ಟ್ವಿಟ್ಟರ್‌ನಲ್ಲಿ ನಡೆಯುತ್ತಿರುವ ಚರ್ಚೆಯಲ್ಲಿ ಭಾಗಿಯಾದ ಗೌಹರ್ ಖಾನ್. ಏಕರೂಪ ಕಾನೂನು ನೀತಿ ಸರಿಯೇ?

ಹಿಂದಿ ಬಿಗ್ ಬಾಸ್ ಸೀಸನ್‌ 7ರ ಸ್ಪರ್ಧಿ ಗೌಹರ್ ಖಾನ್ ಟ್ಟಿಟರ್‌ನಲ್ಲಿ ಶುರುವಾಗಿರುವ ಏಕರೂಪ ಜಾರಿಗೆ ಸಂಬಂಧಿಸಿದ ಕಾನೂನು ಚರ್ಚೆಯಲ್ಲಿ ಭಾಗಿಯಾಗಿದ್ದಾರೆ. ತಮ್ಮ ಅಭಿಪ್ರಾಯ ಹಂಚಿಕೊಳ್ಳುವ ಮೂಲಕ ತಮ್ಮ ಹಕ್ಕನ್ನು ಯಾರೂ ಕಿತ್ತಿಕೊಳ್ಳಲು ಸಾಧ್ಯವಿಲ್ಲ, ಎಂದು ಹೇಳಿಕೊಂಡಿದ್ದಾರೆ. ಈ ವಿಚಾರದ ಬಗ್ಗೆ ಸಾಕಷ್ಟು ಟ್ರೋಲ್‌ಗಳು ಹರಿದಾಡುತ್ತಿದ್ದು, ಗೌಹರ್‌ ಖಾನ್ ಉತ್ತರ ನೀಡಿದ್ದಾರೆ. 

'ಭಾರತದಿಂದ ಹೊರಗಿರುವ ಅದೆಷ್ಟೋ ಮಂದಿಗೆ ಇನ್ನೂ ಗೊತ್ತಿಲ್ಲ ಹಿಂದು ಮತ್ತು ಮುಸ್ಲಿಮರಿಗೆ ಬೇರೆ ಬೇರೆ ಕಾನೂನಿದೆ ಎಂದು. ಹಿಂದುಗಳಿಗೆ ಸೆಕ್ಯೂಲರ್ code ಇದೆ. ಆದರೆ ಮುಸ್ಲಿಂ ನವರು ಮಾತ್ರ 4 ಮದುವೆ ಆಗಬಹುದು ಹಾಗೂ Sharia ಹೆಸರಿನಲ್ಲಿ ಹೆಂಡತಿ ಮತ್ತು ಹೆಣ್ಣು ಮಕ್ಕಳ ವಿದ್ಯಾಭ್ಯಾಸವನ್ನು ಕಿತ್ತುಕೊಳ್ಳುತ್ತಾರೆ. ಕಾನೂನು ಎಲ್ಲರಿಗೂ ಅನ್ವಯ ಆಗಬೇಕು,' ಎಂದು ಟ್ಟಿಟರ್ ಬಳಕೆದಾರರೊಬ್ಬರು ಟ್ಟೀಟ್ ಮಾಡಿದ್ದರು. ಅದಕ್ಕೆ ಗೌಹರ್ ಖಡಕ್ ಆಗಿ ಉತ್ತರ ಕೊಟ್ಟಿದ್ದಾರೆ.

ಗೌಹರ್ ಉತ್ತರ:
'ಹೇ ಲೂಸ್ ನಾನು ಮುಸ್ಲಿಂ. ನನ್ನ ಹಕ್ಕುಗಳನ್ನು ಯಾರೂ ಬ್ಯಾನ್ ಮಾಡುವಂತಿಲ್ಲ. ಭಾರತ ತುಂಬಾನೇ ಸೆಕ್ಯೂಲರ್. ವಿದೇಶಿಯರು ಪಡೆಯುತ್ತಿರುವ ಡಿಕ್ಟೇಟರ್‌ಶಿಪ್‌ ಇಲ್ಲಿಲ್ಲ. ನಿಮ್ಮ ಅಮೆರಿಕ ಸ್ಟೇಟ್ಸ್‌ಗೆ ತಕ್ಕಂತೆ ಇರಿ. ನಮ್ಮ ಭಾರತದ ಬಗ್ಗೆ ದ್ವೇಷ ಹೆಚ್ಚಿಕೊಳ್ಳಬೇಡಿ,' ಎಂದು ಉತ್ತರ ನೀಡಿದ್ದಾರೆ. ಗೌಹರ್ ಉತ್ತರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

BB15: ಗೀತಾ ಕಪೂರ್ ವಿರುದ್ಧ ತಿರುಗಿ ಬಿದ್ದ ನೆಟ್ಟಿಗರು, ಉಮರ್‌ ರಿಯಾಜ್‌ಗೆ ನ್ಯಾಯ ಬೇಕಿದೆ!

ಭಾರತೀಯರಿಗೆ ಮದುವೆ, ಆಸ್ತಿ ಮತ್ತು ಉತ್ತರಾಧಿಕಾರ ವಿಚಾರದಲ್ಲಿ ಒಂದೇ ಕಾನೂನು ಇರಬೇಕು, ಎಂದು ಏಕರೂಪ ಕಾನೂನು ಹೇಳುತ್ತದೆ. ಆದರೆ ಈಗ ದೇಶದಲ್ಲಿ ಬೇರೆ ಬೇರೆ ಧರ್ಮಗಳು ಬೇರೆ ಬೇರೆ ಕಾನೂನುಗಳನ್ನು ಅನುಸರಿಸುತ್ತಿವೆ. ಹೀಗಾಗಿ ಇದರ ಬಗ್ಗೆ ಚರ್ಚೆ ಶುರುವಾಗಿದೆ. 

Scroll to load tweet…

ಗೌಹರ್ ಖಾನ್‌ ತುಂಬಾನೇ ಬೋಲ್ಡ್‌ ಬೆಡಗಿ. ಬಿಗ್ ಬಾಸ್‌ 7ರಲ್ಲಿ ಅವರು ತೆಗೆದುಕೊಳ್ಳುತ್ತಿದ್ದ, ನಿರ್ಧಾರ ಮಾಡುತ್ತಿದ್ದ ಕೆಲಸಗಳನ್ನು ವೀಕ್ಷಕರು ಮೆಚ್ಚಿಕೊಂಡಿದ್ದಾರೆ. ಅದೇ ಸೀಸನ್‌ನಲ್ಲಿ ಜೊತೆಗಿದ್ದ ಕುಶಾಲ್ ತೆಂಡನ್‌ರನ್ನು ಪ್ರೀತಿಸುತ್ತಿದ್ದರು, ಆದರೆ ಕೆಲವು ವೈಯಕ್ತಿಕ ಕಾರಣಗಳಿಂದ ಬ್ರೇಕಪ್ ಮಾಡಿಕೊಂಡು, ದೂರವಾದರು. ಕಳೆದ ವರ್ಷ, ಅಂದ್ರೆ 2020ರ ನವೆಂಬರ್‌ನಲ್ಲಿ ಸಂಗೀತ ನಿರ್ದೇಶಕ Ismail Darbar ಅವರ ಪುತ್ರ ಝಯಾದ್ ದರ್ಬಾರ್‌ರ ಜೊತೆ ನಿಶ್ಚಿತಾರ್ಥ ಮಾಡಿಕೊಂಡು, ಡಿಸೆಂಬರ್ 25ರಂದು ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಪರ್ಸನಲ್‌ ಲೈಫ್‌ನಲ್ಲಿ ಬ್ಯುಸಿಯಾಗಿದ್ದರೂ, ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿದ್ದಾರೆ. 

Assault Case: 5 ವರ್ಷ ಬಳಿಕ ಮೌನ ಮುರಿದ ಭಾವನಾ ಮೆನನ್

    ಯಶ್ ರಾಜ್ ನಿರ್ದೆಶಕ ಮಾಡಿರುವ ರಾಕೇಟ್‌ ಸಿಂಗ್ ಚಿತ್ರದ ಮೂಲಕ ಬಾಲಿವುಡ್‌ ನಾಯಕಿಯಾಗಿ ಜರ್ನಿ ಅರಂಭಿಸಿದ್ದರು. ಇದಾದ ನಂತರ ಗೇಮ್, Ishaqzaade,ಫೀವರ್ ಸೇರಿದಂತೆ 13 ಸಿನಿಮಾಗಳಲ್ಲಿ ನಟಿಸಿದ್ದಾರೆ. 

    ಬಿಗ್ ಬಾಸ್ ಸೀಸನ್ 7 ರ ಟ್ರೋಫಿ ಗೆದ್ದಿರುವ ಗೌಹರ್‌ ಸೀಸನ್ 8, 10, 11, ಮತ್ತು 13ರಲ್ಲಿ ಗೆಸ್ಟ್ ಆಗಿ ಭಾಗಿಯಾಗಿದ್ದರು. ಸೀಸನ್‌ 14ರಲ್ಲಿ ಎರಡು ವಾರಗಳ ಕಾಲ ಮನೆಯಲ್ಲಿದ್ದರು ಸಿದ್ಧಾರ್ಥ್ ಶುಕ್ಲಾ ಜೊತೆ ಸ್ನೇಹ ಗಳಿಸಿಕೊಂಡರು. ಗೌಹರ್‌ ಖಾನ್ ಜನಪ್ರಿಯತೆ ಹೆಚ್ಚಾಗುತ್ತಿದ್ದಂತೆ ವೆಬ್‌ ಸೀರಿಸ್‌ ಮತ್ತು ಮೂರು ಮ್ಯೂಸಿಕ್ ಆಲ್ಬಂನಲ್ಲಿ ಕಾಣಿಸಿಕೊಂಡಿದ್ದಾರೆ.