Asianet Suvarna News Asianet Suvarna News

ಮುಖ ಮುಚ್ಚಿಕೊಂಡು ಗರ್ಲ್‌ಫ್ರೆಂಡ್ ಅದಿತಿ ರಾವ್ ಜೊತೆ ವಿದೇಶಕ್ಕೆ ಹಾರಿದ ಸಿದ್ಧಾರ್ಥ್: ವಿಡಿಯೋ ವೈರಲ್

ಮುಖ ಮುಚ್ಚಿಕೊಂಡು ಗರ್ಲ್‌ಫ್ರೆಂಡ್ ಅದಿತಿ ರಾವ್ ಹೈದರಿ ಜೊತೆ ಸಿದ್ಧಾರ್ಥ್ ವಿದೇಶಕ್ಕೆ ಹಾರಿದ್ದಾರೆ.

Aditi Rao Hydari and Siddharth headed for a vacation together video viral sgk
Author
First Published Jun 2, 2023, 5:45 PM IST

ಬಹುಭಾಷಾ ನಟಿ ಅದಿತಿ ರಾವ್ ಹೈದರಿ ಮತ್ತು ಕಾಲಿವುಡ್ ಸ್ಟಾರ್ ಸಿದ್ಧಾರ್ಥ್ ಇಬ್ಬರ ಡೇಟಿಂಗ್ ವಿಚಾರ ಗುಟ್ಟಾಗಿ ಉಳಿದಿಲ್ಲ. ಕದ್ದುಮುಚ್ಚಿ  ಓಡಾಡುತ್ತಿದ್ದ ಈ ಜೋಡಿ ಆಗಾಗ ಕ್ಯಾಮರಾ ಕಣ್ಣಿಗೆ ಸೆರೆಯಾಗುತ್ತಿದ್ದರು. ಆದರೀಗ ಇಬ್ಬರೂ ರಾಜಾರೋಶವಾಗಿ ಒಟ್ಟಿಗೆ ಓಡಾಡುತ್ತಿದ್ದಾರೆ. ಕ್ಯಾಮರಾ ಕಣ್ಣಿಗೆ ಸೆರೆಯಾಗುತ್ತಿದ್ದಾರೆ. ಈ ಮೂಲಕ ತಮ್ಮ ಪ್ರೀತಿ ವಿಚಾರವನ್ನು ಅಧಿಕೃತಗೊಳಿಸಿದ್ದಾರೆ.  ಇತ್ತೀಚಿಗಷ್ಟೆ ಸಿದ್ಧಾರ್ಥ್ ಮತ್ತು ಅದಿತಿ ಇಬ್ಬರೂ ಮಸ್ತ್ ಡಾನ್ಸ್ ಮಾಡುವ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದರು. ಡಾನ್ಸ್ ವಿಡಿಯೋ ವೈರಲ್ ಆದ ಬಳಿಕ ಇಬ್ಬರ ಪ್ರೀತಿ ಪ್ರೇಮದ ವಿಚಾರಕ್ಕೆ ಮತ್ತಷ್ಟು ಪುಷ್ಠಿ ನೀಡಿತ್ತು. 

ಇದೀಗ ಸಿದ್ಧಾರ್ಥ್ ಮತ್ತು ಅದಿತಿ ರಾವ್ ಇಬ್ಬರೂ ಪ್ರವಾಸಕ್ಕೆ ಹಾರಿದ್ದಾರೆ. ಇಬ್ಬರೂ ಏರ್ಪೋರ್ಟ್‌ನಲ್ಲಿ ಒಟ್ಟಿಗೆ ಕ್ಯಾಮರಾ ಕಣ್ಣಿಗೆ ಸೆರೆಯಾಗಿದ್ದಾರೆ. ಅದಿತಿ ಮಾತ್ರ ಕ್ಯಾಮರಾಗೆ ಹಾಯ್ ಹೇಳುತ್ತಾ ಹೋದರು.  ಆದರೆ ಸಿದ್ಧಾರ್ಥ್ ಮಾಸ್ಕ್ ಮತ್ತು ಕನ್ನಡಕ ಹಾಕಿದ್ದರು. ಕ್ಯಾಮರಾ ಕಡೆ ತಿರುಗಿಯೂ ನೋಡದೆ ಹೊರಟು ಹೋದರು. ಅದಿತಿ ಮಾತ್ರ ಸೋಲೊ ಪೋಸ್ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇಬ್ಬರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ ಇಬ್ಬರೂ ಎಲ್ಲಿಗೆ ಹಾರಿದ್ದಾರೆ ಎನ್ನುವುದು ಬಹಿರಂಗವಾಗಿಲ್ಲ.

ಸಿದ್ಧಾರ್ಥ್ ಜೊತೆ ಡೇಟಿಂಗ್ ವದಂತಿ; ಮೌನ ಮುರಿದ ನಟಿ ಅದಿತಿ ರಾವ್ ಹೈದರಿ

ವೈರಲ್ ಆಗಿರುವ ವಿಡಿಯೋಗೆ ಅಭಿಮಾನಿಗಳು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. 'ಇಬ್ಬರೂ ತುಂಬಾ ಮುದ್ದಾಗಿ ಕಾಣುತ್ತಾರೆ' ಎಂದು ಹೇಳಿದ್ದಾರೆ. ಅನೇಕರು ವಿವಿಧ ರೀತಿ ಕಾಮೆಂಟ್ ಮಾಡಿದ್ದಾರೆ. ಅದಿತಿ ಇತ್ತೀಚೆಗೆ ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಭಾಗಿಯಾಗಿದ್ದರು. ಕಾನ್‌ನಲ್ಲಿ ರೆಡ್ ಕಾರ್ಪೆಟ್ ವಾಕ್ ಮಾಡಿ ಗಮನ ಸೆಳೆದಿದ್ದರು. ಅದಿತಿ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಗರ್ಲ್‌ಫ್ರೆಂಡ್ ಅದಿತಿ ಫೋಟೋಗಳಿಗೆ ಸಿದ್ಧಾರ್ಥ್ ಕಾಮೆಂಟ್ ಮಾಡಿ ಪ್ರೀತಿ ವ್ಯಕ್ತಪಡಿಸಿದ್ದರು.

ಅದಿತಿ ಜೊತೆ ಸಿದ್ಧಾರ್ಥ್ ಮಸ್ತ್ ಡಾನ್ಸ್; ಲವ್‌ಬರ್ಡ್ಸ್ ಕ್ಯೂಟ್ ವಿಡಿಯೋ ವೈರಲ್
 
ಇಬ್ಬರೂ ಮಹಾ ಸಮುದ್ರಾಂ ಸಿನಿಮಾದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಈ ಸಿನಿಮಾ ಬಳಿಕ ಇಬ್ಬರ ಪ್ರೀತಿ ವಿಚಾರ ಬಹಿರಂಗವಾಗಿದೆ. ಸದ್ಯ ಅದಿತಿ ಅನೇಕ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಜೊತೆಗೆ ವೆಬ್ ಸೀರಿಸ್ ಕೂಡ ಮಾಡುತ್ತಿದ್ದಾರೆ.  ಸೌತ್ ಸಿನಿರಂಗದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ದಕ್ಷಿಣ ಭಾರತದಲ್ಲಿ ಅದಿತಿ ಉತ್ತಮ ಪಾತ್ರಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಸದ್ಯ ಸಿದ್ಧಾರ್ಥ್ ಜೊತೆ ಡೇಟಿಂಗ್ ಮಾಡುತ್ತಿದ್ದು ಇಬ್ಬರೂ ಸದ್ಯದಲ್ಲೇ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಕೂಡ ಇದೆ. 

Follow Us:
Download App:
  • android
  • ios