ಅಮೆರಿಕಾದ ಖ್ಯಾತ ಪಾಪ್ ಗಾಯಕಿ ಮಡೋನ್ನಾ 60 ದಾಟಿದರೂ ಇನ್ನೂ 20 ರ ಯುವತಿಯಂತಿದ್ದಾರೆ. ಈ ವಯಸ್ಸಿನಲ್ಲಿ ಹೇಗೆ ಸೌಂದರ್ಯವನ್ನು ಕಾಪಾಡಿಕೊಳ್ಳುತ್ತಾರೆ ಎಂಬುದನ್ನು ಅವರೇ ರಿವೀಲ್ ಮಾಡಿದ್ದಾರೆ. 

'ಕ್ವೀನ್ ಆಫ್ ಪಾಪ್' ಎಂದೇ ಹೆಸರು ಮಾಡಿರುವ ಅಮೆರಿಕನ್ ಸಿಂಗರ್ ಮಡೋನ್ನಾ 60 ಪ್ಲಸ್ ಆದರೂ, ಆರು ಮಕ್ಕಳ ತಾಯಿಯಾದರೂ ಇನ್ನೂ ಫಿಟ್ ಆfಯಂಡ ಫೈನ್ ಆಗಿದ್ದಾರೆ. ಈಗಲೂ ಅವರ ಬ್ಯೂಟಿ ಸ್ವಲ್ಪವೂ ಕುಂದಿಲ್ಲ. ಈ ವಯಸ್ಸಿನಲ್ಲಿ ಹೇಗಪ್ಪಾ ಬ್ಯೂಟಿ ಮೆಂಟೇನ್ ಮಾಡ್ತಾರೆ ಅಂತ ಯೋಚಿಸ್ತಿದೀರಾ? ಅವರ ಬ್ಯೂಟಿ ಟಿಪ್ಸ್ ಕೇಳಿದ್ರೆ ಶಾಕ್ ಆಗ್ತೀರಿ! 

Game of Thronesನಲ್ಲಿ ಬೆತ್ತಲಾದವಳ ನೋವಿದು

ಮಡೋನ್ನಾ ಬ್ಯೂಟಿ ಸೀಕ್ರೆಟ್ ವಿಡಿಯೋವನ್ನು ಇನ್ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಪ್ರತಿದಿನ ತಪ್ಪದೇ ಐಸ್ ಬಾತ್ ಮಾಡ್ತಾರಂತೆ. ಅದು 41 ಡಿಗ್ರಿಯಷ್ಟು ತಣ್ಣಗಿನ ನೀರಲ್ಲಿ! ಎಲ್ಲಾ ರೀತಿಯ ರೋಗಗಳಿಗೂ ಇದು ಮದ್ದು ಎಂಬುದು ಮಡೋನ್ನಾ ಅಭಿಪ್ರಾಯ. ಇಷ್ಟಕ್ಕೇ ಮುಗಿದಿಲ್ಲ. ಸ್ನಾನವಾದ ನಂತರ ಅವರ ಮೂತ್ರವನ್ನು ಅವರೇ ಕುಡಿಯುತ್ತಾರಂತೆ! ಇದು ಬೆಸ್ಟ್ ಆಯಂಟಿಸೆಪ್ಟಿಕ್ ಅಂತೆ! ಆರೋಗ್ಯಕ್ಕೆ ಬಹಳ ಒಳ್ಳೆಯದು ಎಂದು ಸ್ವಲ್ಪವೂ ಮುಜುಗರವಿಲ್ಲದೇ ಕುಡಿಯುತ್ತಾರಂತೆ. 

View post on Instagram

ಆದರೆ ವೈಜ್ಞಾನಿಕ ಅಧ್ಯಯನದ ಪ್ರಕಾರ ಮೂತ್ರವನ್ನು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಅದರಲ್ಲಿರುವ ಬ್ಯಾಕ್ಟೀರಿಯಾ, ಟಾಕ್ಸಿನ್ಸ್ ರಕ್ತದೊಳಗೆ ಸೇರಿದರೆ ಅನಾರೋಗ್ಯ ಉಂಟಾಗುವ ಸಾಧ್ಯತೆ ಇರುತ್ತದೆ.