Asianet Suvarna News Asianet Suvarna News

ಅದನ್ನು ಪದೇಪದೇ ಮುಟ್ಟಿಕೊಳ್ಳುವುದು ಸಮಸ್ಯೆಯಲ್ಲ, ಕಾರಣವಿದೆ: ನಮ್ರತಾ ಗೌಡ!

ಬಿಗ್ ಬಾಸ್ ಕನ್ನಡ ಸೀಸನ್ ಮುಗಿದು ಕಾರ್ತಿಕ್ ವಿನ್ನರ್ ಹಾಗೂ ಪ್ರತಾಪ್ ರನ್ನರ್ ಅಪ್ ಆಗಿದ್ದು ಬಹುತೇಕರಿಗೆ ಗೊತ್ತು. ಆದರೆ, ಕಳೆದ ಬಿಗ್ ಬಾಸ್ 10 ಸೀಸನ್‌ನಲ್ಲಿ ನಮ್ರತಾ ಗೌಡ ಅವರನ್ನು ಕೂಡ ವೀಕ್ಷಕರು ಸ್ಟ್ರಾಂಗ್ ಕಂಟೆಸ್ಟಂಟ್ ಎಂದು ಗುರುತಿಸಿದ್ದರು. ಫೈನಲ್ ಸಮೀಪ ಬಂದು..

Bigg Boss Kannada fame actress Namratha Gowda reveals her starnge secret with fact srb
Author
First Published May 27, 2024, 9:59 PM IST

ಯಾರಾದರೊಬ್ಬರ ಜೊತೆ ನಾನು ಮಾತನಾಡುವಾಗ ನರ್ವಸ್ ಆದರೆ ನಾನು ಹಾಗೆ ಮಾಡುತ್ತೇನೆ. ನೀವೇನು ಮಾಡುತ್ತೀರೋ ತಿಳಿಯದು. ಆದರೆ, ನನಗೆ ಅಂತಹ ವಿಚಿತ್ರ ಅಭ್ಯಾಸವಿದೆ. ನನಗೆ ಟೆನ್ಶನ್ ಆಗಿರುವಾಗ, ನಾನು ತುಂಬಾನೇ ಕಾಂಕ್ಶಿಯಸ್ ಆಗಿರುವಾಗ ನಾನು ಅದನ್ನು ಪದೇಪದೇ ಮುಟ್ಟಿಕೊಳ್ಳುತ್ತೇನೆ. ನನಗೇ ಅದು ತುಂಬಾ ವಿಚಿತ್ರ ಎನಿಸುತ್ತದೆ. ಆದರೆ, ಅದೊಂದು ಸಮಸ್ಯೆಯಲ್ಲ, ಅದಕ್ಕೊಂದು ಕಾರಣವಿದೆ ಎಂದು ನನಗೆ ಗೊತ್ತಿದೆ. ಹೀಗಾಗಿ ನನಗೆ ಆ ಬಗ್ಗೆ ಯಾವುದೇ ಮಜುಗರ ಅಥವಾ ಚಿಂತೆ ಇಲ್ಲ. 

Bigg Boss Kannada fame actress Namratha Gowda reveals her starnge secret with fact srb

ಅದೊಂದು ನನ್ನ ವಿಚಿತ್ರ ಕ್ಯಾರೆಕ್ಟರ್ ಎನ್ನಬಹುದು. ನನಗೆ ಆತಂಕವಾದಾಗ, ಅಥವಾ ನಾನು ಒಬ್ಬರ ಜತೆ ಮಾತನಾಡುವಾಗ ನನ್ನ ಮೂಗನ್ನು ಪದೇಪದೇ ಮುಟ್ಟಿಕೊಳ್ಳುತ್ತೇನೆ. ಅದು ನನಗೆ ಮೊದಮೊದಲು ಗೊತ್ತಾಗುತ್ತಲೇ ಇರಲಿಲ್ಲ, ಬೇರೆಯವರು ಹೇಳಿದ ಮೇಲೆ ಗೊತ್ತಾಗಿದ್ದು. ಆದರೆ ಈಗ ನನಗೇ ಗೊತ್ತು, ಆದರೂ ಅದನ್ನು ಮಾಡದೇ ಇರಲು ಆಗುವುದಿಲ್ಲ. ಕಾರಣ ಗೊತ್ತಿದೆ, ಪರಿಹಾರ ಸುಲಭ. ಆದರೆ ಸದ್ಯಕ್ಕೆ ಆಗುತ್ತಿಲ್ಲ ಅಷ್ಟೇ' ಎಂದಿದ್ದಾರೆ ಬಿಗ್ ಬಾಸ್ ಕನ್ನಡ ಸೀಸನ್ 10ರ ಸ್ಪರ್ಧಿ ನಮ್ರತಾ ಗೌಡ. 

ವಿವಾಹಿತನ ಸಂಬಂಧ ಮಾಡಿ ಮಕ್ಕಳೇ ಬೇಡ ಅಂದ್ಬಿಟ್ರು 'ಅಣ್ಣಯ್ಯ'ನ ಅಮ್ಮ ಅರುಣಾ ಇರಾನಿ!

ಹೌದು, ಬಿಗ್ ಬಾಸ್ ಕನ್ನಡ ಸೀಸನ್ ಮುಗಿದು ಕಾರ್ತಿಕ್ ವಿನ್ನರ್ ಹಾಗೂ ಪ್ರತಾಪ್ ರನ್ನರ್ ಅಪ್ ಆಗಿದ್ದು ಬಹುತೇಕರಿಗೆ ಗೊತ್ತು. ಆದರೆ, ಕಳೆದ ಬಿಗ್ ಬಾಸ್ 10 ಸೀಸನ್‌ನಲ್ಲಿ ನಮ್ರತಾ ಗೌಡ (Namratha Gowda) ಅವರನ್ನು ಕೂಡ ವೀಕ್ಷಕರು ಸ್ಟ್ರಾಂಗ್ ಕಂಟೆಸ್ಟಂಟ್ ಎಂದು ಗುರುತಿಸಿದ್ದರು. ಫೈನಲ್ ಸಮೀಪ ಬಂದು ಮನೆಯಿಂದ ಹೊರಹೋದವರಲ್ಲಿ ನಮ್ರತಾ ಗೌಡ ಕೂಡ ಒಬ್ಬರು. ಗೆಲುವಿಗಾಗಿ ಬಹಳಷ್ಟು ಪ್ರಯತ್ನಿಸಿ ಸೋತಿದ್ದಾರೆ ಎನ್ನಬಹುದು.

ಜಡೇಜಾ ಫ್ಯಾಮಿಲಿ ಸೊಸೆಯಾಗಲಿಲ್ಲ ಮಾಧುರಿ ದೀಕ್ಷಿತ್; ಕ್ರಿಕೆಟಿಗನ ಲವ್ ಬ್ರೇಕಪ್‌ ಆಗಿದ್ದೇಕೆ?

ಹೀಗಾಗಿ ಕಿರುತೆರೆ ಅಥವಾ ಬಿಗ್ ಬಾಸ್ ಅಭಿಮಾನಿ ವೀಕ್ಷಕರಿಗೆ ನಮ್ರತಾ ಗೌಡ ಅಚ್ಚುಮೆಚ್ಚಿನ ನಟಿ. ನಮ್ರತಾರ ಫ್ಯಾನ್ಸ್ ಫಾಲೋವರ್ಸ್ ಕೂಡ ಬಹಳಷ್ಟು ದೊಡ್ಡ ಸಂಖ್ಯೆಯಲ್ಲೇ ಇದೆ ಎಂಬುದನ್ನು ಮರೆಯುವ ಹಾಗಿಲ್ಲ. ಒಟ್ಟಿನಲ್ಲಿ, ನೀವು ಬಿಗ್ ಬಾಸ್ ಕನ್ನಡ ಶೋದಲ್ಲಿ ಕೂಡ ಇದನ್ನು ಗಮನಿಸಿರುತ್ತೀರಿ. Bigg Boss Kannada fame actress Namratha Gowda reveals her starnge secret with fact srbನಮ್ರತಾ ಪದೇಪದೇ ಮೂಗು ಮುಟ್ಟಿಕೊಳ್ಳುತ್ತಲೇ ಇದ್ದರು. ಮಾತನಾಡುತ್ತಿರುವಾಗಂತೂ ಬಹಳಷ್ಟು ಬಾರಿ ಅದೇ ಕೆಲಸ ಮಾಡುತ್ತಿದ್ದರು. ಅದನ್ನೀಗ ಅವರೇ ಸ್ವತಃ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ಆ ಸಮಸ್ಯೆಯ ಹಿಂದಿನ ಕಾರಣವನ್ನು ಸಹ ಅವರೇ ಹೇಳಿಕೊಂಡು ಅಚ್ಚರಿ ಮೂಡಿಸಿದ್ದಾರೆ!

ಡಾ ರಾಜ್‌ಗೆ ಪದ್ಮಭೂಷಣ, ವಿಷ್ಣುವರ್ಧನ್‌ಗೆ ಚಪ್ಪಲಿ ಎಸೆತ; ಯಾಕಿಂಥ ಅನ್ಯಾಯ ನಡೆದಿತ್ತು?

Latest Videos
Follow Us:
Download App:
  • android
  • ios