Asianet Suvarna News Asianet Suvarna News

ತನಿಷಾ-ವಿನಯ್ ಗೌಡ ಜಗಳ ಬಿಡಿಸಲು ಕಾರ್ತಿಕ್ ಪರದಾಟ, ನೀತು-ಸಂಗೀತಾ ಮಧ್ಯೆ ಅದೇನಾಯ್ತು?

ದಿನಗಳೆದಂತೆ ಬಿಗ್ ಬಾಸ್ ಶೋ ರಂಗೇರುತ್ತಿದೆ. ಪ್ರತಿಯಬ್ಬರೂ ತಮ್ಮ ಶಕ್ತಿ ಮೀರಿ ಪ್ರಯತ್ನಿಸುತ್ತಲೇ ಇರುತ್ತಾರೆ, ಪ್ರತಿ ವಾರ ಕೂಡ ಒಬ್ಬರು ಮನೆಯಿಂದ ಹೊರಹೋಗಲೇಬೇಕು. ಸ್ಟ್ರಾಂಗ್  ಆಗಿರುವವರು ಉಳಿದುಕೊಳ್ಳುತ್ತಾರೆ, ವೀಕ್ ಇರುವವರು ಮನೆಯಿಂದ ಹೊರಹೋಗುತ್ತಾರೆ. ಅದು ಕಾನ್ಸೆಪ್ಟ್.

Bigg boss kannada season 10 4 week fight competition vinay thanisha srb
Author
First Published Nov 2, 2023, 1:01 PM IST

ಬಿಗ್ ಬಾಸ್ ಕನ್ನಡ ಸೀಸನ್ 26ನೇ ದಿನಕ್ಕೆ ಕಾಲಿಟ್ಟಿದೆ. ನಾಲ್ಕನೇ ವಾರದ ಮಧ್ಯದಲ್ಲಿ ಸಾಗುತ್ತಿರುವ  ಈ ಗೇಮ್ ಶೋದಲ್ಲಿ ಕುಸ್ತಿ ಅಖಾಡ ಏರ್ಪಟ್ಟಿದೆ. ಎರಡು ತಂಡಗಳ ನಡುವೆ ನಡೆಯುತ್ತಿರುವ ಕುಸ್ತಿ ಸ್ಪರ್ಧೆಯಲ್ಲಿ ಕುಸ್ತಿಗಿಂತ ಹೆಚ್ಚಾಗಿ ಮಾತಿನ ಚಕಮಕಿ ಕಂಡುಬಂತು. ಈ ಅಖಾಡದಲ್ಲಿ ತುಕಾಲಿ ಸಂತು, ಸ್ನೇಹಿತ್, ಕಾರ್ತಿಕ್, ಮೈಕೆಲ್ ಮುಂತಾದವರು ಕುಸ್ತಿ ಆಡುತ್ತಿರುವ ಪ್ರೋಮೋ ಕಲರ್ಸ್ ಕನ್ನಡದ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಆಗಿದ್ದು, ಭಾರೀ ಕುತೂಹಲ ಕೆರಳಿಸುತ್ತಿದೆ. 

ಕುಸ್ತಿ ಅಖಾಡದಲ್ಲಿ ಸಂಗೀತಾ ಎದುರು ಸ್ಪರ್ಧಿಸಿದ ನೀತು ಸರಿಯಾಗಿ ಆಡಿಲ್ಲ, ಮೋಸ ನಡೆದಿದೆ ಎಂದು ತನಿಷಾ ಬೊಬ್ಬೆ ಹೊಡೆದಿದ್ದಾರೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದ ವಿನಯ್ ವಿರುದ್ಧ ತನಿಷಾ ಜೋರಾಗಿಯೇ ಕೂಗಾಡಿದ್ದಾರೆ. ಅವರಿಬ್ಬರ ಜಗಳವನ್ನು ತಣ್ಣಗಾಗಿಸಲು ಕಾರ್ತಿಕ್ ಇನ್ನಿಲ್ಲದ ಪ್ರಯತ್ನ ಮಾಡಿ ಗೆದ್ದಿದ್ದಾರೆ. ಅದರೆ, ಕೂಗಾಟ ನಿಂತಿದೆಯೇ ಹೊರತೂ ಅವರಿಬ್ಬರ ಮುಖದಲ್ಲಿ ಮುಗುಳ್ನಗು ಮೂಡಲಿಲ್ಲ. 

ಕಾಲ ಕಳೆದಂತೆ ಬಿಗ್ ಬಾಸ್ ಮನೆ ಜಗಳದ ಗೂಡಾಗುತ್ತಿದೆ. ಕಾರಣ, ಅಲ್ಲಿ ಎಲ್ಲರೂ ಬಂದಿರುವುದು ಗೇಮ್ ಗೆದ್ದು ಬಹಮಾನವನ್ನು ತಮ್ಮ ಬುಟ್ಟಿಗೆ ಹಾಕಿಕೊಳ್ಳಲು ಮಾತ್ರ. ಅಲ್ಲಿ ಪ್ರತಿಯೊಬ್ಬರೂ ಮಿಕ್ಕವರ ಜತೆ ಕಾಂಪೀಟ್ ಮಾಡಿ ಗೆಲ್ಲಬೇಕು. ಸೋತರೆ ಆ ಮನೆಯಲ್ಲಿ ಉಳಿಯಲೂ ಅಸಾಧ್ಯ. ಕೊನೆಯವರೆಗೂ ಗೆಲ್ಲುತ್ತಲೇ ಇರಬೇಕು. 'ಗೆದ್ದರೆ ಬಹುಮಾನ, ಸೋತರೆ ಅವಮಾನ' ಎಂಬುದು ಬಿಗ್ ಬಾಸ್ ಗೇಮ್ ಶೋ ವೇದವಾಕ್ಯ ಎನ್ನಬಹುದು. 

ಒಟ್ಟಿನಲ್ಲಿ, ದಿನಗಳೆದಂತೆ ಬಿಗ್ ಬಾಸ್ ಶೋ ರಂಗೇರುತ್ತಿದೆ. ಪ್ರತಿಯಬ್ಬರೂ ತಮ್ಮ ಶಕ್ತಿ ಮೀರಿ ಪ್ರಯತ್ನಿಸುತ್ತಲೇ ಇರುತ್ತಾರೆ, ಪ್ರತಿ ವಾರ ಕೂಡ ಒಬ್ಬರು ಮನೆಯಿಂದ ಹೊರಹೋಗಲೇಬೇಕು. ಸ್ಟ್ರಾಂಗ್  ಆಗಿರುವವರು ಉಳಿದುಕೊಳ್ಳುತ್ತಾರೆ, ವೀಕ್ ಇರುವವರು ಮನೆಯಿಂದ ಹೊರಹೋಗುತ್ತಾರೆ. ಅದು ಕಾನ್ಸೆಪ್ಟ್. ಮುಂದೇನಾಗಲಿದೆ ಎಂಬುದನ್ನು ಕಾದು ನೋಡಬೇಕು. 

ಬಿಗ್ ಬಾಸ್ ಮನೆಯಲ್ಲಿ ಏನೇನು ನಡೆಯುತ್ತಿದೆ ಎಂಬುದನ್ನು ನೋಡಲು JioCinemaದಲ್ಲಿ ಪ್ರಸಾರವಾಗುತ್ತಿರುವ ಬಿಗ್‌ಬಾಸ್‌ ಕನ್ನಡ ನೇರಪ್ರಸಾರವನ್ನು ವೀಕ್ಷಿಸಿ. ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು JioCinemaದಲ್ಲಿ ಉಚಿತವಾಗಿ ನೋಡಿ. ಪ್ರತಿದಿನದ ಎಪಿಸೋಡ್‌ಗಳನ್ನು Colors Kannada ದಲ್ಲಿ ಪ್ರತಿದಿನ ರಾತ್ರಿ 9.30ಕ್ಕೆ, ಶನಿವಾರ-ಭಾನುವಾರ ರಾತ್ರಿ 9.00ಕ್ಕೆ ವೀಕ್ಷಿಸಬಹುದು.

Follow Us:
Download App:
  • android
  • ios