Asianet Suvarna News Asianet Suvarna News

ಮತ್ತೆ ತಮಿಳಿಗೆ ಬಂದ ಐಶ್ವರ್ಯಾ: ಪೊನ್ನಿಯಿನ್ ಸೆಲ್ವ ಫಸ್ಟ್‌ಲುಕ್‌ನಲ್ಲಿ ರಾಣಿಯಂತೆ ಕಂಗೊಳಿಸುತ್ತಿರುವ ಐಶ್

ನಿರ್ದೇಶಕ ಮಣಿರತ್ನಂ ಅವರ ಪೊನ್ನಿಯಿನ್ ಸೆಲ್ವನ್ ಚಿತ್ರದ ಮೂಲಕ ಐಶ್ವರ್ಯಾ ರೈ ಬಚ್ಚನ್ ಮತ್ತೆ ತಮಿಳು ಸಿನಿಮಾಗೆ ಮರಳಿದ್ದಾರೆ. ಪೊನ್ನಿಯಿನ್ ಸೆಲ್ವನ್  ಸಿನಿಮಾದಲ್ಲಿ ಐಶ್ವರ್ಯಾ ರೈ ಪಜುವೂರಿನ ರಾಜಮನೆತನದ ರಾಜಕುಮಾರಿ ನಂದಿನಿಯ ಪಾತ್ರವನ್ನು ಮಾಡಲಿದ್ದಾರೆ.

Aishwarya Rai Bachchan first-look poster released for Ponniyin Selvan Aishwarya look stunning as Nandini akb
Author
Bangalore, First Published Jul 6, 2022, 6:05 PM IST | Last Updated Jul 6, 2022, 6:05 PM IST

ನಿರ್ದೇಶಕ ಮಣಿರತ್ನಂ ಅವರ ಪೊನ್ನಿಯಿನ್ ಸೆಲ್ವನ್ ಚಿತ್ರದ ಮೂಲಕ ಐಶ್ವರ್ಯಾ ರೈ ಬಚ್ಚನ್ ಮತ್ತೆ ತಮಿಳು ಸಿನಿಮಾಗೆ ಮರಳಿದ್ದಾರೆ. ಪೊನ್ನಿಯಿನ್ ಸೆಲ್ವನ್  ಸಿನಿಮಾದಲ್ಲಿ ಐಶ್ವರ್ಯಾ ರೈ ಪಜುವೂರಿನ ರಾಜಮನೆತನದ ರಾಜಕುಮಾರಿ ನಂದಿನಿಯ ಪಾತ್ರವನ್ನು ಮಾಡಲಿದ್ದಾರೆ. ಇಂದು (ಜುಲೈ 6) ಚಿತ್ರ ತಂಡವೂ ಐಶ್ವರ್ಯಾ ಅವರ ಫಸ್ಟ್‌ಲುಕ್ ಅನ್ನು ರಿಲೀಸ್ ಮಾಡಿದ್ದು, ಫಸ್ಟ್‌ಲುಕ್‌ನಲ್ಲಿ ರಾಣಿಯಂತೆ ಐಶ್ ಕಂಗೊಳಿಸುತ್ತಿದ್ದಾರೆ. ಪೊನ್ನಿಯಿನ್ ಸೆಲ್ವನ್ ಭಾಗ 1ಸೆಪ್ಟೆಂಬರ್ 30 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಈ ಸಿನಿಮಾದಲ್ಲಿ ದೇವದಾಸ್ ನಟಿ ಐಶ್ವರ್ಯಾ ದ್ವಿಪಾತ್ರವನ್ನು ನಿರ್ವಹಿಸಲಿದ್ದಾರೆ.  ಪಜುವೂರಿನ ರಾಜಕುಮಾರಿ ನಂದಿನಿ ಹಾಗೂ ಮಂದಾಕಿನಿ ದೇವಿಯಾಗಿ ಐಶ್ವರ್ಯಾ ಅಭಿಮಾನಿಗಳನ್ನು ರಂಜಿಸಲಿದ್ದಾರೆ. ಈ ಸಿನಿಮಾದಲ್ಲಿ ನಟಿಸುತ್ತಿರುವ ಚಿಯಾನ್ ವಿಕ್ರಮ್ ಮತ್ತು ಕಾರ್ತಿ ಅವರ ಫಸ್ಟ್ ಲುಕ್ ಪೋಸ್ಟರ್‌ಗಳು ಈಗಾಗಲೇ ಪ್ರತಿ ಚಿತ್ರ ರಸಿಕರ ಗಮನ ಸೆಳೆದಿವೆ. ಅವರು ಪೊನ್ನಿಯಿನ್ ಸೆಲ್ವನ್‌ನ ನಲ್ಲಿ ಕ್ರಮವಾಗಿ ಆದಿತ್ಯ ಕರಿಕಾಳನ್ ಮತ್ತು ವಂತಿಯತೇವನ್ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ. ತಮಿಳು (Tamil) , ಹಿಂದಿ (Hindi), ತೆಲುಗು (telugu), ಮಲಯಾಳಂ (Malayalam) ಮತ್ತು ಕನ್ನಡ ಭಾಷೆಯಲ್ಲಿ ಈ ಸಿನಿಮಾ ತೆರೆ ಕಾಣಲಿದೆ. 

ಇಂದು ಪೊನ್ನಿಯಿನ್ ಸೆಲ್ವನ್ ನಿರ್ಮಾಪಕರು ಐಶ್ವರ್ಯಾ ರೈ ಬಚ್ಚನ್ ಒಳಗೊಂಡ ಬಹುನಿರೀಕ್ಷಿತ ಸಿನಿಮಾದ ಫಸ್ಟ್-ಲುಕ್ ಪೋಸ್ಟರ್ ಅನ್ನು ಅನಾವರಣಗೊಳಿಸಿದರು. ಲೈಕಾ ಪ್ರೊಡಕ್ಷನ್ಸ್ ಮೂಲಕ ಈ ಸಿನಿಮಾ ತೆರೆಗೆ ಬರುತ್ತಿದೆ. ಪೋಸ್ಟರ್ ಅನ್ನು ಹಂಚಿಕೊಳ್ಳುವ ವೇಳೆ ಲೈಕಾ ಪ್ರೊಡಕ್ಷನ್ಸ್ ಟ್ವಿಟ್ಟರ್‌ನಲ್ಲಿ ಹೀಗೆ ಬರೆದುಕೊಂಡಿದೆ. ಸೇಡಿಗೆ ಸುಂದರವಾದ ಮುಖವಿದೆ! ಪಜುವೂರಿನ ರಾಣಿ ನಂದಿನಿಯನ್ನು ಭೇಟಿ ಮಾಡಿ! #PS1 ಸೆಪ್ಟೆಂಬರ್ 30 ರಂದು ತಮಿಳು, ಹಿಂದಿ, ತೆಲುಗು, ಮಲಯಾಳಂ ಮತ್ತು ಕನ್ನಡ (sic) ಭಾಷೆಯಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ. 

ಐಶ್ವರ್ಯಾ ರೈ ಮೊಟ್ಟ ಮೊದಲು ಕ್ಯಾಮರಾಗೆ ಪೋಸ್ ನೀಡಿದ ಫೋಟೋಗಳು ವೈರಲ್; ಮೊದಲ ಸಂಭಾವನೆ ಎಷ್ಟು ಗೊತ್ತಾ?
 

ಈ ಸಿನಿಮಾದಲ್ಲಿ ನಂದಿನಿ ಪಾತ್ರಧಾರಿ ಐಶ್ವರ್ಯಾ ಅವರು ಶರತ್‌ಕುಮಾರ್ (Sarathkumar) ನಿರ್ವಹಿಸಿದ ಪೆರಿಯ ಪಜುವೆಟ್ಟರಾಯರ್ (Periya Pazhuvettaraiyar) ಅವರ ಪತ್ನಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ನಂದಿನಿ ಚೋಳ ಸಾಮ್ರಾಜ್ಯದ (Chola dynasty) ಅವನತಿಗೆ ಸಂಚು ರೂಪಿಸುತ್ತಾಳೆ. ದ್ವಿಪಾತ್ರವಾಗಿರುವುದರಿಂದ ಐಶ್ವರ್ಯಾ ರೈ ಬಚ್ಚನ್ ನಂದಿನಿಯ (Nandini) ತಾಯಿ ಮಂದಾಕಿನಿ ದೇವಿಯಾಗಿಯೂ (Mandakini Devi) ಕಾಣಿಸಿಕೊಳ್ಳಲಿದ್ದಾರೆ.

ಈ ಪೊನ್ನಿಯಿನ್ ಸೆಲ್ವನ್ (Ponniyin Selvan) ಸಿನಿಮಾವೂ ಒಂದು ದಶಕದಿಂದ ನಿರ್ದೇಶಕ ಮಣಿರತ್ನಂ (Mani Ratnam) ಅವರು ತೆರೆಗೆ ತರಲು ಯೋಜಿಸಿದ್ದ ಕನಸಿನ ಕೂಸಾಗಿದೆ. ಅವರು ಹಲವಾರು ಬಾರಿ ಈ ಚಲನಚಿತ್ರವನ್ನು ಮಾಡಲು ಪ್ರಯತ್ನಿಸಿದ್ದರಾದರೂ, ಅವರ ಯೋಜನೆಗಳು ಬಜೆಟ್ ಮತ್ತು ಕೆಲ ನಿರ್ಬಂಧಗಳಿಂದ ಕಾರ್ಯರೂಪಕ್ಕೆ ಬರಲಾಗಲಿಲ್ಲ. ಆದರೆ ಈಗ ಕಾಲ ಕೂಡಿ ಬಂದಿದ್ದು, ಮಣಿರತ್ನಂ ಪೊನ್ನಿಯಿನ್ ಸೆಲ್ವನ್ ಸಿನಿಮಾ ಮೂಲಕ ತಮ್ಮ ಕನಸನ್ನು ನನಸು ಮಾಡಲಿದ್ದಾರೆ.  ಪೊನ್ನಿಯಿನ್ ಸೆಲ್ವನ್ ಭಾಗ 1 ಸೆಪ್ಟೆಂಬರ್ 30 ರಂದು ದೇಶಾದ್ಯಂತ ಎಲ್ಲಾ ಸಿನಿಮಾ ಮಂದಿರಗಳಲ್ಲಿ ಬಿಡುಗಡೆಗೆ ಸಿದ್ಧವಾಗಿದೆ.

Richest Actresss Of Bollywood: ನಟಿಸೋದು ಕಮ್ಮಿಯಾದ್ರೂ ಐಶ್ ಬಾಲಿವುಡ್‌ನ ಶ್ರೀಮಂತ ನಟಿ
ಚಿಯಾನ್ ವಿಕ್ರಮ್ (Chiyaan Vikram), ತ್ರಿಶಾ (Trisha), ಕಾರ್ತಿ (Karthi), ಐಶ್ವರ್ಯ ರೈ ಬಚ್ಚನ್ (Aishwarya Rai Bachchan), ಜಯಂ ರವಿ (Jayam Ravi), ಪ್ರಕಾಶ್ ರಾಜ್ (Prakash Raj), ಶರತ್‌ಕುಮಾರ್ (Sarathkumar), ಐಶ್ವರ್ಯ ಲಕ್ಷ್ಮಿ (Aishwarya Lekshmi) ಮತ್ತು ಶೋಭಿತಾ ಧೂಳೀಪಲ (Sobhita Dhulipala)  ಈ ಸಿನಿಮಾದ ತಾರಾಗಣದಲ್ಲಿದ್ದಾರೆ. ಕಲ್ಕಿ ಕೃಷ್ಣಮೂರ್ತಿ ಬರೆದ ಅದೇ ಹೆಸರಿನ ತಮಿಳು ಸಾಹಿತ್ಯ ಕಾದಂಬರಿಯನ್ನು ಆಧರಿಸಿದ ಈ  ಚಲನಚಿತ್ರಕ್ಕೆ ಖ್ಯಾತ ಸಂಗೀತ  ನಿರ್ದೇಶಕ ಎ ಆರ್ ರೆಹಮಾನ್ ರಾಗ ಸಂಯೋಜಿಸಿದ್ದಾರೆ. 

Latest Videos
Follow Us:
Download App:
  • android
  • ios