ಐಶ್ವರ್ಯ ರೈ ಥರ ಕಣ್ಣು, ತ್ವಚೆ ಬೇಕೆಂದ್ರೆ ತಿನ್ನಬೇಕಾಗಿದ್ದೇನು ಎಂದು ಹೇಳಿ ವಿವಾದಕ್ಕೆ ಸಿಲುಕಿದ್ದಾರೆ ಮಹಾರಾಷ್ಟ್ರದ ಬಿಜೆಪಿ  ಸಚಿವ ಡಾ. ವಿಜಯ್ ಕುಮಾರ್ ಗವಿತ್  

ನಟಿ ಐಶ್ವರ್ಯ ರೈ ಅವರ ಸೌಂದರ್ಯದ ಬಗ್ಗೆ ಬೇರೆ ಹೇಳಬೇಕಾಗಿಲ್ಲ. ಇವರಿಗಿಂತಲೂ ಮೊದಲು ಹಾಗೂ ನಂತರ ಹಲವಾರು ಮಂದಿ ಮಿಸ್‌ ವರ್ಲ್ಡ್‌ ಆಗಿದ್ದರೂ, ಸೌಂದರ್ಯದ ಬಗ್ಗೆ ಕಂಪೇರ್‌ ಮಾಡುವಾಗ ಎಲ್ಲರ ಬಾಯಲ್ಲೂ ನಟಿ ಐಶ್ವರ್ಯ ರೈ ಅವರ ಹೆಸರು ಬರುವುದು ಮಾಮೂಲು. ವಯಸ್ಸು 49 ಆಗಿದ್ದರೂ ಇಂದಿಗೂ ಮುಖದ ಚಾರ್ಮ್‌ ಹಾಗೆಯೇ ಉಳಿಸಿಕೊಂಡಿದ್ದಾರೆ. ಇವರ ಸೌಂದರ್ಯದ ಗುಟ್ಟು ಅವರ ಕಣ್ಣು ಕೂಡ ಹೌದು. ಆದರೆ ಇದೀಗ ಅವರ ಕಣ್ಣಿನ ವರ್ಣನೆ ಮಾಡುವ ಭರದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿಂಧೆ-ಫಡ್ನವೀಸ್-ಪವಾರ್ ಮಹಾಮೈತ್ರಿಕೂಟ ಸರ್ಕಾರದ ಸಂಪುಟ ಸಚಿವರ ಹೇಳಿಕೆಯೊಂದು ಭಾರಿ ಸಂಚಲನ ಹುಟ್ಟುಹಾಕುತ್ತಿದೆ. 

ಅಷ್ಟಕ್ಕೂ ಮಹಾರಾಷ್ಟ್ರದ ಸರ್ಕಾರದಲ್ಲಿ ಸಚಿವರು ಹಾಗೂ ಶಾಸಕರು ಕಾಂಟ್ರವರ್ಸಿ ಸ್ಟೇಟ್‌ಮೆಂಟ್‌ ಕೊಡುವಲ್ಲಿ ನಿಸ್ಸೀಮರು. ಇವರು ಇದೇ ವಿಷಯವಾಗಿಯೇ ಸದಾ ಸದ್ದು ಮಾಡುತ್ತಿರುತ್ತಾರೆ. ಆದರೆ ಇದೀಗ ಬುಡಕಟ್ಟು ಅಭಿವೃದ್ಧಿ ಸಚಿವ ಡಾ. ವಿಜಯ್ ಕುಮಾರ್ ಗವಿತ್ (Vijaykumar Gavit) ಅವರು ಒಂದು ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದಾರೆ. ವಿಜಯ್‌ಕುಮಾರ್ ಗವಿತ್ ಅವರು ನಂದೂರ್‌ಬಾರ್‌ನ ಬಿಜೆಪಿ ನಾಯಕರಾಗಿದ್ದು, ಸರ್ಕಾರದಲ್ಲಿ ಬುಡಕಟ್ಟು ಅಭಿವೃದ್ಧಿ ಸಚಿವ ಹುದ್ದೆಯನ್ನು ಹೊಂದಿದ್ದಾರೆ. ಧುಲೆ ಜಿಲ್ಲೆಯ ಅಂತುರ್ಲಿಯಲ್ಲಿ ಬುಡಕಟ್ಟು ಮೀನುಗಾರಿಗೆ ಮೀನುಗಾರಿಕೆಯ ಸಾಮಗ್ರಿಗಳನ್ನು ವಿತರಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಬುಡಕಟ್ಟು ಅಭಿವೃದ್ಧಿ ಸಚಿವ ಡಾ. ವಿಜಯ್ ಕುಮಾರ್ ಗವಿತ್ ಈ ಹೇಳಿಕೆ ನೀಡಿದ್ದಾರೆ. 

ಪತ್ನಿ ಐಶ್ವರ್ಯ, ಅಮ್ಮ ಜಯಾ ಇನ್ನೂ ಬಹಳಷ್ಟು ಕೆಲಸ ಮಾಡ್ಬೇಕು ಅಂದಿದ್ಯಾಕೆ ಅಭಿಷೇಕ್ ಬಚ್ಚನ್?

ಅಷ್ಟಕ್ಕೂ ಅವರು ಹೇಳಿದ್ದೇನೆಂದರೆ, ನಟಿ ಐಶ್ವರ್ಯಾ ರೈ ಪ್ರತಿದಿನ ಮೀನು ತಿನ್ನುತ್ತಿದ್ದರು. ಆದ್ದರಿಂದಲೇ ಅವಳ ಕಣ್ಣುಗಳು ಮತ್ತು ಚರ್ಮವು ಸುಂದರವಾಗಿರುತ್ತದೆ. ಇಂತಹ ಮೀನುಗಳನ್ನು ತಿಂದರೆ ಕಣ್ಣುಗಳು ಸುಂದರವಾಗುತ್ತವೆ ಎನ್ನುವುದು. ಐಶ್ವರ್ಯಾ ರೈ ಅವರು ಬೆಂಗಳೂರು ಸಮುದ್ರ ತೀರದಲ್ಲಿ ವಾಸಿಸುತ್ತಾರೆ. ಪ್ರತಿದಿನ ಸಮುದ್ರ ತೀರದಲ್ಲಿ ಮೀನು ತಿನ್ನುತ್ತಾರೆ. ಇದು ಪ್ರಯೋಜನಕಾರಿಯಾಗಿದೆ. ಇದರಿಂದ ನಿಮ್ಮ ಚರ್ಮವೂ ಹೊಳೆಯುತ್ತದೆ. ಮೀನಿನಲ್ಲಿ ಎಣ್ಣೆ ಇರುತ್ತದೆ. ಆದ್ದರಿಂದ ಫಲಿತಾಂಶವು ಕಣ್ಣುಗಳಿಗೆ (Eyes) ಒಳ್ಳೆಯದು. ತಲೆಹೊಟ್ಟಿನ ಎಣ್ಣೆಯಿಂದ ದೇಹದ ಚರ್ಮ ಚೆನ್ನಾಗಿ ಕಾಣುತ್ತದೆ ಎನ್ನುತ್ತಾರೆ ವಿಜಯಕುಮಾರ್ ಗವಿತ್. ಇಷ್ಟೇ ಅಲ್ಲದೇ, ಸಚಿವರು, ಮೀನು ತಿನ್ನುವುದರಿಂದ ಇನ್ನೂ ಹೆಚ್ಚಿನ ಪ್ರಯೋಜನಗಳು ಇವೆ. ಮಹಿಳೆಯರು ಸ್ಲಿಮ್​ ಆಗುತ್ತಾರೆ ಮತ್ತು ಆಕರ್ಷಕವಾಗಿ ಕಾಣುತ್ತಾರೆ’ ಎಂದಿದ್ದಾರೆ ಸಚಿವರು.

ಅಂದಹಾಗೆ, ಈ ಮೊದಲು ವಿಜಯ್​ ಕುಮಾರ್​ ಗವಿತ್​ ಅವರು ಎನ್​ಸಿಪಿ ಪಕ್ಷದ ಜೊತೆ ಗುರುತಿಸಿಕೊಂಡಿದ್ದರು. ಉದ್ಧವ್​ ಠಾಕ್ರೆ ಸರ್ಕಾರದಲ್ಲಿ ಅವರು ಪ್ರಮುಖ ಹುದ್ದೆಗಳನ್ನು ನಿರ್ವಹಿಸಿದ್ದರು. ನಂತರ ಅವರು ಬಿಜೆಪಿ ಸೇರಿಕೊಂಡರು. ಈಗ ಬುಡಕಟ್ಟು ಅಭಿವೃದ್ಧಿ ಸಚಿವರಾಗಿ ಕೆಲಸ ಮಾಡುತ್ತಿದ್ದಾರೆ.

ನಾನು ಮಾತ್ರವಲ್ಲ, ಕೋಪ ಬಂದ್ರೆ ಐಶ್ವರ್ಯಾ ರೈ ಕೂಡ ರಿಯಾಕ್ಟ್‌ ಮಾಡ್ತಾಳೆ: ಅತ್ತೆ ಜಯಾ ಬಚ್ಚನ್