ಆಲಿಯಾ ಭಟ್‌ಗೆ ಸಿಗುವ ಅವಕಾಶಗಳ ಬಗ್ಗೆ ಬಹಿರಂಗವಾಗಿ ಕರಣ್ ಜೋಹಾರ್ ಕಾರ್ಯಕ್ರಮದಲ್ಲಿ ಕಾಮೆಂಟ್ ಮಾಡಿದ ಐಶ್ವರ್ಯ...  

ಬಾಲಿವುಡ್ ಅಂಗಳದ ಅತಿ ಸುಂದರಿ ಅತಿ ಹೆಚ್ಚು ಟ್ಯಾಲೆಂಟ್ ಇರುವ ನಟಿ ಎಂದು ಆಲಿಯಾ ಭಟ್ ಸಾಭೀತು ಮಾಡಿ ತೋರಿಸಿದ್ದು ಗಂಗೂಬಾಯಿ ಕಾಠಿಯಾವಾಡಿ ಸಿನಿಮಾ ಮೂಲಕ. ಕರಣ್ ಜೋಹಾರ್ ಸಹಾಯದಿಂದ ಅಲಿಯಾ ಭಟ್ ಎಷ್ಟು ಸಿನಿಮಾಗಳಲ್ಲಿ ಅವಕಾಶಗಳನ್ನು ಪಡೆದುಕೊಂಡಿದ್ದಾರೆ ಎಂದು ಒಮ್ಮೆ ಐಶ್ವರ್ಯ ರೈ ಬಹಿರಂಗವಾಗಿ ಕಾಮೆಂಟ್ ಮಾಡಿದ್ದು ಈಗ ಸುದ್ದಿಯಾಗುತ್ತಿದೆ. 

2018ರಲ್ಲಿ ಫೆನ್ನಿ ಖಾನ್ ಸಿನಿಮಾ ರಿಲೀಸ್‌ನ ವೇಳೆ ಐಶ್ವರ್ಯ ರೈ ಒಂದು ಹೇಳಿಕೆ ನೀಡುತ್ತಾರೆ. ಆಲಿಯಾ ಭಟ್‌ಗೆ ಅವಕಾಶಗಳನ್ನು ಕೊಡುವ ಮೂಲಕ ಕರಣ್ ಜೋಹಾರ್ ಎಷ್ಟು ಕಂಫರ್ಟ್‌ ಕ್ರಿಯೇಟ್ ಮಾಡಿ ಕೊಟ್ಟಿದ್ದಾರೆ ಎಂದು. ಇದೊಂದು ರೀತಿ ವಿವಾದ ಸೃಷ್ಟಿ ಮಾಡಿತ್ತು ಜೊತೆಗೆ ಸಣ್ಣದಾಗಿ ಕೋಲ್ಡ್‌ ವಾರ್ ಕ್ರಿಯೇಟ್ ಆಯ್ತು. 

ಏನಾದ್ರು ತುಂಬಿಸಿಕೊಂಡು ಹೋಗಮ್ಮ...; ಖಾಲಿ ಬ್ಯಾಗ್ ಹಿಡಿದು ಬಂದ ಅಲಿಯಾ ಕಾಲೆಳೆದ ನೆಟ್ಟಿಗರು

'ಈ ಮಾತನ್ನು ನಾನು ಆಲಿಯಾ ಭಟ್‌ಗೂ ಅನೇಕ ಬಾರಿ ಹೇಳಿರುವೆ. ಆಕೆ ಸಖತ್ ಖುಷಿ ಕೊಡಬಹುದು. ಆಲಿಯಾ ವೃತ್ತಿ ಜೀವನ ಆರಂಭದಿಂದ ಕರಣ್ ಜೋಹಾರ್ ಕೊಟ್ಟ ಸಪೋರ್ಟ್‌ ತುಂಬಾ ದೊಡ್ಡದು. ಇಷ್ಟೊಂದು ಸಪೋರ್ಟ್ ಪಡೆದು ಒಳ್ಳೆ ಆಫರ್‌ಗಳು ಬರುತ್ತಿದ್ದರೆ ಖಂಡಿತಾ ಕಷ್ಟ ಅನ್ನೋದು ಏನೆಂದು ಅರ್ಥನೇ ಆಗುವುದಿಲ್ಲ. ಎಷ್ಟು ವರ್ಷಗಳ ಕಾಲ ಬೇಕಿದ್ದರೂ ಇದೇ ರೀತಿ ಸಪೋರ್ಟ್‌ ಪಡೆಯುತ್ತಿರಬಹುದು. ಕಲಾವಿದರಾಗಿ ನಮಗೆ ಎಲ್ಲಿ ಎಲ್ಲಿ ಅವಕಾಶಗಳು ಇದೆ ನಮಗೆ ಎಷ್ಟು ವರ್ಷ ದುನಿಯಾದಲ್ಲಿ ಹೆಸರು ಮಾಡಬಹುದು ಎಂದು ಗೊತ್ತಾಗಿ ಬಿಡುತ್ತದೆ' ಎಂದು ಐಶ್ವರ್ಯ ರೈ ಬಾಲಿವುಡ್ ಹಂಗಾಮ ಸಂದರ್ಶನದಲ್ಲಿ ಮಾತನಾಡಿದ್ದರು.

'ಇಷ್ಟು ಸಹಾಯ ಮತ್ತು ಸೌಲಭ್ಯ ಇದ್ದರೂ ಆಲಿಯಾ ಭಟ್‌ ಕಷ್ಟ ಪಡುತ್ತಿರುವುದು ಖುಷಿ ವಿಚಾರ. ಒಳ್ಳೆ ಒಳ್ಳೆ ಅವಕಾಶಗಳು ಆಕೆ ಮಡಿಲಿನಲ್ಲಿ ಬಂದು ಬಂದು ಬೀಳುತ್ತಿದೆ. ಒಂದು ಸಲವೂ ಒಂದು ಬ್ಯಾನರ್‌ ಕೂಡ ಬೇಡ ಎಂದು ಹೇಳಿಲ್ಲ' ಎಂದು ಐಶ್ವರ್ಯ ಹೇಳಿದ್ದಾರೆ. 

ಇಟಾಲಿಯನ್ ಫ್ಯಾಶನ್ ಹೌಸ್ ಗುಸ್ಸಿಯ ಮೊದಲ ಭಾರತೀಯ ಜಾಗತಿಕ ರಾಯಭಾರಿಯಾಗಿ ಆಲಿಯಾ ಭಟ್‌

ಈ ಹೇಳಿಕೆ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕಾಮೆಂಟ್ಸ್‌ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. 'ಆಲಿಯಾ ಶ್ರಮದಿಂದ ಕೆಲಸ ಮಾಡಿ ಸೈ ಎನಿಸಿಕೊಂಡಿದ್ದಾಳೆ. ಏನೇ ನೆಪೋಟಿಸಂ ಇರಬಹುದು ಸಿನಿಮಾ ಮಾಡಬಹುದು ನಟನೆ ಅಥವಾ ಕಲೆ ಇಲ್ಲ ಅಂದ್ರೆ ಗೌರವ ಇರುವುದಿಲ್ಲ ಆದರೆ ಆಲಿಯಾ ಶ್ರಮ ಹಾಕಿ ತಮ್ಮ ದಾರಿ ತಾವೇ ಸೃಷ್ಟಿ ಮಾಡಿಕೊಳ್ಳುತ್ತಿದ್ದಾರೆ' ಎಂದು ಒಬ್ಬ ನೆಟ್ಟಿಗ ಕಾಮೆಂಟ್ ಮಾಡಿದ್ದಾರೆ, ಮತ್ತೊಮ್ಮ 'ಅತಿ ಹೆಚ್ಚು ಸಿನಿಮಾಗಳಲ್ಲಿ ಆಲಿಯಾ ಭಟ್‌ನ ನಾಯಕಿಯಾಗಿ ಆಯ್ಕೆ ಮಾಡುವುದಕ್ಕೆ ಕರಣ್ ಜೋಹಾರ್ ಹುಚ್ಚ ಅಲ್ಲ. ಹಾಕಿದ ಬಂಡವಾಳ ಬರುತ್ತಿದ್ದರೆ ಮಾತ್ರ ನಾಯಕಿ ಮಾಡಿಕೊಳ್ಳುತ್ತಾರೆ. ಇದೇ ನೆಪೋಟಿಸಂ ಅನ್ನೋ ಜನ ಅಲಿಯಾ ಬಿಟ್ಟು ಮತ್ತೊಬ್ಬರನ್ನು ಆ ಜಾಗಕ್ಕೆ ಕರೆದುಕೊಂಡು ಬಂದು ನ್ಯಾಯ ಕೊಡಲು ಆಗದು 'ಎಂದಿದ್ದಾರೆ.