Asianet Suvarna News Asianet Suvarna News

ಯಶ್ KGF 2 ಮುಂದೆ ಮುಗ್ಗರಿಸಿದ ಅಜಯ್ ದೇವಗನ್ 'ರನ್‌ವೇ 34'; ಮೊದಲ ದಿನ ಗಳಿಸಿದೆಷ್ಟು?

ಬಾಲಿವುಡ್‌ನಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ಸೋಲುತ್ತಿವೆ. ಇತ್ತೀಚಿಗೆ ಬಿಡುಗಡೆಯಾದ ಹಿಂದಿ ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಕಲೆಕ್ಷನ್ ಮಾಡಲು ವಿಫಲವಾಗುತ್ತಿವೆ. ಅಜಯ್ ದೇವಗನ್ ನಟನೆ ರನ್‌ವೇ 34 ಮತ್ತು ಟೈಗರ್ ಶ್ರಾಫ್ ನಟನೆಯ ಹೀರೋಪಂಕ್ತಿ ಸಿನಿಮಾಗಳು ಸಹ ಅಭಿಮಾನಿಗಳನ್ನು ಸೆಳೆಯುವಲ್ಲಿ ವಿಫಲವಾಗಿದೆ.

ajay devgn starrer Runway 34 poor start 3.25 crore collection on first day sgk
Author
Bengaluru, First Published Apr 30, 2022, 1:44 PM IST

ಬಾಲಿವುಡ್‌ನಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ಸೋಲುತ್ತಿವೆ. ಇತ್ತೀಚಿಗೆ ಬಿಡುಗಡೆಯಾದ ಹಿಂದಿ ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಕಲೆಕ್ಷನ್ ಮಾಡಲು ವಿಫಲವಾಗುತ್ತಿವೆ. ಶಾಹಿದ್ ಕಪೂರ್ ನಟನೆಯ ಜರ್ಸಿ ಸಿನಿಮಾ ಬೆನ್ನಲ್ಲೇ ಇದೀಗ ಅಜಯ್ ದೇವಗನ್ ನಟನೆ ರನ್‌ವೇ 34 ಮತ್ತು ಟೈಗರ್ ಶ್ರಾಫ್ ನಟನೆಯ ಹೀರೋಪಂಕ್ತಿ ಸಿನಿಮಾಗಳು ಸಹ ಅಭಿಮಾನಿಗಳನ್ನು ಸೆಳೆಯುವಲ್ಲಿ ವಿಫಲವಾಗಿದೆ. ಬಾಲಿವುಡ್‌ನಲ್ಲಿ ಇನ್ನು ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್-2 ಸಿನಿಮಾದ್ದೆ ಅಬ್ಬರ. ಸಿನಿಮಾ ಬಿಡುಗಡೆಯಾಗಿ 16 ದಿನಗಳಾದರೂ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಈಗಾಗಲೇ ಹಿಂದಿಯಲ್ಲಿ 350 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿ ಬೀಗುತ್ತಿದೆ.

ರಾಕಿ ಭಾಯ್ ಅಬ್ಬರದ ನಡುವೆಯೂ ಏಪ್ರಿಲ್ 29ರಂದು ತೆರೆಗೆ ಬಂದ ಅಜಯ್ ದೇವಗನ್(ajay devgn) ನಟನೆಯ ರನ್‌ವೇ 34(Runway 34) ಸಿನಿಮಾ ಮೊದಲ ದಿನ ನಿರೀಕ್ಷೆಯ ಕಲೆಕ್ಷನ್ ಮಾಡುವಲ್ಲಿ ವಿಫಲವಾಗಿದೆ. ಅಜಯ್ ದೇವಗನ್ ಸಿನಿಮಾ ಮೊದಲ ದಿನ 5 ಕೋಟಿ ರೂ. ಕಲೆಕ್ಷನ್ ಮಾಡಬಹುದು ಎನ್ನುವ ನಿರೀಕ್ಷೆ ಮಾಡಲಾಗಿತ್ತು. ಆದರೆ ಅಷ್ಟು ಮಾಡುವಲ್ಲಿ ಸೋತಿದೆ. ಮೊದಲ ದಿನ ರನ್ ವೇ 34 ಸಿನಿಮಾ 3.25 ಕೋಟಿ ರೂ. ಕೋಟಿ ರೂಪಾಯಿ ಗಳಿಕೆ ಮಾಡುವ ಮೂಲಕ ತೃಪ್ತಿ ಪಟ್ಟುಕೊಂಡಿದೆ. ಈ ಸಿನಿಮಾದಲ್ಲಿ ಅಜಯ್ ದೇವಗನ್ ಜೊತೆ ಅಮಿತಾಬ್ ಬಚ್ಚನ್ ಸಹ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ನಾಯಕಿಯಾಗಿ ರಕುಲ್ ಪ್ರೀತ್ ಸಿಂಗ್ ಕಾಣಿಸಿಕೊಂಡಿದ್ದಾರೆ.ajay devgn starrer Runway 34 poor start 3.25 crore collection on first day sgk

ಮೊದಲೇ ಸೌತ್ ಸಿನಿಮಾಗಳ ಸಕ್ಸಸ್ ನಿಂದ ತತ್ತರಿಸಿಹೋಗಿರುವ ಬಾಲಿವುಡ್‌ಗೆ ಇದು ಮತ್ತಷ್ಟು ಆಘಾತ ತಂದಿದೆೆ. ಟೈಗರ್ ಶ್ರಾಫ್ ನಟನೆಯ ಹೀರೋಪಂಕ್ತಿ ಸಿನಿಮಾ ಕೂಡ ನಿರೀಕ್ಷೆಯ ಕಲೆಕ್ಷನ್ ಮಾಡಿಲ್ಲ. 7 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. ಈ ಲೆಕ್ಕಾ ಈಗ ಹಿಂದಿ ಮಂದಿಯ ತಲೆಕೆಡಿಸಿದೆ. ಶುಕ್ರವಾರ (ಏಪ್ರಿಲ್ 29) ಹಿಂದಿ ಸಿನಿಮಾಗಳಿಗಿಂತ ಕೆಜಿಎಫ್-2 ಸಿನಿಮಾ ಹೆಚ್ಚು ಗಳಿಕೆ ಮಾಡಿದೆ. ಸಿನಿಮಾ ಬಿಡುಗಡೆಯಾಗಿ 2 ವಾರದ ಮೇಲಾದರೂ ಉತ್ತಮ ಕಲೆಕ್ಷನ್ ಮಾಡುವ ಮೂಲಕ ಬಾಲಿವುಡ್‌ನಲ್ಲಿ ಆರ್ಭಟಿಸುತ್ತಿದೆ.

ಅಜಯ್ ದೇವಗನ್ ಗೆ ಅಕ್ಷಯ್ ಕುಮಾರ್ ಸಾಥ್; ಗುಟ್ಕಾ ಗ್ಯಾಂಗ್ ಎಂದು ಕಾಲೆಳೆದ ನೆಟ್ಟಿಗರು

ಅಜಯ್ ದೇವಗನ್ ಕಳೆದೆರಡು ದಿನಗಳಿಂದ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದರು. ಹಿಂದಿ ರಾಷ್ಟ್ರಭಾಷೆಯಲ್ಲ ಎಂದು ಸುದೀಪ್ ಹೇಳಿದ್ದ ಮಾತಿಗೆ ತಿರುಗೇಟು ನೀಡುವ ಮೂಲಕ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದರು. ಬಳಿಕ ಸುದೀಪ್ ಖಡಕ್ ಪ್ರತಿಕ್ರಿಯೆ ನೀಡುವ ಮೂಲಕ ಅಜಯ್ ದೇವಗನ್ ಅವರಿಗೆ ಬಿಸಿ ಮುಟ್ಟಿಸಿದ್ದರು. ಇಬ್ಬರ ಸ್ಟಾರ್ ನಟರ ರಾಷ್ಟ್ರಭಾಷಾ ವಿವಿದ ಕ್ಷಣಾರ್ಧದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿತ್ತು. ಈ ವಿವಾದದ ಬಳಿಕ ತೆರೆಗೆ ಬಂದ ಅಜಯ್ ದೇವಗನ್ ರನ್‌ವೇ 34 ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಕಲೆಕ್ಷನ್ ಮಾಡಲು ವಿಫಲಾಗಿದೆ.

ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ, ಸುದೀಪ್ ಪರ ಬೊಮ್ಮಯಿ ಬ್ಯಾಟಿಂಗ್..!

ಕೆಜಿಎಫ್-2 ಈಗಾಗಲೇ 1000 ಕೋಟಿ ರೂಪಾಯಿ ಬಾಚಿಕೊಳ್ಳುವ ಮೂಲಕ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾಗಳ ಲಿಸ್ಟ್ ನಲ್ಲಿ 4ನೇ ಸ್ಥಾನದಲ್ಲಿದೆ. ಬಾಲಿವುಡ್‌ನಲ್ಲಿ ಇನ್ನೂ ಕೆಜಿಎಫ್-2 ಕಲೆಕ್ಷನ್ ಅಬ್ಬರ ಮುಂದುವರೆದಿದ್ದು ಇನ್ನೆಷ್ಟು ಕೋಟಿ ಗಳಿಕೆ ಮಾಡಲಿದೆ ಎಂದು ಕಾದುನೋಡಬೇಕು.

Latest Videos
Follow Us:
Download App:
  • android
  • ios