Asianet Suvarna News Asianet Suvarna News

ಹೀಗೂ ಉಂಟೇ..! ರಾಮಾಯಣಕ್ಕೆ ಪಡೆದ ಭಾರೀ ಸಂಭಾವನೆಯನ್ನು ಏನ್ಮಾಡಿದಾರೆ ಯಶ್?

ಯಶ್ ನಟನೆಯ ರಾಮಾಯಣ ಚಿತ್ರದ ಶೂಟಿಂಗ್ ಈಗಾಗಲೇ ಶುರುವಾಗಿತ್ತು. ಆದರೆ ಕಾಪಿರೈಟ್ ವಿವಾದವೊಂದು ಎದುರಾಗಿದ್ದು, ಅದು ಬಗೆಹರಿದ ಮೇಲಷ್ಟೇ ಮುಂದಿನ ಶೂಟಿಂಗ್ ಸಾಧ್ಯ ಎಂಬ ಮಾಹಿತಿ ಈಗಾಗಲೇ ಬಂದಿದೆ. ಇಷ್ಟು ದೊಡ್ಡ ಬಜೆಟ್‌ನಲ್ಲಿ ಹಿಂದೆಂದೂ..

Rocking Star Yash demands 80 crore rupees to the Bollywood Ramayana movie and accepted Ravana Role srb
Author
First Published May 29, 2024, 12:09 PM IST | Last Updated May 29, 2024, 12:26 PM IST

ಕನ್ನಡದ ರಾಕಿಂಗ್ ಸ್ಟಾರ್ ಯಶ್ (Rocking Star Yash) ಅವರು ಬಾಲಿವುಡ್ ಸಿನಿಮಾ 'ರಾಮಾಯಣ'ದಲ್ಲಿ ರಾವಣನ ಪಾತ್ರ ಮಾಡುತ್ತಿರುವುದು ಗೊತ್ತೇ ಇದೆ. ರಣಬೀರ್ ಕಪೂರ್ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ ನಟಿಸುತ್ತಿರುವ ಈ ಚಿತ್ರದಲ್ಲಿ ನಟ ಯಶ್ ರಾವಣನ ಪಾತ್ರದಲ್ಲಿ ಅಬ್ಬರಿಸಲಿದ್ದಾರೆ. ಈ ಚಿತ್ರವನ್ನು ರಾಮಾಯಣ (Ramayana) ಎನ್ನುವುದಕ್ಕಿಂತ 'ರಾವಣಾಯಣ' ಎನ್ನಬಹುದೇನೋ! ಏಕೆಂದರೆ, ಸಿಕ್ಕ ಮಾಹಿತಿ ಪ್ರಕಾರ, ರಾಮಾಯಣ ಚಿತ್ರವನ್ನು ರಾವಣನ ಆ್ಯಂಗಲ್‌ನಿಂದ್ ಹೇಳಲಿದ್ದಾರಂತೆ ನಿರ್ದೇಶಕ ನಿತೇಶ್ ತಿವಾರಿ (Nitesh Tiwari). 

ನಟರಾಗಿ ಮಾತ್ರವಲ್ಲ, ನಿರ್ಮಾಪಕರಾಗಿಯೂ ಯಶ್ ಈ ಚಿತ್ರದಲ್ಲಿ ಭಾಗಿಯಾಗುವ ಮೂಲಕ ಈ ಚಿತ್ರವು 'ರಾಮಾಯಣ'ದ ಬದಲಾಗಿ 'ರಾವಣಾಯಣ' ಆಗುವ ಎಲ್ಲ ಸಾಧ್ಯತೆಯಿದೆ ಎಂದು ಸೋಷಿಯಲ್‌ ಮೀಡಿಯಾ ಕಾಮೆಂಟ್‌ಗಳು ಹೇಳುತ್ತಿವೆ. ಅದೊಂದು ಕಡೆಯಾದರೆ, ಇನ್ನೊಂದು ಇಂಟರೆಸ್ಟಿಂಗ್ ಸಂಗತಿ ಎಂದರೆ, ನಟ ಯಶ್ ಈ ಚಿತ್ರಕ್ಕೆ 80 ಕೋಟಿ ರೂಪಾಯಿ ಸಂಭಾವನೆ ಕೇಳಿದ್ದಾರೆ ಎಂದು ವರದಿಯಾಗಿದೆ. ಆದರೆ, ಈ ಸಂಭಾವನೆಯನ್ನು ಯಶ್ ತೆಗೆದುಕೊಳ್ಳುತ್ತಿಲ್ಲ. ಬದಲಿಗೆ ಆ ಹಣವನ್ನು ಕೂಡ ಈ ಚಿತ್ರದ ನಿರ್ಮಾಣಕ್ಕೆ ತೆಗೆದುಕೊಳ್ಳಲು ಯಶ್ ಹೇಳಿದ್ದಾರೆ ಎನ್ನಲಾಗಿದೆ. 

ಆ್ಯಂಕರ್ ಅನುಶ್ರೀಗೆ ಆ ಗುಟ್ಟು ಹೇಳದ ರಕ್ಷಿತ್ ಶೆಟ್ಟಿ, ಸಾಯಿ ಪಲ್ಲವಿ ಬಗ್ಗೆ ಮೌನವಾಗಿದ್ದೇಕೆ?

ಸಂಭಾವನೆಯನ್ನೂ ಸಿನಿಮಾಗೇ ಕೊಟ್ಟಿರುವ ಯಶ್, ಸಿನಿಮಾದಿಂದ ಲಾಭದಲ್ಲಿ ಪಾಲುದಾರ ಆಗಲಿದ್ದಾರೆ ಎನ್ನಲಾಗಿದೆ. ಅದು ಸಹಜ ಕೂಡ. ನಿರ್ಮಾಪಕರು ಅಂದಮೇಲೆ ಲಾಭದಲ್ಲಿ ಪಾಲು ಇರಲೇಬೇಕಲ್ಲ! ಆದರೆ, ಬಂಡವಾಳ ಹಾಗೂ ಲಾಭಾಂಶದ ರೇಶಿಯೋ ವಿಭಿನ್ನವಾಗಿ ಇರಬಹುದಷ್ಟೇ. ನಟ ಯಶ್ ಈ ರಾಮಾಯಣ ಚಿತ್ರದ ಮೂಲಕ ಮೊದಲ ಬಾರಿಗೆ ನಿರ್ಮಾಪಕರಾಗಿಯೂ ಚಾಲ್ತಿಗೆ ಬಂದಿದ್ದಾರೆ. ಇನ್ನು ಯಾವಾಗ ನಿರ್ದೇಶಕರಾಗಿ ಕಾಲಿಡುತ್ತಾರೋ ಎನೋ ಎನ್ನಲಾಗುತ್ತಿದೆ. 

ಪುನೀತ್ ರಾಜ್‌ಕುಮಾರ್ 'ಅಣ್ಣಾವ್ರ' ಚಪ್ಪಲಿ ಇಟ್ಟಿದ್ದೆಲ್ಲಿ? ಅಮ್ಮನ ನೆನಪಿಗೆ ಅಪ್ಪು ಮಾಡಿದ್ದೆನು?

835 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಯಶ್ ನಟನೆಯ ರಾಮಾಯಣ ಚಿತ್ರದ ಶೂಟಿಂಗ್ ಈಗಾಗಲೇ ಶುರುವಾಗಿತ್ತು. ಆದರೆ ಕಾಪಿರೈಟ್ ವಿವಾದವೊಂದು ಎದುರಾಗಿದ್ದು, ಅದು ಬಗೆಹರಿದ ಮೇಲಷ್ಟೇ ಮುಂದಿನ ಶೂಟಿಂಗ್ ಸಾಧ್ಯ ಎಂಬ ಮಾಹಿತಿ ಈಗಾಗಲೇ ಬಂದಿದೆ. ಇಷ್ಟು ದೊಡ್ಡ ಬಜೆಟ್‌ನಲ್ಲಿ ಹಿಂದೆಂದೂ ರಾಮಾಯಣ ನಿರ್ಮಾಣ ಆಗಿರಲಿಲ್ಲ. ಈ ಮೊದಲು ಟಿವಿಯಲ್ಲಿ ರಾಮಾಯಣ ಧಾರಾವಾಹಿ ಬಂದಿತ್ತು. ಆ ಕಾಲದಲ್ಲಿ ಅದು ಭಾರೀ ಬಜೆಟ್ ಎನ್ನಲಾಗಿತ್ತು. ಆದರೆ ಅದು ಸೀರಿಯಲ್, ಇದು ಸಿನಿಮಾ!

ಸುಜಯ್ ಹೆಗಡೆ 'ಹೊಸ ಕಥೆಯೊಂದು ಶುರುವಾಗಿದೆ', ಪ್ರೇರಣಾಗೆ 'ಮನಸೆಲ್ಲಾ ನೀನೇ' ಅಂದಿದ್ದಾಯ್ತು..!

ಒಟ್ಟಿನಲ್ಲಿ, ಈಗ ನಟ ಯಶ್ ಏನೇ ಮಾಡಿದರೂ ಅದೊಂದು ದೊಡ್ಡ ಪ್ರಾಜೆಕ್ಟ್‌ ಆಗಿರುತ್ತದೆ ಎನ್ನಬಹುದು. ಏಕೆಂದರೆ, ಬಿಗ್ ಬಜೆಟ್ ಸಿನಿಮಾ 'ಕೆಜಿಎಫ್' ಸಿರೀಸ್ ಬಳಿಕ ನಟ ಯಶ್ ಸಣ್ಣಪುಟ್ಟ ಸಿನಿಮಾಗಳನ್ನು ಒಪ್ಪಿಕೊಳ್ಳುವ ಬದಲು ಬಿಗ್ ಬಜೆಟ್‌ ಸಿನಿಮಾಗಳ ಮೇಲಷ್ಟೇ ಕಣ್ಣಿಟ್ಟಿದ್ದಾರೆ ಎನ್ನಲಾಗಿದೆ. ಯಶ ನಟನೆ, ಗೀತೂ ಮೋಹನ್‌ದಾಸ್ ನಿರ್ದೇಶನದ 'ಟಾಕ್ಸಿಕ್' ಸಿನಿಮಾ ಕೂಡ ಭಾರೀ ಬಜೆಟ್ ಹೊಂದಿದೆ. ಈ ಸಿನಿಮಾ ಪ್ಯಾನ್ ಇಂಡಿಯಾ ಬದಲು ಪ್ಯಾನ್ ವರ್ಲ್ಡ್ ಚಿತ್ರವಾಗಿ ಹೊರಹೊಮ್ಮಲಿದೆ ಎನ್ನಲಾಗುತ್ತಿದೆ. ಒಟ್ಟಿನಲ್ಲಿ, ಈಗ ನಟ ಯಶ್ ಮೇಲೆ ಇಡೀ ಜಗತ್ತಿನ ಕಣ್ಣು ನೆಟ್ಟಿದೆ. 

ಅದನ್ನು ಪದೇಪದೇ ಮುಟ್ಟಿಕೊಳ್ಳುವುದು ಸಮಸ್ಯೆಯಲ್ಲ, ಕಾರಣವಿದೆ: ನಮ್ರತಾ ಗೌಡ!

Latest Videos
Follow Us:
Download App:
  • android
  • ios