Asianet Suvarna News Asianet Suvarna News

ಬಟ್ಟೆ ಬದಲಿಸಿದ ವಿಭೀಷಣನ ಪತ್ನಿ: ಆದಿಪುರುಷನೋ, ಕಾಮಸೂತ್ರವೋ ಇದು ಎಂದು ನೆಟ್ಟಿಗರು ಗರಂ!

ವಿವಾದದ ಕೇಂದ್ರ ಬಿಂದುವಾಗಿರುವ ಆದಿಪುರುಷ್​ ಚಿತ್ರದಲ್ಲಿನ ವಿಭೀಷಣ ಪತ್ನಿಯ ಡ್ರೆಸ್​ ಕಾಮಸೂತ್ರಕ್ಕೆ ಹೋಲಿಸಲಾಗಿದೆ.
 

Adipurush show soft nudity in a scene netizens get furious suc
Author
First Published Jun 21, 2023, 11:35 AM IST

ನಿರಂತರ ವಿವಾದಗಳ ಸುಳಿಯಲ್ಲಿ ಸಾಗುತ್ತಿರುವ ‘ಆದಿಪುರುಷ’ ಹೆಸರಿಗೆ ಈಗ ಮತ್ತೊಂದು ವಿವಾದ ಸೇರ್ಪಡೆಯಾಗಿದೆ. ವಾಸ್ತವವಾಗಿ, ಚಿತ್ರದ ಒಂದು ದೃಶ್ಯ ವೈರಲ್ ಆಗುತ್ತಿದೆ, ಅದನ್ನು ನೋಡಿ ಜನರು ಕೋಪಗೊಳ್ಳುತ್ತಿದ್ದಾರೆ. ಈ ದೃಶ್ಯವನ್ನು ಹಂಚಿಕೊಳ್ಳುವ ಮೂಲಕ, ಹನುಮಾನ್​ಜಿಗೆ ತೋರಿಸಲು ಥಿಯೇಟರ್‌ಗಳಲ್ಲಿ ಸೀಟ್ ಬುಕ್ ಮಾಡಲಾಗಿದೆಯೇ ಎಂಬ ಪ್ರಶ್ನೆಯನ್ನು ಜನರು ಎತ್ತುತ್ತಿದ್ದಾರೆ. ಈ ದೃಶ್ಯಕ್ಕೆ ಸಿಕ್ಕಾಪಟ್ಟೆ  ಕಮೆಂಟ್​ಗಳು ಬರುತ್ತಿದ್ದು, ಆದಿಪುರುಷ್​ ಚಿತ್ರವನ್ನು ಹಿಗ್ಗಾಮುಗ್ಗ ಬೈಯುತ್ತಿದ್ದಾರೆ. ಹಾಗೂ ಇದೇನು ಕಾಮಸೂತ್ರನೋ, ಆದಿಪುರುಷನೋ ಎಂದು ಪ್ರಶ್ನಿಸಿದರೆ, ಇದನ್ನು ನೋಡಲು ಹನುಮಾನ್​ಜಿಗೆ ಒಂದು ಸೀಟು ಬುಕ್​ ಮಾಡಿದ್ರಾ ಎಂದೂ ಪ್ರಶ್ನಿಸಿದ್ದಾರೆ. ವಾಸ್ತವವಾಗಿ, ಈ ದೃಶ್ಯವು 'ಆದಿಪುರುಷ' ಚಿತ್ರದಲ್ಲಿ ವಿಭೀಷಣನ ಪತ್ನಿ ಶರ್ಮಾ (ಚಿತ್ರದಲ್ಲಿ ಅವರ ಹೆಸರನ್ನು ಉಲ್ಲೇಖಿಸಲಾಗಿಲ್ಲ. ಆದರೆ ಈ ಪಾತ್ರದ ಹೆಸರು ಸರಮಾ) ಪಾತ್ರವನ್ನು ನಿರ್ವಹಿಸುವ ನಟಿ ತೃಪ್ತಿ ತೋರಡ್ಮಲ್ ಅವರದ್ದು. 

ಹೌದು. ವಿಭೀಷಣ ಪತ್ನಿ  ಸ್ಥಳದಲ್ಲಿ ತಮ್ಮ ಪತಿ ಅರ್ಥಾತ್​ ವಿಭೀಷಣ (Siddharth Karnik) ಜೊತೆ ಮಾತನಾಡುವಾಗ ಬಟ್ಟೆ ಬದಲಾಯಿಸುತ್ತಿರುವುದನ್ನು ತೋರಿಸಲಾಗಿದೆ. ದೃಶ್ಯದಲ್ಲಿ, ಆಕೆಯ ಸೆರಗು ಕೆಳಗೆ ಇರುತ್ತದೆ. ಆಕೆ ದೇಹದ  ಸೀಳನ್ನು ತೋರಿಸಿದ್ದಾರೆ ಎನ್ನುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.  ಈ ದೃಶ್ಯವನ್ನು ನೋಡಿದ ಇಂಟರ್ನೆಟ್ ಬಳಕೆದಾರರು ತುಂಬಾ ಕೋಪಗೊಂಡಿದ್ದಾರೆ ಮತ್ತು ಅದನ್ನು ಮೃದುವಾದ ನಗ್ನತೆ ಎಂದು ಕರೆದಿದ್ದಾರೆ, ಅವರು ಚಿತ್ರದ ನಿರ್ದೇಶಕ ಓಂ ರಾವುತ್ ಅವರನ್ನು ಪ್ರಶ್ನಿಸುತ್ತಿದ್ದಾರೆ. ದೃಶ್ಯದ ಸ್ಟಿಲ್ ಅನ್ನು ಹಂಚಿಕೊಂಡ ಇಂಟರ್ನೆಟ್ ಬಳಕೆದಾರರು, 'ಈ ದೃಶ್ಯವು ಕಾಮಸೂತ್ರದಿಂದಲ್ಲ. ಇದು ಆದಿಪುರುಷನ ಸ್ಟಿಲ್​ ದೃಶ್ಯವಿದು, ಈ ಚಿತ್ರದಲ್ಲಿ ಇರುವುದು ವಿಭೀಷಣನ ಹೆಂಡತಿ. ಆದರೆ ಕಾಮಸೂತ್ರದ ರೀತಿಯಲ್ಲಿ ಇದೆಯಾಗಿದೆ' ಎಂದಿದ್ದಾರೆ.

Sonal Chauhan: ಆದಿಪುರುಷ್​ನ ಎರಡೇ ದೃಶ್ಯಕ್ಕೆ 'ಮಂಡೋದರಿ'ಗೆ ಈ ಪರಿ ಸಂಭಾವನೆಯಾ?
 
ಅಂದಹಾಗೆ ಸರಮಾ ಪಾತ್ರವನ್ನು ನಟಿ ತೃಪ್ತಿ ತೋರದ್ಮಾಲ್ ನಿರ್ವಹಿಸಿದ್ದಾರೆ. ಆದಿಪುರುಷ್ ಚಿತ್ರದ ಮೂಲಕ ಹಿಂದಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ.  22 ನವೆಂಬರ್ 1992 ರಂದು ಜನಿಸಿದ ತೃಪ್ತಿ, ಮರಾಠಿ ನಟಿ. ಅವರು ಮನಮೋಹಕ ಅವತಾರಕ್ಕೆ ಫೇಮಸ್. ಚಲನಚಿತ್ರ ಹಿನ್ನೆಲೆಯಿಂದ ಬಂದವರು. ಅವರ ತಂದೆ ಮಧುಕರ್ ತೋರ್ಡ್ಮಲ್ ಮರಾಠಿ ಚಿತ್ರರಂಗದ ಪ್ರಸಿದ್ಧ ನಟ ಮತ್ತು ಅನೇಕ ಚಲನಚಿತ್ರಗಳಲ್ಲಿ ತಮ್ಮ ನಟನಾ ಕೌಶಲವನ್ನು ಸಾಬೀತುಪಡಿಸಿದ್ದಾರೆ. ತಮ್ಮ ತಂದೆಯಂತೆ, ತೃಪ್ತಿ ಕೂಡ ಚಲನಚಿತ್ರ ಜಗತ್ತಿನಲ್ಲಿ ತಮ್ಮನ್ನು ತಾವೇ ಗುರುತಿಸಿಕೊಳ್ಳಲು ನಿರ್ಧರಿಸಿದರು ಮತ್ತು 2018 ರಲ್ಲಿ 'ಸವಿತಾ ದಾಮೋದರ್ ಪರಂಜ್ಪೆ' ಮೂಲಕ ತನ್ನ ನಟನಾ ವೃತ್ತಿಯನ್ನು ಪ್ರಾರಂಭಿಸಿದರು. ಇದರ ನಂತರ, 2019 ರಲ್ಲಿ, ತೃಪ್ತಿ 'ಫತೇಶಿಕಾಸ್ಟ್' ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದರು.ಈಗ ತೃಪ್ತಿ ಅವರು 'ಆದಿಪುರುಷ್' (2023) ಮೂಲಕ ಹಿಂದಿ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ, ಇದರಿಂದಾಗಿ ಅವರು ಸಾಕಷ್ಟು ಜನಪ್ರಿಯತೆಯನ್ನು ಗಳಿಸಿದ್ದಾರೆ.

ಎದೆಯ ಸೀಳು ತೋರಿಸಿದ್ದು ಮಾತ್ರವಲ್ಲದೇ, 'ಆದಿಪುರುಷ' ಚಿತ್ರದಲ್ಲಿ  ಲೋ ಕಟ್ ಬ್ಲೌಸ್ ಧರಿಸಿ ಕಾಣಿಸಿಕೊಂಡಿದ್ದು ಕೂಡ ಭಾರೀ ಸಂಚಲನ ಮೂಡಿಸಿದೆ. ‘ರಾಮಾಯಣ’ ಕಥೆಯಾಧಾರಿತ ಸಿನಿಮಾದಲ್ಲಿ ಇಂತಹ ದೃಶ್ಯಗಳನ್ನು ತೋರಿಸಿರುವುದು ಏಕೆ ಎಂಬ ಪ್ರಶ್ನೆಗಳನ್ನು ಜನ ಎತ್ತುತ್ತಿದ್ದಾರೆ.

Adipurush Review: ಸಿನಿಮಾ ನೋಡಿ ಖ್ಯಾತ ಧಾರ್ಮಿಕ ವಿದ್ವಾಂಸರು ಹೇಳಿದ್ದೇನು?

ಅಂದಹಾಗೆ, ಓಂ ರಾವತ್​ (Om Raut) ನಿರ್ದೇಶನ ಆದಿಪುರುಷ್​ ಮೊದಲಿನಿಂದಲೂ ವಿವಾದಗಳ ಕೇಂದ್ರ ಬಿಂದುವಾಗಿಯೇ ಹೊರಹೊಮ್ಮಿದೆ.  ಈ ಸಿನಿಮಾದಲ್ಲಿ ಪ್ರಭಾಸ್​ (Prabhas), ಕೃತಿ ಸನೋನ್​, ದೇವದತ್ತ ನಾಗೆ, ಸೈಫ್​ ಅಲಿ ಖಾನ್​, ಸನ್ನಿ ಸಿಂಗ್​ ಮುಂತಾದವರು ನಟಿಸಿದ್ದಾರೆ.  ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ಬಿಡುಗಡೆ ಆಗಿದ್ದು, ತೆಲುಗು, ಕನ್ನಡ, ಹಿಂದಿ, ಮಲಯಾಳಂ ಹಾಗೂ ತಮಿಳಿನಲ್ಲಿ ಪ್ರದರ್ಶನ ಆಗುತ್ತಿದೆ.  ದೃಶ್ಯ ವೈಭವವನ್ನು ಕಣ್ತುಂಬಿಕೊಳ್ಳಲು ಪ್ರೇಕ್ಷಕರು ಮುಗಿಬಿದ್ದಿದ್ದಾರೆ. ಟೀಸರ್​ ಬಿಡುಗಡೆ ಆದಾಗ ಈ ಸಿನಿಮಾ ಸಖತ್​ ಟ್ರೋಲ್​ ಆಗಿತ್ತು. ಆದರೆ ಈಗ ಪ್ರೇಕ್ಷಕರಿಂದ ಪಾಸಿಟಿವ್​ ಪ್ರತಿಕ್ರಿಯೆ ಸಿಗುತ್ತಿತ್ತು, ಕೆಲವರು ಈಗಲೂ ಸಿನಿಮಾದ ವಿರುದ್ಧ ಮಾತನಾಡುತ್ತಿದ್ದಾರೆ.  ಚಿತ್ರದ ಹಲವು ದೃಶ್ಯಗಳಲ್ಲಿ ತಲೆಬುಡವಿಲ್ಲದ ಸಂಭಾಷಣೆಗಳಿದ್ದರೆ, ಹಲವೆಡೆ ಕಾಲ್ಪನಿಕ ದೃಶ್ಯಗಳನ್ನು ರಚಿಸಲಾಗಿದೆ ಎಂದು ಕೆಲವರು ಹೇಳಿದರೆ, ವಿಎಫ್‌ಎಕ್ಸ್ ಎಫೆಕ್ಟ್‌ಗಳು  ಇಷ್ಟವಾಗುತ್ತವೆ ಎಂದಿದ್ದಾರೆ ಕೆಲವರು.

 

Follow Us:
Download App:
  • android
  • ios