Asianet Suvarna News Asianet Suvarna News

Adipurush Trailer: ವಿವಾದಿತ 'ಆದಿಪುರುಷ್'​ ಟ್ರೇಲರ್​ 70 ದೇಶಗಳಲ್ಲಿ ರಿಲೀಸ್​: ಡೇಟ್​ ಫಿಕ್ಸ್​

ಟಾಲಿವುಡ್ ಸ್ಟಾರ್ ಪ್ರಭಾಸ್ ನಟನೆಯ ಆದಿಪುರುಷ್ ಚಿತ್ರದ ಟ್ರೇಲರ್​ಗೆ ದಿನಾಂಕ ಫಿಕ್ಸ್​ ಆಗಿದ್ದು, 70 ದೇಶಗಳಲ್ಲಿ ಟ್ರೇಲರ್​ ಬಿಡುಗಡೆಯಾಗಲಿದೆ.
 

Adipurush Trailer To Have A Global Premiere Across 70 Countries And A Special Treat For Fans
Author
First Published May 7, 2023, 3:34 PM IST | Last Updated May 7, 2023, 3:34 PM IST

ಟಾಲಿವುಡ್ ಸ್ಟಾರ್ ಪ್ರಭಾಸ್ ನಟನೆಯ ಆದಿಪುರುಷ್  (Adipurush)  ಸಿನಿಮಾ ಬಿಡುಗಡೆಗೂ ಮುನ್ನವೇ  ಸಾಕಷ್ಟು ವಿವಾದ ಸೃಷ್ಟಿಸಿತ್ತು.   ಚಿತ್ರತಂಡ  ಟೀಸರ್ ಬಿಡುಗಡೆ ಮಾಡುತ್ತಿದ್ದಂತೇ ಸಕತ್​ ಟ್ರೋಲ್​ಗೆ ಒಳಗಾಯಿತು.  ಆಂಜನೆಯನ ಪಾತ್ರ, ರಾವಣ (Ravana) ಪಾತ್ರ ಚಿತ್ರಿಸಿದ್ದ ವಿರುದ್ಧ ನೆಟ್ಟಿಗರು ಆಕ್ರೋಶ ಹೊರಹಾಕಿದ್ದರು.  550 ಕೋಟಿ ರೂಪಾಯಿಗೂ ಅಧಿಕ ಮೊತ್ತದಲ್ಲಿ ತಯಾರಾಗಿದೆ. ರಾಮನಾಗಿ ಪ್ರಭಾಸ್ ಕಾಣಿಸಿಕೊಂಡಿದ್ದಾರೆ. ಸೀತೆ ಪಾತ್ರದಲ್ಲಿ ಕೃತಿ ಸನೊನ್ ಮಿಂಚಿದ್ದಾರೆ. ರಾವಣ  ಪಾತ್ರದಲ್ಲಿ ಸೈಫ್ ಅಲಿ ಖಾನ್ ಕಾಣಿಸಿಕೊಂಡಿದ್ದಾರೆ. ರಾವಣನ ಪಾತ್ರ ಮಾಡಿದ ಸೈಫ್ ಅಲಿ ಖಾನ್ ಲುಕ್ ಸರಿ ಇಲ್ಲ ಎಂದು ಅನೇಕರು ಟೀಕಿಸಿದ್ದರು. ಕಳಪೆ ಗ್ರಾಫಿಕ್ಸ್ ಎಂದು ಜರಿದಿದ್ದರು. ವಾನರ ಸೇನೆಯಲ್ಲಿ ಬೇರೆ ಬೇರೆ ಪ್ರಾಣಿಗಳು ಕಾಣಿಸಿದ್ದು ಕೂಡ ನೆಟ್ಟಗರ ಟೀಕೆಗೆ ಕಾರಣವಾಗಿತ್ತು. ಸಾಕಷ್ಟು ಟೀಕೆ, ಟ್ರೋಲ್ ಗಳನ್ನು ಎದುರಿಸಿದ್ದ ಆದಿಪುರುಷ್ ತಂಡ ಒಂದುಷ್ಟು ಬದಲಾವಣೆ ಮಾಡಿ ಚಿತ್ರೀಕರಣ ಮುಗಿಸಿ ಇದೀಗ ರಿಲೀಸ್‌ಗೆ ಸಿದ್ಧವಾಗಿದೆ.

ಭಾರಿ ವಿರೋಧದ ಬಳಿಕ ಒಂದಿಷ್ಟು ಬದಲಾವಣೆಯೊಂದಿಗೆ ಆದಿಪುರುಷ್ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದೆ. ಹಿಂದೂ ಧಾರ್ಮಿಕ ಭಾವನೆ ನೀವು ಧಕ್ಕೆ ತರುತ್ತಿದ್ದೀರಿ ಎಂದು ಚಿತ್ರತಂಡಕ್ಕೂ ಎಚ್ಚರಿಕೆ ಸಂದೇಶಗಳು ರವಾನೆಯಾಗಿದ್ದರಿಂದ ಕೆಲವೊಂದು ಬದಲಾವಣೆ ಮಾಡಲಾಗಿದೆ. ಅಂದಹಾಗೆ ಈ ಚಿತ್ರದ ಬಗ್ಗೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ 'ಆದಿಪುರುಷ್' ಜನವರಿ ತಿಂಗಳಲ್ಲೇ ರಿಲೀಸ್ ಆಗಬೇಕಿತ್ತು. ಆದರೆ, ಗ್ರಾಫಿಕ್ಸ್ ಕೆಲಸ ವಿಳಂಬ ಆದ ಕಾರಣ ಸಿನಿಮಾ ರಿಲೀಸ್ (Releasee) ದಿನಾಂಕ ಮುಂದೂಡಲ್ಪಟ್ಟಿದೆ. ಎರಡು ಬಾರಿ ಸಿನಿಮಾ  ರಿಲೀಸ್ ಡೇಟ್ ಅನೌನ್ಸ್ ಮಾಡಿ ಮುಂದಕ್ಕೆ ಹಾಕಲಾಗಿತ್ತು. ಬಳಿಕ  ಜೈ ಶ್ರೀರಾಮ್ ಹಾಡಿನ ಟೀಸರ್ ರಿಲೀಸ್ ಮಾಡುವ ಮೂಲಕ ಪ್ರಮೋಷನ್ ಪ್ರಾರಂಭಿಸಿದೆ.   ಜೈ ಶ್ರೀರಾಮ್ ಎಂಬ ಲಿರಿಕಲ್ ಹಾಡಿನ ಟೀಸರ್ ರಿಲೀಸ್ ಮಾಡಿದೆ. ಜೈ ಶ್ರೀಮ್ ಕೇಳಿ ಫ್ಯಾನ್ಸ್  ರೋಮಾಂಚನಗೊಂಡಿದ್ದಾರೆ.  

ವಿವಾದ, ಟ್ರೋಲ್‌ಗಳ ಬೆನ್ನಲ್ಲೇ 'ಆದಿಪುರುಷ್' ಪ್ರಮೋಷನ್‌‌ಗೆ ಸೈಫ್ ಅಲಿ ಖಾನ್ ಗೈರು; ಕಾರಣವೇನು?

ಇದೀಗ  ಆದಿಪುರುಷ್‌ ಚಿತ್ರದ ಟ್ರೇಲರ್‌ ಬಿಡುಗಡೆಗೆ ಸಿದ್ಧವಾಗಿದ್ದು ಮುಹೂರ್ತ ಫಿಕ್ಸ್​ ಆಗಿದೆ.  ಭಾರತ ಸೇರಿದಂತೆ  ಜಗತ್ತಿನ 70 ದೇಶಗಳಲ್ಲಿ ಏಕಕಾಲದಲ್ಲಿ ಟ್ರೇಲರ್‌ ರಿಲೀಸ್‌ ಆಗಲಿದೆ. ಟ್ರೋಲ್​ ಗಮನದಲ್ಲಿ ಇಟ್ಟುಕೊಂಡು ಯಾರ ಭಾವನೆಗೂ ಧಕ್ಕೆ ಆಗದಂತೆ  ಜಾಗರೂಕತೆಯಿಂದ‌ಲೇ ಟ್ರೇಲರ್‌ ಬಿಡುಗಡೆ ಮಾಡಲಾಗುತ್ತಿದೆ ಎಂದು ಚಿತ್ರತಂಡ ಹೇಳಿದೆ.  ಮೇ 9ರಂದು ಹಿಂದಿ, ತೆಲುಗು, ತಮಿಳು, ಕನ್ನಡ, ಮಲಯಾಳಂ ಸೇರಿ ಇನ್ನೂ ಹಲವು ಭಾಷೆಗಳಲ್ಲಿ ಟ್ರೇಲರ್‌ ಬಿಡುಗಡೆ ಆಗಲಿದೆ. ಅಷ್ಟೇ ಅಲ್ಲ ಜಗತ್ತಿನ 70 ದೇಶಗಳಲ್ಲಿ (70 countries) ಏಕಕಾಲದಲ್ಲಿ ಆದಿಪುರುಷ್‌ ಚಿತ್ರದ ಟ್ರೇಲರ್‌ ರಿಲೀಸ್‌ ಆಗಲಿದೆ.  ಸಿನಿಮಾ 3ಡಿಯಲ್ಲಿ (3D) ರಿಲೀಸ್ ಆಗುತ್ತಿರುವುದರಿಂದ ನಿರೀಕ್ಷೆ ಮತ್ತಷ್ಟು ಹೆಚ್ಚಿದೆ.  ಟ್ರೇಲರ್ ಅವಧಿ 3 ನಿಮಿಷ ಇರಲಿದ್ದು ಸಿನಿಮಾದಲ್ಲಿ ಏನೆಲ್ಲ ಇರಲಿದೆ ಎನ್ನುವ ಚಿತ್ರಣ ಸಿಗಲಿದೆ.  

ಜೂನ್ 7ರಿಂದ 18ರ ವರೆಗೂ ನ್ಯೂಯಾರ್ಕ್‌ನಲ್ಲಿ ಟ್ರಿಬೆಕಾ ಫಿಲಂ ಫೆಸ್ಟಿವಲ್‌ ನಡೆಯಲಿದೆ. ಆ ಪ್ರತಿಷ್ಠಿತ ಸಿನಿಮೋತ್ಸವದಲ್ಲಿ ಜೂ. 13ರಂದು ಆದಿಪುರುಷ್‌ ಸಿನಿಮಾ ಪ್ರದರ್ಶನ ಕಾಣಲಿದೆ. ಈ ವಿಚಾರವನ್ನು ಸಿನಿಮಾ ತಂಡವೇ ಅಧಿಕೃತವಾಗಿ ಘೋಷಿಸಿದ್ದು, ಈ ಚಿತ್ರೋತ್ಸವಕ್ಕೆ ಅವಕಾಶ ಸಿಕ್ಕಿದ್ದಕ್ಕೆ ಸಂಭ್ರಮದಲ್ಲಿದೆ. ಅಧಿಕೃತ ಬಿಡುಗಡೆಗೂ ಮುನ್ನ ಅಂದರೆ, ಜೂನ್‌ 16ರ ಬದಲು, ಜೂನ್‌ 13ರಂದು ಈ ಚಿತ್ರ ಅಮೆರಿಕದಲ್ಲಿ (America) ಪ್ರದರ್ಶನ ಕಾಣಲಿದೆ.

ಮನೆ ಒಡೆದು ಹಾಕಿದ್ರೂ ಪರಿಹಾರದ ಹಣ ಬೇಡ್ವೇ ಬೇಡ ಎಂದ ನಟಿ Kangana Ranaut

ಓಂ ರಾವುತ್ (Om Rawath) ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರವನ್ನು ಭೂಷಣ್ ಕುಮಾರ್ ನಿರ್ಮಿಸಿದ್ದಾರೆ. ಚಿತ್ರಮಂದಿರದಲ್ಲಿ ಬಿಡುಗಡೆ ಆಗುವುದಕ್ಕೂ ಮೊದಲು ಈ ಚಿತ್ರವು ನ್ಯೂಯಾರ್ಕ್‌ನ ಟ್ರಿಬೆಕಾ ಫಿಲಂ ಫೆಸ್ಟಿವಲ್‌ನಲ್ಲಿ ಪ್ರದರ್ಶನಕ್ಕೆ ಆಯ್ಕೆಯಾಗಿದೆ. ಅದರ ಜತೆಗೆ ಚಿತ್ರದ ಟ್ರೇಲರ್ ಅನ್ನು ಭಾರತದಲ್ಲಿ ಮಾತ್ರವಲ್ಲದೆ ಅಮೆರಿಕ, ಕೆನಡಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಸಿಂಗಾಪುರ್, ಇಂಡೋನೇಷ್ಯಾ, ಥೈಲ್ಯಾಂಡ್, ಮಲೇಷ್ಯಾ, ಹಾಂಗ್ ಕಾಂಗ್, ಫಿಲಿಪೈನ್ಸ್, ಮ್ಯಾನ್ಮಾರ್, ಶ್ರೀಲಂಕಾ, ಜಪಾನ್, ಆಫ್ರಿಕಾ, ಯುಕೆ ಸೇರಿದಂತೆ ಜಗತ್ತಿನ 70ಕ್ಕೂ ಅಧಿಕ ದೇಶಗಳಲ್ಲಿ ಟ್ರೇಲರ್‌ ಬಿಡುಗಡೆ ಮಾಡಲಾಗುತ್ತದೆ. ಮೇ 9ರಂದು ಚಿತ್ರತಂಡದವರು ಆನ್​ಲೈನ್​ನಲ್ಲಿ ಟ್ರೇಲರ್ ಲಾಂಚ್ ಮಾಡಲಿದ್ದಾರೆ. ‘ಆದಿಪುರುಷ್’ ರಾಮಾಯಣ ಆಧರಿಸಿ ಸಿದ್ಧಗೊಂಡಿರುವ ಸಿನಿಮಾ. ಟ್ರೇಲರ್​ನಲ್ಲಿ ರಾಮಾಯಣದ ಚಿತ್ರಣ ಸಂಪೂರ್ಣವಾಗಿ ಸಿಗಲಿದೆ. ಗ್ರಾಫಿಕ್ಸ್ ವಿಚಾರದಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಈ ಮೊದಲು ವರದಿ ಆಗಿತ್ತು. ಟ್ರೇಲರ್ ನೋಡಿದ ಬಳಿಕ ಈ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ.

Latest Videos
Follow Us:
Download App:
  • android
  • ios