Asianet Suvarna News Asianet Suvarna News

ಭೂಗತಲೋಕದ ಜತೆ ನಟಿ ನಗ್ಮಾಗೆ ಲಿಂಕ್; ಅಸಲಿಗೆ ಏನಾಗ್ತಿದೆ ಈ ಒಂಟಿ ನಟಿಯ ಕಥೆ?

ಮುಂಬೈ ಭೂಗತ ಲೋಕದ ಸಂಪರ್ಕಕ್ಕೆ ಸಂಬಂಧಿಸಿ ಮುಂಬೈ ಪೊಲೀಸರು ಇಬ್ಬರನ್ನು ಅರೆಸ್ಟ್ ಮಾಡಿದ್ದರು. ಅವರೊಬ್ಬ ಆರೋಪಿ ಜಲಾಲುದ್ದೀನ್ ಅನ್ಸಾರಿ ಎಂಬವನು ದಾವೂದ್ ಇಬ್ರಾಹಿಂ ಸಹಚರ ಅನೀಸ್ ಮಾತಿನಂತೆ ತಾವು ನಟಿ ನಗ್ಮಾ ವಾಸವಿದ್ದ ಫ್ಲಾಟ್‌ಗೆ ತೆರಳಿ..

Actress Nagma link with underworld case did not prove her involvement srb
Author
First Published May 29, 2024, 1:25 PM IST

ಹಿಂದೊಮ್ಮೆ ಸೌತ್ ಇಂಡಿಯಾದ ಟಾಪ್ ಮೋಸ್ಟ್ ನಟಿಯರಲ್ಲಿ ಒಬ್ಬರಾಗಿದ್ದರು ನಗ್ಮಾ. ಇನ್ನೊಬ್ಬರು ಟಾಪ್ ನಟಿಯಾಗಿದ್ದ ಜ್ಯೋತಿಕಾ ಅಕ್ಕನೇ ಈ ನಗ್ಮಾ. ನಟ ಚಿರಂಜೀವಿ ಜೋಡಿಯಾಗಿ ನಟಿಸಿದ 'ಘರಾನಾ ಮೊಗಡು' ಸೇರಿದಂತೆ ಬಹಳಷ್ಟು ತೆಲುಗು ಚಿತ್ರಗಳಲ್ಲಿ ನಟಿ ನಗ್ಮಾ (Nagma) ನಟಿಸಿದ್ದಾರೆ. ತೆಲುಗುಮಾತ್ರವಲ್ಲ, ತಮಿಳು, ಕನ್ನಡ ಹಾಗೂ ಹಿಂದಿ ಚಿತ್ರರಂಗಗಳಲ್ಲೂ ನಟಿ ನಗ್ಮಾ ತಮ್ಮ ಛಾಪು ಮೂಡಿಸಿದ್ದಾರೆ. ತಮ್ಮ ಹಾಟ್ ಇಮೇಜ್‌ ಮೂಲಕ ನಟಿ ನಗ್ಮಾ ಸಾಕಷ್ಟು ಮಿಂಚಿದ್ದರು. 

ನಟಿ ನಗ್ಮಾ ಹೆಸರು ಬಹಳಷ್ಟು ಗಾಸಿಪ್‌ಗಳಲ್ಲೂ ಕೇಳಿ ಬಂತು. ನಟ ಶರತ್‌ ಕುಮಾರ್ ಜತೆ ನಗ್ಮಾ ಹೆಸರು ತಳುಕು ಹಾಕಿಕೊಂಡಿತ್ತು. ಜತೆಗೆ, ಕ್ರಿಕೆಟರ್‌ ಸೌರವ್ ಗಂಗೂಲಿ ಜತೆಗೂ ನಗ್ಮಾ ಹೆಸರು ಸಾಕಷ್ಟು ಓಡಾಡಿತ್ತು. ಆದರೆ, ಅವೆಲ್ಲವೂ ಲವ್-ರೊಮ್ಯಾಂಟಿಕ್ ಸಂಗತಿಗಳಿಗೆ ಸಂಬಂಧಿಸಿದ್ದವು. ಅವುಗಳಿಗಿಂತ ಭಿನ್ನವಾಗಿ ಹರಡಿದ್ದ ಸುದ್ದಿ ಎಂದರೆ, 2005ರಲ್ಲಿ ನಟಿ ನಗ್ಮಾಗೆ ಭೂಗತ ಲೋಕದ ಜತೆಗೆ ನಂಟಿದೆ ಎಂಬ ಸುದ್ದಿ. ಈ ಸುದ್ದಿಯಿಂದ ನಟಿ ನಗ್ಮಾ ಬಗ್ಗೆ ಎಲ್ಲರಿಗೀ ಕೆಟ್ಟ ಅಭಿಪ್ರಾಯ ಮೂಡಿದ್ದಷ್ಟೇ ಅಲ್ಲ, ನಗ್ಮಾ ಪೊಲೀಸ್ ವಿಚಾರಣೆಯನ್ನೂ ಎದುರಿಸಿದ್ದರು.  

ಹೀಗೂ ಉಂಟೇ..! ರಾಮಾಯಣಕ್ಕೆ ಪಡೆದ ಭಾರೀ ಸಂಭಾವನೆಯನ್ನು ಏನ್ಮಾಡಿದಾರೆ ಯಶ್?

ಆಗಿದ್ದಿಷ್ಟು, ಮುಂಬೈ ಭೂಗತ ಲೋಕದ ಸಂಪರ್ಕಕ್ಕೆ ಸಂಬಂಧಿಸಿ ಮುಂಬೈ ಪೊಲೀಸರು ಇಬ್ಬರನ್ನು ಅರೆಸ್ಟ್ ಮಾಡಿದ್ದರು. ಅವರೊಬ್ಬ ಆರೋಪಿ ಜಲಾಲುದ್ದೀನ್ ಅನ್ಸಾರಿ ಎಂಬವನು ದಾವೂದ್ ಇಬ್ರಾಹಿಂ ಸಹಚರ ಅನೀಸ್ ಮಾತಿನಂತೆ ತಾವು ನಟಿ ನಗ್ಮಾ ವಾಸವಿದ್ದ ಫ್ಲಾಟ್‌ಗೆ ತೆರಳಿ ಹತ್ತು ಲಕ್ಷ ರೂಪಾಯಿಗಳನ್ನು ಕೊಟ್ಟಿದ್ದಾಗಿ ಹೇಳಿಕೆ ನೀಡಿದ್ದ. ಈ ಹೇಳಿಕೆಯಿಂದ ನಟಿ ನಗ್ಮಾ ಇಮೇಜ್‌ಗೆ ತುಂಬಾನೇ ಡ್ಯಾಮೇಜ್ ಆಗಿತ್ತು. ಆದರೆ, ಯಾವುದೇ ಸರಿಯಾದ ಸಾಕ್ಷಿ ದೊರಕದೇ ಆತನ ಹೇಳಿಕೆ ಅಲ್ಲಿಗೇ ಸತ್ತುಹೋಯಿತು. ನಟಿ ನಗ್ಮಾ ಬಚಾವಾದರು. ಇಂದಿಗೂ ಕೂಡ ನಟಿ ನಗ್ಮಾಗೆ ಭೂಗತ ಲೋಕದ ಜತೆ ನಂಟಿದೆ ಎಂಬ ಸಂಗತಿ ದೃಢಪಟ್ಟಿಲ್ಲ. 

ಆ್ಯಂಕರ್ ಅನುಶ್ರೀಗೆ ಆ ಗುಟ್ಟು ಹೇಳದ ರಕ್ಷಿತ್ ಶೆಟ್ಟಿ, ಸಾಯಿ ಪಲ್ಲವಿ ಬಗ್ಗೆ ಮೌನವಾಗಿದ್ದೇಕೆ?

ನಟಿ ನಗ್ಮಾ ನಟನೆ ಮಾಡುವುದರ ಜತೆಗೆ ಮದುವೆಯಾಗಿದ್ದ ನಟರೊಬ್ಬರ ಜೊತೆ ಸಂಬಂಧ ಶುರುವಿಟ್ಟುಕೊಂಡರು ಎನ್ನಲಾಗಿದೆ. ನಟ ಆರ್ ಶರತ್‌ಕುಮಾರ್‌ (R Sarathkumar)ಜೋಡಿಯಾಗಿ ಸಿನಿಮಾದಲ್ಲಿ ನಟಿಸಿದ ನಗ್ಮಾ ಅವರನ್ನು ನಿಜ-ಜೀವನದಲ್ಲಿ ಕೂಡ 'ಲವ್' ಮಾಡಿಬಿಟ್ಟರು. ಅದನ್ನು ಅರಿತ ಅವರ ಪತ್ನಿ ಛಾಯಾ ಗಂಡ ಶರತ್ ಕುಮಾರ್ ಅವರಿಂದ ಡಿವೋರ್ಸ್ ತೆಗೆದುಕೊಂಡುಬಿಟ್ಟರು. ಸುಂದರ ಸಂಸಾರವನ್ನು ಹಾಳು ಮಾಡಿದವಳು ಎಂಬ ಅಪಖ್ಯಾತಿಗೆ ನಟಿ ನಗ್ಮಾ ಪಾತ್ರರಾದರು.

ಪುನೀತ್ ರಾಜ್‌ಕುಮಾರ್ 'ಅಣ್ಣಾವ್ರ' ಚಪ್ಪಲಿ ಇಟ್ಟಿದ್ದೆಲ್ಲಿ? ಅಮ್ಮನ ನೆನಪಿಗೆ ಅಪ್ಪು ಮಾಡಿದ್ದೆನು?

ಅದರಿಂದ ಬೇಸತ್ತ ನಗ್ಮಾ ಶರತ್‌ ಕುಮಾರ್ ಅವರಿಂದ ಅಂತರ ಕಾಯ್ದುಕೊಂಡು ಒಂಟಿಯಾಗಿ ಬದುಕಲು ಶುರು ಮಾಡಿದರು. ಆದರೆ, ಅಲ್ಲಿಗೇ ತಮ್ಮ ಪ್ರೇಮ್‌ ಕಹಾನಿಯನ್ನು ನಿಲ್ಲಿಸದ ನಟಿ ನಗ್ಮಾ, ಅಂದಿನ ಕಾಲದಲ್ಲಿ ಕ್ರಿಕೆಟ್‌ನಲ್ಲಿ ಮಿಂಚುತ್ತಿದ್ದ ಸೌರವ್ ಗಂಗೂಲಿ (Sourav Ganguly) ಜತೆ ಸಂಬಂಧ ಶುರುವಿಟ್ಟುಕೊಂಡರು ಎನ್ನಲಾಗಿದೆ. ಅದು ಸುದ್ದಿಯಾಗುತ್ತಿದ್ದಂತೆ ಮತ್ತೆ ರಾಮಾಯಾಣ-ಮಹಾಭಾರತ ಶುರುವಾಗುವುದು ಬೇಡ ಎಂದು ಗಂಗೂಲಿ ಅವರಿಂದಲೂ ದೂರವಾಗಿ ಮತ್ತೆ ಒಂಟಿ ಜೀವನಕ್ಕೆ ಮರಳಿದರು ನಟಿ ನಗ್ಮಾ.

ಸುಜಯ್ ಹೆಗಡೆ 'ಹೊಸ ಕಥೆಯೊಂದು ಶುರುವಾಗಿದೆ', ಪ್ರೇರಣಾಗೆ 'ಮನಸೆಲ್ಲಾ ನೀನೇ' ಅಂದಿದ್ದಾಯ್ತು..!

ಅಂದಿನಿಂದ ಇಂದಿನವರೆಗೂ ಒಂಟಿಯಾಗಿಯೇ ಜೀವನ ನಡೆಸುತ್ತಿದ್ದಾರೆ ನಗ್ಮಾ. ತಮಿಳು ಖ್ಯಾತ ನಟಿ ಜ್ಯೋತಿಕಾರ (Jyothika) ಅಕ್ಕ ಈ ನಗ್ಮಾ ಎಂಬುದು ಗಮನಿಸಬೇಕಾದ ಸಂಗತಿ. ಮದುವೆಯಾದವರೊಂದಿಗೇ ನಟಿ ನಗ್ಮಾ ಸಂಬಂಧ ಬೆಳೆಸಿದ್ದರಿಂದ, ಅತ್ತ ಸ್ನೇಹಿತರು ಕೈ ತಪ್ಪಿ ಇತ್ತ ಸಿನಿಮಾ ಕೂಡ ಇಲ್ಲದೇ ನಟಿ ನಗ್ಮಾ ಸಾಕಷ್ಟು ಕಷ್ಟ ಹಾಗು ಒಂಟಿತನ ಅನುಭವಿಸಿದರು. ಆದರೆ, ಮಾಡುವುದೇನು ಎಂಬಂತೆ, ಇಂದಿಗೂ ಕೂಡ ಮಾಡಿದ ತಪ್ಪಿಗೆ ಪರಿಣಾಮ ಅನುಭವಿಸುತ್ತಿದ್ದಾರೆ.

ಅದನ್ನು ಪದೇಪದೇ ಮುಟ್ಟಿಕೊಳ್ಳುವುದು ಸಮಸ್ಯೆಯಲ್ಲ, ಕಾರಣವಿದೆ: ನಮ್ರತಾ ಗೌಡ!

ಸಿನಿಮಾ ಇಲ್ಲದಿದ್ದರೇನಂತೆ, ರಾಜಕೀಯದಲ್ಲಿ ಸಾಧನೆ ಮಾಡಿದರಾಯಿತು ಎಂದು ಬಂದ ನಗ್ಮಾಗೆ ಅಲ್ಲೂ ಕೂಡ ಹೇಳಿಕೊಳ್ಳುವಂಥ ಯಶಸ್ಸು ಸಿಗಲಿಲ್ಲ. ಅತ್ತ ಚಿತ್ರರಂಗವೂ ಇಲ್ಲ, ಇತ್ತ ರಾಜಕೀಯರಂಗವೂ ಇಲ್ಲದೇ ಸದ್ಯ ತ್ರಿಶಂಕು ಸ್ಥಿತಿಯಲ್ಲಿ ಒಂಟಿ ಜೀವನ ನಡೆಸುತ್ತಿದ್ದಾರೆ ನಟಿ ನಗ್ಮಾ. 

Latest Videos
Follow Us:
Download App:
  • android
  • ios