. ನಾನು ಯಾವಾಗಲೂ ಕೆಲಸವನ್ನು ಮಾಡುವುದರ ಮೇಲೆ ಕೇಂದ್ರೀಕರಿಸುತ್ತೇನೆ. ಆ ಶಿಫಾನ್ ಸೀರೆಯ ಮೇಲೆ ಪಫರ್ ಜಾಕೆಟ್ ಧರಿಸಿದರೆ ಸೌಂದರ್ಯವನ್ನು ಕಿತ್ತುಕೊಳ್ಳುತ್ತಿತ್ತು, ಹಾಗಾಗಿ ಕಷ್ಟವಾದರೂ ಸೀರೆಯಲ್ಲಿ ಕಾಣಿಸಿಕೊಂಡೆ, ನನಗೆ ತುಂಬಾ ಸಂತೋಷವಿದೆ' ಎಂದು ಹೇಳಿದರು. 

ಆಲಿಯಾ ಕಪೂರ್​ ಮಗಳು ಸಿನಿಮಾಕ್ಕೆ ಬರ್ತಾಳಾ? ನಟಿ ಹೇಳಿದ್ದೇನು? ಫ್ಯಾನ್ಸ್​ ಹೇಳ್ತಿರೋದೇನು?

ತುಮ್ ಕ್ಯಾ ಮಿಲೆ ಹಾಡು ರಿಲೀಸ್ ಆದ ಬಳಿಕ ಇಷ್ಟು ಚಳಿಯನ್ನು ತಡೆದುಕೊಂಡು ಚಿತ್ರೀಕರಣ ಮಾಡಿದ್ದಕ್ಕಾಗಿ ಕ್ಷಮೆ ಕೇಳಿದರು. ಅಲಿಯಾ ಭಟ್ ಮಗುವಿಗೆ ಜನ್ಮ ನೀಡಿದ ಬಳಿಕ ಮಾಡಿದ ಸಿನಿಮಾ. ಮನೀಶ್ ಮಲ್ಹೋತ್ರಾ ಅವರು ಶಿಫಾನ್ ಸೀರೆಯಲ್ಲಿ ಸಿಕ್ಕಾಪಟ್ಟೆ ಚಳಿ ಅನುಭವಿಸಿದ್ದಕ್ಕೆ ಕ್ಷಮೆ ಕೇಳುತ್ತೇನೆ' ಎಂದು ಹೇಳಿದ್ದರು.