Asianet Suvarna News Asianet Suvarna News
breaking news image

ಲೈವ್​ ಕಾರ್ಯಕ್ರಮದಲ್ಲಿಯೇ ಗಾಯಕಿ ಸುನಿಧಿ ಚೌಹಾಣ್​ ಮೇಲೆ ಬಾಟಲಿ ಎಸೆತ! ವಿಡಿಯೋ ವೈರಲ್​

ವೇದಿಕೆ ಮೇಲೆ ಕಾರ್ಯಕ್ರಮ ನಡೆಯುತ್ತಿರುವಾಗಲೇ ಗಾಯಕಿ ಸುನಿಧಿ ಚೌಹಾಣ್​ ಮೇಲೆ ಬಾಟಲಿ ಎಸೆಯಲಾಗಿದ್ದು, ಇದರ ವಿಡಿಯೋ ವೈರಲ್​  ಆಗಿದೆ. 
 

Fan throws bottle at Sunidhi Chauhan during her concert her reaction wins the heart suc
Author
First Published May 5, 2024, 4:53 PM IST

ಸುನಿಧಿ ಚೌಹಾಣ್​ ಅತಿ ಸಣ್ಣ ವಯಸ್ಸಿಗೆ ತನ್ನ ಮಧುರ ಕಂಠದಿಂದ ಫೇಮಸ್‌ ಆದ ಪ್ರತಿಭೆ. ದೂರದರ್ಶನದ ರಿಯಾಲಿಟಿ ಶೋ ಮೂಲಕ ಗುರುತಿಸಿಕೊಂಡು, ಬಾಲಿವುಡ್‌ಗೆ ಪ್ರವೇಶ ನೀಡಿ, ಹಿನ್ನಲೆ ಗಾಯನದಲ್ಲಿ ಸಖತ್‌ ಹೆಸರು ಮಾಡಿದ್ದಾರೆ. 12ನೇ ವಯಸ್ಸಿನಲ್ಲಿಯೇ 'ಮೇರಿ ಆವಾಜ್‌ ಸುನೋ' ಎಂಬ ದೂರದರ್ಶನ ಸಂಗೀತ ಕಾರ್ಯಕ್ರಮದಲ್ಲಿ  ಘಟಾನುಘಟಿ ಕಲಾವಿದರನ್ನು ಹಿಂದಿಕ್ಕಿ  ನಂಬರ್​ 1 ಸ್ಥಾನಕ್ಕೆ ಏರಿದವರು ಸುನಿಧಿ. ಕನ್ನಡದಲ್ಲಿ ಮುಂಗಾರು ಮಳೆ ಚಿತ್ರದಲ್ಲಿ ಕುಣಿದು ಕುಣಿದು ಬಾರೆಯಿಂದ ಹಿಡಿದು ಅನೇಕ ಹಾಡುಗಳನ್ನು ಹಾಡಿರುವ ಸುನಿಧಿ ಕನ್ನಡಿಗರೂ ಮೆಚ್ಚಿನ ಗಾಯಕಿ. ಅತಿ ಚಿಕ್ಕ ವಯಸ್ಸಿನಲ್ಲೇ ಗಾಯನ ಶುರುಮಾಡಿದವರು ಇವರು. 12 ವರ್ಷಕ್ಕೆ ಪ್ಲೇಬ್ಯಾಕ್‌ ಸಿಂಗಿಂಗ್‌ ಕೆರಿಯರ್‌ ಆರಂಭಿಸಿದವರು. 

ಡೆಹ್ರಾಡೂನ್​ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸುನಿಧಿ ಮೇಲೆ ವಾಟರ್​ ಬಾಟಲಿ ಎಸೆಯುವ ಮೂಲಕ ಅರೆ ಕ್ಷಣ ಆತಂಕದ ವಾತಾವರಣ ಸೃಷ್ಟಿಯಾಯಿತು.  ಇದನ್ನು ಖುದ್ದು ಸುನಿಧಿಯವರೇ  ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್​ ಮಾಡಿಕೊಂಡಿದ್ದಾರೆ.  ಡೆಹ್ರಾಡೂನ್‌ನ ಎಸ್‌ಜಿಆರ್‌ಆರ್ ವಿಶ್ವವಿದ್ಯಾಲಯದಲ್ಲಿ ವೇದಿಕೆಯಲ್ಲಿ ನಡೆದ ಕಾರ್ಯಕ್ರಮದ ಕ್ಲಿಪ್ ಅನ್ನು ಹಂಚಿಕೊಂಡಿದ್ದಾರೆ. ಕ್ಲಿಪ್‌ನಲ್ಲಿ, ಪ್ರೇಕ್ಷಕರೊಬ್ಬರು ಬಾಟಲಿ ಎಸೆಯುವುದನ್ನು ನೋಡಬಹುದು. ಅದು ಸುನಿಧಿಯವರ  ಕೈಗೆ ತಾಗಿ ಅರೆಕ್ಷಣ ಅವರು ವಿಚಲಿತರಾದದ್ದನ್ನು ನೋಡಬಹುದು.  ಸಾಕಷ್ಟು ಭಯಭೀತರಾಗಿದ್ದರು ಕೂಡ. ಆದರೆ ಪ್ರದರ್ಶನವನ್ನು ಅಲ್ಲಿಗೇ ನಿಲ್ಲಿಸದೇ ಅವರು, ಪ್ರದರ್ಶನವನ್ನು ಮುಂದುವರಿಸದು. ಅದಕ್ಕೂ ಮುನ್ನ ಹಲವಾರು ಬಾರಿ ಆ ಬಾಟಲಿಯತ್ತ ನೋಡುವುದನ್ನು ವಿಡಿಯೋದಲ್ಲಿ ನೋಡಬಹುದು. 

ಬಾಟಲಿ ಎಸೆದ ಬಳಿಕ ಅಲ್ಲಿಯೇ  ಮಾತನಾಡಿದ ಗಾಯಕಿ, ಇಲ್ಲಿ ಏನಾಗುತ್ತಿದೆ ಎಂದು ಪ್ರಶ್ನಿಸಿದರು. ಬಾಟಲಿಗಳನ್ನು ಎಸೆಯುವುದರಿಂದ ಏನಾಗುತ್ತದೆ ಹೇಳಿ. ಹೆಚ್ಚೆಂದರೆ ನಾನು ಕಾರ್ಯಕ್ರಮದಿಂದ ಹೊರಕ್ಕೆ ಹೋಗುತ್ತೇನೆ. ಅದು ನಿಮಗೆ ಇಷ್ಟನಾ? ನಾನು ಕಾರ್ಯಕ್ರಮ ಬಿಟ್ಟು ಹೋಗಲಾ ಎಂದು ಪ್ರಶ್ನಿಸಿದರು. ಇದು ನಿಮಗೆ ಬೇಕೆ ಎಂದರು. ಅದಕ್ಕೆ  ಎಲ್ಲರೂ ಒಂದೇ ಧ್ವನಿಯಲ್ಲಿ ಕೂಗಿದರು ಇಲ್ಲ. ಹೀಗೆ ಮಾಡಬೇಡಿ ಎಂದರು. ನಂತರ ಸುನಿಧಿ ಕಾರ್ಯಕ್ರಮ ಮುಂದುವರೆಸಿದರು. ಈ ವಿಡಿಯೋಗೆ ಸಹಸ್ರಾರು ಮಂದಿ ಕಮೆಂಟ್​ ಮಾಡಿ ಗಾಯಕಿಗೆ ಆಗಿರುವ ಘಟನೆ ಕುರಿತು ವಿಷಾದ ವ್ಯಕ್ತಪಡಿಸುತ್ತಿದ್ದಾರೆ.  ಇಷ್ಟಾದರೂ ಈಕೆ ಕಾರ್ಯಕ್ರಮ ಮುಂದುವರೆಸಿದ ಬಗ್ಗೆ ಹಲವರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. 

ಇನ್ನು ಸುನಿಧಿಯ ಪರ್ಸನಲ್​ ವಿಷಯಕ್ಕೆ ಬರುವುದಾದರೆ,  ಈಗ  ಈಕೆಗೆ ನಲವತ್ತು ವರ್ಷ ವಯಸ್ಸು.  ಸುನಿಧಿ ಚೌಹಾಣ್​  ವೈಯಕ್ತಿಕ ಜೀವನದಿಂದ ಈ ದಿನಗಳಲ್ಲಿ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಸಿಂಗರ್ ಅವರ ಪತಿ ಹಿತೇಶ್ ಸೋನಿಕ್ ಅವರೊಂದಿಗಿನ ಎಂಟು ವರ್ಷದ ಸಂಬಂಧವನ್ನು ಮುರಿದುಕೊಂಡಿದ್ದಾರೆ ಎಂಬ ಸುದ್ದಿ ಇದೆ.   ಕೆಲವು ದಿನಗಳಿಂದ ಸುನಿಧಿ ಮತ್ತು ಹಿತೇಶ್ ಪ್ರತ್ಯೇಕವಾಗಿ ವಾಸಿಸುತ್ತಿದ್ದು, ಇದನ್ನು ಇನ್ನು ಅಧಿಕೃತವಾಗಿ ಅನೌನ್ಸ್ ಮಾಡಿಲ್ಲ. ಈ ಬಗ್ಗೆ ಪ್ರಶ್ನೆ ಕೇಳಿದಾಗ, ಉತ್ತರಿಸಲು ನಿರಾಕರಿಸಿದ್ದಾರೆ.   ಈ ಹಿಂದೆ ಗೋವಾ ಪ್ರವಾಸಕ್ಕೆ ಹೋಗಿದ್ದರು ಮತ್ತು ಅಲ್ಲಿಂದ ಹಿಂದಿರುಗಿದ ನಂತರ, ಅವರ ನಡುವೆ ವಿಷಯಗಳು ಹದಗೆಟ್ಟವು ಎನ್ನಲಾಗುತ್ತದೆ.  ಇವರ ಮದುವೆಗೆ ಎಂಟು ವರ್ಷಗಳಾಗಿತ್ತು. ಎರಡು ವರ್ಷಗಳ ಕಾಲ ಡೇಟಿಂಗ್ ಮಾಡಿ,  2012 ಗೋವಾದಲ್ಲಿ ಗ್ರ್ಯಾಂಡ್‌ ರಿಸೆಪ್ಷನ್‌‌ನೊಂದಿಗೆ ಮದುವೆಯಾಗಿದ್ದರು ಸುನಿಧಿ ಮತ್ತು ಹಿತೇಶ್. ಜನವರಿ 2018 ರಲ್ಲಿ, ಅವರ ಮದುವೆಯ ಐದು ವರ್ಷಗಳ ನಂತರ, ಸುನಿಧಿ ಒಬ್ಬ ಮಗನಿಗೆ ಜನ್ಮ ನೀಡಿದರು. ಆಗಾಗ್ಗೆ ತನ್ನ ಮಗನೊಂದಿಗೆ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಮಾಡುತ್ತಾರೆ.  

ಆನ್​ಲೈನ್​ನಲ್ಲಿ ಖಾಸಗಿಯಾಗಿ ಮತ ಹಾಕಿದ್ರಂತೆ ನಟಿ ಜ್ಯೋತಿಕಾ! ಕೋಲು ಕೊಟ್ಟು ಬಾರಿಸಿಕೊಳ್ಳೋದು ಬೇಕಿತ್ತಾ?

Latest Videos
Follow Us:
Download App:
  • android
  • ios