Asianet Suvarna News Asianet Suvarna News

ಮಂಚಕ್ಕೆ ಬರಲೊಪ್ಪದ್ದಕ್ಕೆ ಅವಕಾಶ ಕಳೆದುಕೊಂಡೆ; ಕಣ್ಣೀರಿಟ್ಟ ಗೋಲ್ಡನ್ ಸ್ಟಾರ್ ಹಿರೋಯಿನ್

ಕ್ಯಾಸ್ಟಿಗ್ ಕೌಚ್ ನೆನೆದು ಕಣ್ಣೀರಿಟ್ಟ ಗೋಲ್ಡನ್ ಸ್ಟಾರ್ ನಟಿ | ಮಂಚಕ್ಕೇರಲು ಒಪ್ಪದೇ ಇದ್ದುದ್ದಕ್ಕೆ ಸಿನಿಮಾದಿಂದ ಅವಕಾಶ ಕಳೆದುಕೊಂಡೆ ಎಂದ ನಟಿ | ಕನ್ನಡದಲ್ಲಿ 'ಮುಂಜಾನೆ' ಚಿತ್ರದಲ್ಲಿ ನಟಿಸಿದ್ದಾರೆ 

Actress Manjari Phadnis reveals on her casting couch
Author
Bengaluru, First Published Nov 24, 2019, 2:01 PM IST
  • Facebook
  • Twitter
  • Whatsapp

ಬಾಲಿವುಡ್‌ನಲ್ಲಿ ಕಾಸ್ಟಿಂಗ್ ಕೌಚ್ ಆರೋಪ ಕೇಳಿ ಬರುವುದು ಹೆಚ್ಚಾಗಿದೆ.  ಒಬ್ಬೊಬ್ಬರೇ ತಮ್ಮ ಅನುಭವಗಳನ್ನು ಹೇಳಿಕೊಳ್ಳುತ್ತಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ಜೊತೆ 'ಮುಂಜಾನೆ' ಸಿನಿಮಾದಲ್ಲಿ ನಟಿಸಿರುವ ನಟಿ ಮಂಜರಿ ಫಡ್ನೀಸ್ ಕ್ಯಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದಾರೆ. 

60 ದಾಟಿದರೂ ಬ್ಯೂಟಿಗಾಗಿ ದಿನಾ ಮೂತ್ರ ಕುಡಿಯುತ್ತಾರಂತೆ ಈ ಗಾಯಕಿ!

ನನ್ನ 15 ವರ್ಷದ ಸಿನಿ ಕರಿಯರ್‌ನಲ್ಲಿ ಸಾಕಷ್ಟು ಮಂದಿ ನಿರ್ಮಾಪಕರು ನನ್ನನ್ನು ರಿಜೆಕ್ಟ್ ಮಾಡಿದ್ದಾರೆ. ಕೆಲಸದ ಬದಲು ಮಂಚಕ್ಕೆ ಬಾ ಎಂದು ಕರೆದರು. ಒಪ್ಪದಿದ್ದಕ್ಕೆ ಸಿನಿಮಾದಿಂದ ನನ್ನನ್ನು ಕೈ ಬಿಟ್ಟರು.  ಅವರಿಗೆ 'ಹೊಂದಿಕೊಳ್ಳುವುದು' ಒಂದು ಟ್ಯಾಲೆಂಟ್. ಅದು ನನ್ನಿಂದ ಸಾಧ್ಯವಾಗಲಿಲ್ಲ.  ಹಾಗಾಗಿ ಸಾಕಷ್ಟು ಬಿಗ್ ಸಿನಿಮಾಗಳನ್ನು ಕೈ ಬಿಟ್ಟೆ. ಚಿಕ್ಕ ಬಜೆಟ್ ಸಿನಿಮಾಗಳನ್ನು ಮಾಡಿದೆ. ಅದು ಬಾಕ್ಸಾಫೀಸ್‌ನಲ್ಲಿ ಹಿಟ್‌ ಆಗಲಿಲ್ಲ.  ಇದರಿಂದ ಡಿಪ್ರೆಶನ್‌ಗೆ ಹೋದೆ. ಬಹಳ ಸಮಯದವರೆಗೆ ಡಿಪ್ರೆಶನ್‌ನಲ್ಲಿದ್ದೆ' ಎಂದಿದ್ದಾರೆ. 

'ಅದ್ದೂರಿ' ಮದುವೆಗೆ ಸಾಕ್ಷಿಯಾದ ಸ್ಯಾಂಡಲ್‌ವುಡ್‌ ಗಣ್ಯರು

ಮಂಜರಿ ಹಿಂದಿ, ತಮಿಳು ತೆಲುಗು, ಹಿಂದಿ, ಕನ್ನಡ, ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದಾರೆ.  ಕನ್ನಡದಲ್ಲ ಗೋಲ್ಡನ್ ಸ್ಟಾರ್ ಗಣೇಶ್ ಜೊತೆ 'ಮುಂಜಾನೆ' ಚಿತ್ರದಲ್ಲಿ ನಟಿಸಿದ್ದಾರೆ. 

ಮಂಚಕ್ಕೆ ಬರಲೊಪ್ಪದ್ದಕ್ಕೆ ಅವಕಾಶ ಕಳೆದುಕೊಂಡೆ; ಕಣ್ಣೀರಿಟ್ಟ ಗೋಲ್ಡನ್ ಸ್ಟಾರ್ ಹಿರೋಯಿನ್

ನವೆಂಬರ್ 24ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: 

 

Follow Us:
Download App:
  • android
  • ios