ಮೀರತ್‌ನ ಸೌರಭ್ ರಜಪೂತ್ ಕೊಲೆ ಪ್ರಕರಣದ ಆರೋಪಿ ಮುಸ್ಕಾನ್ ರಸ್ತೋಗಿ ಜೈಲಿನಲ್ಲಿದ್ದು, ಗರ್ಭಿಣಿಯಾಗಿದ್ದಾಳೆ. ಭಾರತದ ಕಾನೂನಿನ ಪ್ರಕಾರ, ಜೈಲಿನಲ್ಲಿ ಜನಿಸಿದ ಮಗುವಿಗೆ ಶಿಕ್ಷೆಯಿಲ್ಲ, ಸಾಮಾನ್ಯ ಮಗುವಿನಂತೆ ಹಕ್ಕುಗಳಿವೆ. ಹೆರಿಗೆ ಸಮಯದಲ್ಲಿ ಗರ್ಭಿಣಿಯನ್ನು ಆಸ್ಪತ್ರೆಗೆ ದಾಖಲಿಸಲಾಗುವುದು. ಮಗುವಿನ ಜನನ ಪ್ರಮಾಣಪತ್ರದಲ್ಲಿ ಜೈಲಿನ ಹೆಸರಿರುವುದಿಲ್ಲ, ಆಸ್ಪತ್ರೆಯ ಹೆಸರಿರುತ್ತದೆ.  

ಮೀರತ್‌ ನ ಸೌರಭ್ ರಜಪೂತ್ ಕೊಲೆ (Meerut Saurabh Rajput Murder ) ಪ್ರಕರಣದ ಆರೋಪಿ, ಸೌರಭ್ ರಜಪೂತ್ ಪತ್ನಿ ಮುಸ್ಕಾನ್ ರಸ್ತೋಗಿ ಪ್ರಸ್ತುತ ಜೈಲಿನಲ್ಲಿದ್ದಾಳೆ. ಆಕೆ ಗರ್ಭಿಣಿ (pregnant)ಯಾಗಿದ್ದು, ಶೀಘ್ರವೇ ತಾಯಿಯಾಗಲಿದ್ದಾಳೆ ಎಂಬ ಸುದ್ದಿ ಇದೆ. ಮುಸ್ಕಾನ್ ಮಾತ್ರವಲ್ಲ, ಭಾರತೀಯ ಜೈಲಿನಲ್ಲಿ ಅನೇಕ ಗರ್ಭಿಣಿ ಕೈದಿಗಳು ಹಾಗೂ ತಾಯಂದಿರಿದ್ದಾರೆ. ಪ್ರತಿಯೊಬ್ಬ ಮಗುವಿಗೆ ಜನನ ಪ್ರಮಾಣ ಪತ್ರ ನೀಡಲಾಗುತ್ತೆ. ಆ ಪ್ರಮಾಣ ಪತ್ರದಲ್ಲಿ ಜನ್ಮ ಸ್ಥಳ ಎಲ್ಲಿ ಎಂಬುದನ್ನು ಉಲ್ಲೇಖಿಸಲಾಗುತ್ತದೆ. ಹಾಗಿದ್ರೆ ಜೈಲಿನಲ್ಲಿ ಜನಿಸಿದ ಮಕ್ಕಳ ಜನ್ಮ ಸ್ಥಳ ಯಾವುದು? ಜನನ ದಾಖಲೆ (birth record)ಯಲ್ಲಿ ಜನ್ಮ ಸ್ಥಳ ಜೈಲು ಅಂತಿರುತ್ತಾ? ಈ ಬಗ್ಗೆ ಭಾರತದ ಕಾನೂನು ಏನು ಹೇಳುತ್ತದೆ ಎಂಬ ವಿವರ ಇಲ್ಲಿದೆ. 

 ಭಾರತದ ಕಾನೂನು ಏನು ಹೇಳುತ್ತದೆ? : ಭಾರತೀಯ ಕಾನೂನಿನ ಪ್ರಕಾರ, ಮಗು ಜೈಲಿನಲ್ಲಿ ಜನಿಸ್ಲಿ ಇಲ್ಲ ಜೈಲಿನ ಹೊರಗೆ ಜನಿಸ್ಲಿ ಮಗುವಿಗೆ ಯಾವುದೇ ಶಿಕ್ಷೆ ವಿಧಿಸಲಾಗುವುದಿಲ್ಲ. ಜೈಲಿನಲ್ಲಿ ಜನಿಸಿದ ಮಗುವೂ ಸಾಮಾನ್ಯ ಮಗುವಿನಂತೆ ಬದುಕುತ್ತದೆ. ಅದಕ್ಕೂ ಎಲ್ಲ ಮಕ್ಕಳಂತೆ ಎಲ್ಲ ಹಕ್ಕು ಸಿಗುತ್ತದೆ. ಸಾಮಾನ್ಯ ಮಗುವಿನಂತೆ ಶಿಕ್ಷಣ, ಆರೋಗ್ಯ ಮತ್ತು ಭದ್ರತೆಯಂತಹ ಹಕ್ಕುಗಳನ್ನು ಜೈಲಿನಲ್ಲಿ ಜನಿಸಿದ ಮಗುವಿಗೂ ನೀಡಲಾಗುತ್ತದೆ.
ಕಾನೂನಿನ ಪ್ರಕಾರ, ಜೈಲಿನಲ್ಲಿ ಜನಿಸಿದ ಮಕ್ಕಳ ಜವಾಬ್ದಾರಿಯನ್ನು ಜೈಲು ಆಡಳಿತ ತೆಗೆದುಕೊಳ್ಳಬೇಕು. ಮಕ್ಕಳ ಸೂಕ್ತ ಬೆಳವಣಿಗೆಗೆ ಜೈಲಿನ ಅಧಿಕಾರಿಗಳು, ಸಿಬ್ಬಂಧಿ ಸೂಕ್ತ ವ್ಯವಸ್ಥೆ ಮಾಡಬೇಕು. 

ಪೆಟ್ರೋಲ್ ಬಂಕ್‌ನಲ್ಲಿ ಟಾಯ್ಲೆಟ್ ಮಾತ್ರವಲ್ಲ, ಜೋಡಿಗಳು ಬಯಸಿದಲ್ಲಿ

ಜನನ ಪ್ರಮಾಣಪತ್ರದಲ್ಲಿ ಜನ್ಮ ಸ್ಥಳ ಏನಿರುತ್ತೆ? : ಮಗು ಜೈಲಿನಲ್ಲಿ ಜನಿಸುವ ಕಾರಣ ಅದರ ಜನನ ಸ್ಥಳ ಜೈಲು ಎಂದು ನಮೂದಿಸಲಾಗುತ್ತದೆಯೇ? ನಿಮ್ಮ ಈ ಪ್ರಶ್ನೆಗೆ ಉತ್ತರ ಇಲ್ಲ. ಕಾನೂನಿನ ಪ್ರಕಾರ, ಗರ್ಭಿಣಿ ಹೆರಿಗೆ ಸಮಯದಲ್ಲಿ ಜೈಲಿನಲ್ಲಿ ವಾಸಮಾಡೋದಿಲ್ಲ. ಆಕೆಗೆ ಜೈಲಿನಲ್ಲಿ ಹೆರಿಗೆಗೆ ಅವಕಾಶ ನೀಡಲಾಗುವುದಿಲ್ಲ. ಹೆರಿಗೆ ಸಮಯದಲ್ಲಿ ಗರ್ಭಿಣಿಯನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗುತ್ತದೆ. ಮಗು ಜಿಲ್ಲಾ ಆಸ್ಪತ್ರೆಯಲ್ಲಿ ಜನಿಸುವ ಕಾರಣ ಮಗುವಿನ ಜನನ ಪ್ರಮಾಣಪತ್ರದಲ್ಲಿ ಜಿಲ್ಲಾ ಆಸ್ಪತ್ರೆಯ ಹೆಸರನ್ನು ಉಲ್ಲೇಖಿಸಲಾಗುತ್ತದೆ. ಯಾವುದೇ ಕಾರಣಕ್ಕೂ ಜೈಲಿನ ಹೆಸರನ್ನು ಇಲ್ಲಿ ಉಲ್ಲೇಖಿಸುವುದಿಲ್ಲ. ಜೈಲಿನ ವಾತಾವರಣ ಮಗುವಿನ ಮೇಲೆ ಯಾವುದೇ ರೀತಿಯಲ್ಲಿ ಪ್ರಭಾವ ಬೀರದಂತೆ ಎಚ್ಚರಿಕೆ ವಹಿಸಲಾಗುತ್ತದೆ. 

ಸರ್ಕಾರಿ ಅಂಕಿಅಂಶಗಳ ಪ್ರಕಾರ, ಭಾರತದ 1,330 ಜೈಲುಗಳಲ್ಲಿ 23,772 ಮಹಿಳಾ ಕೈದಿಗಳಿದ್ದಾರೆ. ಈ ಪೈಕಿ 1,500 ಕ್ಕೂ ಹೆಚ್ಚು ಮಹಿಳೆಯರು ತಮ್ಮ ಮಕ್ಕಳೊಂದಿಗೆ ಜೈಲಿನಲ್ಲಿ ವಾಸಿಸುತ್ತಿದ್ದಾರೆ. ಈ ಮಹಿಳೆಯರಲ್ಲಿ ಅರ್ಧಕ್ಕಿಂತ ಹೆಚ್ಚು ಮಹಿಳೆಯರು ಜೈಲಿನಲ್ಲಿ ತಮ್ಮ ಮಕ್ಕಳಿಗೆ ಜನ್ಮ ನೀಡಿದ್ದಾರೆ ಮತ್ತು ಈ ಎಲ್ಲಾ ಮಕ್ಕಳ ಜನನ ಪ್ರಮಾಣಪತ್ರಗಳಲ್ಲಿ ಜಿಲ್ಲಾ ಆಸ್ಪತ್ರೆಯ ಹೆಸರನ್ನು ಉಲ್ಲೇಖಿಸಲಾಗಿದೆ.

ಗರ್ಲ್‌ಫ್ರೆಂಡ್‌ಗೆ ಐಫೋನ್‌ ಕೊಡಿಸಲು ಕಿಡ್ನಿ ಮಾರಿದ ಹುಡುಗ!

ಇತ್ತೀಚೆಗೆ, ದೇಶಾದ್ಯಂತದ ಜೈಲುಗಳಲ್ಲಿ ಮಹಿಳಾ ಕೈದಿಗಳು ಮತ್ತು ಅವರ ಮಕ್ಕಳು ಸೇರಿದಂತೆ ಕೈದಿಗಳು ಎದುರಿಸುತ್ತಿರುವ ವಿವಿಧ ತೊಂದರೆಗಳ ಕುರಿತು ಅನೇಕ ವರದಿಗಳು ಹೊರಬಂದಿವೆ. ಜೈಲುಗಳಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚಿನ ಕೈದಿಗಳಿರುವುದು ಮತ್ತು ಮೂಲಭೂತ ಸೌಕರ್ಯಗಳು ಮತ್ತು ಆರೋಗ್ಯ ಸೌಲಭ್ಯಗಳ ಕೊರತೆಯ ಸಮಸ್ಯೆಯೂ ಉದ್ಭವಿಸಿದೆ. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (NHRC) ಈ ವಿಷಯವನ್ನು ಸ್ವಯಂಪ್ರೇರಿತವಾಗಿ ಪರಿಗಣಿಸಿದೆ. ಆಯೋಗವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ನಾಲ್ಕು ವಾರಗಳಲ್ಲಿ ವರದಿ ಸಲ್ಲಿಸುವಂತೆ ನೋಟಿಸ್ ಜಾರಿ ಮಾಡಿದೆ. ರಾಜ್ಯದ ಜೈಲುಗಳಲ್ಲಿ ಇರುವ ಮಹಿಳಾ ಕೈದಿಗಳ ಸಂಖ್ಯೆ, ತಾಯಂದಿರ ಕಾರಣ ಜೈಲಿನಲ್ಲಿರುವ ಮಕ್ಕಳ ಸಂಖ್ಯೆ ಸೇರಿದಂತೆ ಅನೇಕ ಮಾಹಿತಿಯನ್ನು ಕೇಳಲಾಗಿದೆ.