Asianet Suvarna News Asianet Suvarna News

ಮತ್ತೆ ತೆರೆ ಮೇಲೆ ರಶ್ಮಿಕಾ-ವಿಜಯ್ ದೇವರಕೊಂಡ, ಅಭಿಮಾನಿಗಳಿಗೆ ಹಿಂಟ್ ನೀಡಿದ್ರಾ ನಿರ್ದೇಶಕ?

ರಶ್ಮಿಕಾ ಮಂದಣ್ಣ  ಹಾಗೂ ವಿಜಯ್ ದೇವರಕೊಂಡ ಕುರಿತು ಕುತೂಹಲ ಮಾಹಿತಿಯೊಂದು ಹೊರಬಿದ್ದಿದೆ. ಈ ಕುರಿತು ನಿರ್ದೇಶಕ ರಾಹುಲ್ ಕೆಲ ಸೂಚನೆ ನೀಡಿದ್ದಾರೆ.
 

Tollywood Director rahul plan to feature rashmika mandanna and vijay devarakonda for next movie ckm
Author
First Published Jul 2, 2024, 9:36 PM IST

ಹೈದರಾಬಾದ್(ಜು.02) ನಟಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಜೊತೆಯಾಗಿ ಸ್ಕ್ರೀನ್ ಮೇಲೆ ಕಾಣಿಸಿಕೊಂಡ ಬಳಿಕ ಈ ಜೋಡಿ ಕುರಿತು ಹಲವು ಊಹಾಪೋಹಗಳು ಹರಿದಾಡಿದೆ. ಎರಡು ಸಿನಿಮಾಗಳಲ್ಲಿ ಜೊತೆಯಾಗಿದ್ದ ಈ ಜೋಡಿ ಕುರಿತು ಕೆಲ ಗಾಸಿಪ್‌ಗಳು ಭಾರಿ ಕೋಲಾಹಲ ಸೃಷ್ಟಿಸಿತ್ತು. ಇದೀಗ ಈ ಜೋಡಿ ಒಂದಾಗುತ್ತಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಹೌದು, ಟಾಲಿವುಡ್ ನಿರ್ದೇಶಕ ರಾಹುಲ್ ನಿರ್ದೇಶನದ ಮುಂದಿನ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಜೊತೆಯಾಗಿ ಕಾಣಿಸಿಕೊಳ್ಳಲಿದ್ದಾರೆ ಅನ್ನೋ ಮಾತುಗಳು ಟಾಲಿವುಡ್ ಅಂಗಳದಲ್ಲಿ ಕೇಳಿಬರುತ್ತಿದೆ.

ಗೀತಾ ಗೋವಿಂದಂ ಹಾಗೂ ಡಿಯರ್ ಕಾಮ್ರೆಡ್ ಸಿನಿಮಾಗಳಲ್ಲಿ ರಶ್ಮಿಕಾ ಹಾಗೂ ವಿಜಯ್ ಜೊತೆಯಾಗಿದ್ದರು. ಬಳಿಕ ರಶ್ಮಿಕಾ ಹಾಗೂ ದೇವರಕೊಂಡ ಹಲವು ಚಿತ್ರಗಳಲ್ಲಿ ಅಭಿನಯಿಸಿದರೂ ಜೊತೆಯಾಗಿ ಕಾಣಿಸಿಕೊಂಡಿಲ್ಲ. ಈ ಜೋಡಿಯನ್ನು ಮತ್ತೆ ತೆರೆ ಮೇಲೆ ನೋಡಲು ಅಭಿಮಾನಿಗಳು ಕಾತರಗೊಂಡಿದ್ದಾರೆ. ಈ ಕುರಿತು ಅಧಿಕೃತ ಮಾಹಿತಿಗಳು ಹೊರಬಿದ್ದಿಲ್ಲ. ಆದರೆ ಟಾಲಿವುಡ್‌ನಲ್ಲಿ ಈ ಜೋಡಿಯನ್ನು ಮತ್ತೆ ತೆರೆ ಮೇಲೆ ತರಲು ಪ್ರಯತ್ನಗಳು ನಡೆಯುತ್ತಿರುವುದು ಸತ್ಯ ಅನ್ನೋ ಮಾತು ಬಹಿರಂಗವಾಗಿದೆ.

ರಶ್ಮಿಕಾ ಮಂದಣ್ಣ ಹತ್ರ ಇರೋ ಐಷಾರಾಮಿ ಕಾರುಗಳು ಒಂದೆರಡಲ್ಲ, ಆಸ್ತಿಯೂ ಕಮ್ಮಿ ಇಲ್ಲ!

ಸದ್ಯ ರಶ್ಮಿಕಾ ಮಂದಣ್ಣ ಪುಷ್ಪಾ 2 ಚಿತ್ರದಲ್ಲಿ ಬ್ಯೂಸಿ ಇದ್ದಾರೆ. ಇದರ ಜೊತೆಗೆ ಕೆಲ ಚಿತ್ರಗಳನ್ನು ರಶ್ಮಿಕಾ ಮಂದಣ್ಣ ಒಪ್ಪಿಕೊಂಡಿದ್ದಾರೆ. ಇದರ ನಡುವೆ ರಾಹುಲ್ ನಿರ್ದೇಶನದ ನೂತನ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಅನ್ನೋ ಮಾಹಿತಿ ಹರಡಿದೆ. ಗೀತಾ ಗೋವಿಂದಂ ಚಿತ್ರದಲ್ಲಿ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಜೋಡಿ ಭಾರಿ ಮೋಡಿ ಮಾಡಿತ್ತು. ಈ ಕ್ಯೂಟ್ ಜೋಡಿಯ ಚಿತ್ರ ಸೂಪರ್ ಹಿಟ್ ಆಗಿತ್ತು. 

ಗೀತಾ ಗೋವಿಂದಂ ಚಿತ್ರ ರಶ್ಮಿಕಾ ಸಿನಿಕರಿಯರ್‌ನಲ್ಲಿ ಮಹತ್ತರ ಗೆಲುವು ನೀಡಿದ ಚಿತ್ರ. ಟಾಲಿವುಡ್ ಸಿನಿಮಾ ಇಂಡಸ್ಟ್ರಿಯಲ್ಲಿ ಗಟ್ಟಿಯಾಗಿ ನೆಲೆಯೂರಲು ಈ ಚಿತ್ರ ಮುಖ್ಯಕಾರಣವಾಗಿತ್ತು. ಇದಾದ ಬಳಿಕ ಡಿಯರ್ ಕಾಮ್ರೆಡ್ ಸಿನಿಮಾದಲ್ಲೂ ರಶ್ಮಿಕಾ ವಿಜಯ್ ತೆರೆಮೇಲೆ ಕಾಣಿಸಿಕೊಂಡಿದ್ದರು.  ತೆಲುಗು ಚಿತ್ರರಂಗ ದಿಗ್ಗಜ ನಟರೊಂದಿಗೆ ಅಭಿನಯಿಸಿರುವ ರಶ್ಮಿಕಾ, ಆ್ಯನಿಮಲ್ ಚಿತ್ರದ ಮೂಲಕ ಬಾಲಿವುಡ್‌ನಲ್ಲೂ ಮೋಡಿ ಮಾಡಿದ್ದರು.

ಪುಷ್ರ 2 ಚಿತ್ರದ ಬಿಡುಗಡೆ ಬಳಿಕ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಮುಂದಿನ ಚಿತ್ರದ ಕುರಿತ ಸ್ಪಷ್ಟ ಚಿತ್ರಣ ಹೊರಬೀಳಲಿದೆ. ಆದರೆ ಅಭಿಮಾನಿಗಳ ಕುತೂಗಲ ಬೆಟ್ಟದಷ್ಟಾಗಿದೆ. 

ಅ್ಯನಿಮಲ್‌ನಲ್ಲಿ ಬೆತ್ತಲಾದ ತೃಪ್ತಿಗೆ ಪುಷ್ಪಾ 2ನಲ್ಲೂ ಆಫರ್, ಮತ್ತೆ ರಶ್ಮಿಕಾ-ದಿಮ್ರಿ ಕಾಂಬಿನೇಷನ್!
 

Latest Videos
Follow Us:
Download App:
  • android
  • ios