ಡ್ರೆಸ್​ ಒಳಗೇ ಬ್ರಹ್ಮಾಂಡ ತೋರಿದ್ದಾರೆ ನಟಿ ಉರ್ಫಿ ಜಾವೇದ್! ವೈರಲ್​ ವಿಡಿಯೋಗೆ ಕೆಲವರು ಆಧುನಿಕ ಶ್ರೀಕೃಷ್ಣ ಎಂದಿದ್ದರೆ, ಇನ್ಯಾರು ಏನು ಹೇಳಿದ್ರು ನೋಡಿ...  

ಸೋಷಿಯಲ್​ ಮೀಡಿಯಾ ಸೆನ್ಸೇಷನ್​ ಉರ್ಫಿ ಜಾವೇದ್​, ಏಕ್ತಾ ಕಪೂರ್ ಅವರ ‘ಲವ್ ಸೆಕ್ಸ್ ಔರ್ ಧೋಕಾ-2’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇಂಟರ್ನೆಟ್ ಯುಗದಲ್ಲಿ ಪ್ರೀತಿ ಮತ್ತು ಸಂಬಂಧಗಳ ಒಂದು ನೋಟವನ್ನು ನೀಡಲಿರುವ ಈ ಚಿತ್ರದಲ್ಲಿ ಇಂಟರ್​ನೆಟ್​ ಸೆನ್ಸೇಷನ್​ ಉರ್ಫಿಗೆ ಯೋಗ್ಯ ಎಂಬುದನ್ನು ಅರಿತು ಅವರನ್ನು ಆಯ್ಕೆ ಮಾಡಲಾಗಿದೆ. ಈ ಚಿತ್ರವನ್ನು ದಿಬಾಕರ್ ಬ್ಯಾನರ್ಜಿ ನಿರ್ದೇಶಿಸಿದ್ದಾರೆ. ಚಿತ್ರವು ಏಪ್ರಿಲ್ 19 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಉರ್ಫಿ ಅವರ ಅಭಿಮಾನಿಗಳು ಈ ಚಿತ್ರವನ್ನು ವೀಕ್ಷಿಸಲು ಕಾತರರಾಗಿದ್ದಾರೆ. ಇದರ ಹೊರತಾಗಿಯೂ ಉರ್ಫಿ ತಮ್ಮ ಡ್ರೆಸ್​ಗಳಿಂದ ನೆಟ್ಟಿಗರನ್ನು ಚಕಿತಗೊಳಿಸುವುದನ್ನು ಮುಂದುವರೆಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಷ್ಟಕ್ಕೂ ಉರ್ಫಿ ಎಂದರೆ, ಚಿತ್ರ ವಿಚಿತ್ರ ಡ್ರೆಸ್​ಗಳಿಂದಲೇ ಸೋಷಿಯಲ್​ ಮೀಡಿಯಾ ಸೆನ್ಸೇಷನ್​ ಆದವರು. ಉರ್ಫಿ ಜಾವೇದ್​ (Uorfi Javed) ಎಂದಾಕ್ಷಣ ಎಲ್ಲರ ಕಣ್ಣುಮುಂದೆ ಬರುವುದು ಅತ್ಯಂತ ಕನಿಷ್ಠ ಉಡುಪು ಅಥವಾ ಉಡುಪೇ ಇಲ್ಲದ ನಟಿಯ ರೂಪ. ಚುಮುಚುಮು ಚಳಿಯಲ್ಲಿಯೂ ಮೈಮೇಲೆ ತುಂಡು ಬಟ್ಟೆಯುಟ್ಟು ಪಡ್ಡೆ ಹುಡುಗರ ಬಿಸಿ ಏರಿಸ್ತಿರೋ ಈ ನಟಿ ಸೋಷಿಯಲ್ ಮೀಡಿಯಾದಲ್ಲಿ (Social media) ಸೆನ್ಸೇಷನ್ ಕ್ರಿಯೇಟ್​ ಮಾಡ್ತಿರೋದು ಹೊಸ ವಿಷಯವೇನಲ್ಲ. ಪ್ರತಿದಿನವೂ ಎಂಬಂತೆ ವಿಶಿಷ್ಟ ರೀತಿಯಲ್ಲಿ ಉಡುಗೆ ತೊಟ್ಟು ಅದರ ಫೋಟೋಶೂಟ್​ ಮಾಡಿಸಿಕೊಂಡು ಜಾಲತಾಣದಲ್ಲಿ ಪೋಸ್ಟ್​ ಮಾಡುವುದರಲ್ಲಿ ಉರ್ಫಿಯದ್ದು ಎತ್ತಿದ ಕೈ. ಕೆಲವೊಮ್ಮೆ ಬಟ್ಟೆಯೂ ಇಲ್ಲದೆ, ಕೈಗೆ ಸಿಕ್ಕ ವಸ್ತುಗಳಿಂದ ಖಾಸಗಿ ಅಂಗಗಳನ್ನು ಮುಚ್ಚಿಕೊಂಡು ಪೋಸ್​ ನೀಡಿರುವ ಫೋಟೋಗಳೂ ಕಮ್ಮಿಯೇನಲ್ಲ. ದಿನವೂ ಬಟ್ಟೆಗಳಿಂದಲೇ ಟ್ರೋಲ್​ (Troll) ಆಗುವುದು ಎಂದರೆ ತುಂಬಾ ಖುಷಿಯ ಹಾಗೆ ಕಾಣಿಸುತ್ತಿದೆ. ಇದೇ ಕಾರಣಕ್ಕೆ ಮುಂಬೈನ ರೆಸ್ಟೋರೆಂಟ್‌ಗೆ ತಮಗೆ ಎಂಟ್ರಿ ಸಿಗಲಿಲ್ಲ, ಯಾರೂ ಮನೆ ಬಾಡಿಗೆ ಕೊಡುತ್ತಿಲ್ಲ ಎಂದೆಲ್ಲಾ ಗೋಳೋ ಅನ್ನುತ್ತಿದ್ದರೂ ನಟಿ ಅರೆಬರೆ ಡ್ರೆಸ್​ ರುಚಿ ನೋಡಿ ಅದನ್ನು ಮಾತ್ರ ಬಿಡುತ್ತಿಲ್ಲ.

ಇಂಟರ್​ನೆಟ್​ ಸೆನ್ಸೇಷನ್​ ಉರ್ಫಿ ಜಾವೇದ್​ ಬಾಲಿವುಡ್​ನಲ್ಲಿ ಮಿಂಚಿಂಗ್​! ಮುಂದಿನ ತಿಂಗಳೇ ಚಿತ್ರ ರಿಲೀಸ್​...

ಇದೀಗ ಉಡುಪಿನೊಳಗೇ ಬ್ರಹ್ಮಾಂಡ ತೋರಿಸಿದ್ದಾರೆ ನಟಿ ಉರ್ಫಿ. ಇದಕ್ಕಾಗಿ ಈಕೆಯನ್ನು ಆಧುನಿಕ ಶ್ರೀಕೃಷ್ಣ ಎನ್ನುತ್ತಿದ್ದಾರೆ ಫ್ಯಾನ್ಸ್​. ಉಡುಪಿನಲ್ಲಿ ಬ್ರಹ್ಮಾಂಡ ತಿರುಗುವ ರೀತಿಯಲ್ಲಿ ತೋರಿಸಿದ್ದಾರೆ. ಈಕೆಯ ಉಡುಪು ತಿರುಗುವಂತೆ ಮಾಡಲಾಗಿದ್ದು, ಅದರಲ್ಲಿ ಗ್ರಹಗಳನ್ನು ನೋಡಬಹುದಾಗಿದೆ. ಆರಂಭದಲ್ಲಿ ಕೆಲವರು ನಟಿಯ ಕೈಹಿಡಿದು ಕರೆದುಕೊಂಡು ಬಂದಿದ್ದಾರೆ. ಆ ಬಳಿಕ ನಟಿಯ ಉಡುಪನ್ನು ಗಮನಿಸಿದರೆ, ಬ್ರಹ್ಮಾಂಡವನ್ನು ನೋಡಬಹುದಾಗಿದೆ. ಇದನ್ನು ನೋಡಿ ಅಭಿಮಾನಿಗಳು ಉಫ್​ ಎನ್ನುತ್ತಿದ್ದಾರೆ. ನಿಮಗೆ ನೀವೇ ಸಾಟಿ ಎನ್ನುತ್ತಿದ್ದರೆ, ನಿಮ್ಮ ಡ್ರೆಸ್ಸಿಂಗ್​ ಸೆನ್ಸ್​ಗೆ ಹ್ಯಾಟ್ಸ್​ ಆಫ್​ ಎನ್ನುತ್ತಿದ್ದಾರೆ. ಮತ್ತೆ ಕೆಲವರು ಶ್ರೀಕೃಷ್ಣ ಪರಮಾತ್ಮ ಬಾಯಲ್ಲಿ ಬ್ರಹ್ಮಾಂಡ ತೋರಿದರೆ, ನೀವು ಉಡುಪಿನೊಳಗೇ ಬ್ರಹ್ಮಾಂಡ ತೋರಿದ್ದೀರಿ, ಆಧುನಿಕ ಕೃಷ್ಣ ನೀವು ಎನ್ನುತ್ತಿದ್ದಾರೆ. ಒಟ್ಟಿನಲ್ಲಿ ಈ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ಸೌಂಡ್​ ಮಾಡುತ್ತಿದೆ. 

ಇನ್ನು ಉರ್ಫಿ ನಾಳೆ ಅಂದರೆ 20ರಂದು ಎಲ್ಲರಿಗೂ ಉಡುಗೊರೆ ನೀಡುತ್ತೇನೆ ಎಂದು ನಿನ್ನೆಯಷ್ಟೇ ಘೋಷಿಸಿದ್ದಾರೆ. ಎಲ್ಲರೂ ಬನ್ನಿ, ಎಲ್ಲರೂ ಬರಲೇಬೇಕು ಎಂದು ಮೊದಲೇ ಹೇಳುತ್ತಿದ್ದೇನೆ ನೋಡಿ. ಏಕೆಂದರೆ ಕೆಲವರು ಕೊನೆಯದಾಗಿ ಬರುತ್ತಾರೆ ಮತ್ತು ಕೆಲವರು ಬರುವುದಿಲ್ಲ ಮತ್ತು 20 ರಂದು ಎಲ್ಲರಿಗೂ ಆಶ್ಚರ್ಯ ಕಾದಿದೆ. ನಾನು ಎಲ್ಲರಿಗೂ ಒಳ್ಳೆಯ ಉಡುಗೊರೆ ನೀಡುತ್ತಿದ್ದೇನೆ ಎಂದು ಹೇಳಿದ್ದಾರೆ. ಇದಕ್ಕೆ ಥಹರೇವಾರಿ ಕಮೆಂಟ್ಸ್​ ಬಂದಿವೆ. ಈಕೆ ಇಲ್ಲಿಯವರೆಗೆ ಹಾಕಿರುವ ಡ್ರೆಸ್​ಗಳನ್ನು ಎಲ್ಲರಿಗೂ ನೀಡಲಿದ್ದಾಳೆ ಇರಬೇಕು ಎಂದು ಕೆಲವರು ತಮಾಷೆ ಮಾಡಿದ್ದರೆ, ಇನ್ನು ಕೆಲವರು ಏನಿಲ್ಲ, ಹೊಸ ಚಿತ್ರದ ಬಗ್ಗೆ ಹೇಳಲಿದ್ದಾರೆ ಅಷ್ಟೇ ಎಂದಿದ್ದಾರೆ. ಮತ್ತೆ ಕೆಲವರು ಎಲ್ಲರನ್ನೂ ನಟಿ ಮೂರ್ಖಳನ್ನಾಗಿ ಮಾಡುತ್ತಿದ್ದಾರೆ ಎಂದಿದ್ದಾರೆ. 

ಉರ್ಫಿ ಆಧಾರ್​ಕಾರ್ಡ್​​ ಮಿಸ್ಸಿಂಗ್​! ಏರ್​ಪೋರ್ಟ್​ನಲ್ಲಿ ನಟಿ ಕಂಗಾಲು- ವಿಡಿಯೋಗೆ ಸಕತ್​ ಕಮೆಂಟ್​

View post on Instagram