ಎಮ್‌ಎನ್‌ಸಿ ಕಂಪನಿಯಲ್ಲಿ ಕೆಲಸದಲ್ಲಿರುವ ಪ್ರೇರಣಾ, ನಾನು ಕೆಲಸ ಮಾಡುತ್ತಿರುವ ಕ್ಷೇತ್ರದವರಲ್ಲ, ವಿಭಿನ್ನ ಫೀಲ್ಡ್‌ನಲ್ಲಿ ಇರುವವರು. ಕೆಲವೇ ಕುಟುಂಬಸ್ಥರು, ಆಪ್ತರ ಸಮ್ಮುಖದಲ್ಲಿ ಸಿಂಪಲ್‌ ಆಗಿ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದೇವೆ. ಮದುವೆಗೆ ಎಲ್ಲ..

ಸ್ಯಾಂಡಲ್‌ವುಡ್ ಹಾಗೂ ಸೀರಿಯಲ್‌ ಲೋಕದ ಮತ್ತೊಬ್ಬರು ಹ್ಯಾಂಡ್‌ಸಮ್ ನಟ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ಕಳೆದ ಭಾನುವಾರ ನಿಶ್ಚಿತಾರ್ಥ ಮಾಡಿಕೊಂಡಿರುವ ಹೀರೋ ಹೆಸರು ಸುಜಯ್ ಹೆಗಡೆ. ತಮ್ಮ ದೂರದ ಸಂಬಂಧಿ ಹಾಗೂ ಫ್ಯಾಮಿಲಿ ಫ್ರೆಂಡ್ ಪ್ರೇರಣಾ ಜತೆ ಸುಜಯ್ ಹೆಗಡೆ (Sujay Hegde) ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಅಲ್ಲಿಗೆ, ತೆರೆ ಮೇಲೆ ಮಿಂಚುತ್ತಿರುವ ಮತ್ತೊಬ್ಬರು ಎಲಿಜೆಬಲ್ ಬ್ಯಾಚುಲರ್ ಹಾಗೂ ಚೆಂದದ ನಟ ಹಲವಾರು ಹುಡುಗಿಯರ ಕನಸಿಗೆ ಕಲ್ಲು ಇಟ್ಟಿದ್ದಾರೆ ಎನ್ನಬಹುದು. ಏಕೆಂದರೆ, ಸುಂದರರ ಮೇಲೆ ಸುಂದರಿಯರ ಕಣ್ಣು ಬೀಳುವುದು, ಮದುವೆ ಕನಸು ಕಾಣುವುದು ಕಾಮನ್ ತಾನೇ?

ಹೌದು, ಹಲವಾರು ಧಾರಾವಾಹಿಗಳು ಹಾಗೂ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಅಚ್ಚಗನ್ನಡದ ಪ್ರತಿಭೆ ಸುಜಯ್ ಹೆಗಡೆ. ಮೂಲತಃ ಉತ್ತರ ಕನ್ನಡ ಜಿಲ್ಲೆಯವರಾದ ಸುಜಯ್ ಹೆಗಡೆ ಸದ್ಯಕ್ಕೆ ಬೆಂಗಳೂರು ನಿವಾಸಿ. 2014ರಲ್ಲಿ ಬಿಡುಗಡೆಯಾದ 'ಮಾಣಿಕ್ಯ' ಸಿನಿಮಾದ ಚಿಕ್ಕ ಆದರೆ ಗಮನಾರ್ಹ ಪಾತ್ರದಲ್ಲಿ ಕಾಣಿಸಿಕೊಂಡ ನಟ ಸುಜಯ್ ಹೆಗಡೆ, ಬಳಿಕ ಹಿಂತಿರುಗಿ ನೋಡಿಲ್ಲ. 

ಒಂದಾದ ಮೇಲೆ ಮತ್ತೊಂದರಂತೆ ಸಿನಿಮಾ ಹಾಗೂ ಸೀರಿಯಲ್‌ಗಳಲ್ಲಿ ತಮ್ಮ ಪಾಲಿಗೆ ಬಂದ ಪಾತ್ರಗಳನ್ನು ಪೋಷಿಸುತ್ತ, ದಿನದಿನಕ್ಕೂ ಫ್ಯಾನ್ ಫಾಲೋವರ್ಸ್ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಕೆಲವೊಂದು ಪ್ರಾಜೆಕ್ಟ್‌ಗಳಲ್ಲಿ ನಾಯಕರಾಗಿ ನಟಿಸಿದ್ದು, ಹಲವಾರು ಪೋಷಕ ಪಾತ್ರಗಳಲ್ಲೂ ನಟಿಸಿ ಕಲಾವಿದರ ದಾರಿಯೂ ನನಗೆ 'ಓಕೆ' ಎಂಬ ಸಂದೇಶ ನೀಡಿದ್ದಾರೆ ಸುಜಯ್ ಹೆಗಡೆ. 

ಬಾಲಿವುಡ್‌ ಆಫರ್‌ ಮುಗಿದ ಹೋದ ಚಾಪ್ಟರ್‌ ಆಗಿರಬಹುದು; ಮೌನ ಮುರಿದ ಜ್ಯೋತಿಕಾ!

ಸ್ಯಾಂಡಲ್‌ವುಡ್ ಕಿಚ್ಚ ಸುದೀಪ್ ನಟನೆಯ ಮಾಣಿಕ್ಯ ಸಿನಿಮಾ ಸೇರಿದಂತೆ, ವಜ್ರಕಾಯ, ಮಿಸ್ಟರ್ ಎಲ್‌ಎಲ್‌ಬಿ ಮುಂತಾದ ಸಿನಿಮಾಗಳಲ್ಲಿ ನಟಿಸಿರುವ ಸುಜಯ್, ಕಿರುತೆರೆಯ ಧಾರಾವಾಹಿಗಳಾದ ಆಕಾಶದೀಪ, ಗೋಕುಲದಲ್ಲಿ ಸೀತೆ, ಶನಿ, ಮನಸಾರೆ, ಮನಸೆಲ್ಲಾ ನೀನೆ, ಕಥೆಯೊಂದು ಶುರುವಾಗಿದೆ, ಹೀಗೆ ಸಾಲುಸಾಲು ಸೀರಿಯಲ್‌ಗಳಲ್ಲಿ ನಟಿಸಿದ್ದಾರೆ, ನಟಿಸುತ್ತಲೂ ಇದ್ದಾರೆ. 

ಇದೀಗ 'ಮನಮೆಚ್ಚಿದ ಹುಡುಗಿ' ಪ್ರೇರಣಾ (Prerana) ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದು ಆಗಸ್ಟ್‌ನಲ್ಲಿ ಮದುವೆ ನೆರವೇರಲಿದೆ ಎಂದಿದ್ದಾರೆ. ಈ ಮೂಲಕ ಸುಜಯ್ ಬಾಳಿನಲ್ಲಿ 'ಬಾಳ ಸಂಗಾತಿ' ಆಗಮನ ಆಗಿದೆ, ಸಪ್ತಪದಿ ತುಳಿಯುವುದಷ್ಟೇ ಬಾಕಿ. ಏಷ್ಯಾನೆಟ್ ಸುವರ್ಣಾ ಜತೆ ತಮ್ಮ ನಿಶ್ಚಿತಾರ್ಥ ಹಾಗೂ ಮದುವೆ ಬಗ್ಗೆ ಮಾತನಾಡಿರುವ ಸುಜಯ್ ಹೆಗಡೆ, 'ನಮ್ಮದು ಪ್ರೇಮ ವಿವಾಹವಲ್ಲ, ಅರೇಂಜ್ಡ್ ಮ್ಯಾರೇಜ್. ನನ್ನ ಬಾಳ ಸಂಗಾತಿ ಆಗಲಿರುವ ಪ್ರೇರಣಾ ನಮ್ಮ ಫ್ಯಾಮಿಲಿ ಫ್ರಂಡ್‌ ಮನೆಯ ಹುಡುಗಿ.

ನಮಗೆ ದೂರದ ಸಂಬಂಧಿ ಸಹ ಆಗಿದ್ದರೂ, ನಮ್ಮಿಬ್ಬರದು ಎರಡೂ ಕುಟುಂಬಗಳ ಮಾತುಕತೆ ಮೂಲಕ ಕೂಡಿ ಬಂದಿರುವ ಸಂಬಂಧ. ಎಮ್‌ಎನ್‌ಸಿ ಕಂಪನಿಯಲ್ಲಿ ಕೆಲಸದಲ್ಲಿರುವ ಪ್ರೇರಣಾ, ನಾನು ಕೆಲಸ ಮಾಡುತ್ತಿರುವ ಕ್ಷೇತ್ರದವರಲ್ಲ, ವಿಭಿನ್ನ ಫೀಲ್ಡ್‌ನಲ್ಲಿ ಇರುವವರು. ಕೆಲವೇ ಕುಟುಂಬಸ್ಥರು, ಆಪ್ತರ ಸಮ್ಮುಖದಲ್ಲಿ ಸಿಂಪಲ್‌ ಆಗಿ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದೇವೆ. ಮದುವೆಗೆ ಎಲ್ಲ ಸಂಬಂಧಿಕರು, ಪರಿಚಯಸ್ಥರು, ಸಿನಿರಂಗ, ಕಿರುತೆರೆ ಹಾಗು ಮಾಧ್ಯಮ ಮಿತ್ರರೆಲ್ಲರನ್ನೂ ಆಹ್ವಾನಿಸಲಿದ್ದೇವೆ' ಎಂದಿದ್ದಾರೆ. 

ಒಟ್ಟಿನಲ್ಲಿ, ಸದ್ಯ ಸೀರಿಯಲ್‌ ಹಾಗೂ ಸಿನಿಮಾರಂಗದ ಹಲವು ನಟನಟಿಯರ ನಿಶ್ಚಿತಾರ್ಥ ಹಾಗೂ ಮದುವೆ ಸುದ್ದಿಗಳು ಓಡಾಡತೊಡಗಿವೆ. ಸಿಂಗಲ್ ಇದ್ದವರು ಮಿಂಗಲ್ ಆಗುತ್ತಿರುವ ಸಮಾಚಾರ ಸದ್ದು ಮಾಡುತ್ತಿದೆ. ಇದೀಗ ನಟ ಸುಜಯ್ ಹೆಗಡೆ ಸಹ ಸಪ್ತಪದಿ ತುಳಿಯುವ ಹಾದಿಯಲ್ಲಿ ಸಾಗಿದ್ದಾರೆ. ಮುಂದೆ ಇನ್ಯಾರ ಎಂಗೇಜ್‌ಮೆಂಟ್, ಮ್ಯಾರೇಜ್ ನ್ಯೂಸ್ ಬರಲಿದೆ ಎಂಬ ಕುತೂಹಲ ಹಲವರನ್ನು ಖಂಡಿತ ಕಾಡುತ್ತಿದೆ. ಇದಕ್ಕೆ ಉತ್ತರ ಇದೇ ನ್ಯೂಸ್ ವೇದಿಕೆಯಲ್ಲಿ ಸಿಗಲಿದೆ, ಸ್ಟೇ ಟ್ಯೂನ್ ಹಿಯರ್ ಟು 'ಕನ್ನಡ.ಏಷ್ಯಾನೆಟ್‌ನ್ಯೂಸ್. ಕಾಮ್'..!

ಡಾ ರಾಜ್‌ಗೆ ಪದ್ಮಭೂಷಣ, ವಿಷ್ಣುವರ್ಧನ್‌ಗೆ ಚಪ್ಪಲಿ ಎಸೆತ; ಯಾಕಿಂಥ ಅನ್ಯಾಯ ನಡೆದಿತ್ತು?