ಅಜಯ್ ದೇವಗನ್ ಗೆ ಅಕ್ಷಯ್ ಕುಮಾರ್ ಸಾಥ್; ಗುಟ್ಕಾ ಗ್ಯಾಂಗ್ ಎಂದು ಕಾಲೆಳೆದ ನೆಟ್ಟಿಗರು
ಅಜಯ್ ದೇವಗನ್ ನಟನೆಯ ರನ್‌ವೇ 34 ಸಿನಿಮಾ ನೋಡಿ ಬಾಲಿವುಡ್‌ನ ಮತ್ತೋರ್ವ ಸ್ಟಾರ್ ಅಕ್ಷಯ್ ಕುಮಾರ್(Akshay Kumar) ಹಾಡಿ ಹೊಗಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅಜಯ್ ದೇವಗನ್ ಸಿನಿಮಾದ ವಿಮರ್ಶೆ ಮಾಡಿದ್ದಾರೆ. ಅಕ್ಷಯ್ ಕುಮಾರ್ ಪ್ರತಿಕ್ರಿಯೆ ನೀಡುತ್ತಿದ್ದಂತೆ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. 'ಗುಟ್ಕಾ ಗ್ಯಾಂಗ್' ಎಂದು ಕಾಲೆಳೆಯುತ್ತಿದ್ದಾರೆ.
ಕಿಚ್ಚ ಸುದೀಪ್(Sudeep) ಮತ್ತು ಬಾಲಿವುಡ್ ನಟ ಅಜಯ್ ದೇವಗನ್( Ajay devgan) ನಡುವಿನ ರಾಷ್ಟ್ರಭಾಷಾ ವಿವಾದ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಹಿಂದಿ ರಾಷ್ಟ್ರಭಾಷೆ ಎಂದು ಹೇಳಿ ಅಜಯ್ ದೇವಗನ್ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಗುಟ್ಕಾ ಜಾಹೀರಾತಿನಲ್ಲಿ ಕಾಣಿಸಿಕೊಂಡು ನೆಟ್ಟಿಗರ ಆಕ್ರೋಶಕ್ಕೆ ಗುರಿಯಾಗಿದ್ದ ಅಜಯ್ ದೇವನ್ ಇದೀಗ ರಾಷ್ಟ್ರಭಾಷೆ ವಿವಾದದಲ್ಲಿ ಸಿಲುಕಿದ್ದಾರೆ.
ಸುದೀಪ್ ಹಿಂದಿ ರಾಷ್ಟ್ರಭಾಷೆಯಲ್ಲ ಎಂದು ಹೇಳಿದ್ದ ಮಾತಿಗೆ ಅಜಯ್ ದೇವಗನ್ ಟ್ವಿಟ್ಟರ್ ಮೂಲಕ ಕಿಡಿ ಕಾರಿದ್ದರು. ಹಿಂದಿ ರಾಷ್ಟ್ರ ಭಾಷೆ, ಹಿಂದಿಗೆ ಯಾಕೆ ಸಿನಿಮಾ ಡಬ್ ಮಾಡುತ್ತೀರಿ ಎಂದು ಅಜಯ್ ದೇವಗನ್ ಪ್ರಶ್ನಿಸಿದ್ದರು.
ಇದಕ್ಕೆ ಸುದೀಪ್ ಬುದ್ಧಿವಂತಿಕೆಯ ಉತ್ತರ ನೀಡುವ ಹಿಂದಿ ರಾಷ್ಟ್ರಭಾಷೆಯಲ್ಲ ಎನ್ನುವುದನ್ನು ಅಜಯ್ ದೇವಗನ್ ಗೆ ಅರಿವು ಮೂಡಿಸಿ ವಾತಾವರಣ ತಿಳಿಗೊಳಿಸುವ ಪ್ರಯತ್ನ ಮಾಡಿದ್ರು. ಆದರೆ ಇಬ್ಬರು ಸ್ಟಾರ್ ನಟರ ನಡುವಿನ ರಾಷ್ಟ್ರಭಾಷಾ ಚರ್ಚೆ ಕ್ಷಣಾರ್ಧದಲ್ಲಿ ವೈರಲ್ ಆಗಿ ರಾಷ್ಟ್ರವ್ಯಾಪಿ ಚರ್ಚೆಗೆ ಕಾರಣವಾಯಿತು. ಈ ವಿವಾದ ಬೆನ್ನಲ್ಲೇ ಅಜಯ್ ದೇವಗನ್ ನಟನೆಯ ರನ್ ವೇ 34 ಸಿನಿಮಾ ಬಿಡುಗಡೆಯಾಗಿದೆ. ಅಜಯ್ ದೇವಗನ್ ನಟಿಸಿ ನಿರ್ಮಾಣ ಮಾಡಿರುವ ಈ ಸಿನಿಮಾದಲ್ಲಿ ಬಿಗ್ ಬಿ ಅಮಿತಾಬ್ ಬಚ್ಚನ್ ಸಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
#SinghamOurRealHero; ದೇವಗನ್ ಪರ ನಿಂತ ಹಿಂದಿ ಅಭಿಮಾನಿಗಳು, ಸೂರ್ಯ ಫ್ಯಾನ್ಸ್ ಗರಂ
ಅಜಯ್ ದೇವಗನ್ ನಟನೆಯ ರನ್‌ವೇ 34 ಸಿನಿಮಾ ನೋಡಿ ಬಾಲಿವುಡ್‌ನ ಮತ್ತೋರ್ವ ಸ್ಟಾರ್ ಅಕ್ಷಯ್ ಕುಮಾರ್(Akshay Kumar) ಹಾಡಿ ಹೊಗಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅಜಯ್ ದೇವಗನ್ ಸಿನಿಮಾದ ವಿಮರ್ಶೆ ಮಾಡಿದ್ದಾರೆ. ಅಜಯ್ ದೇವಗನ್ ಅಭಿನಯವನ್ನು ಹೊಗಳಿದ್ದಾರೆ. ರನ್‌ವೇ 34 ಸಿನಿಮಾವನ್ನು ಈಗ ನೋಡಿದೆ. ತುಂಬಾ ಮಜಾ ಬಂತು. ಸಖತ್ ಥ್ರಿಲ್ ಆಗಿದೆ. ವಿ ಎಫ್ ಎಕ್ಸ್ ಅದ್ಭುತವಾಗಿದೆ. ಅದ್ಭುತವಾದ ಅಭಿನಯ ಮತ್ತು ನಿರ್ದೇಶನ. ಅಮಿತಾಬ್ ಅಭಿನಯ, ರಕುಲ್ ಪ್ರೀತ್ ಸಿಂಗ್ ಒಳ್ಳೆಯದಾಗಲಿ ಎಂದು ಹೇಳಿದ್ದಾರೆ.
ಅಕ್ಷಯ್ ಕುಮರ್ ವಿಮರ್ಶೆಗೆ ಅಜಯ್ ದೇವಗನ್ ಪ್ರತಿಕ್ರಿಯೆ ನೀಡಿ ಧನ್ಯವಾದ ತಿಳಿಸಿದ್ದಾರೆ. ಅಕ್ಷಯ್ ಕುಮಾರ್ ಪ್ರತಿಕ್ರಿಯೆ ನೀಡುತ್ತಿದ್ದಂತೆ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. 'ಗುಟ್ಕಾ ಗ್ಯಾಂಗ್' ಎಂದು ಹೇಳುತ್ತಿದ್ದಾರೆ. ಅಜಯ್ ದೇವಗನ್, ಅಕ್ಷಯ್ ಕುಮಾರ್ ಮತ್ತು ಶಾರುಖ್ ಖಾನ್ ಮೂವರು ಡುಟ್ಕಾ ಜಾಹೀರಾತಿನಲ್ಲಿ ಕಾಣಿಸಿಕೊಡಿದ್ದರು. ಇದು ಅಭಿಮಾನಿಗಳು ಕೋಪಕ್ಕೆ ಕಾರಣವಾಗಿತ್ತು. ಇದೀಗ ಮತ್ತೆ ನೆಟ್ಟಿಗರು ಕಾಲೆಳೆಯುತ್ತಿದ್ದಾರೆ. ಗುಟ್ಕಾ ಗ್ಯಾಂಗ್ ಪ್ರೀತಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ, ಪೇಯ್ಡ್ ಪ್ರಮೋಷನ್ ಎಂದೆಲ್ಲ ನೆಟ್ಟಿಗರು ಆಕ್ರೋಶ ಹೊರಹಾಕುತ್ತಿದ್ದಾರೆ.
ಅಜಯ್ ದೇವಗನ್ ವಿವಾದ: ‘ಹಿಂದಿ ರಾಷ್ಟ್ರ ಭಾಷೆ’ ಅಲ್ಲ, ಕನ್ನಡಿಗರ ಗರ್ಜನೆ
ಇತ್ತೀಚಿಗಷ್ಟೆ ನಟ ಅಕ್ಷಯ್ ಗುಟ್ಕಾ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದರು. ಅಕ್ಷಯ್ ಕುಮಾರ್ ಗುಟ್ಕಾ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುತ್ತಿದ್ದಂತೆ ಅಭಿಮಾನಿಗಳಿಂದ ಭಾರಿ ವಿರೋಧ ವ್ಯಕ್ತವಾಗಿತ್ತು. ಬಳಿಕ ಅಕ್ಷಯ್ ಕುಮಾರ್ ಜಾಹೀರಾತಿನಿಂದ ಹಿಂದೆಸರಿಯುವುದಾಗಿ ಬಹಿರಂಗ ಪಡಿಸಿದ್ದರು. ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ್ದ ಅಕ್ಷಯ್ ಕುಮಾರ್ ಇನ್ಮುಂದೆ ಪಾನ್ ಮಸಾಲ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದಿದ್ದರು.