Asianet Suvarna News Asianet Suvarna News

ಪಾಕಿಸ್ತಾನ ಆಯ್ತು, ಈಗ ಪ್ಯಾಲೆಸ್ತೀನ್​ಗೆ ಹೊರಟ್ರಾ ರಾಖಿ? ಬಂದೂಕು ಹಿಡಿದ ನಟಿ ಸಕತ್​ ಟ್ರೋಲ್​!

ನಟಿ ರಾಖಿ ಸಾವಂತ್​ ಸೈನಿಕರ ಸಮವಸ್ತ್ರ ತೊಟ್ಟು ಬಂದೂಕು ಹಿಡಿದಿದ್ದಾರೆ. ಸೈನಿಕರ ಸಮವಸ್ತ್ರ ಧರಿಸಿದ್ದಕ್ಕೆ ಹಿಗ್ಗಾಮುಗ್ಗ ತರಾಟೆಗೆ ಒಳಗಾಗಿದ್ದು ಬಂದೂಕು ಹಿಡಿದು ಪ್ಯಾಲಿಸ್ತೀನ್​ಗೆ ಹೋಗು ಎನ್ನುತ್ತಿದ್ದಾರೆ ನೆಟ್ಟಿಗರು. 
 

Actress Rakhi Sawant is wearing a soldiers uniform and holding a gun troll suc
Author
First Published Oct 13, 2023, 12:47 PM IST

ವಿವಾದಗಳ ರಾಣಿ ರಾಖಿ ಸಾವಂತ್ ರಾಖಿ ಸಾವಂತ್ ಮೈಸೂರಿನ ಯುವಕ ಆದಿಲ್​ ಖಾನ್​ ಅವರನ್ನು ಮದುವೆಯಾಗಿ ಇತ್ತೀಚೆಗಷ್ಟೇ ಧರ್ಮ ಬದಲಿಸಿ ಫಾತಿಮಾ ಆಗಿದ್ದಾರೆ. ನಿಜವಾಗಿ ರಾಖಿ ತಾನು ಆದಿಲ್ ನನ್ನು ಮದುವೆಯಾಗಲು ಇಸ್ಲಾಂಗೆ ಮತಾಂತರಗೊಂಡಿರುವುದಾಗಿ ಹೇಳಿಕೊಂಡಿದ್ದಾರೆ.  ಇಷ್ಟಾದರೂ ಗಂಡನ ವಿರುದ್ಧ ಇಲ್ಲಸಲ್ಲದ ಆರೋಪ ಹೊರಿಸಿ ಅವರನ್ನು ಜೈಲಿಗೆ ಕಳುಹಿಸಿದ್ದ ರಾಖಿ ಸಾವಂತ್​,   ಮೆಕ್ಕಾಕ್ಕೆ ಹೋಗಿ ಉಮ್ರಾ  ನೆರವೇರಿಸಿದ್ದಾರೆ. ತಾವೀಗ ರಾಖಿ ಅಲ್ಲ, ಫಾತೀಮಾ (Phatima) ಎಂದು ಕರೆಯಿರಿ ಎಂದೂ ಈ ಸಂದರ್ಭದಲ್ಲಿ ಅವರು ಹೇಳಿದ್ದಾರೆ. ಅಷ್ಟಕ್ಕೂ  ಆದಿಲ್​ ಖಾನ್​ ದುರ್ರಾನಿ ಅವರ ಜೊತೆಗಿನ ರಾಖಿ ಮದುವೆಯ ಕಥೆ ಸಿನಿಮಾಕ್ಕಿಂತಲೂ ಕುತೂಹಲವಾಗಿದೆ. ಮೈಸೂರಿನ ಯುವಕ ಆದಿಲ್​ ಖಾನ್​ ಮದುವೆಯನ್ನು ನಿರಾಕರಿಸಿದ್ದು, ರಾಖಿ ರಂಪಾಟ ಮಾಡಿದ್ದು, ಕೊನೆಗೂ ಆದಿಲ್​  ಮದುವೆಯನ್ನು ಒಪ್ಪಿಕೊಂಡಿದ್ದು ಎಲ್ಲವೂ ಯಾವ ಸಿನಿಮಾ ಕಥೆಗಿಂತಲೂ ಭಿನ್ನವಾಗಿರಲಿಲ್ಲ. ಎಲ್ಲವೂ ಸುಖಾಂತ್ಯಗೊಂಡಿತು ಎನ್ನುವಾಗಲೇ  ಆದಿಲ್ ತಮಗೆ ಮೋಸ ಮಾಡುತ್ತಿದ್ದಾರೆ, ಹಲ್ಲೆ ಮಾಡಿದ್ದಾರೆ, ಇನ್ನೊಬ್ಬಳ ಜೊತೆ ಅಕ್ರಮ ಸಂಬಂಧ ಹೊಂದಿದ್ದಾರೆ,  ಆದಿಲ್‌ಗಾಗಿ   ಇಸ್ಲಾಂಗೆ ಮತಾಂತರ ಮಾಡಿಕೊಂಡಿರುವೆ. ನಾನು ಇಸ್ಲಾಂ ಧರ್ಮವನ್ನು ಒಪ್ಪಿಕೊಂಡು ಆದಿಲ್‌ನ ಮದುವೆ ಆಗಿದ್ದೇನೆ ಎಂದೆಲ್ಲಾ ಆರೋಪಿಸಿದ್ದ ರಾಖಿ ಕೊನೆಗೆ ದೂರು ಕೊಟ್ಟರು. ಇದರಿಂದ ಆದಿಲ್​ (Adil Khan Durrani) ವಿರುದ್ಧ ಎಫ್​ಐಆರ್​ ದಾಖಲಾಗಿದ್ದು ಸದ್ಯ ಅವರು ಜೈಲಿಗೆ ಹೋದದ್ದು, ನಂತರ ಅವರು ಬಿಡುಗಡೆಗೊಂಡದ್ದು ಎಲ್ಲವೂ ಸಿನಿಮೀಯವೇ.

 
ಮೊನ್ನೆಯಷ್ಟೇ, ಹೊಸ ಕಾರು ಖರೀದಿಸಿದ್ದೇನೆ. ಅದನ್ನು ತೋರಿಸುವೆ ಎಂದು ಪಾಪರಾಜಿಗಳನ್ನು ಕರೆದುಕೊಂಡು ಹೋಗಿದ್ದ ರಾಖಿ,  ನನಗೆ  ತೊಂದ್ರೆ ಕೊಡಬೇಡಿ. ನಾನೂ ಪಾಕಿಸ್ತಾನಕ್ಕೆ ಹೋಗಿ ಬಿಡ್ತೇನೆ ಎಂದರು. ಸಾನಿಯಾ ಮಿರ್ಜಾ ಹೋಗಿಲ್ವಾ ಹಾಗೆ ನಾನೂ ಹೋಗ್ತೇನೆ ಎಂದಿದ್ದರು. ಇದಕ್ಕೆ ಬಹಳಷ್ಟು  ಮಂದಿ ಈ ಕೆಲಸವನ್ನು ಮೊದಲು ಮಾಡು ಎಂದಿದ್ದರು, ಹೋಗುವಾಗ ನಿನ್ನ ಬಳಗವನ್ನೂ ಕರೆದುಕೊಂಡು ಹೋಗು ಎಂದಿದ್ದರು.  ನಿಮ್ಮ ನಾಟಕ ನೋಡಿ ಸಾಕಾಗಿ ಹೋಗಿದೆ. ಆದಷ್ಟು ಬೇಗ ಭಾರತ ಬಿಟ್ಟು ತೊಲಗಿ ಎಂದಿದ್ದರು. ಇನ್ನು ಕೆಲವರು ಪಾಕಿಸ್ತಾನದ ಸ್ಥಿತಿ ಹೇಗಿದೆ ಎನ್ನೋದು ಸ್ವಲ್ಪನಾದ್ರೂ ಗೊತ್ತಿದ್ಯಾ ಎಂದು ಪ್ರಶ್ನಿಸಿದರೆ, ಇನ್ನು ಕೆಲವರು ಅದಕ್ಕೆ ಪ್ರತಿಕ್ರಿಯಿಸಿ ಅವ್ರು ಹೋದರೆ ಹೋಗ್ಲಿ, ಅಲ್ಲಿಯ ಪರಿಸ್ಥಿತಿ ಬಗ್ಗೆ ಹೇಳಿ ಅವರನ್ನು ತಡಿಯಬೇಡಿ ಎಂದಿದ್ದರು. 

ಪಾಕ್​ಗೆ ಹೋಗ್ತಾರಂತೆ ರಾಖಿ ಸಾವಂತ್​: ನಿನ್​ ಬಳಗವನ್ನೂ ಕರ್ಕೊಂಡು ಹೋಗು ಅಂದ ಫ್ಯಾನ್ಸ್​!

ಇದೀಗ ಡ್ರಾಮಾ ಕ್ವೀನ್​ ಬಂದೂಕು ಹಿಡಿದು ದೇಶಕ್ಕಾಗಿ ಪ್ರಾಣ ಕೊಡಲೂ ಸಿದ್ಧ ಎನ್ನುವ ದಿಲ್​ ದಿಯಾ ಹೈ ಜಾನ್​ ಭೀ ದೇಂಗೆ ಹಾಡನ್ನು ಗುನುಗಿದ್ದಾರೆ. ಭಾರತೀಯ ಸೈನಿಕರ ಸಮವಸ್ತ್ರ ತೊಟ್ಟ ನಟಿಯನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ ನೆಟ್ಟಿಗರು. ಬಂದೂಕು ಹಿಡಿದು ಪ್ಯಾಲೆಸ್ತೀನ್​ಗೆ ಹೋಗು. ಅಲ್ಲಿ ನಿನ್ನ ಜೀವ ಕೊಡು, ಹೇಗಿದ್ದರೂ ಮತಾಂತರಗೊಂಡಿರುವೆಯಲ್ಲ, ನಿನ್ನವರು ಅಲ್ಲಿ ಕಾಯುತ್ತಿದ್ದಾರೆ ಹೋಗು ಎಂದು ಹೇಳುತ್ತಿದ್ದಾರೆ. ಸೈನಿಕರ ಸಮವಸ್ತ್ರ ತೊಟ್ಟು ಅವರನ್ನು ಅವಮಾನ ಮಾಡಬೇಡ ಎಂದು ಹಲವರು ನಟಿಯ ವಿರುದ್ಧ ಕಿಡಿ ಕಾರುತ್ತಿದ್ದಾರೆ. ಪಾಕಿಸ್ತಾನಕ್ಕೆ ಹೋಗುವೆ ಅಂದಿದ್ರಲ್ಲ, ಅಲ್ಲಿಂದ ನೇರವಾಗಿ ಪ್ಯಾಲಿಸ್ತೀನ್​ಗೆ ಹೋಗಿ ನಿನ್ನವರ ಜೊತೆ ಸೇರಿಕೋ. ಅಲ್ಲಿ ಜೀವ ಕೊಡು ಎಂದು ಗಂಭೀರವಾಗಿ ರಾಖಿ ವಿರುದ್ಧ ಟ್ರೋಲ್​ ಮಾಡಲಾಗುತ್ತಿದೆ. 

 ರಾಖಿ ಸಾವಂತ್​ ಅವರ ಹುಚ್ಚಾಟ ನೋಡಿ ಹಲವರು,  ಈಕೆ ಒಬ್ಬ ಸೈಕೋಪಾತ್​, ಮಾನಸಿಕ ತೊಂದರೆಯಿಂದ ಬಳಲುತ್ತಿರುವುದಾಗಿ ಹಲವರು ಹೇಳುತ್ತಿದ್ದಾರೆ. ಅದೇ ಇನ್ನೊಂದೆಡೆ,  ಆದಿಲ್​  ಖಾನ್​ ಅವರು ರಾಖಿ ವಿರುದ್ಧ  ಆರೋಪ ಮಾಡಿದ್ದು, ನಾನು ಈಕೆಗೆ ಆರನೇ ಗಂಡಸಾಗಿ ಪ್ರವೇಶ ಮಾಡಿದೆ. ನನ್ನನ್ನೂ ಬಿಟ್ಟು ಏಳನೆಯವನ ಹುಡುಕಾಟದಲ್ಲಿ ಇದ್ದಾಳೆ. ಅವಳಿಗೆ ಬೇಕಿರುವುದು ಗಂಡಸರಲ್ಲ, ಬದಲಿಗೆ ಅವರ ಹಣ ಎಂದಿದ್ದಾರೆ.  ರಾಖಿ ತನ್ನ ವಿರುದ್ಧ ಎದುರಾದವರಿಗೆ ಸುಪಾರಿ ಕೊಟ್ಟು ಕೊಲ್ಲಿಸಲೂ ಹೇಸುವವಳಲ್ಲ. ಅವಳು ನನ್ನನ್ನೂ ಕೊಲ್ಲಲು ಬಯಸಿದ್ದಳು, ಇದರ ಪುರಾವೆ ಕೂಡ ಕೊಡಬಲ್ಲೆ. ಆಕೆಯ ಮಾಜಿ ಪತಿ ರಿತೇಶ್​ ಅವರನ್ನೂ ಕೊಲ್ಲಲು ಮಾಡಿದ್ದಳು ಎಂದಿದ್ದರು. 

ಡ್ರೆಸ್​ ಒಳಗೆ ಕೈಹಾಕಿ ಕ್ಯಾಮೆರಾಕ್ಕೆ ಸಿಕ್ಕಿಬಿದ್ದ ಜಾಹ್ನವಿ ಕಪೂರ್​: ಇರುವೆ ಹೊಕ್ಕಿತ್ತಾ ಅಂದ ಫ್ಯಾನ್ಸ್​!
 

Follow Us:
Download App:
  • android
  • ios