Asianet Suvarna News Asianet Suvarna News

ಕಾಜೋಲ್‌ ಮುಂಚೆ ಅಜಯ್ ದೇವಗನ್ ಲವ್ ಮಾಡಿದ್ದು ಬೇರೆ ಸ್ಟಾರ್ ನಟಿ, ಅದಕ್ಕೂ ಮೊದಲು ಇನ್ನೊಬ್ಬರು!

ಜಿಗರ್ ಸಿನಿಮಾದ ಶೂಟಿಂಗ್ ವೇಳೆ ಈ ಇಬ್ಬರೂ ತಾರೆಯರು ಸಾಕಷ್ಟು ವೇಳೆ ಒಟ್ಟಿಗೇ ಕಳೆದಿದ್ದಾರೆ. ಇಬ್ಬರೂ ಆಗಲೇ 3 ಸಿನಿಮಾಗಳನ್ನು ಒಟ್ಟಿಗೇ ಮಾಡಿದ್ದರಿಂದ ಅವರಿಬ್ಬರ ಮಧ್ಯೆ ಒಂದು ಮಟ್ಟಿಗಿನ ಆತ್ಮೀಯತೆ ಸೃಷ್ಟಿಯಾಗಿತ್ತು. 1995ರಲ್ಲಿ ಹಲ್‌ಚಲ್‌ ಚಿತ್ರಕ್ಕೆ ಅಜಯ್  ದೇವಗನ್ ಜತೆ ಕಾಜೋಲ್ ನಟಿಸಿದರು. ಅಲ್ಲಿಂದ ಶುರುವಾಯ್ತು ಅಜಯ್ ದೇವಗನ್ ಮತ್ತು ಕಾಜೋಲ್ ಲವ್.

Ajay Devgn was going to marry Karisma Kapoor before kajol srb
Author
First Published Nov 2, 2023, 2:38 PM IST

90ರ ದಶಕದಲ್ಲಿ ಬಾಲಿವುಡ್ ಸ್ಟಾರ್ ನಟ ಅಜಯ್ ದೇವಗನ್ ಮತ್ತು ಸ್ಟಾರ್ ನಟಿ ಕಾಜೋಲ್ ಬಾಲಿವುಡ್ ನ ಜನಪ್ರಿಯ ಜೋಡಿ ಎಂಬುದು ಬಹುತೇಕ ಎಲ್ಲರಿಗೂ ಗೊತ್ತು. ರೀಲ್ ಅಲ್ಲದೇ ರಿಯಲ್ ಆಗಿ ಕೂಡ ಈ ಇಬ್ಬರು ಪತಿ-ಪತ್ನಿಯರು. ಆದರೆ, ಕಾಜೋಲ್ ಗಿಂತ ಮೊದಲು ನಟ ಅಜಯ್ ದೇವಗನ್ ಸಂಬಂಧ ಬೇರೆ ನಟಿಯ ಜತೆ ಇತ್ತು. ಆದರೆ, ಅಜಯ್ ದೇವಗನ್ ಲೈಫಲ್ಲಿ ಕಾಜೋಲ್ ಬಂದ ತಕ್ಷಣ ಆ ಇನ್ನೊಬ್ಬರು ನಟಿ ಹೊರಬೀಳಬೇಕಾಯ್ತು. ಹಾಗಿದ್ದರೆ ಆ ನಟಿ ಯಾರು? ಬಹಳಷ್ಟು ಇಂಟರೆಸ್ಟಿಂಗ್ ಆಗಿರುವ ಟ್ರೈಯಾಂಗಲ್ ಲವ್ ಸ್ಟೋರಿ ಇಲ್ಲಿದೆ..

ಹೌದು, ನಟ ಅಜಯ್ ದೇವಗನ್ ಮೊದಲು ಲವ್‌ಗೆ ಬಿದ್ದಿದ್ದು ಅವರು ಹಲವಾರು ಸಿನಿಮಾಗಳಲ್ಲಿ ನಟಿಸಿದ್ದ ಸಹನಟಿಯ ಜತೆಗೇ ಆಗಿದೆ. ಸುಹಾಗ್, ಧನವಾನ್, ಮತ್ತು ಸರ್ಗಮ್ ಚಿತ್ರಗಳಲ್ಲಿ ಕರಿಷ್ಮಾ ಕಪೂರ್ ಮತ್ತು ಅಜಯ್ ದೇವಗನ್ ಒಟ್ಟಿಗೇ ನಟಿಸಿದ್ದರು. ಫರೋಘ್ ಸಿಧ್ಧಿಕಿ ನಿರ್ದೇಶನದ 'ಜಿಗರ್' ಚಿತ್ರದ ಶೂಟಿಂಗ್ ವೇಳೆ ನಟ ಅಜಯ್ ದೇವಗನ್ ಹಾಗೂ ನಟಿ ಕರಿಷ್ಮಾ ಕಪೂರ್ ಮಧ್ಯೆ ಲವ್ ಶುರುವಾಗಿದೆ. ಅದಕ್ಕೂ ಮೊದಲು ಅಜಯ್ ದೇವಗನ್ ಲವ್‌ ಮಾಡಿದ್ದು ನಟಿ ರವೀನಾ ಟಂಡನ್ ಅವರನ್ನು ಎನ್ನಲಾಗಿದೆ.

ಜಿಗರ್ ಸಿನಿಮಾದ ಶೂಟಿಂಗ್ ವೇಳೆ ಈ ಇಬ್ಬರೂ ತಾರೆಯರು ಸಾಕಷ್ಟು ವೇಳೆ ಒಟ್ಟಿಗೇ ಕಳೆದಿದ್ದಾರೆ. ಇಬ್ಬರೂ ಆಗಲೇ 3 ಸಿನಿಮಾಗಳನ್ನು ಒಟ್ಟಿಗೇ ಮಾಡಿದ್ದರಿಂದ ಅವರಿಬ್ಬರ ಮಧ್ಯೆ ಒಂದು ಮಟ್ಟಿಗಿನ ಆತ್ಮೀಯತೆ ಸೃಷ್ಟಿಯಾಗಿತ್ತು. ಆದರೆ, ಜಿಗರ್ ಶೂಟಿಂಗ್ ವೇಳೆ ಕರಿಷ್ಮಾ ಮತ್ತು ಅಜಯ್ ದೇವಗನ್ ಮಧ್ಯೆ ಲವ್ ಶುರುವಾಗಿ ಅದು ಪೀಕ್‌ ಹಂತಕ್ಕೆ ಕೂಡ ತಲುಪಿದೆ. ಅವರಿಬ್ಬರೂ ಬಹಳಷ್ಟು ಕಡೆ ಸುತ್ತಾಡಿ ಸಾಕಷ್ಟು ಎಂಜಾಯ್ ಮಾಡಿದ್ದಾರೆ.

ಗಂಡಸರ ರೂಮಿಗೆ ನನ್ನನ್ನು ತಳ್ಳಿದ್ದು ಬೇರೆ ಯಾರೂ ಅಲ್ಲ; ಗಳಗಳನೇ ಅತ್ತು ದುಃಖ ತೋಡಿಕೊಂಡ ಶಕೀಲಾ 

1995ರಲ್ಲಿ ಹಲ್‌ಚಲ್‌ ಚಿತ್ರಕ್ಕೆ ಅಜಯ್  ದೇವಗನ್ ಜತೆ ಕಾಜೋಲ್ ನಟಿಸಿದರು. ಅಲ್ಲಿಂದ ಶುರುವಾಯ್ತು ಅಜಯ್ ದೇವಗನ್ ಮತ್ತು ಕಾಜೋಲ್ ಲವ್. ಈ ಸಂಗತಿ ಕರಿಷ್ಮಾ ಕಪೂರ್‌ಗೆ ಗೊತ್ತಾಗುತ್ತಿದ್ದಂತೆ ಆಕೆ ಕೆಂಡಾಮಂಡಲವಾದರು. ಆಕೆ ಅಜಯ್ ದೇವಗನ್‌ ಜತೆ ಈ ಬಗ್ಗೆ ಚರ್ಚೆ ಮಾಡಿದರೂ ಏನೂ ಪ್ರಯೋಜನ ಆಗಲಿಲ್ಲ. ಕಾರಣ, ಕಾಜೋಲ್ ಬಬ್ಲಿ ಲುಕ್ ಹಾಗೂ ಪ್ರೀತಿಗೆ ಅದಾಗಲೇ ಅಜಯ್ ಮಾರುಹೋಗಿದ್ದರು. 

ತನಿಷಾ-ವಿನಯ್ ಗೌಡ ಜಗಳ ಬಿಡಿಸಲು ಕಾರ್ತಿಕ್ ಪರದಾಟ, ನೀತು-ಸಂಗೀತಾ ಮಧ್ಯೆ ಅದೇನಾಯ್ತು?

ಹೀಗಾಗಿ ನಟಿ ಕರಿಷ್ಮಾ ಕಪೂರ್ ಅಜಯ್ ಲೈಫಿಂದ ದೂರ ಹೋಗಬೇಕಾಯ್ತು. ಒಟ್ಟಿನಲ್ಲಿ, ಕರಿಷ್ಮಾ ಬದಲು ಕಾಜೋಲ್ ಮದುವೆಯಾಗಿ ಅಜಯ್ ಈಗ ಸುಖ ದಾಂಪತ್ಯ ನಡೆಸುತ್ತಿದ್ದಾರೆ. ಅಜಯ್-ಕಾಜೋಲ್ ಜೋಡಿಗೆ ನಿಶಾ ದೇವಗನ್ ಹಾಗೂ ಯುಗ ದೇವಗನ್ ಎಂಬ ಇಬ್ಬರು ಮಕ್ಕಳಿದ್ದಾರೆ. ಈ ರೀತಿ ಬಾಲಿವುಡ್ ಜನಪ್ರಿಯ ಜೋಡಿ ಕಾಜೋಲ್-ಅಜಯ್ ದೇವಗನ್ ಲವ್, ಮದುವೆಗಿಂತ ಹಿಂದೆ ಮತ್ತೊಂದು ಲವ್ ಸ್ಟೋರಿ ತಳುಕುಹಾಕಿಕೊಂಡಿದೆ. 

Follow Us:
Download App:
  • android
  • ios