ಪವಿತ್ರಾ ಜಯರಾಂ ಸಾವಿನ ಬೆನ್ನಲೆ ಚಂದ್ರಕಾಂತ್ ಆತ್ಮಹತ್ಯೆ. ಇನ್‌ಸ್ಟಾಗ್ರಾಂನಲ್ಲಿ ಹಾಕಿದ್ದ ಲೇಟೆಸ್ಟ್‌ ಪೋಸ್ಟ್‌ ವೈರಲ್....

ಕನ್ನಡ ಮತ್ತು ತೆಲುಗು ಧಾರಾವಾಹಿಯಲ್ಲಿ ನಟಿಸುತ್ತಿದ್ದ ಪವಿತ್ರಾ ಜಯರಾಂ ಮೇ 12ರಂದು ರಸ್ತೆ ಅಪಘಾತದಲ್ಲಿ ಸಾವಿಗೀಡಾದರು. ಪವಿತ್ರಾ ಜೊತೆ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದ ಗೆಳೆಯ ಚಂದ್ರಕಾಂತ್ ಇಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗೆಳತಿ ಪವಿತ್ರಾ ಸಾವನ್ನು ಅರಗಿಸಿಕೊಳ್ಳಲು ಸಾಧ್ಯವಾಗದೆ ತೆಲಂಗಾಣದ ಮಣಿಕೊಂಡದಲ್ಲಿರುವ ತಮ್ಮ ಫ್ಲಾಟ್‌ನಲ್ಲಿ ನೇಣಿಗೆ ಶರಣಾಗಿದ್ದಾರೆ. ಚಂದು ಮತ್ತು ಪವಿತ್ರಾ 'ತ್ರಿನಯನಿ' ಧಾರಾವಾಹಿಯಲ್ಲಿ ಒಟ್ಟಿಗೆ ನಟಿಸುತ್ತಿದ್ದರು. 

ಚಂದು ಮತ್ತು ಪವಿತ್ರಾ ದಿನವೂ ಒಟ್ಟಿಗೆ ಜಿಮ್‌ ಮಾಡುತ್ತಿದ್ದರು. ಜಿಮ್ ಮಾಸ್ಟರ್ ಕರೆ ಮಾಡಿ ಟ್ರೈನಿಂಗ್ ಶುರು ಮಾಡೋಣ ಎಂದು ಹೇಳಿದ್ದರಂತೆ. ಅದನ್ನು ನೆನಪಿಸಿಕೊಂಡು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಹಾಕಿದ್ದರು. ಇದಾದ ಮೇಲೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನಲಾಗಿದೆ. ಪವಿತ್ರಾ ಮತ್ತು ಚಂದ್ರಕಾಂತ್ ಲಿವ್‌ಇನ್‌ ರಿಲೇಷನ್‌ಶಿಪ್‌ನಲ್ಲಿದ್ದರು ಎನ್ನಲಾಗಿದೆ ಆದರೆ ಮದುವೆ ಬಗ್ಗೆ ಯಾವುದೇ ಸ್ಪಷ್ಟನೆ ಇಲ್ಲ. 

ಪವಿತ್ರಾಗೆ ಏನೂ ಆಗಿರಲಿಲ್ಲ ಆ್ಯಂಬುಲೆನ್ಸ್ ತಡವಾಗಿ ಬಂದಿದ್ದಕ್ಕೆ ಸತ್ತಳು: ಕಾರಲ್ಲಿದ್ದ ನಟ ಚಂದ್ರಕಾಂತ್ ಸ್ಪಷ್ಟನೆ

ಕಿರುತೆರೆಯಲ್ಲಿ ಹೆಸರು ಮಾಡಿದ್ದ ಚಂದು 2015ರಲ್ಲಿ ಶಿಲ್ಪಾ ಎಂಬುವವರನ್ನು ಮದುವೆ ಮಾಡಿಕೊಂಡಿದ್ದರು. ಮಾಹಿತಿಗಳ ಪ್ರಕಾರ ಚಂದ್ರಕಾಂತ್‌ಗೆ ಇಬ್ಬರು ಮಕ್ಕಳಿದ್ದರು. ಪವಿತ್ರಾ ಜಯರಾಂ ಜೊತೆ ಕ್ಲೋಸ್ ಆಗುತ್ತಿದ್ದಂತೆ ಫ್ಯಾಮಿಲಿಯನ್ನು ದೂರ ಮಾಡಿಕೊಂಡರು ಎನ್ನುವ ಮಾತುಗಳಿದೆ. ತೆಲುಗು ಸೀರಿಯಲ್‌ನಲ್ಲಿ ಪವಿತ್ರಾ ಮತ್ತು ಚಂದ್ರಕಾಂತ್ ಅಕ್ಕ ತಮ್ಮನ ಪಾತ್ರದಲ್ಲಿ ನಟಿಸುತ್ತಿದ್ದರು. ಹೀಗಾಗಿ ಇವರಿಬ್ಬರ ಬಗ್ಗೆ ಹರಿದಾಡುತ್ತಿರುವುದು ಗಾಳಿ ಸುದ್ದಿಯಾಗಿತ್ತು, ಯಾವ ಸ್ಪಷ್ಟನೆ ಇಲ್ಲ.

ಪಘಾತದಲ್ಲಿ ಸಾವಿಗೀಡಾದ ಕನ್ನಡದ ಕಿರುತೆರೆ ಜನಪ್ರಿಯ ನಟಿ ಪವಿತ್ರ ಜಯರಾಂ!

ಎರಡು ದಿನಗಳ ಹಿಂದೆ ಚಂದ್ರಕಾಂತ್ ಅಪ್ಲೋಡ್‌ ಮಾಡಿದ್ದ ಪೋಸ್ಟ್‌ನಲ್ಲಿ 'ನಾನಾ...ಪ್ಲೀಸ್‌ ಎರಡು ದಿನ ವೇಟ್ ಮಾಡು' ಎಂದು ಬರೆದುಕೊಂಡಿದ್ದರು. ಈ ಮೊದಲೇ ಆತ್ಮಹತ್ಯೆ ಮಾಡಿಕೊಳ್ಳುವ ಮನಸ್ಸು ಮಾಡಿದ್ದರು ಎಂದು ಈ ಪೋಸ್ಟ್‌ ಹೇಳುತ್ತದೆ. ಕೆಟ್ಟ ನಿರ್ಧಾರ ತೆಗೆದುಕೊಳ್ಳಬೇಡಿ ಎಂದು ಫಾಲೋವರ್ಸ್‌ ಕೂಡ ಕಾಮೆಂಟ್ ಮಾಡಿದ್ದರು. ಆದರೆ ಕಣ್ಣೆದುರೇ ಪವಿತ್ರಾ ಸಾವನ್ನು ನೋಡಿ ಚಂದ್ರಕಾಂತ್‌ ಹಿಂಸೆ ಪಡುತ್ತಿದ್ದರು ಎನ್ನಲಾಗಿತ್ತು.