Asianet Suvarna News Asianet Suvarna News

RRR ಆಸ್ಕರ್ ಗೆದ್ದಿದ್ದು ನನ್ನಿಂದ: ಅಚ್ಚರಿ ಮೂಡಿಸಿದ ಅಜಯ್ ದೇವಗನ್ ಹೇಳಿಕೆ

RRR ಸಿನಿಮಾ ಆಸ್ಕರ್ ಗೆದ್ದಿದ್ದಿರುವುದು ನನ್ನಿಂದ ಎಂದು ಬಾಲಿವುಡ್ ನಟ ಅಜಯ್ ದೇವಗನ್ ಹೇಳಿದ್ದಾರೆ.  

RRR won Oscars because of me says Ajay Devgn sgk
Author
First Published Mar 25, 2023, 1:08 PM IST

ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಸಿನಿಮಾದ ನಾಟು ನಾಟು.. ಹಾಡು ಆಸ್ಕರ್ ಗೆದ್ದು ಬೀಗಿದೆ. ಎಂ ಎಂ ಕೀರವಾಣಿ ಮತ್ತು ಸಾಹಿತಿ ಚಂದ್ರಬೋಷ್ ಇಬ್ಬರೂ ಆಸ್ಕರ್ ಪ್ರಶಸ್ತಿಗೆ ಮುತ್ತಿಟ್ಟಿದ್ದಾರೆ. ಆರ್ ಆರ್ ಆರ್ ಆಸ್ಕರ್ ಗೆಲುವು ಇಡೀ ಭಾರತಕ್ಕೆ ಹೆಮ್ಮೆಯ ಕ್ಷಣವಾಗಿತ್ತು. ಭಾರತೀಯರು ಸಂಭ್ರಮಿಸಿದ್ದರು, ಆರ್ ಆರ್ ಆರ್ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದರು. ಇದೀಗ ಆರ್ ಆರ್ ಆರ್ ಸಿನಿಮಾ ಆಸ್ಕರ್ ಗೆದ್ದ ಬಗ್ಗೆ ಬಾಲಿವುಡ್ ನಟ ಅಜಯ್ ದೇವಗನ್ ಪ್ರತಿಕ್ರಿಯೆ ನೀಡಿದ್ದಾರೆ. ಆರ್ ಆರ್ ಆರ್ ತಂಡ ಆಸ್ಕರ್ ಗೆದ್ದಿರುವುದು ನನ್ನಿಂದ ಎಂದು ಹೇಳಿದ್ದಾರೆ. ಅಜಯ್ ದೇವಗನ್ ಹೇಳಿಕೆ ಅಚ್ಚರಿ ಮೂಡಿಸಿದೆ. 

ಅಜಯ್ ದೇವಗನ್ ಸದ್ಯ ಭೋಲ ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದಲ್ಲಿ ಅಜಯ್ ಜೊತೆ ತಬು ನಟಿಸಿದ್ದಾರೆ. ಈ ಸಿನಿಮಾದಲ್ಲಿ ಪ್ರಚಾರಕ್ಕಾಗಿ ಅಜಯ್ ದೇವಗನ್ ಕಪಿಲ್ ಶರ್ಮಾ ಶೋಗೆ ಎಂಟ್ರಿ ಕೊಟ್ಟಿದ್ದರು. ಕಪಿಲ್ ಶೋನಲ್ಲಿ ಅಜಯ್ ದೇವಗನ್ ಆರ್ ಆರ್ ಆರ್ ಸಿನಿಮಾ ಆಸ್ಕರ್ ಗೆದ್ದ ಬಗ್ಗೆ ಮಾತನಾಡಿದ್ದಾರೆ. ಆರ್ ಆರ್ ಆರ್ ಗೆಲುವಿಗೆ ಕಪಿಲ್ ಶರ್ಮಾ ನಟ ಅಜಯ್ ದೇವಗನ್ ಅವರಿಗೆ ಅಭಿನಂದನೆ ಸಲ್ಲಿಸಿದರು. ಈ ಸಿನಿಮಾದಲ್ಲಿ ಅಜಯ್ ದೇವಗನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕಪಿಲ್ ಶರ್ಮಾ ಅಭಿನಂದನೆ ಸಲ್ಲಿಸಿದ ಬಳಿಕ ಅಜಯ್ ದೇವಗನ್, 'ಆರ್ ಆರ್ ಆರ್ ಸಿನಿಮಾಗೆ ಆಸ್ಕರ್ ಸಿಕ್ಕಿರುವುದು ನನ್ನಿಂದ' ಎಂದು ಹೇಳಿದರು. 'ನಾಟು ನಾಟು ಹಾಡಿನಲ್ಲಿ ನಾನು ಡಾನ್ಸ್ ಮಾಡಿದ್ರೆ ಹೇಗಿರುತ್ತಿತ್ತು ಊಹಿಸಿ' ಎಂದು ಕೇಳಿದರು. ತಾನು ಡಾನ್ಸ್ ಮಾಡಿಲ್ಲ ಎನ್ನುವ ಕಾರಣಕ್ಕೆ ಆರ್ ಆರ್ ಆರ್ ಆಸ್ಕರ್ ಗೆದ್ದಿದೆ ಎಂದು ಅಜಯ್ ದೇವಗನ್ ತಮಾಷೆ ಮಾಡಿದರು. ಕಾರ್ಯಕ್ರಮದಲ್ಲಿ ಎಲ್ಲರೂ ಜೋರಾಗಿ ನಕ್ಕಿದರು. 

ಬರೀ ವಿಮಲ್ ಅಲ್ಲ ಮಗಳ ಕಡೆನೂ ಗಮನ ಕೊಡಿ; ಹಾಟ್ ಆದ ನಿಸಾ ನೋಡಿ ಅಜಯ್ ದೇವಗನ್‌ಗೆ ನೆಟ್ಟಿಗರ ತರಾಟೆ

ಆರ್ ಆರ್ ಆರ್ ಸಿನಿಮಾದಲ್ಲಿ ಅಜಯ್ ದೇವಗನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಅಜಯ್ ಜೊತೆಗೆ ಬಾಲಿವುಡ್ ನಟಿ ಅಲಿಯಾ ಭಟ್ ಕೂಡ ನಟಿಸಿದ್ದಾರೆ. ಜೂ.ಎನ್ ಟಿ ಆರ್ ಮತ್ತು ರಾಮ್ ಚರಣ್ ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ. ಮೊದಲ ಬಾರಿಗೆ ಅಜಯ್ ಮತ್ತು ಅಲಿಯಾ ಭಟ್ ಸೌತ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಮೊದಲ ಸಿನಿಮಾವೇ ಆಸ್ಕರ್ ಗೆದ್ದಿರುವುದು ಸಂತಸದ ವಿಚಾರವಾಗಿದೆ. 

ನಾಟು ನಾಟು ಹಾಡಿಗೆ 'ಟೆಸ್ಲಾ ಲೈಟ್‌ ಶೋ' ಗೌರವ, ರಾಜಮೌಳಿ ಏನಂದ್ರು?

ಅಜಯ್ ದೇವಗನ್ ಕೊನೆಯದಾಗಿ ದೃಶ್ಯಂ-2ನಲ್ಲಿ ಕಾಣಿಸಿಕೊಂಡಿದ್ದರು. ದೃಶ್ಯಂ-2 ಮಲಯಾಳಂ ಸಿನಿಮಾದ ರಿಮೇಕ್ ಆಗಿದ್ದರೂ ಹಿಂದಿ ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಕಮಾಯಿ ಮಾಡಿತ್ತು. ಸದ್ಯ ಅಜಯ್ ದೇವಗನ್ ಅನೇಕ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ನಟನೆ ಜೊತೆಗೆ ನಿರ್ಮಾಣದಲ್ಲೂ ಬ್ಯುಸಿಯಾಗಿದ್ದಾರೆ. ಭೋಲ, ಮೈದಾನ್, ಸಿಂಗಂ ಎಂಗೇನ್, ನಾಮ್ ಸೇರಿದಂತೆ ಅನೇಕ ಸಿನಿಮಾಗಳು ಅಜಯ್ ದೇವಗನ್ ಕೈಯಲಿವೆ. 

Follow Us:
Download App:
  • android
  • ios