Asianet Suvarna News Asianet Suvarna News

ಕಿಶನ್ ಬೆಳಗಲಿ ಬಿಟ್ಟು, ಶ್ರೀ ರಸ್ತು ಶುಭ ಮಸ್ತು ದೀಪಿಕಾ ಜೊತೆ ಶಿಲೆಗಳೇ ನಾಚುವಂತೆ ಡ್ಯಾನ್ಸ್ ಮಾಡಿದ ನಮ್ರತಾ ಗೌಡ!

ಕಿರುತೆರೆ ನಟಿ ಹಾಗೂ ಬಿಗ್ ಬಾಸ್ ಸ್ಪರ್ಧಿ ನಮೃತಾ ಗೌಡ ಹಾಗೂ ದರ್ಶಿನಿ ಇನ್ಸ್ಟಾಗ್ರಾಮ್ ನಲ್ಲಿ ಮ್ಯಾಜಿಕ್ ಮಾಡಿದ್ದಾರೆ. ಅವರ ಒಂದೊಂದು ಹೆಜ್ಜೆಯೂ ಅಭಿಮಾನಿಗಳ ಕಣ್ಣು ತಂಪು ಮಾಡಿದೆ. ಗಾಳಿಪಟ ಹಾಡಿಗೆ ಅವರ ಡಾನ್ಸ್ ವಾರೆ ವಾವ್ ಎನ್ನುವಂತಿದೆ. 
 

Actress Namratha Gowda Darshini Viral Video Song roo
Author
First Published Jul 3, 2024, 9:41 AM IST

ಸದಾ ಡ್ಯಾನ್ಸರ್ ಕಿಶನ್ ಬೆಳಗಲಿ ಜೊತೆ ರೆಟ್ರೋ ಹಾಡಿಗೆ ವಿಭಿನ್ನವಾಗಿ ಸ್ಟೆಪ್ಸ್ ಹಾಕೋ ನಾಗಿಣಿ, ಬಿಗ್ ಬಾಸ್ ಪೇಮ್ ನಮ್ರತಾ ಗೌಡ ಫಾರ್ ಎ ಚೇಂಜ್, ಶ್ರೀ ರಸ್ತು ಶುಭಮಸ್ತುವಿನ ಕೋರಿಗ್ರಾಫರ್ ದರ್ಶಿನಿ ಜೊತೆ ಶಿಲಾ ಬಾಲಿಕೆಯರೇ ನಾಚುವಂತೆ ಕುಣಿದು ಕುಪ್ಪಳಿಸಿದ್ದಾರೆ. ಈ ಜೋಡಿ ಗಾಳಿಪಟ ಸಿನಿಮಾದ ನಧೀಂ ಧೀಂ ತನ ಹಾಡು ಕೇಳ್ತಿದ್ದಂತೆ ನಮಗೆ ರಾಜೇಶ್ ಕೃಷ್ಣನ್ ಹಾಗೂ ಭಾವನಾ ರಾವ್ ನೆನಪಿಗೆ ಬರ್ತಾರೆ.. 2008ರಲ್ಲಿ ತೆರೆಕಂಡ ಈ ಗಾಳಿಪಟ ಹಾಡು ಈಗ್ಲೂ ಅಭಿಮಾನಿಗಳ ಮನಸ್ಸಲ್ಲಿ ಅಚ್ಚಳಿಯದೆ ಉಳಿದಿದೆ. ಡಾನ್ಸ್ ಶೋಗಳಲ್ಲಿ ಅಥವಾ ಡ್ಯಾನ್ಸ್ ಸ್ಪರ್ಧೆಯಲ್ಲಿ ಈ ಒಂದು ಹಾಡಿಗೆ ಒಬ್ಬರಲ್ಲ ಒಬ್ಬರು ಸ್ಟೆಪ್ಸ್ ಹಾಕಿರ್ತಾರೆ. ಈಗ ಈ ಹಾಡನ್ನು ಮತ್ತೆ ನೆನಪಿಸಿದ್ದು ನಾಗಿಣಿ ಖ್ಯಾತಿಯ ನಮೃತ.

ಇನ್ಮುಂದೆ ಗಾಳಿಪಟ ಸಿನಿಮಾ (Movie) ದ ನಧೀಂ ಧೀಂ ತನ ಎಂದಾಗೆಲ್ಲ ರಾಶೇಜ್ ಕೃಷ್ಣನ್ ಮತ್ತೆ ಭಾವನಾ (Bhavna) ಬದಲು ನಮೃತಾ ಗೌಡ (Namrita Gowda) ಹಾಗೂ ದರ್ಶಿನಿ ನೆನಪಿಗೆ ಬರುವಂತೆ ಡಾನ್ಸ್ ಮಾಡಿದೆ ಈ ಜೋಡಿ. ನಮೃತಾ ಗೌಡ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದಾರೆ. ಇತ್ತೀಚಿಗೆ ಒಂದಾದ್ಮೇಲೆ ಒಂದು ವಿಡಿಯೋವನ್ನು ಅವರು ಪೋಸ್ಟ್ ಮಾಡ್ತಿದ್ದು, ಅಭಿಮಾನಿಗಳ ಕಣ್ಣಿಗೆ ಹಬ್ಬವುನ್ನುಂಟು ಮಾಡ್ತಿದೆ. ಈಗ ಗಾಳಿಪಟದ ನಧೀಂ ಧೀಂ ತನ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ನಮೃತಾ ಗೌಡ ಜೊತೆ ನಟಿ, ಇಂಜಿನಿಯರ್ ಹಾಗೂ ಡಾನ್ಸರ್ ದರ್ಶಿನಿ ಕಾಣಿಸಿಕೊಂಡಿದ್ದಾರೆ. ಈ ಡಾನ್ಸ್ ಕೊರಿಯೋಗ್ರಫಿಯನ್ನು ದರ್ಶಿನಿ ಮಾಡಿದ್ದು, ಇಬ್ಬರು ಎಲ್ಲೂ ತಾಳ ತಪ್ಪಿಲ್ಲ. ಅರ್ಜೆಂಟಲ್ಲಿ ನೋಡಿದ್ರೆ ದರ್ಶಿನಿ ಯಾರು, ನಮೃತಾ ಯಾರು ಅನ್ನೋದೇ ತಿಳಿಯದಷ್ಟು ಸುಂದರವಾಗಿ ನೃತ್ಯ ಮಾಡಿದೆ ಈ ಜೋಡಿ. 

ಐಶ್ವರ್ಯಾ ಸರ್ಜಾ ಮದುವೆಯಲ್ಲಿ ಧ್ರುವ ಮಸ್ತ್ ಡಾನ್ಸ್..! ಇಲ್ಲಿದೆ ವಿಡಿಯೋ

ಇನ್ಸ್ಟಾಗ್ರಾಮ್ ನಲ್ಲಿ ನಮೃತಾ ಗೌಡ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವಿಡಿಯೋ ಪೋಸ್ಟ್ ಆಗಿ 24 ಗಂಟೆಯಾಗುವ ಮೊದಲೇ ಲಕ್ಷಾಂತರ ವ್ಯೂಸ್ ಸಿಕ್ಕಿದೆ. 21 ಲಕ್ಷಕ್ಕೂ ಹೆಚ್ಚು ಮಂದಿ ಲೈಕ್ ಬಟನ್ ಒತ್ತಿದ್ದಾರೆ. ಇಬ್ಬರ ಡಾನ್ಸನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಬ್ಯೂಟಿಫುಲ್ ಎನ್ನುವ ಕಮೆಂಟ್ ಮಹಾಪೂರವೇ ಹರಿದಿದೆ. ಶಿಲೆಯನ್ನು ನಾಚಿಸುವ ಕಲೆ ಎಂದು ಅಭಿಮಾನಿಗಳು ಕಮೆಂಟ್ ಹಾಕಿದ್ದಾರೆ. 

ದರ್ಶಿನಿ ಅಧ್ಬುತ ಡಾನ್ಸರ್, ಇದ್ರಲ್ಲಿ ಎರಡು ಮಾತಿಲ್ಲ. ಬಾಲ್ಯದಿಂದಲೂ ಡಾನ್ಸ್ ನಲ್ಲಿ ಆಸಕ್ತಿ ಹೊಂದಿದ್ದ ದರ್ಶಿನಿ, ಅನೇಕ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ರು. ಪ್ರಭುದೇವರ 'ಚಾರ್ಲಿ ಚಾಪ್ಲಿನ್‌ 2' ಅವರ ಮೊದಲ ಚಿತ್ರ. ಅಸಿಸ್ಟೆಂಟ್ ಕೋರಿಯೋಗ್ರಫರ್ ಆಗಿ ಕೆಲಸ ಮಾಡಿದ ದರ್ಶಿನಿ 60ಕ್ಕೂ ಹೆಚ್ಚು ಚಿತ್ರಗಳಿಗೆ ಕೋರಿಯೋಗ್ರಫಿ ಮಾಡಿದ್ದಾರೆ. ಇನ್ನು ದರ್ಶಿನಿ ಕನ್ನಡದ ಶ್ರೀರಸ್ತು ಶುಭಮಸ್ತು ಧಾರವಾಹಿಯಲ್ಲಿ ನಟಿಸಿದ್ದಾರೆ. ದರ್ಶಿನಿ ಅವರನ್ನು ದರ್ಶಿನಿ ಡೆಲ್ಟಾ ನಾಗರಾಜ್ ಎಂದು ಕರೆಯಲಾಗುತ್ತದೆ. ಅವರ ತಂದೆಯನ್ನು ಡೆಲ್ಟಾ ಎಂದು ಕರೆಯುತ್ತಿದ್ದ ಕಾರಣ ತಮ್ಮ ಹೆಸರ ಮುಂದೆ ಡೆಲ್ಟಾ ನಾಗರಾಜ್ ಎಂದು ದರ್ಶಿನಿ ಇಟ್ಕೊಂಡಿದ್ದಾರೆ. ಅಧ್ಯಕ್ಷ ಸೇರಿದಂತೆ ಅನೇಕ ಕನ್ನಡ ಚಿತ್ರಗಳಿಗೆ ಸ್ವತಂತ್ರ ಕೋರಿಯೋಗ್ರಫಿ ಮಾಡಿದ ಹೆಗ್ಗಳಿಕೆ ದರ್ಶಿನಿಗಿದೆ. 

ಮತ್ತೆ ತೆರೆ ಮೇಲೆ ರಶ್ಮಿಕಾ-ವಿಜಯ್ ದೇವರಕೊಂಡ, ಅಭಿಮಾನಿಗಳಿಗೆ ಹಿಂಟ್ ನೀಡಿದ್ರಾ ನಿರ್ದೇಶಕ?

ಇನ್ನು ನಮೃತಾ ಗೌಡ ಬಿಗ್ ಬಾಸ್ ನಂತ್ರ ಡಾನ್ಸ್ ವಿಡಿಯೋ ಮಾಡೋದ್ರಲ್ಲಿ ಬ್ಯುಸಿಯಿದ್ದಂತಿದೆ. ಡಾನ್ಸ್ ಕಿಂಗ್ ಕಿಶೋರ್ ಜೊತೆ ನಮೃತಾ ಅನೇಕ ಹಳೆ ಹಾಡುಗಳಿಗೆ ಹೆಜ್ಜೆ ಹಾಕಿದ್ದಾರೆ. ಹಳೆ ಹಾಡುಗಳಿಗೆ ಹಳೆ ಶೈಲಿಯಲ್ಲಿ ಕೋರಿಯೋಗ್ರಫಿ ಮಾಡಿರುವ ಇವರ ರೋಮ್ಯಾಂಟಿಕ್ ಡಾನ್ಸ್ ಅಭಿಮಾನಿಗಳ ಮನಸ್ಸು ಗೆಲ್ಲಲು ಯಶಸ್ವಿಯಾಗಿದೆ. ಕೃಷ್ಣ ರುಕ್ಮಿಣಿ ಧಾರಾವಾಹಿ ಮೂಲಕ ಕಿರುತೆರೆಗೆ ಬಂದ ನಮೃತಾ, ಪುಟ್ಟಗೌರಿ ಮದುವೆ ಹಾಗೂ ನಾಗಿಣಿಯಲ್ಲಿ ಹೆಚ್ಚು ಪ್ರಸಿದ್ಧಿ ಪಡೆದಿದ್ದರು. ನಾಗಿಣಿಯ ಶಿವಾನಿ ಅಂದ್ರೆ ಅಭಿಮಾನಿಗಳು ಈಗ್ಲೂ ನಮೃತಾ ನಟನೆಯನ್ನು ನೆನೆಯುತ್ತಾರೆ. ಡಾನ್ಸ್ ರಿಯಾಲಿಟಿ ಶೋನಲ್ಲಿಯೂ ನಮೃತಾ ತಮ್ಮ ಡಾನ್ಸ್ ಪ್ರತಿಭೆಯನ್ನು ಪ್ರದರ್ಶಿಸಿದ್ದರು. ಚೈಲ್ಡ್ ಆರ್ಟಿಸ್ಟ್ ಆಗಿ ನಮೃತಾ 400 ರೂಪಾಯಿ ಪರ್ ಡೇ ಸಂಭಾವನೆ ಪಡೆದಿದ್ದರಂತೆ. 

Latest Videos
Follow Us:
Download App:
  • android
  • ios