ಆನ್‌ಲೈನ್‌ನಲ್ಲಿ ಖಾಸಗಿಯಾಗಿ ಮತ ಹಾಕಿದ್ರಂತೆ ನಟಿ ಜ್ಯೋತಿಕಾ! ಕೋಲು ಕೊಟ್ಟು ಬಾರಿಸಿಕೊಳ್ಳೋದು ಬೇಕಿತ್ತಾ?
ಮತ ಹಾಕಿಲ್ಲ ಎಂದ್ರೆ ಮುಗೀತಿತ್ತು. ಅದನ್ನು ಬಿಟ್ಟು ಏನೇನೋ ಹೇಳಿ ಎಡವಟ್ಟು ಮಾಡಿಕೊಂಡ ಕಾಲಿವುಡ್ ಬೆಡಗಿ ಜ್ಯೋತಿಕಾ. ಅವ್ರು ಹೇಳಿದ್ದೇನು?
ತಮಿಳಿನ ನಟಿ ಜ್ಯೋತಿಕಾ ಸೌತ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಬಾಲಿವುಡ್ ಸಿನಿಮಾಗಳಲ್ಲಿ ಕೂಡ ನಟಿಸುತ್ತಿದ್ದಾರೆ. ಸದ್ಯ ರಾಜ್‌ಕುಮಾರ್ ರಾವ್ ನಿರ್ದೇಶನದ ಹಿಂದಿ ‘ಶ್ರೀಕಾಂತ್’ ಎಂಬ ಸಿನಿಮಾದಲ್ಲಿ ಇವರು ಬಣ್ಣ ಹಚ್ಚಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ಜ್ಯೋತಿಕಾ ಹೆಚ್ಚು ನಟಿಸುತ್ತಿದ್ದಾರೆ. 'ಪೊನ್‌ಮಗಳ್ ವಂದಾಲ್', 'ಕಾಥಲ್', 'ಶೈತಾನ್' ಹೀಗೆ ಕೆಲ ಸಿನಿಮಾಗಳಲ್ಲಿ ನಟಿಸಿದ್ದಾರೆ. ಮಾರ್ಚ್ 8ಕ್ಕೆ ಬಂದ ಬಾಲಿವುಡ್ 'ಶೈತಾನ್' ಸಿನಿಮಾ ಸಕತ್ ಸದ್ದು ಮಾಡಿತ್ತು. ನಟಿ ವಿವಾದಗಳಿಂದ ದೂರವೇ ಉಳಿಯುತ್ತಾರೆ ನಟಿ. ತಮ್ಮ ವೈಯಕ್ತಿಕ ಜೀವನದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ನಡೆಯುವ ಚರ್ಚೆ ಬಗ್ಗೆಯೂ ಸದಾ ಮೌನವಾಗಿರುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿಯೂ ಅಷ್ಟೇನೂ ಆ್ಯಕ್ಟೀವ್ ಇಲ್ಲದ ಇವರು ಆಗೊಮ್ಮೆ ಈಗೊಮ್ಮೆ ಪೋಸ್ಟ್ ಮಾಡುತ್ತಿರುತ್ತಾರಷ್ಟೇ.
ಆದರೆ ಇದೀಗ ಒಂದು ಸುಳ್ಳನ್ನು ಮುಚ್ಚಲು ಹೋಗಿ ಮತ್ತೊಂದು ಸುಳ್ಳು ಹೇಳಿ, ಸಕತ್ ಟ್ರೋಲ್ಗೆ ಒಳಗಾಗಿದ್ದಾರೆ ನಟಿ. ಸುಳ್ಳು ಹೇಳುವುದು ಮಾತ್ರವಲ್ಲದೇ, ಕನಿಷ್ಠ ಜ್ಞಾನವೂ ಇಲ್ಲ ಎಂಬ ಬಗ್ಗೆ ಮರ್ಯಾದೆ ತೆಗೆಸಿಕೊಂಡಿದ್ದಾರೆ. ಅಷ್ಟಕ್ಕೂ ಆಗಿದ್ದೇನೆಂದರೆ ನಟಿ ಅಸಲಿಗೆ ಮತವನ್ನು ಚಲಾವಣೆ ಮಾಡಲೇ ಇಲ್ಲ. ಆದರೆ ಅದನ್ನು ಮುಚ್ಚಲು ಹೋಗಿ, ಮತದಾನದ ಬಗ್ಗೆ ಕನಿಷ್ಠ ಜ್ಞಾನವೂ ಇಲ್ಲದಂತೆ ಮಾತನಾಡಿದ್ದು ಟ್ರೋಲ್ಗೆ ಒಳಗಾಗಿದ್ದಾರೆ. ತಮಿಳುನಾಡಿನಲ್ಲಿ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ನಟಿ ಕಸ್ತೂರಿ ಮತ ಚಲಾಯಿಸಿದ್ದರು. ಉಳಿದವರಂತೆ ಕಸ್ತೂರಿ ಅವರೂ ಎಲ್ಲಾ ಕಾಲಿವುಡ್ ನಟ-ನಟಿಯರು ತಮ್ಮ ಹಕ್ಕು ಚಲಾಯಿಸಿ ಎಲ್ಲರೂ ಮತ ಹಾಕಬೇಕು ಎಂದು ಹೇಳಿದ್ದರು. ಸಹೋದರಾದ ಸೂರ್ಯ ಮತ್ತು ಕಾರ್ತಿ ಒಟ್ಟಿಗೆ ಬಂದು ಮತ ಹಾಕಿದರು. ಆದರೆ ಸೂರ್ಯ ಪತ್ನಿ ನಟಿ ಜ್ಯೋತಿಕಾ ಮಾತ್ರ ಕಾಣಿಸಲಿಲ್ಲ.
ಎದೆ ಮೇಲಿಂದ ಜಾರಿ ಬೀಳ್ತಿರೋ ಶೆರ್ಲಿನ್ ಬಟ್ಟೆ: ವಿಡಿಯೋ ನೋಡಿ ಬಂದು ಸರಿ ಮಾಡ್ಲಾ ಕೇಳ್ತಿದ್ದಾರೆ ಫ್ಯಾನ್ಸ್!
ಈ ಬಗ್ಗೆ ಪತ್ರಕರ್ತರು ನಟಿಗೆ ಪ್ರಶ್ನೆ ಕೇಳಿದರು. ನೀವು ಮತ ಹಾಕಲಿಲ್ಲವೇ ಎಂದು ಪ್ರಶ್ನಿಸಿದರು. ಬೆರಳಿನ ಮೇಲೆ ಮತದಾನದ ಗುರುತು ಇಲ್ಲದ ಹಿನ್ನೆಲೆಯಲ್ಲಿ ಈ ಪ್ರಶ್ನೆ ಕೇಳಿದರು. ಆಗ ನಟಿ ಹೇಗಾದರೂ ಮಾಡಿ ತಪ್ಪಿಸಿಕೊಳ್ಳಬೇಕಿತ್ತು. ಮತದಾನ ಮಾಡಿಲ್ಲ ಎಂದು ಹೇಳುವುದು ಕಷ್ಟವಾಯಿತು. ಅದಕ್ಕಾಗಿ ಒಂದು ರೀಲು ಬಿಟ್ಟರು. ಅದೂ ಪತ್ರಿಕಾಗೋಷ್ಠಿಯಲ್ಲಿ! ವರ್ಷ ವರ್ಷ ವೋಟ್ ತಪ್ಪದೇ ಹಾಕುತ್ತೇನೆ ಎಂದು ರೀಲ್ ಬಿಟ್ಟರು. ಆಗ ಅಲ್ಲಿದ್ದ ಒಬ್ಬರು ಮೇಡಂ ಐದು ವರ್ಷಕ್ಕೊಮ್ಮೆ ಎಂದು ಎಚ್ಚರಿಸಿದರು. ಆಗ ನಟಿ, ಸಾರಿ... 5 ವರ್ಷಕ್ಕೊಮ್ಮೆ ಹಾಕಿಯೇ ಹಾಕುತ್ತೇನೆ ಎಂದರು. ಈ ಒಂದು ಸುಳ್ಳಿನಿಂದ ತಪ್ಪಿಸಿಕೊಳ್ಳಲು ಮತ್ತಷ್ಟು ಸುಳ್ಳು ಹೇಳಿದರು. ಹಾಗಿದ್ದರೆ ಈ ಬಾರಿ ಮತ ಹಾಕಿಲ್ವಾ? ಎಲ್ಲಿಯೂ ಅದರ ಫೋಟೋ ನೋಡಿಲ್ವಲ್ಲಾ ಎಂದು ಪತ್ರಕರ್ತರು ಪ್ರಶ್ನಿಸಿದರು.
ಈ ಪ್ರಶ್ನೆ ಜ್ಯೋತಿಕಾಗೆ ಇರುಸು ಮುರುಸು ತಂದಿತು. ಮತದಾನದ ಸಂದರ್ಭದಲ್ಲಿ ನಾವು ನಮ್ಮ ರಾಜ್ಯದಲ್ಲಿ ಇಲ್ಲದೆ ಇರಬಹುದು, ನಮಗೆ ಅನಾರೋಗ್ಯ ಆಗಿರಬಹುದು. ಅದು ನಮ್ಮ ಖಾಸಗಿ ವಿಚಾರ. ಕೆಲವೊಮ್ಮೆ ಖಾಸಗಿಯಾಗಿ ವೋಟ್ ಮಾಡಿ ಬಂದಿರುತ್ತೇವೆ, ಆನ್‌ಲೈನ್‌ನಲ್ಲಿ ವೋಟ್ ಮಾಡಿರಬಹುದು. ಎಲ್ಲವೂ ಪಬ್ಲಿಷ್ ಆಗಬೇಕೆಂದಿಲ್ಲ. ಜೀವನಕ್ಕೆ ಒಂದು ಖಾಸಗಿ ಭಾಗವಿದೆ ಮತ್ತು ಅದನ್ನು ನಾವು ಗೌರವಿಸಬೇಕು ಎಂದುಬಿಟ್ಟರು. ಹಾಗಿದ್ದರೆ ಯಾರಿಗೂ ಇಲ್ಲದ ಸೌಲಭ್ಯ ಆನ್‌ಲೈನ್‌ನಲ್ಲಿ ನಟಿಗೆ ಮಾತ್ರ ಯಾಕೆ ಸಿಗ್ತಿದೆ ಎಂದು ಸಕತ್ ಟ್ರೋಲ್ ಆಗುತ್ತಿದೆ. ಮತ ಚಲಾಯಿಸಲು ಆಗಲಿಲ್ಲ ಎಂದು ಸತ್ಯ ಹೇಳಿಬಿಟ್ಟಿದ್ದರೆ ನಟಿಯ ಈ ಅಜ್ಞಾನ ಯಾರಿಗೂ ತಿಳಿಯುತ್ತಿರಲಿಲ್ಲ. ವರ್ಷ ವರ್ಷ ಎಂದು ಹೇಳಿದ್ದೂ ಅಲ್ಲದೇ, ಆನ್‌ಲೈನ್‌ನಲ್ಲಿ ಮತ ಮಾಡಲು ಅವಕಾಶ ಇದೆ ಎಂದು ನಟಿ ತಿಳಿದುಕೊಂಡಿದ್ದಾರೆ ಎಂದ ಮೇಲೆ ಅವರಿಗೆ ಎಷ್ಟು ತಿಳಿವಳಿಕೆ ಇರಬಹುದು ಎಂದು ನೆಟ್ಟಿಗರು ಕೇಳುತ್ತಿದ್ದಾರೆ.
ಬಿಂಕದ ಸಿಂಗಾರಿಗೆ ಸಿಹಿಯ ಭರ್ಜರಿ ಸ್ಟೆಪ್: ಅಶೋಕ್ ಜತೆ ಪ್ರಿಯಾ ಬದ್ಲು ಚಾಂದನಿ ಯಾಕೆ ಅಂತಿದ್ದಾರೆ ನೆಟ್ಟಿಗರು!