ಮನೆ ಒಡೆದು ಹಾಕಿದ್ರೂ ಪರಿಹಾರದ ಹಣ ಬೇಡ್ವೇ ಬೇಡ ಎಂದ ನಟಿ Kangana Ranaut
ವೈಯಕ್ತಿಯ ದ್ವೇಷದಿಂದ ಮುಂಬೈ ಮಹಾನಗರ ಪಾಲಿಕೆ ನಟಿ ಕಂಗನಾ ಅವರ ಮನೆ ಒಡೆದುಹಾಕಿತ್ತು. ಹೈಕೋರ್ಟ್ ಆದೇಶದ ಹೊರತಾಗಿಯೂ ತಮಗೆ ಪರಿಹಾರ ಬೇಡ ಎಂದ ನಟಿ, ಕಾರಣವೇನು?
ಅಕ್ರಮ ನಿರ್ಮಾಣ ಆರೋಪ ಹೊರಿಸಿ ಕಂಗನಾ ಅವರ ಮನೆಯ ಒಂದು ಭಾಗವನ್ನು 2020ರಲ್ಲಿ ಕೆಡವಿದ್ದ ಘಟನೆ ನಿಮಗೆಲ್ಲಾ ನೆನಪಿರಬಹುದು. ಕಂಗನಾ ರಣಾವತ್ (Kangana Ranaut) ಅವರ ಮನೆ ಮತ್ತು ಆಫೀಸ್ ಅನ್ನು ಅಕ್ರಮವಾಗಿ ಮಾರ್ಪಾಡು ಮಾಡಲಾಗಿದೆ ಎಂದು ಆರೋಪಿಸಿ ಬೃಹತ್ ಮುಂಬೈ ಮುನ್ಸಿಪಲ್ ಕಾರ್ಪೊರೇಶನ್ (BMC) ಕೆಡವಿ ಹಾಕಿತ್ತು. ಮುಂಬೈನ ಪಾಲಿ ಹಿಲ್ಸ್‍ನಲ್ಲಿರುವ ಕಂಗನಾ ಅವರು ಕಚೇರಿಯಲ್ಲಿ 14 ಬಗೆಯ ನಿಯಮ ಉಲ್ಲಂಘನೆ ಮಾಡಿದ್ದಾರೆ, ಬಾಂದ್ರಾ ಪ್ರದೇಶದಲ್ಲಿರುವ ಬಂಗಲೆಯಲ್ಲಿ ಕೂಡ ಅಕ್ರಮವಾದ ಕೆಲ ರಚನೆಗಳು ಕಂಡು ಬಂದಿದ್ದು, ಅವುಗಳನ್ನು ನೆಲಸಮ ಮಾಡಲು ಕ್ರಮ ತೆಗೆದುಕೊಂಡಿದ್ದೇವಎ ಎಂದು ಬಿಎಂಸಿ ಅಧಿಕಾರಿಯೊಬ್ಬರು ಹೇಳಿಕೆ ನೀಡಿದ್ದರು. ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ನಟಿ ಕಂಗನಾ ರಣಾವತ್ ಅವರು, ಶಿವಸೇನಾ ವಿರುದ್ಧ ಮಾತನಾಡಿದ್ದಕ್ಕೆ ಮಹಾರಾಷ್ಟ್ರ ರಾಜ್ಯ ಸರ್ಕಾರ ನನ್ನನ್ನು ಟಾರ್ಗೆಟ್ ಮಾಡಿದೆ. ಹೀಗಾಗಿ ಬಿಎಂಸಿಯನ್ನು ಉಪಯೋಗಿಸಿಕೊಂಡು ನನ್ನ ಮನೆ ಮತ್ತು ಆಫೀಸ್ ಅನ್ನು ಒಡೆದು ಹಾಕಿದೆ ಎಂದು ಆರೋಪ ಮಾಡಿದ್ದರು. ಈ ವಿಚಾರದಲ್ಲಿ ಶಿವಸೇನೆ (Shivasene) ಹಾಗೂ ಕಂಗನಾ ಮಧ್ಯೆ ಕಿತ್ತಾಟ ನಡೆದಿತ್ತು. ಈ ಪ್ರಕರಣದಲ್ಲಿ ಕಂಗನಾ ಅವರಿಗೆ ಕೇಂದ್ರ ಸರ್ಕಾರದ ವತಿಯಿಂದ ವೈ+ ಕೆಟಗರಿ ಭದ್ರತೆ ನೀಡಲಾಗಿತ್ತು. ಈ ಸಮಯದಲ್ಲಿ ಕಂಗನಾ ಅವರ ಮೇಲೆ ಬಹುದೊಡ್ಡ ಆರೋಪ ಕೇಳಿ ಬಂದಿತ್ತು. ಅದೇನೆಂದರೆ ಅವರು, ಹೀಗೆ ಭದ್ರತೆ ಪಡೆಯುವ ಮೂಲಕ ತೆರಿಗೆದಾರರ ಹಣವನ್ನು ಹಾಳು ಮಾಡುತ್ತಿದ್ದಾರೆ ಎಂದು.
ನಂತರ ಈ ವಿವಾದ ಕೋರ್ಟ್ ಮೆಟ್ಟಿಲೇರಿತ್ತು. ಮಹಾನಗರ ಪಾಲಿಕೆಗೆ ಕೋರ್ಟ್ ಬಿಸಿ ಮುಟ್ಟಿಸಿತ್ತು. ಕಂಗನಾ ಅವರಿಗೆ ಜಯವಾಗಿತ್ತು. ಇದರ ಅನ್ವಯ ಮಹಾನಗರಪಾಲಿಕೆಯು ಕಂಗನಾ ಅವರಿಗೆ ಪರಿಹಾರ ನೀಡಬೇಕಿತ್ತು. ಆದರೆ ಇದುವರೆಗೂ ಅವರಿಗೆ ಪರಿಹಾರ ಸಿಗಲಿಲ್ಲ. ಈಗ ಕುತೂಹಲದ ಘಟ್ಟದಲ್ಲಿ ಖುದ್ದು ಕಂಗನಾ ಅವರೇ ತಮಗೆ ಬರಬೇಕಿದ್ದ ಪರಿಹಾರ ಹಣವನ್ನು ನಿರಾಕರಿಸಿದ್ದಾರೆ. ಈ ಕುರಿತು ಸ್ಪಷ್ಟನೆ ನೀಡಿರುವ ನಟಿ, ‘ಘಟನೆ ನಡೆದು ಎರಡು ವರ್ಷ ಕಳೆದು ಹೋಗಿದ್ದರೂ ನನಗೆ ಪರಿಹಾರ ಹಣ ಇದುವರೆಗೆ ಸಿಕ್ಕಿಲ್ಲ. ನನಗೆ ಆದ ನಷ್ಟವನ್ನು ಅಳೆಯಲು ಮೌಲ್ಯಮಾಪಕರು ಬರಬೇಕಿತ್ತು. ಅದೂ ಮಾಡಲಿಲ್ಲ. ಈಗ ನಾನು ಮಹಾರಾಷ್ಟ್ರ ಮುಖ್ಯಮಂತ್ರಿ ಏಕ್ನಾಥ್ ಶಿಂಧೆ ಅವರನ್ನು ಇದೇ ವಿಚಾರವಾಗಿ ಭೇಟಿ ಮಾಡಿದ್ದೇನೆ. ಮೌಲ್ಯಮಾಪಕರನ್ನು ಕಳಿಸಬೇಡಿ. ನನಗೆ ಪರಿಹಾರ ಹಣ ಬೇಡ ಎಂದು ಹೇಳಿದ್ದೇನೆ’ ಎಂಬುದಾಗಿ ಅವರು ತಿಳಿಸಿದ್ದಾರೆ.
ಮದುವೆ ಕುರಿತು ಕಂಗನಾ ಹೇಳಿದ್ದೇನು? ಸಲ್ಮಾನ್‌ನನ್ನೂ ಬಿಡದ ಬಾಲಿವುಡ್ ಕ್ವೀನ್!
ಅಷ್ಟಕ್ಕೂ ಕಂಗನಾ ಅವರು ಈ ರೀತಿಯ ನಿರ್ಧಾರ ತೆಗೆದುಕೊಂಡಿರುವುದು ಏಕೆ ಎಂಬ ಕುತೂಹಲ ಹಲವರದ್ದು. ಇದಕ್ಕೆ ಕಾರಣವೂ ಇದೆ. ವೈ ಪ್ಲಸ್ (Y plus) ಭದ್ರತೆ ನೀಡಿದ್ದ ಸಮಯದಲ್ಲಿ ಕಂಗನಾ, ತೆರಿಗೆದಾರರ (Tax payers) ಹಣ ಪೋಲು ಮಾಡುತ್ತಿರುವ ಆರೋಪ ಎದುರಿಸುತ್ತಿದ್ದರು. ಇದೇ ಕಾರಣವನ್ನು ಈಗ ತಿರುಗೇಟಿನ ಮೂಲಕ ನೀಡಿರುವ ಕಂಗನಾ, ನನ್ನ ಮುಂಬೈನ ಮನೆಯನ್ನು ಧ್ವಂಸಗೊಳಿಸಿದ್ದಕ್ಕಾಗಿ ಪರಿಹಾರವನ್ನು ಪಡೆಯಲು ಬದ್ಧನಾಗಿದ್ದೇನೆ. ಈ ಪ್ರಕ್ರಿಯೆಯು ಎಂದಿಗೂ ಮುಗಿಯುವುದಿಲ್ಲ. ಆದರೆ ಪರಿಹಾರ ನೀಡುವುದು ತೆರಿಗೆದಾರರ ಹಣದಿಂದ. ತೆರಿಗೆದಾರರ ಹಣದ ಪರಿಹಾರ ನನಗೆ ಬೇಡ. ಆದ್ದರಿಂದ ಅದನ್ನು ನಾನು ಬಯಸುವುದಿಲ್ಲ ಎಂದಿದ್ದಾರೆ!
'ನ್ಯಾಯಾಲಯವು ಅವರು ನನಗೆ ಯಾವುದೇ ಪರಿಹಾರವನ್ನು ನೀಡಬೇಕೆಂದು ಹೇಳಿದೆ, ಆದರೆ ನಾನು ಹೇಳಿದಂತೆ, ಅವರು ಎಂದಿಗೂ ಮೌಲ್ಯಮಾಪಕರನ್ನು ಕಳುಹಿಸಲಿಲ್ಲ ಮತ್ತು ನಾನು ಬೇಡಿಕೆ ಮಾಡಲಿಲ್ಲ ಏಕೆಂದರೆ ಅದರ ತೆರಿಗೆ ಪಾವತಿದಾರರ ಹಣ ನನಗೆ ತಿಳಿದಿದೆ ಮತ್ತು ನನಗೆ ಅದರಲ್ಲಿ ಯಾವುದೂ ಬೇಡ' ಎಂದಿದ್ದಾರೆ. ಸದ್ಯ ಅವರ ಚಿತ್ರದ ವಿಷಯಕ್ಕೆ ಬರುವುದಾದರೆ, ಕಂಗನಾ ಪ್ರಸ್ತುತ ಚಂದ್ರಮುಖಿ 2 ನಲ್ಲಿ ಕೆಲಸ ಮಾಡುತ್ತಿದ್ದಾರೆ. ಪಿ ವಾಸು ಹೆಲ್ಮ್ ಮಾಡಿರುವ ಈ ಚಿತ್ರವು ರಜನಿಕಾಂತ್ ಮತ್ತು ಜ್ಯೋತಿಕಾ (Jyothika) ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ತಮಿಳಿನ ಹಿಟ್ ಹಾರರ್ ಹಾಸ್ಯ ಚಂದ್ರಮುಖಿಯ ಉತ್ತರಭಾಗವಾಗಿದೆ ಈ ಚಿತ್ರ. ಚಂದ್ರಮುಖಿ 2 ರಲ್ಲಿ ಕಂಗನಾ ತನ್ನ ಸೌಂದರ್ಯ ಮತ್ತು ನೃತ್ಯ ಕೌಶಲ್ಯಕ್ಕೆ ಹೆಸರುವಾಸಿಯಾಗಿದ್ದ ರಾಜನ ಆಸ್ಥಾನದಲ್ಲಿ ನರ್ತಕಿಯ ಪಾತ್ರವನ್ನು ಚಿತ್ರಿಸಲಿದ್ದಾರೆ. ಇನ್ನು ಅವರ ದಿ ಎಮರ್ಜೆನ್ಸಿ ಚಿತ್ರ ಬಿಡುಗಡೆ ಕಾಣಬೇಕಿದೆ. ಈ ಚಿತ್ರವು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ (Indira Gandhi) ಜೀವನದ ಸುತ್ತ ಸುತ್ತಲಿದ್ದು, ಇದರಲ್ಲಿ ಕಂಗನಾ ಇಂದಿರಾಗಾಂಧಿ ಪಾತ್ರ ನಿರ್ವಹಿಸಿದ್ದಾರೆ. ಇನ್ನು ಕಂಗನಾ, ತೇಜಸ್‌ನಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ, ಇದರಲ್ಲಿ ಅವರು ಭಾರತೀಯ ವಾಯುಪಡೆಯ ಪೈಲಟ್ ಪಾತ್ರವನ್ನು ಮಾಡಿದ್ದಾರೆ. ಅವರು ಮಣಿಕರ್ಣಿಕಾ ರಿಟರ್ನ್ಸ್: ದಿ ಲೆಜೆಂಡ್ ಆಫ್ ದಿಡ್ಡಾ ಮತ್ತು ದಿ ಅವತಾರ: ಸೀತಾ ಎಂಬ ಚಿತ್ರವನ್ನೂ ಘೋಷಿಸಿದ್ದಾರೆ.
Kangana Ranaut: ಕರಣ್ ಜೋಹರ್ಗೆ ಮುಂದೆ ಮುಂದೆ ಏನಾಗ್ತದೋ ನೋಡ್ತಿರಿ ಎಂದ ನಟಿ...