ಹಿಂದೆ ಭಾವಿ ಪತಿ, ಪಕ್ಕ ಭಗ್ನಪ್ರೇಮಿ! ಐಶ್ವರ್ಯ ರೈ ಫೋಟೋ ವೈರಲ್​- ಲೈಫು ಇಷ್ಟೆನೇ ಅಂತಿದ್ದಾರೆ ಫ್ಯಾನ್ಸ್​

ಹಿಂದೆ ಭಾವಿ ಪತಿ, ಪಕ್ಕ ಭಗ್ನಪ್ರೇಮಿ ನಿಂತಿರುವ ನಟಿ ಐಶ್ವರ್ಯ ರೈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.  ಲೈಫು ಇಷ್ಟೆನೇ, ಆದ್ದರಿಂದ ನಿರಾಸರಾಗಬೇಡಿ  ಅಂತಿದ್ದಾರೆ ನೆಟ್ಟಿಗರು.  
 

Aishwarya Salman  and Abhisheks  old photo  gone viral on social media suc

ಈ ಜೀವನವೇ ಬಹು ವಿಚಿತ್ರ. ಯಾವಾಗ ಯಾರಿಗೆ ಅದೃಷ್ಟ ಖುಲಾಯಿಸುತ್ತದೆಯೋ ಹೇಳಲು ಸಾಧ್ಯವಿಲ್ಲ. ಮಿಲೇನಿಯರ್​ ರಾತ್ರೋರಾತ್ರಿ ಬೀದಿಗೆ ಬರಬಹುದು, ಇಲ್ಲವೇ ಭಿಕ್ಷುಕ ರಾತ್ರಿ ಬೆಳಗಾಗುವುದರೊಳಗೆ ಕೋಟ್ಯಧಿಪತಿಯಾಗಬಹುದು. ಯಾರ ಜೀವನವೂ ಹೀಗೆಯೇ ಎಂದು ಹೇಳಲು ಆಗುವುದಿಲ್ಲ. ಶಾಲಾ-ಕಾಲೇಜುಗಳ ಪರೀಕ್ಷೆಯಲ್ಲಿ ಫೇಲಾಗಿ ದಡ್ಡ ಎನಿಸಿಕೊಂಡಾತ ದೊಡ್ಡ ಉದ್ಯಮ ಸ್ಥಾಪಿಸಿ ಕೋಟ್ಯಾಧೀಶ್ವರನಾಗಬಹುದು,  ಪ್ರತಿ ಪರೀಕ್ಷೆಯಲ್ಲಿ ಮೊದಲ ಸ್ಥಾನದಲ್ಲಿ ಪಡೆದಾತ  ಉನ್ನತ ವ್ಯಾಸಂಗ ಮಾಡಿ  ದಡ್ಡ ಎನಿಸಿಕೊಂಡವನ ಉದ್ಯಮದಲ್ಲಿ ಕೆಲಸಕ್ಕೆ ಅಪ್ಲೈ ಮಾಡುವ ಇಲ್ಲವೇ ಇಲ್ಲಿ ಒಂದು ಹುದ್ದೆ ಪಡೆಯುವ ಪ್ರಸಂಗ ಬರಬಹುದು.  ಇದರ ಬಗ್ಗೆ ಹಲವು ಉದಾಹರಣೆಗಳು ನಮ್ಮ ಕಣ್ಣುಮುಂದೆಯೇ ಇವೆ. ಇದೇ ಕಾರಣಕ್ಕೆ ಜೀವನದಲ್ಲಿ ಒಮ್ಮೆ ಸೋತರೆ ನಿರಾಸರಾಗಬೇಡಿ ಎನ್ನುತ್ತಾರೆ ಹಿರಿಯರು. ಸೋಲೇ ಗೆಲುವಿನ ಮೆಟ್ಟಿಲು ಎಂಬ ನಾಣ್ಣುಡಿ ಕೂಡ ಇದಕ್ಕೇ ತಾನೇ ಹುಟ್ಟಿಕೊಂಡದ್ದು!

ಅದೇನೇ ಇರಲಿ. ಸದ್ಯ ಈ ವಿಷಯ ಈಗ್ಯಾಕೆ ಪ್ರಸ್ತಾಪವಾಗುತ್ತಿದೆ ಎಂದರೆ, ನಟಿ ಐಶ್ವರ್ಯ ರೈ ಅವರ ಫೋಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ಸಕತ್​ ವೈರಲ್​ ಆಗುತ್ತಿರುವುದಕ್ಕೆ. ಇವರ ಫೋಟೋದ ಜೊತೆ ಜೀವನದಲ್ಲಿ ಎಂದಿಗೂ ನಿರಾಸರಾಗಬೇಡಿ ಎನ್ನುವ ಶೀರ್ಷಿಕೆ ನೀಡಲಾಗಿದೆ.  ನಟಿ ಐಶ್ವರ್ಯ ರೈ ಅವರು ಮದುವೆಯಾಗುವುದಕ್ಕೂ ಮುನ್ನ ತೆಗೆದಿರುವ ಫೋಟೋ ಇದಾಗಿದೆ. ಇದರಲ್ಲಿ ಐಶ್ವರ್ಯ ಮತ್ತು ಸಲ್ಮಾನ್​ ಖಾನ್​ರನ್ನು ಜನರು ಸುತ್ತುವರೆದಿರುವುದನ್ನು ನೋಡಬಹುದು. ಅವರ ಆಟೋಗ್ರಾಫ್​ಗೆ ಜನ ಮುಗಿಬಿದ್ದಿದ್ದಾರೆ. ಆದರೆ ಅಮಿತಾಭ್​ ಬಚ್ಚನ್​ ಪುತ್ರ ಅಭಿಷೇಕ್​ ಬಚ್ಚನ್​ ಇದೇ ಫೋಟೋದಲ್ಲಿ ಜನರ ಸಾಲಿನಲ್ಲಿ ತಲೆ ತಗ್ಗಿಸಿ ನಿಂತಿದ್ದಾರೆ. ಆಗ ಅವರು ಕೂಡ ನಟನಾಗಿದ್ದರೂ ಅವರನ್ನು ಯಾರೂ ಕ್ಯಾರೇ ಮಾಡಲಿಲ್ಲ. ಆದರೆ ಅದೃಷ್ಟ ಹೇಗಿತ್ತು ನೋಡಿ. ಪಕ್ಕದಲ್ಲಿ ನಿಂತಿದ್ದ ಸಲ್ಮಾನ್​ ಖಾನ್​ಗೆ ಕೊನೆಗೂ ಐಶ್ವರ್ಯ ರೈ ಸಿಗಲೇ ಇಲ್ಲ. ಇವರಿಬ್ಬರ ನಡುವಿನ ಪ್ರೇಮ ಪ್ರಸಂಗ ಎಲ್ಲರಿಗೂ ತಿಳಿದದ್ದೇ. ಸಲ್ಮಾನ್​ ಖಾನ್​ ಕೊನೆಗೂ ಭಗ್ನಪ್ರೇಮಿಯಾಗಿಬಿಟ್ಟರೆ, ಹಿಂದೆ ನಿಂತಿದ್ದ ಅಭಿಷೇಕ್​ ಬಚ್ಚನ್​ ಐಶ್ವರ್ಯ ಪತಿಯಾಗಿ, ಈಗ ಮುದ್ದಾದ ಮಗಳ ಅಪ್ಪನೂ ಆಗಿದ್ದಾರೆ. ಅದೃಷ್ಟ ಎಂದರೆ ಇದೇ ಅಲ್ವೆ ಅಂತಿದ್ದಾರೆ ಫ್ಯಾನ್ಸ್​.

Aishwarya Rai: ಮೀನು​ ತಿಂದ್ರೆ ಬಾಲಿವುಡ್​​ ನಟಿಯಂತೆ ಆಗ್ತಾರಾ? ಸಚಿವರ ಮಾತೀಗ ಸಖತ್​ ಟ್ರೋಲ್​

ಅಷ್ಟಕ್ಕೂ ಐಶ್ವರ್ಯ ರೈ ಮತ್ತು ಸಲ್ಮಾನ್​ ಖಾನ್​ ಅವರ ಲವ್​ ಸ್ಟೋರಿ ಎಲ್ಲರಿಗೂ ತಿಳಿದದ್ದೆ.  ಐಶ್ವರ್ಯ ಅವರು, ಅಭಿಷೇಕ್‌ ಬಚ್ಚನ್‌ ಅವರನ್ನು ಮದುವೆಯಾಗುವುದಕ್ಕೂ ಮುನ್ನ ಸಲ್ಮಾನ್‌ ಖಾನ್‌ ಜೊತೆ ಡೇಟಿಂಗ್‌ನಲ್ಲಿ ಇದ್ದರು. ಇವರಿಬ್ಬರ ಮದುವೆ ನಡೆಯುತ್ತದೆ ಎಂದು ಭಾರಿ ಸುದ್ದಿಯಾಗಿತ್ತು.  90ರ ದಶಕದಲ್ಲಿ ಸಲ್ಮಾನ್ ಖಾನ್  (Salman Khan) ಮತ್ತು ಐಶ್ವರ್ಯಾ ರೈ ಅವರ ಸಂಬಂಧ ಸಾಕಷ್ಟು ಸುದ್ದಿ ಮಾಡಿತ್ತು. ಆದರೆ  ಅವರ ರೊಮ್ಯಾನ್ಸ್‌ಗಿಂತ ಬ್ರೇಕಪ್‌ ಹೆಚ್ಚು ಚರ್ಚೆಯಾಗಿತ್ತು.  ವಾಸ್ತವವಾಗಿ, 1999 ರಲ್ಲಿ ಬಿಡುಗಡೆಯಾದ 'ಹಮ್ ದಿಲ್ ಚುಕೆ ಸನಮ್' ಚಿತ್ರದ ಸೆಟ್‌ಗಳಲ್ಲಿ ಐಶ್ವರ್ಯಾ ಮತ್ತು ಸಲ್ಮಾನ್ ಪರಸ್ಪರ ಹತ್ತಿರವಾಗಿದ್ದರು. 2001 ರಲ್ಲಿ ಇಬ್ಬರೂ ಬೇರ್ಪಟ್ಟರು. 

ಇವರಿಬ್ಬರು ಬೇರ್ಪಟ್ಟಿರುವುದದಕ್ಕೆ ಒಬ್ಬೊಬ್ಬರು ಒಂದೊಂದು ಕಾರಣ ಹೇಳುತ್ತಾರೆಯಾದರೂ, ಐಶ್ವರ್ಯ ತಮಗೆ ಕೈಕೊಟ್ಟಿದ್ದಾರೆ ಎಂದು ಮೊನ್ನೆಮೊನ್ನೆಯವರೆಗೂ ಸಲ್ಮಾನ್​ ಖಾನ್​ ಪರೋಕ್ಷವಾಗಿ ಹೇಳುತ್ತಲೇ ಬಂದಿದ್ದಾರೆ. ಯಾವುದೇ ಹುಡುಗಿ ಐ ಲವ್​ಯೂ ಎಂದರೆ ಆಕೆ ನಿಮಗೆ  ಕೈಕೊಟ್ಟಂತೆ ಎಂದು ಕಾರ್ಯಕ್ರಮವೊಂದರಲ್ಲಿ ಹೇಳುವ ಮೂಲಕ ಐಶ್ವರ್ಯ ರೈ ಅವರನ್ನು ಚುಚ್ಚಿದ್ದರು. ಅದೇನೇ ಇದ್ದರೂ, ಸಲ್ಮಾನ್​ ಖಾನ್​ ಜೊತೆ ಐಶ್ವರ್ಯ ರೈ ಸಂಬಂಧ ಮುರಿದುಕೊಂಡಾಗ ಐಶ್ವರ್ಯಾ  ಅವರು ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿದ್ದರು. ಆದರೆ ಬ್ರೇಕಪ್​ ಆದ ಬಳಿಕ ಐಶ್ವರ್ಯ ರೈ, ನನ್ನ ವಿವೇಕ, ನನ್ನ ಘನತೆ ಮತ್ತು ನನ್ನ ಕುಟುಂಬದ ಘನತೆಯನ್ನು ಪರಿಗಣಿಸಿ, ಇದು ಸಾಕು. ನಾನು ಸಲ್ಮಾನ್ ಖಾನ್ ಅವರೊಂದಿಗೆ ಕೆಲಸ ಮಾಡುವುದಿಲ್ಲ' ಎಂದು ಐಶ್ವರ್ಯ ಹೇಳಿದ್ದರು. ಇದೇ ಕಾರಣಕ್ಕೆ ಅವರು ಹಲವು ಚಿತ್ರಗಳಲ್ಲಿ ನಟಿಸುವ ಅವಕಾಶವನ್ನೂ ಕಳೆದುಕೊಂಡಿದ್ದರು. ಇಷ್ಟೆಲ್ಲಾ ಗಲಾಟೆಯಾದ ಬಳಿಕ ಐಶ್ವರ್ಯ ರೈ ಅವರ ವಿರುದ್ಧ ನಿರ್ಮಾಪಕರು ಗರಂ ಆಗಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಮೊದಲು ನೀವೇ ಬೇಕು ಎಂದು ಒಪ್ಪಿಸಿಕೊಂಡು ಬಂದ ನಿರ್ಮಾಪಕರು (Producers) ಐದು ಹಿಟ್‌ ಚಿತ್ರಗಳಿಂದ ಐಶ್ವರ್ಯ ಅವರ ಕೈ ಬಿಟ್ಟಿದ್ದರು. ಈ ಬಗ್ಗೆ ಖುದ್ದು ಐಶ್ವರ್ಯ ಹೇಳಿಕೊಂಡರು.

ಐಶ್ವರ್ಯ ರೈಗಾಗಿ ಶಾರುಖ್​-ಸಲ್ಮಾನ್​ 5 ವರ್ಷಗಳ ಭಯಂಕರ ಶತ್ರುತ್ವ; ಬಿರಿಯಾನಿ ಮೂಲಕ ಪ್ಯಾಚಪ್​!

Latest Videos
Follow Us:
Download App:
  • android
  • ios