Asianet Suvarna News Asianet Suvarna News

ಹನಿಮೂನ್​ನಿಂದ ಬರುತ್ತಿದ್ದಂತೆಯೇ ಮದ್ವೆ ಫೋಟೋ ಡಿಲೀಟ್​ ಮಾಡಿದ ನಟಿ: ಕಾರಣ ಕೇಳಿ ಫ್ಯಾನ್ಸ್​ ಶಾಕ್​!

ಹನಿಮೂನ್​ನಿಂದ ಬರುತ್ತಿದ್ದಂತೆಯೇ ಮದ್ವೆ ಫೋಟೋ ಡಿಲೀಟ್​ ಮಾಡಿದ ನಟಿ ದಿವ್ಯಾ ಅಗರ್​ವಾಲ್​. ಕಾರಣ ಕೇಳಿ ಫ್ಯಾನ್ಸ್​ ಶಾಕ್​!
 

Bigg Boss fame Divya Agarwal breaks silence on divorce rumours with Apurva Padgaonkar suc
Author
First Published May 28, 2024, 5:47 PM IST

ಇತ್ತೀಚಿನ ದಿನಗಳಲ್ಲಿ ಮದ್ವೆ, ಡಿವೋರ್ಸ್​ ಎಲ್ಲವೂ ಮಾಮೂಲಾಗಿದೆ. ಅದರಲ್ಲಿಯೂ ಸೆಲೆಬ್ರಿಟಿಗಳ ಈ ವಿಷಯ ಅಂತೂ ಸಕತ್​ ಮುನ್ನೆಲೆಗೆ ಬರುತ್ತಲೇ ಇರುತ್ತವೆ. ಸಂಬಂಧಗಳಿಗೆ ಬೆಲೆಯೇ ಇಲ್ವಾ ಎನ್ನುವಷ್ಟರ ಮಟ್ಟಗೆ ವಿಚ್ಛೇದನಗಳು ಇಂದು ಸೌಂಡ್​ ಮಾಡುತ್ತಿವೆ. ಇದೀಗ ಬಿಗ್ ಬಾಸ್ OTT ಸೀಸನ್ 1 ವಿನ್ನರ್, ನಟಿ ದಿವ್ಯಾ ಅಗರ್​ವಾಲ್​ ಡಿವೋರ್ಸ್​ ಸುದ್ದಿ ಭಾರಿ ಸದ್ದು ಮಾಡುತ್ತಿದೆ. ಮೂರು ತಿಂಗಳ ಹಿಂದಷ್ಟೇ ಬಹುವರ್ಷಗಳ ಗೆಳೆಯನೊಟ್ಟಿಗೆ ಈಕೆಯ ಮದುವೆಯಾಗಿತ್ತು. ಈಗ ಅವರು ಹನಿಮೂನ್​ಗೆ ಹೋಗಿದ್ದರು. ಹನಿಮೂನ್​ಗೆ ಹೋಗಿ ಬರುತ್ತಿದ್ದಂತೆಯೇ ನಟಿ ಇನ್​ ಸೊಷಿಯಲ್​ ಮೀಡಿಯಾ ಖಾತೆಯಿಂದ ಎಲ್ಲಾ ಮದುವೆ ಫೊಟೋಗಳನ್ನು ಡಿಲೀಟ್​ ಮಾಡಿದ್ದಾರೆ. ನಟಿ   ಪತಿಯೊಂದಿಗೆ ಹನಿಮೂನ್‌ಗಾಗಿ ಭೂತಾನ್‌ಗೆ ಹೋಗಿದ್ದರು. ಹನಿಮೂನ್‌ನಿಂದ ವಾಪಾಸ್ಸಾದ ಕೂಡಲೇ ಪತಿಯೊಂದಿಗಿನ ತಮ್ಮ ಎಲ್ಲಾ ಮದುವೆಯ ಪೋಟೋಗಳನ್ನು ಸಾಮಾಜಿಕ ಮಾಧ್ಯಮದಿಂದ ಅಳಿಸಿದ್ದಾರೆ.

ನಟಿ ದಿವ್ಯಾ ಅಗರ್ವಾಲ್ ಮತ್ತು ಬಹುಕಾಲದ ಗೆಳೆಯ ಅಪೂರ್ವ ಪಡ್ಗಾಂವ್ಕರ್ ಅವರ ಜೊತೆ ಬಹುದಿನಗಳಿಂದ ಡೇಟಿಂಗ್ ಮಾಡ್ತಿದ್ರು. ಫೆಬ್ರವರಿ 20, 2024 ರಂದು ಅಪೂರ್ವ ಪಡಗಾಂವ್ಕರ್ ಅವರೊಂದಿಗೆ ಮಹಾರಾಷ್ಟ್ರ ಶೈಲಿಯಲ್ಲಿ ಮದುವೆ ಕೂಡ ಮಾಡಿಕೊಂಡಿದ್ದರು. ಸಿಂಪಲ್​ ಆಗಿ ಮದ್ವೆ ಇಷ್ಟಪಡುವುದಾಗಿ ಹೇಳಿದ್ದ ನಟಿ ಅದರಂತೆಯೇ ಮದ್ವೆಯಾಗಿದ್ರು. ಆದರೆ ಹನಿಮೂನ್​ ಬೆನ್ನಲ್ಲೇ ಫೋಟೋ ಡಿಲೀಟ್​ ಆಗಿದೆ. ಇಷ್ಟಾಗುತ್ತಿದ್ದಂತೆಯೇ ಹನಿಮೂನ್​ನಲ್ಲಿ ಏನೋ ಎಟವಟ್ಟಾಗಿ ಎಂದೇ ಹೇಳಲಾಗುತ್ತಿದೆ. ನಟಿಯ ಈ ನಡೆಯ ಕುರಿತು ಸೋಷಿಯಲ್​ ಮೀಡಿಯಾದಲ್ಲಿ ವ್ಯಾಪಕ ಚರ್ಚೆಯೂ ಆಯಿತು. ಕೆಲ ದಿನಗಳ ಹಿಂದೆ ಪತಿಯೊಂದಿಗೆ ಕಾಣಿಸಿಕೊಂಡಿದ್ದರು ದಿವ್ಯಾ.  ಸಿಂಧೂರ ಧರಿಸಿ ಕ್ಯಾಮೆರಾ ಕಣ್ಣಿಗೆ ಬಿದ್ದ ನಟಿಗೆ ಮದುವೆ ನಂತರದ ಫೀಲ್‌ ಹೇಗಿದೆ ಎಂದು ಕೇಳಿದಾಗ "ತುಂಬಾ ಚೆನ್ನಾಗಿದೆ" ಎಂದು ಹೇಳಿದ್ದರು. ಆದರೆ ಈಗ ಅದೇನಾಯಿತೋ ಗೊತ್ತಿಲ್ಲ, ಮದುವೆ ಫೋಟೋಗಳನ್ನೆಲ್ಲಾ ಡಿಲೀಟ್​ ಮಾಡಿರುವುದಕ್ಕೆ ಚರ್ಚೆ ಶುರುವಾಗಿದೆ.

ಐಪಿಎಲ್​ನಲ್ಲಿ ಶಾರುಖ್​ಗಿಂತಲೂ ಹೆಚ್ಚಾಗಿ ಮಿಂಚಿದ್ದು ಅವರು ಧರಿಸಿದ್ದ ವಾಚ್​! ಅಬ್ಬಬ್ಬಾ ಬೆಲೆ ಇಷ್ಟೊಂದಾ?

ಆದರೆ ಇದೀಗ ನಟಿ ಇದರ ಬಗ್ಗೆ ಮಾತನಾಡಿದ್ದಾರೆ. ತಾವು ಫೋಟೋ ಡಿಲೀಟ್​ ಮಾಡಿರುವ ಹಿಂದಿನ ಕಾರಣವನ್ನು ಬಹಿರಂಗಗೊಳಿಸಿದ್ದು ಎಲ್ಲರ ಬಾಯಿ ಮುಚ್ಚಿಸಿದ್ದಾರೆ, ಮಾತ್ರವಲ್ಲದೇ ಈ ಹೇಳಿಕೆ ನೀಡುವ ಮೂಲಕ ಅಭಿಮಾನಿಗಳಿಗೆ ಶಾಕ್​ ಕೂಡ ನೀಡಿದ್ದಾರೆ. ಅಂದಹಾಗೆ ದಿವ್ಯಾ ಅವರ ಪತಿ ಅಪೂರ್ವ ಪಡ್ಗಾಂವ್ಕರ್ ಅವರು ಉದ್ಯಮಿಯಾಗಿದ್ದು, ಅವರು ಹಲವಾರು  ರೆಸ್ಟೋರೆಂಟ್​ಗಳನ್ನು ಹೊಂದಿದ್ದಾರೆ. ಕೋಟಿಗಟ್ಟಲೆ ಆಸ್ತಿಯನ್ನು ಸಹ ಹೊಂದಿದ್ದಾರೆ.

ಅಷ್ಟಕ್ಕೂ ಈಗ ಮೌನ ಮುರಿದಿರುವ ನಟಿ, ನಾನೇನೂ ಡಿವೋರ್ಸ್​ ಪಡೆದುಕೊಳ್ಳುತ್ತಿಲ್ಲ. ನನ್ನ ಗಂಡ ಇಲ್ಲೇಪಕ್ಕದಲ್ಲೇ ಮಲಗಿ ಗೊರಕೆ ಹೊಡೆಯುತ್ತಿದ್ದಾನೆ. ನಾನು ಹನಿಮೂನ್​ನಿಂದ ಬಂದ ಮೇಲೆ ಸುಮಾರು 2,500 ಫೋಟೋಗಳನ್ನು ಡಿಲೀಟ್​ ಮಾಡಿದ್ದೇನೆ. ಆದರೆ ವಿಚಿತ್ರ ಎಂದರೆ ಮದುವೆ ಫೋಟೋಗಳ ಮೇಲೆ ಮಾತ್ರ ಮೀಡಿಯಾದ ಕಣ್ಣುಬಿದ್ದಿದೆ. ಅಲ್ಲಿಗೆ ಜನರು ನಾವು ಮಾಡುವ ಕೆಲಸವನ್ನಲ್ಲ, ಬದಲಿಗೆ ಮದುವೆ-ಡಿವೋರ್ಸ್​ ಬಗ್ಗೆ ಹೆಚ್ಚು ಕಾಳಜಿ ತೋರುತ್ತಾರೆ ಎನ್ನುವುದು ಖಾತ್ರಿಯಾಯಿತು. ಜನರು ನಮ್ಮಿಂದ ಏನನ್ನು ನಿರೀಕ್ಷಿಸುತ್ತಾರೆ ಎನ್ನುವುದು ತಿಳಿಯಬೇಕಿತ್ತು. ಅದು ಈಗ ನಿಜವಾಗಿದೆ ಎಂದಿದ್ದಾರೆ. ನನ್ನ ಕೆಲವು ಫೋಟೋಗಳನ್ನು ಪಿನ್ ಮಾಡಿದ್ದೆ. ಅದನ್ನು ತೆಗೆದು ಹಾಕಿದ್ದೇನಷ್ಟೇ. ನಾವಿಬ್ಬರೂ ಚೆನ್ನಾಗಿಯೇ ಇದ್ದೇವೆ, ಹನಿಮೂನ್​ ಅನ್ನು ಸಕತ್​ ಎಂಜಾಯ್​ ಮಾಡಿದ್ದೇವೆ. ದೇವರ ದಯೆಯಿಂದ ಪತಿ ಪಕ್ಕದಲ್ಲಿಯೇ ಮಲಗಿ ಗೊರಕೆ ಹೊಡೆಯುತ್ತಿದ್ದಾರೆ ಎಂದಿದ್ದಾರೆ.
ಮದುವೆ, ಸಂಬಂಧದ ಕುರಿತು ಬಿಗ್​ಬಾಸ್​ ಖ್ಯಾತಿಯ ನಮ್ರತಾ ಗೌಡ ಓಪನ್​ ಮಾತಿದು...

Latest Videos
Follow Us:
Download App:
  • android
  • ios