ಟಾಲಿವುಡ್‌‌ನ ಒನ್ ಆ್ಯಂಡ್ ಒನ್ಲಿ ಕಾಂಟ್ರವರ್ಷಿಯಲ್ ಕ್ಷೀನ್‌ ಎಂದು ತಮಗೆ ತಾವೇ ಪಟ್ಟಕಟ್ಟಿಕೊಂಡು ಹುಡುಕಿ ಹುಡುಕಿ ವಿವಾದ ಸೃಷ್ಟಿಸಿಕೊಳ್ಳುವ ನಟಿ ಶ್ರೀ ರೆಡ್ಡಿ ಈದೀಗ ವಿಜಯ್ ದೇವರಕೊಂಡ ಅವರನ್ನೂ ಟಾರ್ಗೆಟ್ ಮಾಡಿದ್ದಾರೆ. 

'ಅರ್ಜುನ್‌ ರೆಡ್ಡಿ' ಚಿತ್ರದ ಮೂಲಕ ಟಾಲಿವುಡ್‌ಗೆ ಕಾಲಿಟ್ಟ ವಿಜಯ್‌ ದೇವರಕೊಂಡ 'ಗೀತಾ ಗೋವಿಂದಂ' ಚಿತ್ರದ ನಂತರ ಕಿಸ್ಸಿಂಗ್‌ ಬಾಯ್‌ ಎಂದೇ ಹೆಸರು ಪಡೆದುಕೊಂಡವರು. ತಾವು ಆಯ್ಕೆ ಮಾಡುತ್ತಿದ್ದ ಪ್ರತಿಯೊಂದು ಚಿತ್ರದಲ್ಲೂ ಮಿಸ್‌ ಇಲ್ಲದೇ ಕಿಸ್ಸಿಂಗ್‌ ದೃಶ್ಯ ಇರುವಂತೆ ನೋಡಿಕೊಳ್ಳುತ್ತಿದ್ದರು. ಅಷ್ಟೇ ಅಲ್ಲದೇ ಕರಣ್ ಜೋಹಾರ್‌ ನಿರ್ದೇಶನದ 'ಫೈಟರ್‌' ಚಿತ್ರದಲ್ಲಿಯೂ ಅನನ್ಯ ಪಾಂಡೆ ಜೊತೆ ರೊಮ್ಯಾನ್ಸ್‌ ಮಾಡುತ್ತಿರುವುದನ್ನು ನೋಡಿದ್ರೆ ಅಲ್ಲೂ ಕಿಸ್ಸಿಂಗ್‌ ಸೀನ್‌ ಮಿಸ್‌ ಆಗಲು ಸಾಧ್ಯವೇ ಇಲ್ಲ ಎನ್ನುತ್ತಾರೆ ಅಭಿಮಾನಿಗಳು. ಇದಕ್ಕೆ ಶ್ರೀ ರೆಡ್ಡಿ ಪ್ರತಿಕ್ರಿಯಿಸಿದ್ದಾರೆ...

ಹೆಲ್ಮೆಟ್‌ ಇಲ್ಲದೆ ದೇವರಕೊಂಡ ಸ್ಟಂಟ್‌; ಅನನ್ಯ ಪಾಂಡೆ ಜೊತೆ ರೋಡಲ್ಲೇ ರೊಮ್ಯಾನ್ಸ್‌!

'ಮಿಸ್ಟರ್‌ ವಿಜಯ್‌ ದೇವರಕೊಂಡ ನೀವು ತುಂಬಾ ರಣ್ವೀರ್‌ ಸಿಂಗ್‌ ಅವರನ್ನು ಇಮಿಟೇಟ್‌ ಮಾಡುತ್ತಿದ್ದೀರಾ, ನಮಗೆ ಜೆರಾಕ್ಸ್‌ ಕಾಪಿ ಬೇಡ, ಅಸಲಿ ಬೇಕು' ಎಂದು ಕಾಮೆಂಟ್‌ ಮಾಡಿದ್ದಾರೆ. ಇನ್ನು ಕಿಸ್ಸಿಂಗ್ ಸೀನ್‌ ಬಗ್ಗೆ ಸುಮ್ಮನೆ ಇರುತ್ತಾರಾ?

'ವಿಜಯ್‌ ನೀವು ಊಟಕ್ಕಿಂತ ಹೆಚ್ಚಾಗಿ ಲಿಪ್‌ಸ್ಟಿಕ್‌ ತಿನ್ನುತ್ತೀರಾ ಅನ್ಸುತ್ತೆ. ಹೆಚ್ಚು ಲಿಪ್‌ಸ್ಟಿಕ್‌ ತಿಂದರೆ ಹೆಚ್ಚು ಅವಕಾಶ ಸಿಗುತ್ತೆ ಅಂತಾನಾ?' ಎಂದೂ ಕಾಮೆಂಟ್ ಮಾಡಿದ್ದರೆನ್ನಲಾಗಿದೆ. ಯಾರು ಎಷ್ಟೇ ಕಾಮೆಂಟ್‌ ಮಾಡಿದರೂ ಕೇರ್ ಮಾಡದ ವಿಜಯ್‌ ದೇವರಕೊಂಡ ಶ್ರೀ ರೆಡ್ಡಿ ಕಾಮೆಂಟ್‌ಗೆ ತಲೆ ಕೆಡಿಸಿಕೊಳ್ಳುತ್ತಾರಾ? ನೋಡೋಣ ಈ ವಿವಾದ ಎಲ್ಲೀವರೆಗೆ ಹೋಗುತ್ತೆ ಅಂತ?

'World famous Lover' ಆಗಲು ಹೋಗಿ, ಪಬ್ಲಿಕ್ಕಲ್ಲಿ ಲುಂಗಿ ಉದುರಿಸಿಕೊಂಡ ವಿಜಯ್?

ಮಾರ್ಚ್ 13ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ