ನಟಿ ಶ್ರೀದೇವಿ ಎರಡನೇ ಪುತ್ರಿ ಖುಷಿ ಕಪೂರ್ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಈಗಾಗಲೇ ಮೊದಲ ಪುತ್ರಿ ಜಾನ್ವಿ ಸಿನಿಮಾರಂಗದಲ್ಲಿ ಸಕ್ರೀಯರಾಗಿದ್ದಾರೆ. ಇದೀಗ ಖುಷಿಗೆ ಮಿಂಚಲು ಸಜ್ಜಾಗಿದ್ದು ಸಹೋದರಿಗೆ ಜಾನ್ವಿ ಡೇಟಿಂಗ್ ಸಲಹೆ ನೀಡಿದ್ದಾರೆ. 

ಭಾರತೀಯ ಸಿನಿಮಾರಂಗದ ಖ್ಯಾತ ನಟಿ ಶ್ರೀದೇವಿ ಪುತ್ರಿಯರು ಈಗ ಸದಾ ಸುದ್ದಿಯಲ್ಲಿರುತ್ತಾರೆ. ಜಾನ್ವಿ ಕಪೂರ್ ಮತ್ತು ಖುಷಿ ಕಪೂರ್ ಸಹೋದರಿಯರು ಬಾಲಿವುಡ್‌ನಲ್ಲಿ ಮಿಂಚುತ್ತಿದ್ದಾರೆ. ಜಾನ್ವಿ ಈಗಾಗಲೇ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟು ಅನೇಕ ವರ್ಷಗಳಾಗಿದೆ. ಕೆಲವು ಸಿನಿಮಾಗಳಲ್ಲಿಯೂ ಮಿಂಚಿದ್ದಾರೆ. ಇದೀಗ ಜಾನ್ವಿ ಸಹೋದರಿ ಖುಷಿ ಕಪೂರ್ ಬಾಲಿವುಡ್‌ಗೆ ಎಂಟ್ರಿ ಕೊಡುತ್ತಿದ್ದಾರೆ. ವೆಬ್ ಸೀರಿಸ್ ಮೂಲಕ ಖುಷಿ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಚಿತ್ರರಂಗಕ್ಕೆ ಬರ್ತಿರುವ ಸಹೋದರಿ ಖುಷಿಗೆ ಒಂದಿಷ್ಟು ಸಲಹೆ ನೀಡಿದ್ದಾರೆ. ಅದರಲ್ಲಿ ಡೇಟಿಂಗ್ ಸಲಹೆ ಕೂಡ ಒಂದು. ತಂಗಿ ಖುಷಿ ಚಿತ್ರರಂಗಕ್ಕೆ ಪ್ರವೇಸುತ್ತಿದ್ದಂತೆ ನಟರ ಜೊತೆ ಡೇಟಿಂಗ್ ಮಾಡಬೇಡ ಎಂದು ಹೇಳಿದ್ದಾರೆ. ತಂಗಿಯನ್ನು ತುಂಬಾ ಪ್ರೊಟೆಕ್ಟ್ ಮಾಡುತ್ತಿರುವ ಜಾನ್ವಿ ನಟರ ಜೊತೆ ಡೇಟಿಂಗ್ ಮಾಡದಂತೆ ತಡೆಯುತ್ತಿದ್ದಾರೆ. 

ಅಂದಹಾಗೆ ನಟಿ ಜಾನ್ವಿ ಕಪೂರ್ ಸದ್ಯ ಮಿಲಿ ಸಿನಿಮಾದ ರಿಲೀಸ್‌ಗೆ ಕಾಯುತ್ತಿದ್ದಾರೆ. ಈ ಸಿನಿಮಾ ನವೆಂಬರ್ ನಲ್ಲಿ ರಿಲೀಸ್ ಆಗುತ್ತಿದ್ದು ಈಗಾಗಲೇ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಅನೇಕ ವಾಹಿನಿ ಮತ್ತು ಯೂಟ್ಯೂಬ್ ಗಳಿಗೆ ಸಂದರ್ಶನ ನೀಡುತ್ತಿರುವ ಜಾನ್ವಿ ತನ್ನ ಸಿನಿಮಾದ ವಿಚಾರಗಳ ಜೊತೆಗೆ ಸಹೋದರಿ ಖುಷಿಯ ಬಗ್ಗೆಯೂ ಮತಾನಾಡಿದ್ದಾರೆ. ಇತ್ತೀಚಿಗೆ ನೀಡಿದ ಸಂದರ್ಶನವೊಂದರಲ್ಲಿ ಸಹೋದರಿ ಖುಷಿಗೆ ಸಲಹೆ ಏನು ಕೊಡುತ್ತೀರಿ ಎಂದು ಜಾನ್ವಿಗೆ ಕೇಳಲಾಯಿತು. ಇದಕ್ಕೆ ಜಾನ್ವಿ ಡೇಟಿಂಗ್ ಸಲಹೆ ನೀಡಿದ್ದಾರೆ. 'ನಟರೊಂದಿಗೆ ಡೇಟಿಂಗ್ ಮಾಡಬೇಡ. ನಾನು ಹಾಗೂ ಅವಳ ರೀತಿಯ ಹುಡುಗಿಯರು ನನ್ನ ರೀತಿಯೇ ಎಂದು ಬಾವಿಸುವುದರಿಂದ. ಇದು ತುಂಬಾ ಉತ್ತಮ' ಎಂದು ಹೇಳಿದ್ದಾರೆ.

ಕಟ್-ಔಟ್ ಡ್ರೆಸ್‌ನಲ್ಲಿ ಇಂಟರ್‌ನೆಟ್‌ಗೆ ಬೆಂಕಿ ಹಚ್ಚಿದ ಜಾನ್ವಿ ಕಪೂರ್ ಹಾಟ್‌ ಲುಕ್‌!

ನೀನು ನಿಮ್ಮ ಮೌಲ್ಯವನ್ನು ತಿಳಿದುಕೊಳ್ಳಿ. ಅವಳು ಪ್ರತಭಾವಂತೆ. ಆಕೆ ಚಿತ್ರರಂಗಕ್ಕೆ ವಿಶೇಷವಾದ ಕೊಡುಗೆ ನೀಡುತ್ತಾಳೆ ಎಂದು ನಾನು ಭಾವಿಸಿದ್ದೀನಿ' ಎಂದು ಹೇಳಿದರು. 
ಇನ್ನು ಸಾಮಾಜಿಕ ಜಾಲತಾಣದಲ್ಲಿ ಬರುವ ಟೀಕೆ ಮತ್ತು ಟ್ರೋಲ್‌ಗಳನ್ನು ಹೇಗೆ ನಿಭಾಸುತ್ತಾರೆ ಎಂದು ಜಾನ್ವಿ ಬಹಿರಂಗ ಪಡಿಸಿದರು. ಆಕೆ ಅದಕ್ಕಾಗಿ ಹೋರಾಟ ಮಾಡುತ್ತಾಳೆ ಎಂದು ಹೇಳಿದರು. 

ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಜಾನ್ವಿ ಹಾಟ್ನೆಸ್; 'ಮಿಲಿ' ಫೋಟೋ ವೈರಲ್

ಇನ್ನು ಖುಷಿ ಕಪೂರ್ ಬಗ್ಗೆ ಹೇಳುವುದಾದರೆ ದಿ ಆರ್ಚೀಸ್ ಸರಣಿ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಈ ಸರಣಿ ನೆಟ್‌ಫ್ಲಿಕ್ಸ್ ‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ದಿ ಆರ್ಚೀಸ್ ನಲ್ಲಿ ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ಮತ್ತು ಅಮಿತಾಭ್ ಬಚ್ಚನ್ ಮೊಮ್ಮಗಳು ಅಗಸ್ತ್ಯ ನಂದಾ ಕೂಡ ನಟಿಸುತ್ತಿದ್ದಾರೆ. ಜಾನ್ವಿ ಈಗಾಗಲೇ ಬಾಲಿವುಡ್‌ ಮಂದಿಯ ಗಮನ ಸೆಳೆದಿದ್ದು ಭರವಸೆಯ ನಟಿಯಾಗಿ ಹೊರಹೊಮ್ಮಿದ್ದಾರೆ. ಇದೀಗ ಸಹೋದರಿ ಖುಷಿ ಅಭಿನಯ ಹೇಗಿರಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ.