Asianet Suvarna News Asianet Suvarna News

ಸತ್ತ ನಾಯಿಗಾಗಿ ಈ ಪರಿ ಶೋಕಿಸುತ್ತಿರುವ ಜನಪ್ರಿಯ ನಟಿ; ಇದೇನ್ ಕಥೆ ಸ್ವಾಮೀ?

ಹುಡುಗೀರಿಗೆ ನಾಯಿ ಮೇಲೆ ಮನುಷ್ಯರಿಗಿಂತ ಹೆಚ್ಚು ಪ್ರೀತಿ ಅನ್ನೋದರಲ್ಲಿ ಡೌಟ್ ಇಲ್ಲ. ಅದಕ್ಕೆ ಸರಿಯಾಗಿ ಇಲ್ಲೊಬ್ಬ ನಟಿ ಸತ್ತ ನಾಯಿಗಾಗಿ ತನ್ನೆಲ್ಲ ಸೆಲೆಬ್ರೇಶನ್‌ಗಳನ್ನೇ ನಿಲ್ಲಿಸಿಬಿಟ್ಟಿದ್ದಾರೆ.

actress Nishvika Naidu made her painful decision
Author
First Published May 18, 2024, 12:10 PM IST

ಈಕೆ ಕನ್ನಡದ ಜನಪ್ರಿಯ ನಟಿ. ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಇತ್ತೀಚೆಗೆ ಈಕೆ ನಟನೆಯ ಸಿನಿಮಾವೊಂದರ ಹಾಡು ಸಖತ್ ಜನಪ್ರಿಯವಾಯಿತು. ಸಿಕ್ಕಾಪಟ್ಟೆ ಫಿಟ್‌ನೆಸ್ ಫ್ರೀಕ್ ಆಗಿರೋ ಈ ನಟಿ ಇತ್ತೀಚೆಗೆ ತನ್ನ ಆಬ್ಸ್ ಮೂಲಕವೂ ಗಮನ ಸೆಳೆದಿದ್ದರು. ಶೂಟಿಂಗ್‌ನಲ್ಲಿ ಬಿಟ್ಟರೆ ಜಿಮ್‌ನಲ್ಲಿ ಅತೀ ಹೆಚ್ಚು ಸಮಯ ಕಳೆಯೋ ಈ ನಟಿ ಇತ್ತೀಚೆಗೆ ತನ್ನ ಪ್ರೀತಿಯ ನಾಯಿಯನ್ನು ಕಳ್ಕೊಂಡರು. ಸುಮಾರು ಹತ್ತು ವರ್ಷಗಳಿಂದ ಆಕೆ ಜೊತೆಗಿದ್ದ ನಾಯಿ ಇದ್ದಕ್ಕಿದ್ದಂತೆ ಕಣ್ಮರೆ ಆದದ್ದು ಆಕೆಯನ್ನು ಡಿಪ್ರೆಸನ್‌ಗೆ ನೂಕಿದೆ. ಅದಕ್ಕಾಗಿ ಆಕೆ ತನ್ನೆಲ್ಲ ಖುಷಿಗಳನ್ನು, ಸೆಲೆಬ್ರೇಶನ್‌ಗಳನ್ನೂ ತ್ಯಾಗ ಮಾಡಿದ್ದಾರೆ. ಸದಾ ತನ್ನ ಪ್ರೀತಿಯ ನಾಯಿಯ ನೆನಪಲ್ಲೇ ಸಮಯ ಕಳೆಯುತ್ತಾರೆ.

ಅಂದ ಹಾಗೆ ಕನ್ನಡ ಚಿತ್ರರಂಗದ ಈ ಪ್ರಮುಖ ನಟಿ 1996ರ ಮೇ 19ರಂದು ಬೆಂಗಳೂರಿನಲ್ಲಿ ಜನಿಸಿದರು. ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಮನಃಶಾಸ್ತ್ರದಲ್ಲಿ ಪದವಿ ಮುಗಿಸಿರುವ ಇವರು, ಮಾಡೆಲಿಂಗ್ ಕ್ಷೇತ್ರದ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದರು.

2018ರಲ್ಲಿ ತೆರೆಕಂಡ ಚಿರಂಜೀವಿ ಸರ್ಜಾ ನಾಯಕನಾಗಿ ನಟಿಸಿದ್ದ 'ಅಮ್ಮ ಐ ಲವ್ ಯೂ' ಸಿನಿಮಾ ಮೂಲಕ ಚಂದನವನ ಪ್ರವೇಶಿಸಿದರು. ಅವರು ಇದಕ್ಕೂ ಮುನ್ನ 'ವಾಸು ನಾನ್ ಪಕ್ಕಾ ಕಮರ್ಷಿಯಲ್' ಸಿನಿಮಾದಲ್ಲಿ ನಟಿಸಿದ್ದರು. ಆದರೆ, ಇವರ ಮೊದಲ ಚಿತ್ರ ಬಿಡುಗಡೆಗೂ ಮುನ್ನವೇ ಎರಡನೇ ಚಿತ್ರ 'ಅಮ್ಮಾ ಐ ಲವ್ ಯು' ಚಿತ್ರ ಬಿಡುಗಡೆಯಾಯಿತು. ನಂತರ ಪಡ್ಡೆಹುಲಿ, ಜೆಂಟಲ್‌ಮೆನ್, ಕಾಳಿದಾಸ ಕನ್ನಡ ಮೇಷ್ಟ್ರು, ಸಖತ್, ರಾಮಾರ್ಜುನ, ಗಾಳಿಪಟ 2, ದಿಲ್ ಪಸಂದ್, ಗುರು ಶಿಷ್ಯರು ಸಿನಿಮಾಗಳಲ್ಲಿ ನಟಿಸಿದರು. ಇತ್ತೀಚೆಗೆ ಶಿವರಾಜ್‌ಕುಮಾರ್ ಹಾಗೂ ಪ್ರಭುದೇವ ನಟನೆಯ ' ಕರಟಕ ದಮನಕ' ಸಿನಿಮಾ ಮೂಲಕ ಗಮನ ಸೆಳೆದಿದ್ದರು.

ಪವಿತ್ರಾ ಜಯರಾಂ ಜೊತೆಗಿದ್ದ ಚಂದು ನಿಧನ; ಮೊದಲೇ ಸೂಚನೆ ಕೊಟ್ಟು ಪೋಸ್ಟ್‌ ಹಾಕಿದ್ದ ನಟ?

ಯೆಸ್ ಇಲ್ಲಿ ಹೇಳ್ತಿರೋದು ನಿಶ್ವಿಕಾ ನಾಯ್ಡು ಬಗ್ಗೆನೇ. ಅವರು ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್‌ನಲ್ಲಿ ಇತ್ತೀಚೆಗೆ ತಮ್ಮ ಪ್ರೀತಿಯ ನಾಯಿ ಲಿಯೋದ ಅಗಲಿಕೆ ಬಗ್ಗೆ ಪೋಸ್ಟ್ ಮಾಡಿದ್ದರು. ಕಳೆದ ವರ್ಷವೇ ಅವರ ಮುದ್ದಿನ ನಾಯಿ ತೀರಿಕೊಂಡಿದೆ. ಆದರೆ ಇನ್ನೂ ಇವರಿಗೆ ಆ ಅಗಲಿಕೆ ನೋವಿಂದ ಹೊರಬರಲಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಈ ಬಾರಿ ಬರ್ತ್ ಡೇ ಆಚರಿಸಿಕೊಳ್ಳೋದಿಲ್ಲ ಅಂದುಬಿಟ್ಟಿದ್ದಾರೆ.

'ಈ ವರ್ಷ ನನ್ನ ವೈಯಕ್ತಿಕ ಜೀವನದಲ್ಲಿ ಭಾವನಾತ್ಮಕವಾಗಿ ಕೆಲವು ಏರುಪೇರುಗಳು ಆಗಿವೆ. ನನ್ನ ಪ್ರೀತಿಯ ಲಿಯೋ ಇತ್ತೀಚೆಗೆ ನಮ್ಮನ್ನೆಲ್ಲ ಬಿಟ್ಟು ಹೋದ. ಈ ಆಕಸ್ಮಿಕ ಘಟನೆ ನನ್ನ ಜೀವನಕ್ಕೆ ಮತ್ತು ಮನಸಿಗೆ ತುಂಬಾ ಆಳವಾದ ನೋವನ್ನುಂಟು ಮಾಡಿದೆ’ ಎಂದಿದ್ದಾರೆ ನಿಶ್ವಿಕಾ.

ಅಂದಹಾಗೆ ಮೇ 19ರಂದು ನಿಶ್ವಿಕಾ ಅವರ ಬರ್ತ್​ಡೇ. ಅವರು 28ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಆದರೆ, ಈ ಸಂದರ್ಭದಲ್ಲಿ ಬರ್ತ್​ಡೇ ಆಚರಿಸಿಕೊಳ್ಳದಿರಲು ಅವರು ನಿರ್ಧರಿಸಿದ್ದಾರೆ. ಇದಕ್ಕೆ ಅವರು ಕಾರಣ ಕೂಡ ನೀಡಿದ್ದಾರೆ.

ತಿಂಗಳಿಗೆ 1.5 ಲಕ್ಷ ರೂ.ಗೆ ಮನೆ ಬಾಡಿಗೆಗೆ ಕೊಟ್ಟ ಮಲೈಕಾ; ಮನೆಯೊಳಗೆ ಹೇಗಿದೆ?

ಲಿಯೋ ನಮ್ಮ ಕುಟುಂಬದಲ್ಲಿ ಒಬ್ಬನ್ನಾಗಿದ್ದ ಮತ್ತು ಅವನ ಅನುಪಸ್ಥಿತಿಯು ನಮ್ಮ ಕುಟುಂಬದ ಮನಸ್ಸುಗಳ ಮೇಲೆ ಬಹಳ ದೊಡ್ಡ ಗಾಯ ಮಾಡಿದೆ. ದಯವಿಟ್ಟು ನನ್ನ ಭಾವನೆಗಳಿಗೆ ಬೆಲೆ ಕೊಟ್ಟು ಈ ಬಾರಿ ನನ್ನ ಹುಟ್ಟುಹಬ್ಬದ ದಿನದಂದು ಯಾರೂ ಕೂಡ ನನ್ನನ್ನು ಭೇಟಿ ಮಾಡಲು ಬರಬೇಡಿ ಅಥವಾ ಉಡುಗೊರೆಗಳನ್ನು ತರಬೇಡಿ ಎಂದು ಈ ಮೂಲಕ ಕೇಳಿಕೊಳ್ಳುತ್ತೇನೆ. ನಿಮ್ಮ ಪ್ರೀತಿ ಮತ್ತು ಬೆಂಬಲಕ್ಕೆ ನಾನು ಎಂದಿಗೂ ಚಿರಋಣಿಯಾಗಿ ಇರುತ್ತೆನೆ. ಈ ಕಷ್ಟದ ಸಮಯದಲ್ಲಿ, ನಾನು ಒಂಟಿಯಾಗಿ ಇರಲು ಬಯಸಿದ್ದು ನನ್ನ ಈ ನಿರ್ಧಾರಕ್ಕೆ ನೀವೆಲ್ಲರು ಒಪ್ಪಿ, ನೀವು ಇರುವ ಜಾಗದಿಂದಲೇ ನನ್ನ ಹುಟ್ಟುಹಬ್ಬಕ್ಕೆ ನನ್ನನ್ನು ಹರಸಿ ಆಶಿರ್ವದಿಸಿ’ ಎಂದು ನಿಶ್ವಿಕಾ ಕೋರಿಕೊಂಡಿದ್ದಾರೆ.

 
 
 
 
 
 
 
 
 
 
 
 
 
 
 

A post shared by Nishvika Naidu (@nishvika_)

 

ಹುಡುಗಿ ನಾಯಿ ಪ್ರೀತಿಯನ್ನು ಗೌರವಿಸಿ ತಾವಿರೋ ಜಾಗದಿಂದಲೇ ನೆಚ್ಚಿನ ನಟಿಗೆ ವಿಶ್ ಮಾಡುವ ನಿರ್ಧಾರವನ್ನು ಇವರ ಫ್ಯಾನ್‌ಗಳು ಭಾರದ ಮನಸ್ಸಿಂದ ಮಾಡಿದ್ದಾರೆ.

Latest Videos
Follow Us:
Download App:
  • android
  • ios