Asianet Suvarna News Asianet Suvarna News

ಟೈಟಾನಿಕ್ ಸಿನಿಮಾದ ಮೊದಲ ಆಫರ್ ನನಗೆ ಬಂದಿತ್ತು, ಪತ್ರ ಬರೆದಿದ್ರು; ಅಜಯ್ ದೇವಗನ್ ಹೇಳಿಕೆ ವೈರಲ್

ಟೈಟಾನಿಕ್ ಸಿನಿಮಾದ ಮೊದಲ ಆಫರ್ ನನಗೆ ಬಂದಿತ್ತು, ಪತ್ರ ಬರೆದಿದ್ರು ಎಂದು ಅಜಯ್ ದೇವಗನ್ ಹೇಳಿದ್ದಾರೆ. 

Ajay Devgn Says Titanic Was First Offered To Him and say Yes, They Had Written To Me sgk
Author
First Published Apr 1, 2023, 4:12 PM IST

ಬಾಲಿವುಡ್ ಸ್ಟಾರ್ ಅಜಯ್ ದೇವಗನ್ ಸದ್ಯ ಬೋಲಾ ಸಿನಿಮಾದ ಪ್ರಮೋಷನ್‌ನಲ್ಲಿದ್ದಾರೆ. ಈ ಸಿನಿಮಾ ಇತ್ತೀಚೆಗಷ್ಟೆ ರಿಲೀಸ್ ಆಗಿದೆ. ಈ ಸಿನಿಮಾದ ಪ್ರಮೋಷನ್ ವೇಳೆ ಅಜಯ್ ದೇವಗನ್ ಅನೇಕ ಸಂದರ್ಶಗಳನ್ನು ನೀಡಿದ್ದಾರೆ. ಹಿಂದಿ ಕಿರುತೆರೆಯ ಪ್ರಸಿದ್ಧ ಶೋ ಕಪಿಲ್ ಶರ್ಮಾ ಶೋಗೂ ಎಂಟ್ರಿ ಕೊಟ್ಟಿದ್ದರು. ಕಪಿಲ್ ಶೋನಲ್ಲಿ ಅಜಯ್ ದೇವಗನ್ ಅನೇಕ ವಿಚಾರಗಳ ಬಗ್ಗೆ ಬಹಿರಂಗ ಪಡಿಸಿದ್ದಾರೆ. ಈ ವೇಳೆ ಬ್ಲಾಕ್‌ಬಸ್ಟರ್ ಟೈಟಾನಿಕ್ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. ಆ ಸಿನಿಮಾಗೆ ಮೊದಲು ಆಫರ್ ಮಾಡಿದ್ದು ತನಗೆ ಎಂದು ಅಜಯ್ ದೇವಗನ್ ಹೇಳಿದ್ದಾರೆ. ಅಜಯ್ ದೇಗವನ್ ಹೇಳಿಕೆ ಅಚ್ಚರಿ ಮೂಡಿಸಿದ್ದಾರೆ. 

ಕಪಿಲ್ ಶೋನಲ್ಲಿ ಅಜಯ್ ದೇವಗನ್ ಸಿಕ್ಕಾಪಟ್ಟೆ ತಮಾಷೆ ಮಾಡಿದ್ದಾರೆ. ಎಲ್ಲರನ್ನೂ ಜೋರಾಗಿ ನಗಿಸಿದ್ದಾರೆ. ಕಪಿಲ್ ಶರ್ಮಾ ನಟ ಅಜಯ್ ದೇವಗನ್ ಅವರಿಗೆ 'ಸಿನಿಮಾರಂಗದಲ್ಲಿ ಅನೇಕ ವರ್ಷಗಳಿಂದ ಇದ್ದೀರಿ ಆದರೆ ಯಾಕೆ ಯಾವುದೇ ವಿವಾದಗಳಲ್ಲಿ ಸಿಲುಕಿಲ್ಲ. ನೀವು ಯಾವುದೇ ವಿವಾದ ಮಾಡಿಕೊಳ್ಳಲಿಲ್ವಾ ಅಥವಾ ಸಿಕ್ಕಿಬಿದ್ದಿಲ್ವಾ?' ಎಂದು  ಇದಕ್ಕೆ ಅಜಯ್ ದೇವಗನ್ ತಮಾಷೆಯಾಗಿಯೇ ಪ್ರತಿಕ್ರಿಯೆ ನೀಡಿದರು. ನನಗೆ ಏನು ಗೊತ್ತಿದೆಯೋ ಅದೆಲ್ಲ ನಿಮ್ಮಿಂದ ಕಲಿತಿದ್ದು' ಎಂದು ಕಾಲೆಳೆದರು.

RRR ಆಸ್ಕರ್ ಗೆದ್ದಿದ್ದು ನನ್ನಿಂದ: ಅಚ್ಚರಿ ಮೂಡಿಸಿದ ಅಜಯ್ ದೇವಗನ್ ಹೇಳಿಕೆ

ಇಷ್ಟಕ್ಕೆ ಸುಮ್ಮನಾಗದ ಕಪಿಲ್ ಶರ್ಮಾ, ಟೈಟಾನಿಕ್ ಸಿನಿಮಾ ಬಗ್ಗೆ ಮಾತು ಬಂತು. ಲಿಯೊನಾರ್ಡೊ ಡಿಕಾಪ್ರಿಯೊ ಬದಲು ಅಜಯ್ ದೇವಗನ್ ಅವರಿಗೆ ಟೈಟಾನಿಕ್ ಸಿನಿಮಾ ನೀಡಲಾಯಿತು ಆದರೆ ಒಂದು ಬೇಡಿಕೆ ಇತ್ತು ಎಂದು ಹೇಳಿದರು. ಅದಕ್ಕೆ ಉತ್ತರಿಸಿದ ಅಜಯ್ ದೇವಗನ್ 'ಹೌದು ಅವರು ಮೊದಲು ನನಗೆ ಪತ್ರ ಬರೆದಿದ್ದರು. ಆ ಪತ್ರ ನನಗೆ ಸಿಗುವ ಮೊದಲೇ ಟೈಟಾನಿಕ್ ಮುಳುಗಿತ್ತು' ಎಂದು ಹೇಳಿದ್ದಾರೆ. 

ಮಗಳು ನ್ಯಾಸಾಳ ಬೋಲ್ಡ್‌ನೆಸ್‌: ಅವಳು ಏನೇ ಮಾಡಿದರೂ ನಂಗೆ ಹೆಮ್ಮೆ ಎಂದ ಕಾಜೋಲ್!

ಆರ್ ಆರ್ ಆರ್‌ಗೆ ಪ್ರಶಸ್ತಿ ಸಿಕ್ಕಿದ್ದೇ ನನ್ನಿಂದ ಎಂದಿದ್ದ ದೇವಗನ್ 

ಆರ್ ಆರ್ ಆರ್ ಗೆಲುವಿಗೆ ಕಪಿಲ್ ಶರ್ಮಾ ನಟ ಅಜಯ್ ದೇವಗನ್ ಅವರಿಗೆ ಅಭಿನಂದನೆ ಸಲ್ಲಿಸಿದರು. ಈ ಸಿನಿಮಾದಲ್ಲಿ ಅಜಯ್ ದೇವಗನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕಪಿಲ್ ಶರ್ಮಾ ಅಭಿನಂದನೆ ಸಲ್ಲಿಸಿದ ಬಳಿಕ ಅಜಯ್ ದೇವಗನ್, 'ಆರ್ ಆರ್ ಆರ್ ಸಿನಿಮಾಗೆ ಆಸ್ಕರ್ ಸಿಕ್ಕಿರುವುದು ನನ್ನಿಂದ' ಎಂದು ಹೇಳಿದರು. 'ನಾಟು ನಾಟು ಹಾಡಿನಲ್ಲಿ ನಾನು ಡಾನ್ಸ್ ಮಾಡಿದ್ರೆ ಹೇಗಿರುತ್ತಿತ್ತು ಊಹಿಸಿ' ಎಂದು ಕೇಳಿದರು. ತಾನು ಡಾನ್ಸ್ ಮಾಡಿಲ್ಲ ಎನ್ನುವ ಕಾರಣಕ್ಕೆ ಆರ್ ಆರ್ ಆರ್ ಆಸ್ಕರ್ ಗೆದ್ದಿದೆ ಎಂದು ಅಜಯ್ ದೇವಗನ್ ತಮಾಷೆ ಮಾಡಿದರು. ಕಾರ್ಯಕ್ರಮದಲ್ಲಿ ಎಲ್ಲರೂ ಜೋರಾಗಿ ನಕ್ಕಿದರು. 

 

Latest Videos
Follow Us:
Download App:
  • android
  • ios