Asianet Suvarna News Asianet Suvarna News

ಮಗಳ ಡ್ಯಾನ್ಸ್‌ ನೋಡಲು ಬೇರೆ ಬೇರೆ ಕಾರಲ್ಲಿ ಐಶ್‌-ಅಭಿ: ಪತಿ ನೋಡಿ ನಟಿ ಮುಖ ಹೀಗೆ ಮಾಡಿದ್ಯಾಕೆ? ವಿಡಿಯೋಗೆ ಫ್ಯಾನ್ಸ್ ಶಾಕ್‌

ಐಶ್ವರ್ಯ ರೈ ಮತ್ತು ಅಭಿಷೇಕ್‌ ಬಚ್ಚನ್‌ ಮಗಳ ಕಾರ್ಯಕ್ರಮಕ್ಕೆ ಬೇರೆ ಬೇರೆ ಕಾರಿನಲ್ಲಿ ಬಂದಿದ್ದೂ ಅಲ್ಲದೇ, ಪತಿಯನ್ನು ನೋಡುತ್ತಿದ್ದಂತೆಯೇ ನಟಿಯ ಮುಖದ ಬದಲಾವಣೆ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
 

Aishwarya Rai and Abhishek Bachchan came to the event of their daughter in different cars suc
Author
First Published Dec 16, 2023, 2:35 PM IST

ಸದ್ಯ ಬಿ-ಟೌನ್​ನಲ್ಲಿ ಹರಿದಾಡುತ್ತಿರುವ ಸುದ್ದಿಯೆಂದರೆ, ನಟಿ ಐಶ್ವರ್ಯ ರೈ ಮತ್ತು ಅಭಿಷೇಕ್​ ಬಚ್ಚನ್​ ಅವರ ವಿಚ್ಛೇದನದ ಸುದ್ದಿ.  ಅಭಿಷೇಕ್ ಬಚ್ಚನ್​ ತಮ್ಮ ಮದುವೆಯ ಉಂಗುರವನ್ನು ಧರಿಸದೆ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡಿದ್ದೇ ಇಷ್ಟೆಲ್ಲಾ ಊಹಾಪೋಹಕ್ಕೆ ಕಾರಣವಾಗಿದೆ. ರೆಡ್ಡಿಟ್ ಬಳಕೆದಾರರಲ್ಲಿ ಒಬ್ಬರು ಇದಕ್ಕೆ ಸಂಬಂಧಿಸಿದ ಫೋಟೋವನ್ನು ಹಂಚಿಕೊಂಡಿದ್ದಾರೆ. 'ಅಭಿಷೇಕ್ ಅವರು ತಮ್ಮ ಇತ್ತೀಚಿನ ಸಂದರ್ಶನಗಳಲ್ಲಿ ತಮ್ಮ ಮದುವೆಯ ಉಂಗುರವನ್ನು ಧರಿಸುತ್ತಿಲ್ಲ, ಇಲ್ಲಿಯವರೆಗೆ ಅವರು ಯಾವಾಗಲೂ ಅದನ್ನು ಧರಿಸುತ್ತಿದ್ದರು. ಹೀಗಾಗಿ ಅಭಿಷೇಕ್ ಹಾಗೂ ಐಶ್ವರ್ಯಾ ಸಪರೇಟ್‌ ಆಗುತ್ತಾರೆ ಎಂಬುದು ನಿಜವೆಂದು ತೋರುತ್ತಿದೆ' ಎಂದು ಬರೆದುಕೊಂಡಿದ್ದಾರೆ. ಇದರಿಂದಾಗಿಯೇ ಇಬ್ಬರೂ ಪ್ರತ್ಯೇಕ ಆಗುತ್ತಿದ್ದಾರೆ ಎನ್ನುವ ಸುದ್ದಿ ಸಕತ್​ ಸದ್ದು ಮಾಡುತ್ತಿದೆ.ಇದಾದ ಬಳಿಕ ಐಶ್ವರ್ಯ ಮಾವ ಅಮಿತಾಭ್​ ಬಚ್ಚನ್​ ಕೂಡ ಇದಕ್ಕೆ ಸ್ಪಷ್ಟವಾಗಿ ಉತ್ತರ ನೀಡದೇ, ಅಡ್ಡಗೋಡೆ ಮೇಲೆ ದೀಪ ಇಟ್ಟವರಂತೆ ಹಾರಿಕೆ ಉತ್ತರ ಕೊಟ್ಟಿರುವುದು ಕೂಡ ಈ ವಿಚ್ಛೇದನದ ಸುದ್ದಿ ನಿಜ ಎಂದೇ ಹೇಳಲಾಗುತ್ತಿದೆ.

ಇದರ ನಡುವೆಯೇ, ಡಿ.15ರಂದು ಐಶ್ವರ್ಯಾ ಅವರು ಮುನಿಸಿಕೊಂಡು ಬಚ್ಚನ್ ಮನೆ ಜಲ್ಸಾದಿಂದ ಹೊರಗೆ ಬಂದಿದ್ದಾರೆ ಎಂದು ಸುದ್ದಿಯಾಗಿತ್ತು. ಆದರೆ ಅದೇ ದಿನ ಸಂಜೆ ತಮ್ಮ ಮಗಳು ಆರಾಧ್ಯ ಓದುತ್ತಿರುವ  ಮುಂಬೈನ  ಧೀರೂಭಾಯಿ ಅಂಬಾನಿ ಇಂಟರ್‌ನ್ಯಾಷನಲ್‌ ಸ್ಕೂಲ್ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಒಟ್ಟಿಗೆ ಕಾಣಿಸಿಕೊಂಡರು. ಇದರ ಮೂಲಕ ವಿಚ್ಛೇದನ ಸುದ್ದಿ ಸುಳ್ಳು ಎಂಬಂತೆ ಹೇಳಿದರು. ಸಂಜೆ ನಡೆದ ಈ ಕಾರ್ಯಕ್ರಮಕ್ಕೆ  ಅಮಿತಾಭ್‌ ಬಚ್ಚನ್, ಅಭಿಷೇಕ್‌ ಬಚ್ಚನ್‌, ಐಶ್ವರ್ಯ ರೈ, ಅಗಸ್ತ್ಯಾ ನಂದಾ,  ಐಶ್ವರ್ಯ ತಾಯಿ ವೃಂದಾ ರೈ ಕೂಡ ಬಂದಿದ್ದರು. ಒಟ್ಟಿನಲ್ಲಿ ಇಬ್ಬರ ನಡುವೆ ಎಲ್ಲವೂ ಚೆನ್ನಾಗಿದೆ ಎಂದುಕೊಂಡವರು ಕೆಲವರು.

ಕಬಡ್ಡಿ ಪಂದ್ಯದಿಂದ ಶುರುವಾಗಿ ಮದುವೆ ಉಂಗುರ ತೆಗೆಯುವವರೆಗೆ: ಐಶ್​-ಅಭಿ ಡಿವೋರ್ಸ್​ ನಿಜವಾಯ್ತಾ?

ಆದರೆ  ಇದರ ನಡುವೆಯೇ ವಿಡಿಯೋದ ಇನ್ನೊಂದು ಮುಖದ ಬಗ್ಗೆ ಇದೀಗ ಭಾರಿ ಚರ್ಚೆ ನಡೆಯುತ್ತಿದೆ. ಅದೇನೆಂದರೆ, ಐಶ್ವರ್ಯ ರೈ ಮತ್ತು ಅಭಿಷೇಕ್‌ ಬಚ್ಚನ್‌ ಇಬ್ಬರೂ ಕಾರ್ಯಕ್ರಮದ ಸ್ಥಳಕ್ಕೆ ಬೇರೆ ಬೇರೆ ಕಾರುಗಳಲ್ಲಿ ಬಂದಿದ್ದಾರೆ. ಇದು ಏಕೆ ಎನ್ನುವ ಪ್ರಶ್ನೆ ಹಲವರದ್ದು. ಒಂದು ವೇಳೆ ಯಾವುದೋ ಕಾರಣಕ್ಕೆ ಬೇರೆ ಬೇರೆ ಬಂದಿರಬಹುದು ಎಂದುಕೊಂಡರೂ, ಯಾರನ್ನೋ ನೋಡಿ ಖುಷಿಯಿಂದ ಕೈಬೀಸುತ್ತಿದ್ದ ಐಶ್‌, ಪತಿಯನ್ನು ನೋಡುತ್ತಿದ್ದಂತೆಯೇ ಸೊಟ್ಟಮೂತಿ ಮಾಡಿದ್ದೇಕೆ ಎನ್ನುವ ಪ್ರಶ್ನೆ ಹಲವರದ್ದು. ಕಾರಿನಿಂದ ಬಂದು ಇಳಿದ ಐಶ್ವರ್ಯ ರೈ ಮೊದಲಿಗೆ ತುಂಬಾ ಖುಷಿಯಾಗಿರುವಂತೆ ಕಂಡರು. ಆದರೆ, ಇನ್ನೊಂದು ಕಾರಿನಿಂದ ಬಂದಿಳಿದ ಪತಿಯನ್ನು ನೋಡುತ್ತಿದ್ದಂತೆಯೇ ಮುಖದಲ್ಲಿ ಭಾರಿ ಬದಲಾವಣೆ ಆಯಿತು.

ಇಬ್ಬರೂ ಒಟ್ಟಿಗೆ ಒಳಗೆ ಹೋದರೂ ಅವರಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವ ಬಗ್ಗೆ ಸಂಶಯ ಶುರುವಾಗಿದೆ. ಐಶ್ವರ್ಯ ಪತಿಯನ್ನು ನೋಡುತ್ತಿದ್ದಂತೆಯೇ ಕೆಟ್ಟ ರೀತಿಯ ಮುಖ ಮಾಡಿದ್ದು, ವಿಚ್ಛೇದನದ ಸುದ್ದಿಗೆ ಮತ್ತಷ್ಟು ಪುಷ್ಟಿ ಕೊಡುತ್ತಿದೆ. ಆದರೂ ಇವರ ಫ್ಯಾನ್ಸ್‌ ಸಿಕ್ಕಾಪಟ್ಟೆ ಕನ್‌ಫ್ಯೂಷನ್‌ನಲ್ಲಿ ಇದ್ದಾರೆ. 

ದೀಪಿಕಾ-ರಣಬೀರ್​ ಜೋಡಿ ವಿಷ್ಯದಲ್ಲಿ ಮಧ್ಯ ಬೆರಳು ತೋರಿ ಅಸಭ್ಯವಾಗಿ ವರ್ತಿಸಿದ ಕರಣ್​ ಜೋಹರ್​!
 

Follow Us:
Download App:
  • android
  • ios