Asianet Suvarna News Asianet Suvarna News

ಸೆಕ್ಸ್‌ನಿಂದ ಕೊರೋನಾ ಗೆಲ್ಲಬಹುದು; ನಟಿಯ ಅಸಭ್ಯ ಹೇಳಿಕೆ!

ಕೊರೋನಾ ವೈರಸ್ ಭೀತಿಯಲ್ಲಿ ಶುರುವಾಯ್ತು ಕಾಂಟ್ರೋವರ್ಸಿ ಕ್ವೀನ್‌ ಶ್ರೀ ರೆಡ್ಡಿ ಹುಚ್ಚಾಟ. ಕೋವಿಡ್ 19 ತಡೆಯದಂತೆ  ಉಪಾಯ ಕೊಟ್ಟ ನಟಿ ವಿರುದ್ಧ ಪೊಲೀಸರ ದೂರು, ನೆಟ್ಟಿಗರು ಫುಲ್ ಗರಂ. 
 

Actress Sri Reddy suggestion to fight Coronavirus trolled by netizens
Author
Bangalore, First Published Mar 22, 2020, 12:28 PM IST
  • Facebook
  • Twitter
  • Whatsapp

'ಕೈಲಾಸ'ವಾಸಿಯಾಗಿರುವ ಸ್ವಯಂ ಘೋಷಿತ ದೇವ ಮಾನವ ನಿತ್ಯಾನಂದ ದೇಹದ ಕೂದಲು ತೆಗೀಬೇಡಿ, ಸೆಕ್ಸ್ ಮಾಡಬೇಡಿ, ಅದೂ, ಇದು ಎಂದು ಹೇಳಿ ನಿತ್ಯಾನಂದ ಮಂತ್ರ ಜಪಿಸಿದರೆ ವೈರಸ್ ದೂರವಾಗುತ್ತದೆ ಎಂಬ ಟಿಪ್ಸ್ ಕೊಟ್ಟಿದ್ದರು. ಬಿಡಿ, ನಿತ್ಯಾನಂದ ಇಂಥ ಬೇಡದ ಟಿಪ್ಸ್ ಕೊಡುವುದು ಇದೇ ಮೊದಲಲ್ಲ. ಅದನ್ನೂ ಯಾರೂ ಸೀರಿಯಸ್ ಆಗಿ ತೆಗೆದುಕೊಳ್ಳುವಂತೆಯೂ ಇರೋಲ್ಲ. ಆದರೆ, ಜನರಲ್ಲಿ ವೈಜ್ಞಾನಿಕ ವಿಧಾನದ ಮೂಲಕ ಎಲ್ಲ ಸೆಲೆಬ್ರಿಟಿಗಳು ಜಾಗೃತಿ ಮೂಡಿಸಲು ತಮ್ಮದೇ ಕೊಡುಗೆ ನೀಡುತ್ತಿದ್ದರೆ, ಈ ತೆಲುಗು ನಟಿಗೆ ಏನಾಗಿದೆ?

ಟಾಲಿವುಡ್‌ ಚಿತ್ರರಂಗದಲ್ಲಿ ನಟನೆಗಿಂತಲೂ ವಿವಾದಗಳಿಂದಲೇ ಖ್ಯಾತವಾಗಿರುವ ನಾಯಕಿ ಶ್ರೀ ರೆಡ್ಡಿ ಕೊರೋನಾ ವೈರಸ್‌ ಹೋಗಲಾಡಿಸಲು ಸೂತ್ರವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ.

ವಿಜಯ್‌ ದೇವರಕೊಂಡ ಕಿಸ್ಸಿಂಗ್ ಸೀನ್‌ಗೆ ಶ್ರೀ ರೆಡ್ಡಿ ಕೊಟ್ಟ ಟಾಂಗ್‌!

ಶ್ರೀ ರೆಡ್ಡಿ ಫೇಸ್‌ಬುಕ್‌ ಖಾತೆಯಲ್ಲಿ 'Constant sex kills corona virus, its proved' ಎಂದು ಬರೆದುಕೊಂಡಿದ್ದಾರೆ. ಇದರ ಅರ್ಥ ಸತತವಾಗಿ ಸೆಕ್ಸ್‌ ಮಾಡುವುದರಿಂದ ಕೊರೋನಾ ವೈರಸ್‌ ದೂರ ಮಾಡಬಹುದು ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ ಎಂದು ಬರೆದಿದ್ದರು. 

Actress Sri Reddy suggestion to fight Coronavirus trolled by netizens

ಯಾವುದೇ ಆಧಾರವಿಲ್ಲದ ಇಂಥ ಹೇಳಿಕೆಯನ್ನು ನೀಡಿರುವ ಶ್ರೀ ರೆಡ್ಡಿ ವಿರುದ್ಧ ಪೊಲೀಸರು ಈಗಾಗಲೇ ದೂರು ದಾಖಲಿಸಿದ್ದಾರೆ. ಅಷ್ಟೇ ಅಲ್ಲದೇ ಆಕೆಯ ಪೋಸ್ಟ್‌ಗೆ ನೆಟ್ಟಿಗರು ಫುಲ್ ಕ್ಲಾಸ್‌ ತೆಗದುಕೊಂಡಿದ್ದಾರೆ. 'ಸೆಕ್ಸ್‌ ಸರಿ ಮಾಡುತ್ತದೆ, ಅಂದ್ರೆ ನೀವೇ ರೋಗಿಗಳೊಂದಿಗೆ ಸೆಕ್ಸ್‌ಗೆ ಇಳಿಯಬಾರದಾ? ' ಎಂಬ ಪ್ರತಿಕ್ರಿಯೆಗಳನ್ನೂ ನೀಡುತ್ತಿದ್ದಾರೆ.

ನೆಟ್ಟಿಗರ ಬಾಯಿಗೆ ಗುರಿಯಾಗಿ, ಪೊಲೀಸರಿಂದ ದೂರು ದಾಖಲಿಸಿಕೊಂಡಿದ್ದರೂ ಸುಮ್ಮನಿರದ ಶ್ರೀ ರೆಡ್ಡಿ 'ಜೀವನವನ್ನು ಬೇಕಾದರೆ ಮದುವೆಯಾಗದ ಹುಡುಗನೊಂದಿಗೆ ಸೆಕ್ಸ್‌ ಮಾಡಿ ಹಾಳು ಮಾಡಿಕೊಳ್ಳಬಹುದು. ಆದರೆ ಈ ಲಿವರ್, ಶ್ವಾಸಕೋಶ ಹಾಳು ಮಾಡಿಕೊಂಡಿರುವ ವೃದ್ಧರು ಅಥವಾ ಅಂಕಲ್ಸ್‌ನಿಂದ ಬೇಡ. ಅವರ ದೇಹಕ್ಕೆ ಬಗ್ಗಲೂ ಆಗುವುದಿಲ್ಲ,' ಎಂದು ಬರೆದುಕೊಂಡು ಮತ್ತೊಮ್ಮೆ ನೆಟ್ಟಿಗರು ತಿರುಗಿ ಬೀಳುವಂತೆ ಪ್ರಜೋದಿಸುತ್ತಿದ್ದಾರೆ.

ಈ ಕೊರೋನಾದಿಂದ ಮನೆಯಲ್ಲಿಯೇ ಬಂಧಿತರಾದ ಶ್ರೀ ರೆಡ್ಡಿಯಂಥವರಿಗೆ ಒಂದು ನಮೂನೆ ತಲೆ ಕೆಟ್ಟಂತೆ ಆಗಿದೆ. ಮನುಷ್ಯ ಸಂಘ ಜೀವಿ. ನಾಲ್ಕು ಜನರೊಂದಿಗೆ ಬೆರೆಯದೇ ಮನೆಯಲ್ಲೇ ಇದ್ದರೆ ಅವನ ತಲೆ ಕೆಡುವುದು ಗ್ಯಾರಂಟಿ. ಬಹುಶಃ ಹಾಗೆಯೇ ಆಗಿರಬೇಕು ಈ ಶ್ರೀ ರೆಡ್ಡಿಗೂ. 

ನಿಂಬೆ ಚುಚ್ಕೊಳ್ಳಿ, ನಿತ್ಯಾನಂದ ಜಪ ಪಠಿಸಿ: ಕೊರೋನಾಗೆ 'ಕೈಲಾಸ'ದೊಡೆಯನ ಟಿಪ್ಸ್!

ಅತ್ತ ರಜನೀಕಾಂತ್ 'ಕೊರೋನಾ ವೈರಾಣು ಕೇವಲ 14 ಗಂಟೆಗಳ ಕಾಲ ಬದುಕಿರತ್ತದೆ...' ಎಂಬೊಂದು ಹೇಳಿಕೆ ಇರುವ ವೀಡಿಯೋ ಪೋಸ್ಟ್ ಮಾಡಿದ್ದರು. ಇದು ಸುಳ್ಳು ಸುದ್ದಿ ಎಂಬ ಕಾರಣಕ್ಕೆ ಟ್ವಿಟರ್ ಆ ವೀಡಿಯೋವನ್ನು ಖುದ್ದು ಡಿಲಿಟ್ ಮಾಡಿದೆ. ಆದರೆ, ತಲೆ ಬುಡವಿಲ್ಲದ ಹೇಳಿಕೆ ನೀಡಿರುವ ಶ್ರೀ ರೆಡ್ಡಿ ಹೇಳಿಕೆಗೆ ಫೇಸ್‌ಬುಕ್ ಯಾವ ಕ್ರಮ ಕೈಗೊಳ್ಳುತ್ತೋ ಕಾದು ನೋಡಬೇಕು. 

ಇಂಥ ಸಂದರ್ಭದಲ್ಲಿ ಮಾತನಾಡದೇ ಹೋದರೂ ಪರ್ವಾಗಿಲ್ಲ. ಬೇಡದ ಹೇಳಿಕೆಗಳನ್ನು ನೀಡುವುದು ಕಡಿಮೆಯಾಗಲಿ. ಈ ಬಗ್ಗೆ ಜನರು ಅದರಲ್ಲಿಯೂ ಸೆಲೆಬ್ರಿಟಿಗಳು ಹೆಚ್ಚೆಚ್ಚು ಸೂಕ್ಷ್ಮವಾಗಿ ಯೋಚಿಸಿ ಮಾತನಾಡುವುದು ಒಳ್ಳೆಯದು. ಈ ಬಗ್ಗೆ ದಯವಿಟ್ಟು ಗಮನ ಹರಿಸಿ...

ಮಾರ್ಚ್ 22ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us:
Download App:
  • android
  • ios