ಭಾರತದ ತೆಕ್ಕೆಗೆ ಪಿಂಕ್ ಬಾಲ್ ಟೆಸ್ಟ್, ಬಿಡದಿ ಸ್ವಾಮಿ ಮೇಲೆ ರೇಪ್ ಕೇಸ್; ನ.24ರ ಟಾಪ್ 10 ಸುದ್ದಿ!

ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಐತಿಹಾಸಿಕ ಗೆಲುವು ಸಾಧಿಸಿದೆ. ಪಂದ್ಯವನ್ನೂ ಕೇವಲ ಎರಡೂವರೆ ದಿನಕ್ಕೆ ಮುಗಿಸಿದ ಹೆಗ್ಗಳಿಕೆಗೂ ಪಾತ್ರವಾಗಿದೆ. ಇತ್ತ ಬಿಡದಿ ಸ್ವಾಮಿ ನಿತ್ಯಾನಂದನ ವಿರುದ್ಧ ಭಕ್ತೆಯೊಬ್ಬಳು ರೇಪ್ ಕೇಸ್ ದಾಖಲಿಸಿದ್ದಾಳೆ. ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಿರುವ ಬಿಜೆಪೆ ಬಹುದೊಡ್ಡ ಆಘಾತ ಕಾದಿದೆ ಅನ್ನೋ ಮಾಹಿತಿ ಬಹಿರಂಗವಾಗಿದೆ. ಬಾಲಿವುಡ್ ನಟಿ ಕಣ್ಣೀರ ಕತೆ, ಜೋಡೆತ್ತು ಬದಲು ಕುಂಟೆತ್ತು ಪ್ರಯೋಗ ಸೇರಿದಂತೆ ನವೆಂಬರ್ 24ರ ಟಾಪ್ 10 ಸುದ್ದಿ.

Team India victory to bidadi nithyananda top 10 news of November 24

1) ಕೊಟ್ಟ ಹೊಡೆತಕ್ಕಿಂತ ದೊಡ್ಡ ಏಟು ತಿನ್ನುತ್ತಾ ಬಿಜೆಪಿ? NCP ಮುಂದಿನ ಆಯ್ಕೆ ಹೀಗಿದೆ

Team India victory to bidadi nithyananda top 10 news of November 24

NCP ಬಂಡಾಯ ನಾಯಕರ ಜೊತೆಗೂಡಿ ಬಿಜೆಪಿ ಸರ್ಕಾರ ರಚಿಸಿದೆ. ಶಿಷ್ಯನ ಒಳಸುಳಿ ಅರಿಯದ ಶರದ್ ಪವಾರ್ ಪೇಚಿಗೆ ಸಿಲುಕಿದರಾ ಎಂಬ ಅನುಮಾನ ಮೂಡಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಸದ್ಯ ಬಿಜೆಪಿಯು ತಾನು ಶಿವಸೇನೆ, ಕಾಂಗ್ರೆಸ್‌ಗೆ ನೀಡಿರುವ ಏಟಿಗಿಂತ ಬಹುದೊಡ್ಡ ಹೊಡೆತ ತಿನ್ನುತ್ತಾ ಎಂಬ ಅನುಮಾನವೂ ದಟ್ಟವಾಗಿದೆ. 

2) ದಿಢೀರ್ ಬೆಳವಣಿಗೆಯಲ್ಲ...!: ಅಜಿತ್ ಪವಾರ್ ಬಂಡಾಯಕ್ಕೆ ಕಾರಣ ಬಹಿರಂಗ!

Team India victory to bidadi nithyananda top 10 news of November 24

ತನ್ನ ರಾಜಕೀಯ ಗುರು ಶರದ್‌ ಪವಾರ್‌ ವಿರುದ್ಧವೇ ಅಜಿತ್‌ ಪವಾರ್‌ ಬಂಡೆದಿದ್ದು ಭಾರೀ ಅಚ್ಚರಿಗೆ ಕಾರಣವಾಗಿದೆ. ಆದರೆ ಇದೇನು ದಿಢೀರ್‌ ಬೆಳವಣಿಗೆಯಲ್ಲ. ಹಲವು ದಿನಗಳಿಂದ ನಡೆಯುತ್ತಿದ್ದ ಮುಸುಕಿನ ಗುದ್ದಾಟ ಇದೀಗ ಬೆಳಕಿಗೆ ಬಂದಿದೆ. ಈ ಬಂಡಾಯದ ಹಿಂದೆ ಹಲವು ಕಾರಣಗಳಿವೆ ಎನ್ನುತ್ತವೆ ಪಕ್ಷದ ಮೂಲಗಳು.

3) ನಾನು ಶಿವ, ನೀನು ಪಾರ್ವತಿ ಎಂದು ಅತ್ಯಾಚಾರ: ನಿತ್ಯಾನಂದ ವಿರುದ್ಧ ಸಿಡಿದೆದ್ದ 'ಶಿಷ್ಯೆ'!

Team India victory to bidadi nithyananda top 10 news of November 24

ಗುಜರಾತ್‌ನ ಯುವತಿಯರ ನಾಪತ್ತೆ ಪ್ರಕರಣದ ಬೆನ್ನಲ್ಲೇ ರಾಮನಗರ ಜಿಲ್ಲೆಯ ಬಿಡದಿ ಧ್ಯಾನಪೀಠ ಆಶ್ರಮದ ನಿತ್ಯಾನಂದ ಸ್ವಾಮಿ ಮತ್ತೊಂದು ವಿವಾದಕ್ಕೆ ಸಿಲುಕಿದ್ದು, ಆತನ ವಿರುದ್ಧ ವಿದೇಶದ ಮಾಜಿ ಭಕ್ತೆಯೊಬ್ಬಳು ಅತ್ಯಾಚಾರ ಆರೋಪ ಹೊರಿಸಿ ಪೊಲೀಸರಿಗೆ ದೂರು ನೀಡಿದ್ದಾಳೆ. ಶಿವ -ಪಾರ್ವತಿ ಆಟದ ಮೂಲಕ ಭಕ್ತೆಯನ್ನು ರೇಪ್ ಮಾಡಿದ ಆರೋಪ ಇದೀಗ ನಿತ್ಯಾನಂದ ಮೇಲೆ ಬಿದ್ದಿದೆ.

4) 2022ರಲ್ಲಿ ರಾಷ್ಟ್ರಪತಿ ಸ್ಥಾನಕ್ಕೆ ಶರದ್ ಪವಾರ್ NDA ಅಭ್ಯರ್ಥಿ: RSS ಚಿಂತಕನ ಭವಿಷ್ಯ!

Team India victory to bidadi nithyananda top 10 news of November 24

'ಮಹಾರಾಷ್ಟ್ರದಲ್ಲಿ ಶನಿವಾರ ಬಿಜೆಪಿ ಸರ್ಕಾರ ರಚಿಸಿದೆ. ಈ ವಿಚಾರದಲ್ಲಿ ಮೌನ ಕಾಪಾಡಿರುವ ಶರದ್ ಪವಾರ್ ಪರೋಕ್ಷವಾಗಿ ಸಮ್ಮತಿ ನೀಡಿದ್ದಾರೆ. ಹೀಗಿರುವಾಗ ಬಿಜೆಪಿಯು 2022ರಲ್ಲಿ ರಾಷ್ಟ್ರಪತಿ ಸ್ಥಾನಕ್ಕೆ ಶರದ್ ಪವಾರ್‌ರನ್ನು ಅಭ್ಯರ್ಥಿಯನ್ನಾಗಿಸಿ ಅವರಿಗೆ ಬಹುಮಾನ ನೀಡಬಹುದು' ಎಂದು ಭವಿಷ್ಯ ನುಡಿದಿದ್ದಾರೆ. 

5) HDK ಒಲವು ಬಿಜೆಪಿಯತ್ತ: ಸರ್ಕಾರ ಸೇಫ್ ಮಾಡ್ತಾರಂತೆ ಕುಮಾರಸ್ವಾಮಿ

Team India victory to bidadi nithyananda top 10 news of November 24

ನಾನು ಸರ್ಕಾರ ಕಾಪಾಡುತ್ತೇನೆ ಎಂದು ಹೇಳಿದ್ದೇನೆ. ಆದರೆ ಯಾವ ಸರ್ಕಾರ ಅಂತಾ ಹೇಳಿಲ್ಲ. ಒಟ್ಟಾರೆ ಸರ್ಕಾರ ಕಾಪಾಡ್ತೇನೆ. ಯಾವ ಸರ್ಕಾರ ಅನ್ನೋದನ್ನು ಡಿ.9 ರ ನಂತರ ತೀರ್ಮಾನ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಅವರು ಹೇಳು ಮೂಲಕ ರಾಜಕೀಯ ವಲಯದಲ್ಲಿ ಭಾರೀ ಸಂಚಲನವನ್ನ ಸೃಷ್ಟಿಸಿದ್ದಾರೆ. 

6) ಇಶಾಂತ್-ಉಮೇಶ್ ಬಿರುಗಾಳಿ, ಪಿಂಕ್ ಬಾಲ್ ಟೆಸ್ಟ್ ಟೀಂ ಇಂಡಿಯಾ ಕೈವಶ

Team India victory to bidadi nithyananda top 10 news of November 24

ಟೀಂ ಇಂಡಿಯಾ ಸಂಘಟಿತ ಪ್ರದರ್ಶನದ ನೆರವಿನಿಂದ ಐತಿಹಾಸಿಕ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಇನಿಂಗ್ಸ್ ಗೆಲುವು ದಾಖಲಿಸಿದೆ. ಈ ಮೂಲಕ ಹಗಲು-ರಾತ್ರಿ ಟೆಸ್ಟ್ ಪಂದ್ಯವನ್ನು ಸ್ಮರಣೀಯವಾಗಿಸಿಕೊಳ್ಳುವಲ್ಲಿ ವಿರಾಟ್ ಪಡೆ ಯಶಸ್ವಿಯಾಗಿದೆ.

7) ಮಂಚಕ್ಕೆ ಬರಲೊಪ್ಪದ್ದಕ್ಕೆ ಅವಕಾಶ ಕಳೆದುಕೊಂಡೆ; ಕಣ್ಣೀರಿಟ್ಟ ಗೋಲ್ಡನ್ ಸ್ಟಾರ್ ಹಿರೋಯಿನ್

Team India victory to bidadi nithyananda top 10 news of November 24

ಬಾಲಿವುಡ್‌ನಲ್ಲಿ ಕಾಸ್ಟಿಂಗ್ ಕೌಚ್ ಆರೋಪ ಕೇಳಿ ಬರುವುದು ಹೆಚ್ಚಾಗಿದೆ.  ಒಬ್ಬೊಬ್ಬರೇ ತಮ್ಮ ಅನುಭವಗಳನ್ನು ಹೇಳಿಕೊಳ್ಳುತ್ತಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ಜೊತೆ 'ಮುಂಜಾನೆ' ಸಿನಿಮಾದಲ್ಲಿ ನಟಿಸಿರುವ ನಟಿ ಮಂಜರಿ ಫಡ್ನೀಸ್ ಕ್ಯಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದಾರೆ. 

8) ಧ್ರುವ ಮದುವೆಗೆ ಬಂದು ಹಾರೈಸಿದವರಿಗೆ ಧನ್ಯವಾದ ತಿಳಿಸಿದ ಸರ್ಜಾ ಕುಟುಂಬ

Team India victory to bidadi nithyananda top 10 news of November 24

ಕನ್ನಡದ 'ಅದ್ದೂರಿ' ನಟ ಧ್ರುವ ಸರ್ಜಾ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಾಲ್ಯದ ಗೆಳತಿ ಪ್ರೇರಣಾ ಜೊತೆ ಸಪ್ತಪದಿ ತುಳಿದಿದ್ದಾರೆ. ಮದುವೆಗೆ ಬಂದು ಹಾರೈಸಿದ ಎಲ್ಲರಿಗೂ ಸರ್ಜಾ ಕುಟುಂಬದವರು ಧನ್ಯವಾದಗಳನ್ನು ಅರ್ಪಿಸಿದ್ದಾರೆ.  

9) ಫಾಸ್ಟ್ ಟ್ಯಾಗ್ ಇಲ್ದಿದ್ರೆ ಡಿ. 1 ರಿಂದ ದುಪ್ಪಟ್ಟು ಶುಲ್ಕ

Team India victory to bidadi nithyananda top 10 news of November 24

ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಸುಗಮ ಸಂಚಾರ, ದಟ್ಟಣೆ ನಿವಾರಣೆ, ಇಂಧನ ಉಳಿತಾಯದ ಉದ್ದೇಶದಿಂದ ಎಲ್ಲ ಟೋಲ್‌ ಪ್ಲಾಜಾಗಳಲ್ಲಿ ನಗದುರಹಿತ ಶುಲ್ಕ ಪಾವತಿ ವ್ಯವಸ್ಥೆಯಾದ ‘ಫಾಸ್ಟ್‌ ಟ್ಯಾಗ್‌’ ಅನ್ನು ಡಿ.1ರಿಂದ ದೇಶಾದ್ಯಂತ ಕಡ್ಡಾಯಗೊಳಿಸಲಾಗಿದ್ದು, ‘ಫಾಸ್ಟ್‌ ಟ್ಯಾಗ್‌’ ಹೊಂದಿಲ್ಲದೇ ಇದ್ದರೆ ದ್ವಿಗುಣ ಶುಲ್ಕ ಪಾವತಿಸಬೇಕಾಗುತ್ತದೆ.

10) ನಾರಾಯಣ ಗೌಡ, ವಿಜಯೇಂದ್ರ ಕುಂಟೆತ್ತುಗಳು ಎಂದ ಎಚ್‌ಡಿಕೆ

Team India victory to bidadi nithyananda top 10 news of November 24

ವಿಜಯೇಂದ್ರ ಹಾಗೂ ಕೆ. ಸಿ. ನಾರಾಯಣ ಗೌಡ ಜೋಡೆತ್ತುಗಳಲ್ಲ, ಕುಂಟೆತ್ತುಗಳು ಎಂದು ಮಾಜಿ ಸಿಎಂ ಎಚ್‌. ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಮಂಡ್ಯದ ಕೆ. ಆರ್. ಪೇಟೆಯಲ್ಲಿ ಮಾತನಾಡಿದ ಅವರು, ಜೆಡಿಎಸ್ ಅಭ್ಯರ್ಥಿ ಬಿ.ಎಲ್. ದೇವರಾಜು ಪರ ಮತಬೇಟೆ ನಡೆಸಿದ್ದಾರೆ.

Latest Videos
Follow Us:
Download App:
  • android
  • ios