ನಟಿ ಗೌಹರ್ ಖಾನ್ ಮತ್ತು ಜೈದ್ ದರ್ಬಾರ್ ಎರಡನೇ ಮಗುವನ್ನು ನಿರೀಕ್ಷಿಸುತ್ತಿದ್ದಾರೆ. ಈ ಸಂತಸದ ಸುದ್ದಿಯನ್ನು ಅವರು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ಮೂಲಕ ಹಂಚಿಕೊಂಡಿದ್ದಾರೆ. 2023ರಲ್ಲಿ ಮೊದಲ ಮಗುವಿಗೆ ಪೋಷಕರಾದ ಈ ದಂಪತಿ, 2025ರಲ್ಲಿ ಎರಡನೇ ಮಗುವನ್ನು ಬರಮಾಡಿಕೊಳ್ಳಲಿದ್ದಾರೆ. ಅನೇಕ ಸೆಲೆಬ್ರಿಟಿಗಳು ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ತಡವಾಗಿ ಗರ್ಭಧರಿಸುವುದರಿಂದ ಉಂಟಾಗುವ ಸಮಸ್ಯೆಗಳ ಬಗ್ಗೆಯೂ ಮಾಹಿತಿಯಿದೆ.
ಹಿಂದಿ ಬಿಗ್ ಬಾಸ್ ಸೀಸನ್ 7ರ ವಿನ್ನರ್ 41ನೇ ಹರೆಯದ ನಟಿ ಮಾಡೆಲ್ ಗೌಹರ್ ಖಾನ್ ತಾನು ಎರಡನೇ ತಾಯಿಯಾಗುತ್ತಿರುವ ಬಗ್ಗೆ ಘೋಷಿಸಿದ್ದಾರೆ. ತಮ್ಮ ಪತಿ ಜೈದ್ ದರ್ಬಾರ್ ಅವರೊಂದಿಗೆ ಇನ್ಸ್ಟಾಗ್ರಾಮ್ನಲ್ಲಿ ಮುದ್ದಾದ ವೀಡಿಯೊವನ್ನು ಹಂಚಿಕೊಳ್ಳುವ ಮೂಲಕ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಗೌಹರ್ ಮತ್ತು ಜೈದ್ ನೃತ್ಯ ಮಾಡುತ್ತಾ ತಮ್ಮ ಅಭಿಮಾನಿಗಳ ಬಳಿ ಈ ಸಂತಸದ ಸುದ್ದಿಯನ್ನು ಹಂಚಿಕೊಂಡಿಕದ್ದಾರೆ. 2023 ರಲ್ಲಿ ಗೌಹರ್ ಖಾನ್ ಮತ್ತು ಜೈದ್ ದರ್ವಾರ್ ಮೊದಲ ಬಾರಿಗೆ ಪೋಷಕರಾದರು. ಗಂಡು ಮಗುವನ್ನು ಬರಮಾಡಿಕೊಂಡಿದ್ದರು. ಈಗ 2025 ರಲ್ಲಿ, ಗೌಹರ್ ತನ್ನ ಎರಡನೇ ಮಗುವಿಗೆ ಜನ್ಮ ನೀಡಲಿದ್ದಾರೆ.
"ಬಿಸ್ಮಿಲ್ಲಾ!! ನಿಮ್ಮ ಪ್ರಾರ್ಥನೆ ಮತ್ತು ಪ್ರೀತಿ ಬೇಕು. ಜಗತ್ತಿಗೆ ಪ್ರೀತಿಯನ್ನು ಹರಡಿ ಮತ್ತು ಎಲ್ಲರನ್ನು ನೃತ್ಯ ಮಾಡುವಂತೆ ಮಾಡಿ ಎಂದು ಎರಡನೇ ಮಗು ಬರುತ್ತಿರುವ ವಿಷ್ಯವನ್ನು ಡಾನ್ಸ್ ಮಾಡುವ ಮೂಲಕ ಹಂಚಿಕೊಂಡು ವೀಡಿಯೊಗೆ ಶೀರ್ಷಿಕೆ ನೀಡಿದ್ದಾರೆ. ನಟಿಯರಾದ ಅನಿತಾ ಹಸನಂದಾನಿಸ್, ಭಾರ್ತಿ ಸಿಂಗ್, ನಕುಲ್ ಮೆಹ್ತಾ, ಯುವಿಕಾ ಚೌಧರಿ, ವಿಶಾಲ್ ದದ್ಲಾನಿ, ಮಹಿ ವಿಜ್, ಕಾಮ್ಯಾ ಪಂಜಾಬಿ ಸೇರಿದಂತೆ ಹಲವು ತಾರೆಯರು ಗೌಹರ್-ಜೈದ್ ಅವರ ಪೋಸ್ಟ್‌ಗೆ ಕಾಮೆಂಟ್ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.
ನಾನು ಮುಸ್ಲಿಂ, ಭಾರತದಲ್ಲಿ ನನ್ನ ಹಕ್ಕುಗಳನ್ನು ಬ್ಯಾನ್ ಮಾಡಲಾಗದು: Gauhar Khan
2020ರ ನವೆಂಬರ್‌ನಲ್ಲಿ ಸಂಗೀತ ನಿರ್ದೇಶಕ Ismail Darbar ಅವರ ಪುತ್ರ ಝಯಾದ್ ದರ್ಬಾರ್‌ರ ಜೊತೆ ನಿಶ್ಚಿತಾರ್ಥ ಮಾಡಿಕೊಂಡು, ಅದೇ ವರ್ಷ ಡಿಸೆಂಬರ್ 25ರಂದು ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮೇ 10,2023ರಲ್ಲಿ ಗಂಡು ಮಗುವಿಗೆ ಜನ್ಮ ನೀಡಿದರು. ಆತನಿಗೆ ಜೆಹಾನ್ ಎಂದು ಹೆಸರಿಟ್ಟಿದ್ದಾರೆ. ಪತಿ ಜೈದ್ ದರ್ಬಾರ್ ಪ್ರಸಿದ್ಧ ನೃತ್ಯ ಸಂಯೋಜಕರಾಗಿದ್ದಾರೆ. ಬಿಗ್ ಬಾಸ್ ಸೀಸನ್ 7 ರ ಟ್ರೋಫಿ ಗೆದ್ದಿರುವ ಗೌಹರ್ ಸೀಸನ್ 8, 10, 11, ಮತ್ತು 13ರಲ್ಲಿ ಗೆಸ್ಟ್ ಆಗಿ ಭಾಗಿಯಾಗಿದ್ದರು. ಸೀಸನ್ 14ರಲ್ಲಿ ಎರಡು ವಾರಗಳ ಕಾಲ ಮನೆಯಲ್ಲಿದ್ದರು.
ಕೈದಿಗಳಿಗೆ ಜನಿಸಿದ ಮಕ್ಕಳ ಜನನ ಸ್ಥಳ ಜೈಲಾ? ಬರ್ತ್ ಸರ್ಟಿಫಿಕೇಟ್‌ನಲ್ಲಿ ಏನಿರುತ್ತೆ?
ತಡವಾಗಿ ಗರ್ಭಧರಿಸಿದರೆ ಆಗುವ ಸಮಸ್ಯೆಗಳು
ಮಹಿಳೆ ವಯಸ್ಸಾದಂತೆ, ಗರ್ಭಿಣಿಯಾಗುವುದು ಕಷ್ಟವಾಗುತ್ತದೆ. ಹೆಚ್ಚಿನ ಮಹಿಳೆಯರಿಗೆ 40 ವರ್ಷಗಳ ನಂತರ ಮಕ್ಕಳೇ ಇರುವುದಿಲ್ಲ. 40 ವರ್ಷದ ನಂತರ ಗರ್ಭ ಧರಿಸೋದ್ರಿಂದ ಕೆಲವೊಂದು ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ. ಈ ಸಮಯದಲ್ಲಿ ಆದಷ್ಟು ಜಾಗರೂಕವಾಗಿದ್ದರೆ ಆರೋಗ್ಯಕರ ಮಗುವನ್ನು ಹೊಂದಬಹುದು. ಇತ್ತೀಚಿನ ದಿನಗಳಲ್ಲಿ ಸೆಲೆಬ್ರಿಟಿಗಳಿ 40 ವರ್ಷದ ನಂತರ ಗರ್ಭ ಧರಿಸುತ್ತಿರುವ ಸಂಖ್ಯೆಗಳು ಹೆಚ್ಚುತ್ತಿವೆ. ಬಾಲಿವುಡ್ ನಟಿಯರಾದ ಕರೀನಾ ಕಪೂರ್, ದೀಪಿಕಾ ಪಡುಕೋಣೆ ಸೇರಿ ಹಲವು ಮಂದಿ 40ರ ಆಸುಪಾಸಿನಲ್ಲಿ ಮಕ್ಕಳನ್ನು ಮಾಡಿಕೊಂಡಿದ್ದಾರೆ.
ತಜ್ಞರ ಪ್ರಕಾರ 20 ರಿಂದ 30 ವಯಸ್ಸಿನ ಒಳಗಡೆ ಗರ್ಭಿಣಿಯಾದರೆ ಉತ್ತಮ. ಈ ವಯಸ್ಸಿನಲ್ಲಿ ಮಗುವಿಗೆ ಜನ್ಮ ನೀಡಿದ್ರೆ ಮಕ್ಕಳು ಆರೋಗ್ಯಕರವಾಗಿ ಇರುತ್ತಾರೆ. ಆಧುನಿಕ ಜೀವನ ಶೈಲಿಯಿಂದ 30 ರ ನಂತರ ಗರ್ಭ ಧರಿಸುವುದು ಬಹಳ ಕಷ್ಟ. ಜೊತೆಗೆ ಮಹಿಳೆಯರಲ್ಲಿ ಅನೇಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಮೊದಲ ಗರ್ಭಧಾರಣೆಯಿಂದ ಚೇತರಿಸಿಕೊಳ್ಳದ ಹೊರತು ಎರಡನೇ ಗರ್ಭಧಾರಣೆಗೆ ಸಿದ್ಧವಾಗಬಾರದು. ಎರಡು ಗರ್ಭಧಾರಣೆಯ ನಡುವೆ 18 ರಿಂದ 23 ತಿಂಗಳ ಅಂತರ ಇರಲೇಬೇಕು. 40 ವರ್ಷದ ನಂತರ ಗರ್ಭ ಧರಿಸೋದು ಸವಾಲಿನ ಸಂಗತಿಯಾಗಿದೆ. ಈ ವಯಸ್ಸಿನಲ್ಲಿ ಗರ್ಭ ಧರಿಸಿದಾಗ ಅನೇಕ ಸಮಸ್ಯೆ ಎದುರಾಗುತ್ತದೆ. ಸ್ನಾಯು ಸಮಸ್ಯೆಗಳು, ಕೀಲು ನೋವು ಅಧಿಕ ರಕ್ತದೊತ್ತಡ, ಮಧುಮೇಹ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ.
