Asianet Suvarna News Asianet Suvarna News

ನಾನು ಸತ್ತರೆ ಇವರೇ ಕಾರಣ... ಡೆತ್​ ನೋಟ್​ ಬರೆದ ವರ್ಷಧಾರೆ ನಟಿ Payal Ghosh

ಬಹುಭಾಷೆಗಳಲ್ಲಿ ನಟಿಸಿ ಮನೆಮಾತಾಗಿರುವ ನಟಿ ಪಾಯಲ್​ ಘೋಷ್​ ಅರೆಬರೆ ಸ್ಯೂಸೈಡ್​  ನೋಟ್​ ಬರೆದು ಸಾಮಾಜಿಕ ಜಾಲತಾಣದಲ್ಲಿ ಶೇರ್​  ಮಾಡಿಕೊಂಡಿದ್ದಾರೆ. ಏನಿದೆ ಅದರಲ್ಲಿ?
 

Payal Ghosh shares an incomplete suicide note in instagram
Author
First Published Mar 14, 2023, 3:02 PM IST

ಹಿಂದಿ, ಇಂಗ್ಲಿಷ್, ತೆಲುಗು ಮತ್ತು ಕನ್ನಡದ ವಿವಿಧ ರೀತಿಯ ಸಿನಿಮಾಗಳಲ್ಲಿ ನಟಿಸಿರುವ ಬಹುಭಾಷಾ ನಟಿ  ಪಾಯಲ್​ ಘೋಷ್​ (Payal Ghosh) ಸಾಮಾಜಿಕ ಜಾಲತಾಣದಲ್ಲಿ ಆತ್ಮಹತ್ಯೆಯ ಪತ್ರ (suicide note) ಶೇರ್​ ಮಾಡಿಕೊಂಡು  ಸಂಚಲನ ಮೂಡಿಸಿದ್ದಾರೆ.  ಈಕೆಯ ಸ್ಯೂಸೈಡ್​ ನೋಟ್​, ಪೂರ್ಣಗೊಳ್ಳಲಿಲ್ಲ. ಇದು ಆಕೆಯ ಅಭಿಮಾನಿಗಳನ್ನು ಇನ್ನಷ್ಟು ಆತಂಕಕ್ಕೆ ತಳ್ಳಿದೆ. ಎರಡು ದಿನಗಳ ಹಿಂದಷ್ಟೇ ಮಾನಸಿಕ ಆರೋಗ್ಯದ ಕುರಿತು ಮಾತನಾಡಿದ್ದ ನಟಿ, ಈಗ ಆತ್ಮಹತ್ಯೆ ನೋಟ್​ ಬರೆದಿಟ್ಟಿರುವುದರಿಂದ ಎಲ್ಲೆಡೆ ಆತಂಕ ಮನೆಮಾಡಿದೆ. ಕಳೆದ ವರ್ಷ ಮುಸುಕುಧಾರಿ ದುಷ್ಕರ್ಮಿಗಳ ಗುಂಪೊಂದು ತಮ್ಮ ಮೇಲೆ ಹಲ್ಲೆ ಮಾಡಿ, ಆಸಿಡ್ ದಾಳಿ ನಡೆಸಲು ಪ್ರಯತ್ನಿಸಿದರು ಎಂದು  ನಟಿ ಪಾಯಲ್ ಘೋಷ್ ಹೇಳಿದ್ದರು.  ಔಷಧಿ ತರುವ ಸಲುವಾಗಿ ರಾತ್ರಿ 10 ಗಂಟೆ ಸುಮಾರಿಗೆ ನಟಿ ಪಾಯಲ್ ಘೋಷ್ ಮನೆಯಿಂದ ಹೊರಗೆ ಬಂದಿದ್ದರು. ಔಷಧಿ ಕೊಂಡುಕೊಂಡು ಕಾರಿನ ಬಳಿ ಬರುವಾಗ ಮುಸುಕುಧಾರಿ ದುಷ್ಕರ್ಮಿಗಳ ಗುಂಪೊಂದು ಪಾಯಲ್ ಘೋಷ್‌ ಮೇಲೆ ಹಲ್ಲೆ ನಡೆಸಿದೆ. ಪಾಯಲ್ ಘೋಷ್ ಕೈಗೆ ರಾಡ್‌ನಿಂದ ಪೆಟ್ಟು ಬಿದ್ದಿದೆ. ಮುಸುಕುಧಾರಿ ದುಷ್ಕರ್ಮಿಗಳ ಕೈಯಲ್ಲಿದ್ದ ಬಾಟಲ್‌ಅನ್ನು ಗಮನಿಸಿದ್ದ ಪಾಯಲ್ ಘೋಷ್, ಅದು ಆಸಿಡ್ ಇರಬಹುದು ಎಂದು ಶಂಕಿಸಲಾಗಿತ್ತು. ಅದರ ಬಳಿಕ ಬಹಳ ಕುಗ್ಗಿ ಹೋಗಿದ್ದ ನಟಿ, ಈಗ ಅರೆ ಬರೆದಿರುವ ಸ್ಯೂಸೈಡ್​ ನೋಟ್​ (Suicide Note) ಬರೆದಿರುವುದು ಮತ್ತಷ್ಟು ಆತಂಕಕ್ಕೀಡು ಮಾಡಿದೆ.

33 ವರ್ಷದ ಪಾಯಲ್ ತನ್ನ ಟಿಪ್ಪಣಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವಾಗ ಯಾವುದೇ ಶೀರ್ಷಿಕೆಯನ್ನು ಬರೆದಿಲ್ಲ. ಈ ಸೂಸೈಡ್ ನೋಟ್ ಬರೆದಿರುವ ಪೇಪರ್ ಮುಂಬೈನ ತಾಜ್ ಮಹಲ್ ಟವರ್ ಎಂದು ಉಲ್ಲೇಖಗೊಂಡಿದೆ. ಅದರಲ್ಲಿ ಪಾಯಲ್​ ಘೋಷ್​ ಅವರು, 'ನಾನು ಪಾಯಲ್ ಘೋಷ್, ನಾನು ಆತ್ಮಹತ್ಯೆ ಅಥವಾ ಹೃದಯಾಘಾತದಿಂದ ಸತ್ತರೆ ಅದಕ್ಕೆ ಕಾರಣರಾದವರು..." ಎಂದು  ಬರೆದುಕೊಂಡಿದ್ದಾರೆ. ಅವರು ಯಾರ ಹೆಸರನ್ನೂ ಹೇಳಿಲ್ಲ, ಯಾವುದೇ ಸೂಚನೆಯನ್ನೂ ನೀಡಿಲ್ಲ. ಇದರಿಂದ ಜನರೂ ಗೊಂದಲಕ್ಕೆ ಸಿಲುಕಿದ್ದಾರೆ. ನೂರಾರು ಮಂದಿ ಕಮೆಂಟ್​ ಬಾಕ್ಸ್‌ನಲ್ಲಿ (Comment Box) ತಮ್ಮ ಕಳವಳವನ್ನು ವ್ಯಕ್ತಪಡಿಸುತ್ತಿದ್ದಾರೆ. ಆಕೆಯ   ಯೋಗಕ್ಷೇಮದ ಬಗ್ಗೆ ಕೇಳುತ್ತಿದ್ದಾರೆ. ಅದೇ ಸಮಯದಲ್ಲಿ, ಈ ಸೂಕ್ಷ್ಮ ವಿಷಯದಲ್ಲೂ ಪಾಯಲ್ ಅವರನ್ನು ಕೆಲವರು  ಟ್ರೋಲ್ ಕೂಡ ಮಾಡುತ್ತಿದ್ದಾರೆ.

ಪಾಯಲ್ ಘೋಷ್‌ಗೆ ಪ್ರೀತಿಯಲ್ಲಿ ಮೋಸ ಮಾಡಿದ್ದರಂತೆ ಕ್ರಿಕೆಟಿಗ ಇರ್ಫಾನ್ ಪಠಾಣ್ !
 
ಹಲವರು ದಯವಿಟ್ಟು ಇಂಥ ಕೆಟ್ಟ ನಿರ್ಧಾರ ತೆಗೆದುಕೊಳ್ಳಬೇಡಿ. ನಿಮ್ಮ ಮನಸ್ಥಿತಿಯನ್ನು ಸರಿ ಮಾಡಿಕೊಳ್ಳಲು ಆಸ್ಪತ್ರೆಗೆ ಹೋಗಿ, ಪೊಲೀಸರ ನೆರವು ಪಡೆಯಿರಿ, ಅವರು ಖಂಡಿತವಾಗಿಯೂ ನಿಮಗೆ ನೆರವಾಗುತ್ತಾರೆ ಎಂಬಿತ್ಯಾದಿಯಾಗಿ ಕಮೆಂಟ್​ಗಳ ಸುರಿಮಳೆಯಾಗುತ್ತಿದೆ. ನಿಮ್ಮನ್ನು  ಕಡೆಗಣಿಸುವವರಿಗಿಂತಲೂ  ನಿಮ್ಮನ್ನು ಪ್ರೀತಿಸುವವರೇ ಹೆಚ್ಚು ಎಂಬುದನ್ನು ಮರೆಯಬೇಡಿ. ನಿಮಗೆ ಒಂದೇ ಒಂದು ಜೀವನ ಸಿಗುವುದು, ಚೆನ್ನಾಗಿ ಜೀವಿಸಿ ಎಂದು ಇನ್ನು ಕೆಲವರು ಪಾಯಲ್​ ಅವರಿಗೆ ಸ್ಥೈರ್ಯ ತುಂಬುತ್ತಿದ್ದಾರೆ.  'ನೋಡಿ, ಈ ಜಗತ್ತಿನಲ್ಲಿ ಯಾವುದೂ ಶಾಶ್ವತವಲ್ಲ ಎಂದು ನಾನು ಹೇಳುತ್ತೇನೆ. ಹಾಗಾಗಿ ನಿಮ್ಮ ಜೀವನದಲ್ಲಿ ಏನಾಗುತ್ತಿದೆ ಎಂದು ನನಗೆ ತಿಳಿದಿಲ್ಲ. ಆದರೆ ಈ ಸಮಯವೂ ಹಾದುಹೋಗುತ್ತದೆ ಎಂದು ನನಗೆ ಖಚಿತವಾಗಿ ತಿಳಿದಿದೆ.ಸಮಯ ಎಷ್ಟೇ ಕೆಟ್ಟದ್ದಾದರೂ ದೇವರಲ್ಲಿ ನಂಬಿಕೆ ಇಡಿ. ದೇವರು ಯಾರಿಗೂ ಕೆಟ್ಟದ್ದನ್ನು ಅನುಮತಿಸುವುದಿಲ್ಲ, ಅವನ ಮೇಲೆ ಭರವಸೆ ಇಟ್ಟುಕೊಳ್ಳಿ. ದೇವರ ಮನೆಯಲ್ಲಿ ಕತ್ತಲೆಯಿಲ್ಲ' ಎಂದು ಬಳಕೆದಾರರೊಬ್ಬರು ಪಾಯಲ್​ ಅವರನ್ನು ಸಮಾಧಾನಪಡಿಸಲು ನೋಡಿದ್ದಾರೆ.
 
ಪಾಯಲ್ ಘೋಷ್ ಹಿಂದಿ ಮಾತ್ರವಲ್ಲದೆ ಇಂಗ್ಲಿಷ್, ತೆಲುಗು ಮತ್ತು ಕನ್ನಡ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. 2020 ರಲ್ಲಿ, #MeToo ಅಭಿಯಾನದ ಅಡಿಯಲ್ಲಿ, ಅವರು ಚಲನಚಿತ್ರ ನಿರ್ಮಾಪಕ ಅನುರಾಗ್ ಕಶ್ಯಪ್ (Anurag Kasyap) ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದಾಗ ಅವರು ಸುದ್ದಿಯಲ್ಲಿದ್ದರು. ಆದರೆ, ಕಶ್ಯಪ್ ತಮ್ಮ ವಿರುದ್ಧದ ಆರೋಪಗಳನ್ನು ಆಧಾರರಹಿತ ಎಂದು ಬಣ್ಣಿಸಿದ್ದರು. ನಂತರ, ನಟಿ ರಿಚಾ ಚಡ್ಡಾ ಅವರು ಬಾಂಬೆ ಹೈಕೋರ್ಟ್‌ನಲ್ಲಿ ಪಾಯಲ್ ಘೋಷ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದರು. ಅನುರಾಗ್ ಕಶ್ಯಪ್ ಪ್ರಕರಣದಲ್ಲಿ ಪಾಯಲ್ ತಮ್ಮ ಹೆಸರನ್ನು ಅನಗತ್ಯವಾಗಿ ಎಳೆದಿದ್ದಾಳೆ ಎಂದು ರಿಚಾ ಆರೋಪಿಸಿದ್ದರು.

ಬಾಲಿವುಡ್ ನಟಿಯ ಮೇಲೆ ಆ್ಯಸಿಡ್‌ ದಾಳಿ ಯತ್ನ

 

 
 
 
 
 
 
 
 
 
 
 
 
 
 
 

A post shared by Payal Ghosh (@iampayalghosh)

Follow Us:
Download App:
  • android
  • ios