Asianet Suvarna News Asianet Suvarna News

ಪ್ರವಾಸ ಎಂಜಾಯ್ ಮಾಡುತ್ತಿರುವ ಅದಿತಿ-ಸಿದ್ಧಾರ್ಥ್ ಜೋಡಿ: ಸದ್ಯ ಎಲ್ಲಿದ್ದಾರೆ ಈ ಲವ್ ಬರ್ಡ್ಸ್

ಪ್ರವಾಸ ಎಂಜಾಯ್ ಮಾಡುತ್ತಿರುವ ಅದಿತಿ ರಾವ್ ಹೈದರಿ ಮತ್ತು ಸಿದ್ಧಾರ್ಥ್ ಜೋಡಿ ಸದ್ಯ ಎಲ್ಲಿದ್ದಾರೆ ಗೊತ್ತಾ? ಫೋಟೋ ಮೂಲಕ ರಿವೀಲ್ ಆಗಿದೆ ಪ್ರವಾಸದ ಗುಟ್ಟು.

Aditi Rao Hydari And Rumoured Boyfriend Siddharth in Bina Kak House pic viral sgk
Author
First Published Jun 4, 2023, 2:51 PM IST

ಕಾಲಿವುಡ್ ಸ್ಟಾರ್ ಸಿದ್ಧಾರ್ಥ್ ಮತ್ತು ನಟಿ ಅದಿತಿ ರಾವ್ ಹೈದರಿ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಇತ್ತೀಚೆಗಷ್ಟೆ ಇಬ್ಬರೂ ಏರ್ಪೋರ್ಟ್‌ನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಎಲ್ಲಿಗೆ ಹೊರಟಿದ್ದರು ಎನ್ನುವ ಬಗ್ಗೆ ಮಾಹಿತಿ ನೀಡಿರಿಲಿಲ್ಲ. ಇದೀಗ ಇಬ್ಬರ ಪ್ರವಾಸದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಅಂದಹಾಗೆ ಈ ಲವ್ ಬರ್ಡ್ಸ್ ಬಾಲಿವುಡ್ ನಟಿ ಮತ್ತು ರಾಜಕಾರಣಿ ಬೀನಾ ಕಾಕ್ ಅವರ ಮನೆಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಇಬ್ಬರೂ    ರಾಜಸ್ಥಾನದಲ್ಲಿರುವುದು ಬಹಿರಂಗವಾಗಿದೆ. 

ಸಿದ್ಧಾರ್ಥ್ ಮತ್ತು ಅದಿತಿ ಇಬ್ಬರೂ ಬಿನಾ ಮನೆಗೆ ಎಂಟ್ರಿ ಕೊಟ್ಟಿರುವ ಫೋಟೋವನ್ನು ಶೇರ್ ಮಾಡಿದ್ದಾರೆ. ಇಬ್ಬರೂ ಬಿನಾ ಜೊತೆ ಕ್ಯಾಮರಾಗೆ ಫೋಟೋಗೆ ಪೋಸ್ ನೀಡಿರುವ ಫೋಟೋ ಈಗ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಅಂದಹಾಗೆ ಇಬ್ಬರೂ ಬಿಳಿ ಬಣ್ಣ ಬಟ್ಟೆಲ್ಲಿ ಮಿಂಚಿದ್ದಾರೆ. ಸಿದ್ಧಾರ್ಥ್ ಮತ್ತು ಅದಿತಿ ಜೊತೆ ಫೋಟೋ ಶೇರ್ ಮಾಡಿ ಮಕ್ಕಳು ಮನೆಗೆ ಭೇಟಿ ನೀಡಿದಾಗ ತುಂಬಾ ಸಂತೋಷವಾಗಿದೆ' ಎಂದು ಬಿನಾ ಬರೆದುಕೊಂಡಿದ್ದಾರೆ. 

ಸಿದ್ಧಾರ್ಥ್ ಜೊತೆ ಡೇಟಿಂಗ್ ವದಂತಿ; ಮೌನ ಮುರಿದ ನಟಿ ಅದಿತಿ ರಾವ್ ಹೈದರಿ

ಇತ್ತೀಚೆಗಷ್ಟೆ ಅದಿತಿ ಮತ್ತು ಸಿದ್ಧಾರ್ಥ್ ಇಬ್ಬರೂ ಮುಂಬೈ ಏರ್ಪೋರ್ಟ್ ನಲ್ಲಿ ಕಾಣಿಸಿಕೊಂಡಿದ್ದರು. ಸಿದ್ಧಾರ್ಥ್ ಮುಖ ಮುಚ್ಚಿಕೊಂಡು ಎಂಟ್ರಿ ಕೊಟ್ಟರೆ ಅದಿತಿ ಪಾಪರಾಜಿಗಳಿಗೆ ಪೋಸ್ ನೀಡುತ್ತಾ ಎಂಟ್ರಿ ಕೊಟ್ಟರು. ಕ್ಯಾಮರಾ ಮುಂದೆ ಕೈ ಬೀಸಿ ಅದಿತಿ ಏರ್ಪೋರ್ಟ್ ಒಳಗೆ ಹೋದರು. ಆದರೆ ಸಿದ್ಧಾರ್ಥ್ ಮಾಸ್ಕ್ ಮತ್ತು ಕನ್ನಡಕ ಹಾಕಿದ್ದರು. ಕ್ಯಾಮರಾ ಕಡೆ ತಿರುಗಿಯೂ ನೋಡದೆ ಹೊರಟು ಹೋದರು. ಅದಿತಿ ಸೋಲೊ ಪೋಸ್ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಎಲ್ಲಿಗೆ ಹೊರಟಿತ್ತು ಜೋಡಿ ಎನ್ನುವುದು ಬಹಿರಂಗವಾಗಿರಲಿಲ್ಲ. ಇದೀಗ ರಾಜಸ್ಥಾನದಲ್ಲಿ ಮಸ್ತ್ ಮಜಾ ಮಾಡುತ್ತಿದ್ದಾರೆ.

 
 
 
 
 
 
 
 
 
 
 
 
 
 
 

A post shared by Bina Kak (@kakbina)

ಮುಖ ಮುಚ್ಚಿಕೊಂಡು ಗರ್ಲ್‌ಫ್ರೆಂಡ್ ಅದಿತಿ ರಾವ್ ಜೊತೆ ವಿದೇಶಕ್ಕೆ ಹಾರಿದ ಸಿದ್ಧಾರ್ಥ್: ವಿಡಿಯೋ ವೈರಲ್

ಅಂದಹಾಗೆ ಸಿದ್ಧಾರ್ಥ್ ಮತ್ತು ಅದಿತಿ ಇಬ್ಬರೂ ತುಂಬಾ ಕ್ಲೋಸ್ ಆಗಿದ್ದು ಸದಾ ಜೊತೆಯಲ್ಲೇ ಕಾಣಿಸಿಕೊಳ್ಳುತ್ತಿದ್ದಾರೆ. ಇಬ್ಬರೂ ಮಹಾ ಸಮುದ್ರಾಂ ಸಿನಿಮಾದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಈ ಸಿನಿಮಾ ಬಳಿಕ ಇಬ್ಬರ ಪ್ರೀತಿ ವಿಚಾರ ಬಹಿರಂಗವಾಗಿದೆ. ಸದ್ಯ ಅದಿತಿ ಅನೇಕ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಜೊತೆಗೆ ವೆಬ್ ಸೀರಿಸ್ ಕೂಡ ಮಾಡುತ್ತಿದ್ದಾರೆ.  ಸೌತ್ ಸಿನಿರಂಗದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ದಕ್ಷಿಣ ಭಾರತದಲ್ಲಿ ಅದಿತಿ ಉತ್ತಮ ಪಾತ್ರಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಇದೀಗ ಸಿದ್ಧಾರ್ಥ್ ಜೊತೆ ಡೇಟಿಂಗ್ ಮಾಡುತ್ತಿದ್ದು ಇಬ್ಬರೂ ಸದ್ಯದಲ್ಲೇ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಕೂಡ ಇದೆ. 

Follow Us:
Download App:
  • android
  • ios