ಮಗಳು ನ್ಯಾಸಾಳ ಬೋಲ್ಡ್‌ನೆಸ್: ಅವಳು ಏನೇ ಮಾಡಿದರೂ ನಂಗೆ ಹೆಮ್ಮೆ ಎಂದ ಕಾಜೋಲ್!
ಕಾಜೋಲ್ (Kajol) ಮತ್ತು ಅಜಯ್ ದೇವಗನ್ (Ajay Devgn) ಅವರ ಪುತ್ರಿ ನೈಸಾ ದೇವಗನ್ (Nysa Devgn) ಬಾಲಿವುಡ್‌ನ ಅತ್ಯಂತ ಜನಪ್ರಿಯ ಸ್ಟಾರ್ ಕಿಡ್‌ಗಳಲ್ಲಿ ಒಬ್ಬಳು. ಆಕೆಯ ಬೋಲ್ಡ್ ಇಮೇಜ್ ಮತ್ತು ಸ್ನೇಹಿತರ ಜೊತೆಯ ಪಾರ್ಟಿಗಳ ಕಾರಣದಿಂದ ಈಗ ನ್ಯಾಸಾ ಚರ್ಚೆಯಲ್ಲಿದ್ದಾಳೆ ಮತ್ತು ಆಗಾಗ ಟ್ರೋಲ್ ಕೂಡ ಆಗುತ್ತಾಳೆ. ಸಂಭಾಷಣೆಯೊಂದರಲ್ಲಿ ನ್ಯಾಸಾ ಅವರ ಬೋಲ್ಡ್‌ನೆಸ್ ಬಗ್ಗೆ ತಾಯಿ ಕಾಜೋಲ್ ಪ್ರತಿಕ್ರಿಯಿಸಿದ್ದಾರೆ.
ಕಾಜೋಲ್ ಇತ್ತೀಚಿನ ಸಂದರ್ಶನವೊಂದರಲ್ಲಿ ತನ್ನ ಮಗಳ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ಹೇಳಿದ್ದಾರೆ. 'ನಿಸ್ಸಂಶಯವಾಗಿ ನಾನು ಅವಳ ಬಗ್ಗೆ ಹೆಮ್ಮೆಪಡುತ್ತೇನೆ. ಅವಳು ಎಲ್ಲಿಗೆ ಹೋದರೂ ಅವಳು ತನ್ನನ್ನು ಘನತೆಯಿಂದ ಒಯ್ಯುವುದನ್ನು ನಾನು ಪ್ರೀತಿಸುತ್ತೇನೆ' ಎಂದು ಮಗಳು ನ್ಯಾಸಾಳನ್ನು ಕಾಜೋಲ್ ಹೊಗಳಿದ್ದಾರೆ
'ಅವಳು 19 ವರ್ಷ ವಯಸ್ಸಿನವಳು ಮತ್ತು ಮೋಜು ಮಾಡುತ್ತಿದ್ದಾಳೆ ಎಂದು ನಾನು ಹೇಳಬಲ್ಲೆ. ಅವಳು ಏನು ಮಾಡಬೇಕೆಂದು ಬಯಸುತ್ತಳೋ ಅದನ್ನು ಮಾಡಲು ಅವಳಿಗೆ ಹಕ್ಕಿದೆ. ಮತ್ತು ನಾನು ಯಾವಾಗಲೂ ಅವಳನ್ನು ಬೆಂಬಲಿಸುತ್ತೇನೆ.' ಎಂದು ಕಾಜೋಲ್ ಮಗಳ ಪರವಾಗಿ ಹೇಳಿದ್ದಾರೆ.
ಇದಕ್ಕೂ ಮುನ್ನ ಅಜಯ್ ದೇವಗನ್ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಮಕ್ಕಳ ಮೇಲೆ ಆನ್‌ಲೈನ್ ಟ್ರೋಲಿಂಗ್ ಮತ್ತು ನಿಂದನೆ ಬಗ್ಗೆ ಮಾತನಾಡಿದ್ದರು.
ಅಜಯ್ ತಮ್ಮ ಭೋಲಾ ಚಿತ್ರದ ಪ್ರಚಾರದ ಸಂದರ್ಭದಲ್ಲಿ 'ಇದು ನನಗೆ ತುಂಬಾ ತೊಂದರೆಯಾಗಿದೆ, ಏಕೆಂದರೆ ನೀವು ಅದನ್ನು ಬದಲಾಯಿಸಲು ಸಾಧ್ಯವಿಲ್ಲ' ಎಂದು ಹೇಳಿದ್ದರು.
'ಕೆಲವೊಮ್ಮೆ ಅಂತಹ ವಿಷಯಗಳನ್ನು ಸಹ ಬರೆಯಲಾಗುತ್ತದೆ, ಅದು ನಿಜವಲ್ಲ. ಆದರೆ ನಾವು ಪ್ರತಿಕ್ರಿಯಿಸಿದರೆ, ಅವರು ಹೆಚ್ಚು ಟ್ರೋಲ್ ಮಾಡುತ್ತಾರೆ ಮತ್ತು ನಿಂದಿಸುತ್ತಾರೆ. ಆದ್ದರಿಂದ ಇದು ಕಷ್ಷಕರ ಪರಿಸ್ಥಿತಿಯಾಗಿದೆ' ಎಂದು ಅಜಯ್ ಹೇಳಿದ್ದರು.
ನ್ಯಾಸಾ ದೇವಗನ್ ಅವರು 20 ಏಪ್ರಿಲ್ 2003 ರಂದು ಮುಂಬೈನಲ್ಲಿ ಜನಿಸಿದ್ದು ಮುಂಬೈನ ಧೀರೂಭಾಯಿ ಅಂಬಾನಿ ಶಾಲೆಯಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪಡೆದಿದ್ದಾಳೆ. ಹೈಸ್ಕೂಲ್ ಮುಗಿಸಲು ಸಿಂಗಾಪುರಕ್ಕೆ ಹೋದ ನ್ಯಾಸಾ ಸೌತ್ ಈಸ್ಟ್ ಏಷ್ಯಾದ ಯುನೈಟೆಡ್ ವರ್ಲ್ಡ್ ಕಾಲೇಜಿನಲ್ಲಿ ಅಧ್ಯಯನ ಮಾಡಿದ್ದಾಳೆ.
ವರದಿಗಳ ಪ್ರಕಾರ, ನ್ಯಾಸಾ ಪ್ರಸ್ತುತ ಸ್ವಿಟ್ಜರ್ಲೆಂಡ್‌ನ ಗ್ಲಿಯನ್ ಇನ್‌ಸ್ಟಿಟ್ಯೂಟ್ ಆಫ್ ಹೈಯರ್ ಎಜುಕೇಶನ್‌ನಿಂದ ಅಂತರರಾಷ್ಟ್ರೀಯ ಕಾಲೇಜಿನಲ್ಲಿ ಹಾಸ್ಪಿಟಾಲಿಟಿಯನ್ನು ಅಧ್ಯಯನ ಮಾಡುತ್ತಿದ್ದಾಳೆ. ಕಾಜೋಲ್ ಮತ್ತು ಅಜಯ್ ಇಬ್ಬರೂ ನ್ಯಾಸಾ ಮನೋರಂಜನಾ ಉದ್ಯಮಕ್ಕೆ ಪ್ರವೇಶಿಸುವ ಯಾವುದೇ ಯೋಜನೆ ಇಲ್ಲ ಎಂದು ಹೇಳಿದ್ದಾರೆ.