ಉರ್ಫಿ ಆಧಾರ್ಕಾರ್ಡ್ ಮಿಸ್ಸಿಂಗ್! ಏರ್ಪೋರ್ಟ್ನಲ್ಲಿ ನಟಿ ಕಂಗಾಲು- ವಿಡಿಯೋಗೆ ಸಕತ್ ಕಮೆಂಟ್
ನಟಿ ಉರ್ಫಿ ಜಾವೇದ್ ಆಧಾರ್ ಕಾರ್ಡ್ ಮಿಸ್ ಆಗಿದ್ದು, ಗೋಳೋ ಎಂದಿದ್ದಾರೆ. ವಿಡಿಯೋ ನೋಡಿ ನೆಟ್ಟಿಗರು ಏನಂದ್ರು?
ಉರ್ಫಿ ಜಾವೇದ್ (Uorfi Javed) ಎಂದಾಕ್ಷಣ ಎಲ್ಲರ ಕಣ್ಣುಮುಂದೆ ಬರುವುದು ಅತ್ಯಂತ ಕನಿಷ್ಠ ಉಡುಪು ಅಥವಾ ಉಡುಪೇ ಇಲ್ಲದ ನಟಿಯ ರೂಪ. ಚುಮುಚುಮು ಚಳಿಯಲ್ಲಿಯೂ ಮೈಮೇಲೆ ತುಂಡು ಬಟ್ಟೆಯುಟ್ಟು ಪಡ್ಡೆ ಹುಡುಗರ ಬಿಸಿ ಏರಿಸ್ತಿರೋ ಈ ನಟಿ ಸೋಷಿಯಲ್ ಮೀಡಿಯಾದಲ್ಲಿ (Social media) ಸೆನ್ಸೇಷನ್ ಕ್ರಿಯೇಟ್ ಮಾಡ್ತಿರೋದು ಹೊಸ ವಿಷಯವೇನಲ್ಲ. ಪ್ರತಿದಿನವೂ ಎಂಬಂತೆ ವಿಶಿಷ್ಟ ರೀತಿಯಲ್ಲಿ ಉಡುಗೆ ತೊಟ್ಟು ಅದರ ಫೋಟೋಶೂಟ್ ಮಾಡಿಸಿಕೊಂಡು ಜಾಲತಾಣದಲ್ಲಿ ಪೋಸ್ಟ್ ಮಾಡುವುದರಲ್ಲಿ ಉರ್ಫಿಯದ್ದು ಎತ್ತಿದ ಕೈ. ಕೆಲವೊಮ್ಮೆ ಬಟ್ಟೆಯೂ ಇಲ್ಲದೆ, ಕೈಗೆ ಸಿಕ್ಕ ವಸ್ತುಗಳಿಂದ ಖಾಸಗಿ ಅಂಗಗಳನ್ನು ಮುಚ್ಚಿಕೊಂಡು ಪೋಸ್ ನೀಡಿರುವ ಫೋಟೋಗಳೂ ಕಮ್ಮಿಯೇನಲ್ಲ. ದಿನವೂ ಬಟ್ಟೆಗಳಿಂದಲೇ ಟ್ರೋಲ್ (Troll) ಆಗುವುದು ಎಂದರೆ ತುಂಬಾ ಖುಷಿಯ ಹಾಗೆ ಕಾಣಿಸುತ್ತಿದೆ. ಇದೇ ಕಾರಣಕ್ಕೆ ಮುಂಬೈನ ರೆಸ್ಟೋರೆಂಟ್‌ಗೆ ತಮಗೆ ಎಂಟ್ರಿ ಸಿಗಲಿಲ್ಲ, ಯಾರೂ ಮನೆ ಬಾಡಿಗೆ ಕೊಡುತ್ತಿಲ್ಲ ಎಂದೆಲ್ಲಾ ಗೋಳೋ ಅನ್ನುತ್ತಿದ್ದರೂ ನಟಿ ಅರೆಬರೆ ಡ್ರೆಸ್ ರುಚಿ ನೋಡಿ ಅದನ್ನು ಮಾತ್ರ ಬಿಡುತ್ತಿಲ್ಲ.
ಇಂತಿಪ್ಪ ನಟಿಯ ಆಧಾರ್ ಕಾರ್ಡ್ ಎಲ್ಲೋ ಕಳೆದು ಹೋಗಿದೆಯಂತೆ! ವಿಮಾನ ನಿಲ್ದಾಣಕ್ಕೆ ಹೋಗಿದ್ದ ನಟಿ, ಅಲ್ಲಿ ಆಧಾರ್ ಕಾರ್ಡ್ ತೋರಿಸಲು ಪರ್ಸ್ ಹುಡುಕಿದ್ದರು. . ಆದರೆ ಪರ್ಸ್ನಲ್ಲಿ ಕಾರ್ಡ್ ಕಾಣಿಸಲಿಲ್ಲ. ಅಯ್ಯೋ ನನ್ನ ಆಧಾರ್ ಕಾರ್ಡ್ ಮಿಸ್ ಆಗಿದೆ ಎಂದು ಗೋಳೋ ಎಂದಿದ್ದರು. ಉರ್ಫಿ. ನಂತರ ಫೋನ್ನಲ್ಲಿರೋ ಆಧಾರ್ ಕಾರ್ಡ್ ತೋರಿಸಿದ್ರೆ ಸಾಕಾ ಎಂದು ಕೇಳಿದ್ದರು. . ಇದರ ವಿಡಿಯೋ ವೈರಲ್ ಆಗಿದೆ. ಹೇಳಿ ಕೇಳಿ ಈಕೆ ಉರ್ಫಿ. ಇನ್ನು ಕಮೆಂಟಿಗರು ಕೇಳಬೇಕೆ? ತಲೆಗೊಂದರಂತೆ ಕಮೆಂಟ್ ಮಾಡಿದ್ದರು. .
ಉರ್ಫಿಯ ಮತ್ತೊಂದು ರೂಪಕ್ಕೆ ಫ್ಯಾನ್ಸ್ ಭಾವುಕ! ದುಡ್ಡಿಗೆ ಬೆತ್ತಲಾಗುವರ ಮುಂದೆ ನಿಮಗೊಂದು ಸಲಾಂ ಎಂದ ನೆಟ್ಟಿಗರು
ನಿನ್ನ ಡ್ರೆಸ್ಸೇ ಮೈಮೇಲಿನಿಂದ ಕಳೆದು ಹೋಗುತ್ತದೆ, ಇನ್ನು ಆಧಾರ್ ಕಾರ್ಡ್ ಯಾವ ಲೆಕ್ಕ ಎಂದು ಪ್ರಶ್ನಿಸುತ್ತಿದ್ದರು. . ಇನ್ನು ಕೆಲವರು ಇವೆಲ್ಲಾ ಪ್ರಚಾರದ ಗಿಮಿಕ್ ಎಂದಿದ್ದರೆ, ಆ ಸಮಯದಲ್ಲಿ ರೆಕಾರ್ಡ್ ಅವ್ರನ್ನು ಕರ್ಕೊಂಡು ಹೋಗಿದ್ರಾ ಎಂದು ಪ್ರಶ್ನಿಸಿದ್ದರು. . ಇನ್ನು ಕೆಲವರು ನಟಿಯ ಡ್ರೆಸ್ ಹಿಂಭಾಗದ ಮೇಲೆ ತಮ್ಮ ಕಣ್ಣು ಬಿದ್ದಿದೆ ಎಂದಿದ್ದರು. . ಇನ್ನು ಕೆಲವರು ಫುಲ್ ಡ್ರೆಸ್ ಹಾಕಿಕೊಂಡಿದ್ದು ಯಾಕೆ ಎಂದು ಪ್ರಶ್ನಿಸಿದ್ದರು. . ಹೀಗೆ ನಟಿಯ ಬಗ್ಗೆ ನೂರಾರುಕಮೆಂಟ್ಗಳ ಸುರಿಮಳೆಯಾಗಿದೆ.
ಅಷ್ಟಕ್ಕೂ ಉರ್ಫಿ ಬಟ್ಟೆಯಿಂದ ಮಾತ್ರವಲ್ಲದೇ ಕೆಲ ದಿನಗಳ ಹಿಂದೆ ಒಳ್ಳೆಯ ಕಾರ್ಯದಿಂದಲೂ ಜನಮೆಚ್ಚುಗೆ ಗಳಿಸಿದ್ದರು. ಅವರು ಹೋಟೆಲ್ ಪರಿಚಾರಿಕೆಯಾಗಿದ್ದರು. ಹೋಟೆಲ್ ಒಂದರಲ್ಲಿ ದುಡಿದಿದ್ದರು. ದುಡ್ಡು ಸಂಪಾದನೆ ಮಾಡಿದ್ದರು. ಅಷ್ಟಕ್ಕೂ ಉರ್ಫಿ ಹೋಟೆಲ್ ಸರ್ವರ್ ಆಗಿ ಕೆಲಸ ಮಾಡುತ್ತಿರುವುದು ಪ್ರಚಾರಕ್ಕಾಗಿಯೂ ಅಲ್ಲ, ಅಥವಾ ಮಾಮೂಲಿನಂತೆ ಹುಚ್ಚುಹುಚ್ಚಾಗಿ ಆಡುತ್ತಲೂ ಇಲ್ಲ. ಬದಲಿಗೆ ಇಲ್ಲಿ ಈಕೆ ಸಂಪಾದನೆ ಮಾಡುತ್ತಿದ್ದರು. ಈ ಸಂಪಾದನೆಯ ಹಣವನ್ನು ಕ್ಯಾನ್ಸರ್ ಪೇಷೆಂಟ್ ಸಹಾಯಾರ್ಥ ಇರುವ ಸಂಘಕ್ಕೆ ನೀಡಲು ಎಂದು ಹೇಳಿದ್ದರು. ಉರ್ಫಿ ಇಲ್ಲಿ ಪರಿಚಾರಿಕೆಯಾಗಿ ದುಡಿದು ಬಂದ ಹಣವನ್ನು ಕ್ಯಾನ್ಸರ್ ರೋಗಿಗಳಿಗೆ ದಾನ ಮಾಡುತ್ತಿದ್ದಾರೆ. ಇದರ ವಿಡಿಯೋ ವೈರಲ್ ಆಗುತ್ತಲೇ ನಟಿಯ ಬಗ್ಗೆ ಟ್ರೋಲಿಗರಿಗೆ ಇದ್ದ ಭಾವನೆ ಬದಲಾಗಿದೆ. ದುಡ್ಡಿಗಾಗಿ ಬೆತ್ತಲಾಗುವವರ ಮುಂದೆ ನಿನಗಿದೋ ಸಲಾಂ ಎಂದು ಉರ್ಫಿಯನ್ನು ಹಾಡಿ ಹೊಗಳುತ್ತಿದ್ದಾರೆ. ಆದರೆ ಕೆಲವರು ಮಾತ್ರ ಇಲ್ಲಿಯೂ ಉರ್ಫಿಯ ಕಾಲೆಳೆಯುವುದನ್ನು ಬಿಡಲಿಲ್ಲ. ಫುಲ್ ಡ್ರೆಸ್ ನಿನಗೆ ಚೆನ್ನಾಗಿ ಕಾಣಿಸಲ್ಲ ಎಂದು ಕೆಲವರು ಹೇಳಿದರೆ, ಇಲ್ಲಿರುವವರೆಲ್ಲರೂ ಫೇಕ್ ಕಸ್ಟಮರ್ಸ್ ಎನ್ನುತ್ತಿದ್ದಾರೆ. ಶೂಟಿಂಗ್ ಸೆಟ್ ರೆಡಿ ಮಾಡಿಕೊಂಡು ಶೂಟಿಂಗ್ ಮಾಡಿಸಿದ್ಯಾ ಎಂದೆಲ್ಲಾ ಪ್ರಶ್ನಿಸುತ್ತಿದ್ದರು.
ಹಾಟ್ ಬ್ಯೂಟಿ ನೋರಾ ಡ್ಯಾನ್ಸ್ ನೋಡಲು ಎರಡು ಕಣ್ಣು ಸಾಲದು ಅಂತಿದ್ದಾರೆ ನೆಟ್ಟಿಗರು: ಅಂಥದ್ದೇನಿದೆ ಇದ್ರಲ್ಲಿ?