Asianet Suvarna News Asianet Suvarna News

ನಟಿ ಶಿಲ್ಪಾ ಶೆಟ್ಟಿಗೆ ಪತಿ ಡಿವೋರ್ಸ್‌?, ರಾಜ್ ಕುಂದ್ರಾ ಪೋಸ್ಟ್ ವೈರಲ್

ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಸೋಷಿಯಲ್ ಮೀಡಿಯಾ ಪೋಸ್ಟ್ ಭಾರೀ ವೈರಲ್ ಆಗಿದೆ. 

actress Shilpa Shetty Raj Kundra Spark DIVORCE Rumours srb
Author
First Published Oct 20, 2023, 11:43 AM IST

ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಸೋಷಿಯಲ್ ಮೀಡಿಯಾ ಪೋಸ್ಟ್ ಭಾರೀ ವೈರಲ್ ಆಗಿದೆ. ಈ ಪೋಸ್ಟ್ ಅದೆಷ್ಟು ಬಿಗ್ ಬ್ಯಾಂಗ್ ಆಗಿದೆ ಎಂದರೆ, ಈ ಮ್ಯಾಟರ್ ಈಗ ಇಡೀ ಜಗತ್ತನ್ನೇ ಸುತ್ತುತ್ತಿದೆ.  ರಾಜ್ ಕುಂದ್ರಾ ಮತ್ತು ಶಿಲ್ಪಾ ಶೆಟ್ಟಿ 2009 ರಲ್ಲಿ ವಿವಾಹವಾದರು. ಅವರಿಗೆ ವಿಯಾನ್ ಮತ್ತು ಸಮೀಶಾ ಎಂಬ ಇಬ್ಬರು ಮಕ್ಕಳಿದ್ದಾರೆ. ರಾಜ್‌ ಅವರ ನಿಗೂಢ ಪೋಸ್ಟ್ ಬಗ್ಗೆ, ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು " ಶಿಲ್ಪಾ ಶೆಟ್ಟಿಯಿಂದ ವಿಚ್ಛೇದನವನ್ನು ಪಡೆಯುತ್ತಿದ್ದಾರೆಯೇ" ಎಂದು ಇಂಟರ್ನೆಟ್‌ನಲ್ಲಿ ಅನೇಕರು ಚರ್ಚೆ ನಡೆಸುತ್ತಿರುವಾಗ, ಕೆಲವರು ಅವರ ಜೀವನಚರಿತ್ರೆ UT 69 ಬಿಡುಗಡೆಗೆ ಮುಂಚಿತವಾಗಿ ಇದು ಪ್ರಚಾರದ ಗಿಮಿಕ್ ಎಂದು ಹೇಳುತ್ತಿದ್ದಾರೆ.

ನಟಿ ಶಿಲ್ಪಾ ಶೆಟ್ಟಿ ಬಾಲಿವುಡ ಸಿನಿಮಾ ತಾರೆ ಎಂಬುದು ಎಲ್ಲರಿಗೂ ಗೊತ್ತು. ಆದರೆ, ಶಿಲ್ಪಾ ಪತಿ ರಾಜ್ ಕುಂದ್ರಾ ಬಿಸಿನೆಸ್‌ಮ್ಯಾನ್. ಅಚ್ಚರಿ ಎಂದರೆ ರಾಜ್ ಕುಂದ್ರಾ ಬಿಸಿನೆಸ್‌ ಏನು ಎಂಬುದು ತೀರಾ ಇತ್ತೀಚಿನವರೆಗೂ ಗೌಪ್ಯವಾಗಿಯೇ ಇತ್ತು. ಅದರೆ, ಅವರು ನೀಲಿ ಚಿತ್ರಗಳನ್ನು ನಿರ್ಮಿಸುತ್ತಿದ್ದಾರೆ, ಅದರಿಂದಲೇ ಬಹಳಷ್ಟು ಹಣ ಮಾಡುತ್ತಿದ್ದಾರೆ ಎಂಬ ಆಪಾದನೆ ಬಂದಿತ್ತು. ಅದೇ ವಿಷಯಕ್ಕೆ ಸಂಬಂಧಪಟ್ಟು ಅವರು ಕೇಸ್ ಎದುರಿಸಿ ಇದೀಗ ಜೂಲು ಪಾಲಾಗಿದ್ದಾರೆ. ಸದ್ಯ ಅವರು ಜೈಲಿನಲ್ಲಿ ಪೊಲೀಸ್ ವಿಚಾರಣೆ ಎದುರಿಸುತ್ತಿದ್ದು, ಅಲ್ಲಿ ಮುಖಕ್ಕೆ ಮಾಸ್ಕ್ ಹಾಕಿಕೊಂಡಿದ್ದಾರೆ. ಇದೇ ವೇಳೆ ಶಿಲ್ಪಾ ಪತಿ ರಾಜ್ ಕುಂದ್ರಾ ಸೋಷಿಯಲ್ ಮೀಡಿಯಾದಲ್ಲಿ ಹಾಕಿರುವ ಪೋಸ್ಟ್ ಭಾರೀ ವೈರಲ್ ಆಗುತ್ತಿದೆ. 

ರಾಜ್ ಕುಂದ್ರಾ ಸೋಷಿಯಲ್ ಮೀಡಿಯಾ ಪೋಸ್ಟ್ ನೋಡಿ ಹಲವರು ತರಹೇವಾರಿ ಕಾಮೆಂಟ್ಸ್‌ ಮಾಡುತ್ತಿದ್ದಾರೆ. ಹಲವರು ಈ ಬಗ್ಗೆ ಅಪಹಾಸ್ಯ ಮಾಡುತ್ತಿದ್ದು, ಇದು ಮುಂಬರುವ ಸಿನಿಮಾಕ್ಕೆ ಪ್ರಚಾರದ ಗಿಮಿಕ್ ಎಂದು ಕಾಮೆಂಟ್ ಮಾಡಿದ್ದಾರೆ. ಕೆಲವರು 'Separated from Mask and Shame ...' ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೂ ಹಲವರು ರಾಜ್ ಕುಂದ್ರಾ ಪೋಸ್ಟ್ ನೋಡಿ 'ಹಂಡತಿ ಶಿಲ್ಪಾರನ್ನು ಡಿವೋರ್ಸ್ ಮಾಡುತ್ತಿದ್ದೀರಾ?' ಎಂದು ನೇರವಾಗಿಯೇ ರಾಜ್ ಕುಂದ್ರಾರನ್ನು ಪ್ರಶ್ನಿಸಿದ್ದಾರೆ. ಆದರೆ, ಇದೀಗ ರಾಜ್ ಕುಂದ್ರಾ ಹಾಕಿರುವ ಈ ಪೋಸ್ಟ್ ಜಸ್ಟ್ ಫಾರ್ ಪ್ರಚಾರಕ್ಕಾಗಿ ಮಾಡಿದ ಗಿಮಿಕ್ ಎನ್ನಲಾಗುತ್ತಿದೆ. ಸತ್ಯವೇನು ಎಂಬುದನ್ನು ಕಾದು ನೋಡಬೇಕಷ್ಟೇ!

 

 

Follow Us:
Download App:
  • android
  • ios