ಯೂಟ್ಯೂಬ್‌ನಲ್ಲಿ ಸಿಕ್ಕಾಪಟ್ಟೆ ಟ್ರೆಂಡ್‌ ಆಗುತ್ತಿರುವ 'ಆರ್‌ಜಿವಿ ವರ್ಲ್ಡ್‌ ಥಿಯೇಟರ್‌' ಚಾನೆಲ್‌ ದಿನೆ ದಿನೇ ವೀಕ್ಷಕರ ಗಮನ ಸೆಳೆಯುತ್ತಿದೆ. ಇದಕ್ಕೆ ಕಾರಣವೇ ಚಾನಲ್ ಮಾಲೀಕ, ನಿರ್ದೇಶಕ ರಾಮ್‌ ಗೋಪಾಲ್ ವರ್ಮಾ. ಸಿನಿಮಾ ನಿರ್ದೇಶಿಸುವುದ ಬಿಟ್ಟು ಕಾಂಟ್ರೋವರ್ಸಿ ಸುತ್ತಾ ಸುತ್ತಾಡುತ್ತಿರುವ ವರ್ಮಾ ಕಿರುಚಿತ್ರವೊಂದನ್ನು ನಿರ್ದೇಶಿಸುತ್ತಿದ್ದಾರೆ. 

'ಪವರ್' ಟ್ರೈಲರ್ ನೋಡಲು 25 ರೂ. ಕಟ್ಟಿ; ಹೇಗೆಲ್ಲಾ ದುಡ್ಡು ಮಾಡಬಹುದು ನೋಡಿ?

ಹೌದು! ಇತ್ತೀಚಿಗೆ ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್‌ ಬಗ್ಗೆ ಸಿನಿಮಾ ಮಾಡುವುದಾಗಿ ಘೋಷಿಸಿದ್ದರು.  ಟೈಟಲ್‌ ಕೇಳಿಯೇ ಗರಂ ಆದ ಜನರು ಯೂಟ್ಯೂಬ್‌ನಲ್ಲಿ ರಿಲೀಸ್‌ ಆದ ಬಳಿಕ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂದು ಕಾದು ನೋಡಬೇಕಿದೆ. ಇನ್ನು 'ಅಲ್ಲು' ಹೆಸರಿನ ಸಿನಿಮಾನೇ ಶುರು ಮಾಡದ ವರ್ಮಾ, ಆಗಲೇ ಮತ್ತೊಂದು ಚಿತ್ರದ ಟೈಟಲ್ ರಿವೀಲ್ ಮಾಡಿದ್ದಾರೆ. ಅದುವೇ ಖ್ಯಾತ ರಾಷ್ಟ್ರೀಯ ಪತ್ರಕರ್ತನ ಬಗ್ಗೆ.

ಅರ್ನಬ್‌ ಸಿನಿಮಾ:
ಸುಶಾಂತ್ ಸಿಂಗ್ ಸಾವಿನ ಪ್ರಕರಣದ ಬಗ್ಗೆ ಬಾಲಿವುಡ್‌ ಸೆಲೆಬ್ರಿಟಿಗಳ ವಿರುದ್ಧ ತಿರುಗಿ ಬಿದ್ದಿರುವ ಅರ್ನಬ್‌ ಬಗ್ಗೆ ವರ್ಮಾ ಗರಂ ಆಗಿದ್ದಾರೆ.  ಅರ್ನಬ್‌ ಬಗ್ಗೆ ಬ್ಯಾಕ್ ಟು ಬ್ಯಾಕ್ ಟ್ಟೀಟ್ ಮಾಡುವ ಮೂಲಕ ವಿಚಾರವೊಂದನ್ನು ರಿವೀಲ್ ಮಾಡಿದ್ದಾರೆ. ಅದು ಸಿನಿಮಾ ಮಾಡುವುದಾಗಿ.

'ಅರ್ನಬ್ ಬಾಲಿವುಡ್ ಚಿತ್ರರಂಗದ ಬಗ್ಗೆ ಮಾತನಾಡುವುದನ್ನು ಕೇಳಿ ತುಂಬಾ ನೋವಾಗಿದೆ. ಕ್ರಿಮಿನಲ್ ಕನೆಕ್ಷನ್‌, ಗ್ಯಾಂಗ್ ರೇಪ್, ದಂಧೆ ಎಲ್ಲವನ್ನೂ ಲಿಂಕ್ ಮಾಡಿಕೊಂಡು ಮಾತನಾಡುತ್ತಿದ್ದಾರೆ. ದಿವ್ಯಾ ಭಾರತಿ, ಜೈ ಖಾನ್, ಶ್ರೀದೇವಿ ಹಾಗೂ ಸುಶಾಂತ್ ಸಿಂಗ್ ಸಾವನ್ನು ಲಿಂಕ್ ಮಾಡಿ ಇದು ಪೂರ್ನ ನಿಯೋಜಿತ ಕೊಲೆ ಎಂದೂ ಹೇಳಿದ್ದ ಈ ದಡ್ಡ,' ಎಂದು ಹೇಳುವ ಮೂಲಕ ಟ್ಟೀಟ್‌ ಸರಣಿ ಆರಂಭಿಸಿದ್ದರು.

ಪವನ್ ಕಲ್ಯಾಣ್ ನಂತರ ಮತ್ತೊಬ್ಬ ಮೆಗಾ ಪ್ಯಾಮಿಲಿಯ ನಟನನ್ನು ಟಾರ್ಗೆಟ್ ಮಾಡಿದ RGV?

'ಈ ನಾಲ್ಕು ವ್ಯಕ್ತಿ ಬೇರೆ ಬೇರೆ ಜಾಗದಲ್ಲಿ ಬೇರೆ ಬೇರೆ ರೀತಿಯಲ್ಲಿ ಸಾವಿಗೀಡಾಗಿದ್ದಾರೆ. ಆದರೆ ಅರ್ನಬ್ ಪ್ರಕಾರ ಎಲ್ಲರೂ ಒಂದೇ ರೀತಿ ಸತ್ತಿರುವುದು. ಅದು ಮರ್ಡರ್‌ ಎಂದು. ಯಾಕೆ ಅದಿತ್ಯಾ ಚೋಪ್ರಾ, ಕರಣ್ ಜೋಹಾರ್, ಮಹೇಶ್ ಭಟ್, ಶಾರುಖ್‌, ಸಲ್ಮಾನ್ ಖಾನ್‌ ಎಲ್ಲರೂ ಈ ಬೊಗಳುವ  ಅರ್ನಬ್‌‌ಗೆ ಹೆದರಿಕೊಳ್ಳುತ್ತಿದ್ದೀರಾ? 

ವರ್ಮಾ ಎಚ್ಚರಿಕೆ:
ಅರ್ನಬ್ ವರ್ತಿಸುತ್ತಿರುವ ರೀತಿ ಹಾಗೂ ಮಾಡುತ್ತಿರುವ ಕೆಲಸದ ಬಗ್ಗೆ ತಾನು ಸಿನಿಮಾ ಮಾಡುವುದಾಗಿ ವರ್ಮಾ ಹೇಳಿದ್ದಾರೆ. 'ಅರ್ನಬ್‌ - ದಿ ನ್ಯೂಸ್‌ ಪ್ರಾಸ್ಟಿಟ್ಯೂಟ್‌' ಎಂಬ ಟೈಟಲ್ ಸಹ ರಿವೀಲ್ ಮಾಡಿದ್ದಾರೆ. ಸತತ ಅಧ್ಯಯನ ಮಾಡಿದ ನಂತರ ನಾನು ಈ ಟ್ಯಾಗ್ ಲೈನ್ ನಿರ್ಧರಿಸಿರುವುದು,' ಎಂದೂ ವರ್ಮಾ ಬರೆದುಕೊಂಡಿದ್ದಾರೆ.

ಒಟ್ಟಿನಲ್ಲಿ ವರ್ಮಾ ಹೀಗೆ ಒಬ್ಬೊಬ್ಬ ಪ್ರಸಿದ್ಧ ವ್ಯಕ್ತಿಗಳ ಬಗ್ಗೆ  30 ನಿಮಿಷಗಳ ಸಿನಿಮಾ ಮಾಡಿದರೆ ಖಂಡಿತಾ ನಿಮ್ಮ ಬಗ್ಗೆಯೂ ಯಾರಾದರೂ ಸಿನಿಮಾ ಮಾಡುತ್ತಾರೆ, ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.

ತೆಲಗು ಸಿನಿಮಾ ಇಂಡಸ್ಟ್ರಿಯಲ್ಲಿ ಪವರ್ ಸ್ಟಾರ್ ಪವನ್ ಕಲ್ಯಾಣ್ ಅಂದರೆ ಜನರಿಗೆ ಎಲ್ಲಿಲ್ಲದ ಹುಚ್ಚು. ಅವರನ್ನು ಆರಾಧಿಸುತ್ತಾರೆ, ಗೌರವಿಸುತ್ತಾರೆ ಸಿನಿ ಪ್ರೇಮಿಗಳು. ಈ RGV ಅವರನ್ನೂ ಬಿಟ್ಟಿಲ್ಲ. ಇತ್ತೀಚೆಗೆ ಅವರ ಜೀವನಗಾಥೆಯನ್ನು ಚಿತ್ರ ಮಾಡುತ್ತೇನೆಂದು, ಕಲಾವಿದರೊಬ್ಬರಿಂದ ಶೂಟಿಂಗ್ ಮಾಡಿಸಿ Youtubeನಲ್ಲಿ ಶೇರ್ ಮಾಡಿ ಕೊಂಡಿದ್ದರು. ಕೇವಲ ಅರ್ಧ ಗಂಟೆ ಇದ್ದ ವಿಡಿಯೋವನ್ನು ಹಲವರು ವೀಕ್ಷಿಸಿದ್ದು, ವರ್ಮಾ ಲಕ್ಷಾಂತರ ರೂ. ಸಂಪಾದಿಸಿದ್ದಾರೆಂದೂ ಹೇಳಲಾಗಿತ್ತು. ಇದೇ ಖುಷಿಯಲ್ಲಿ ಅಲ್ಲು ಫ್ಯಾಮಿಲಿ ಸಿನಿಮಾ ಮಾಡುವುದಾಗಿಯೂ ಸುಳಿವು ಕೊಟ್ಟಿದ್ದರು ಈ ವಿವಾದಾತ್ಮಕ ನಿರ್ದೇಶಕ. 

ನಾಥೂರಾಮ್ ಗೋಡ್ಸೆ ಪರ ನಿಂತ RGV;ನ್ಯೂ ಪ್ರಾಜೆಕ್ಟ್‌ ಸುತ್ತಾ ವಿವಾದಗಳು ? 

ಮನಸ್ಸಿಗೆ ಬಂದಿದ್ದನ್ನು ಹಾಗೆಯೇ ಹೇಳುವ ವರ್ಮಾ ಹೇಳುವ ಹಲವು ಮಾತುಗಳ ಸತ್ಯಕ್ಕೆ ಹತ್ತಿರವಾದರೂ, ವಿವಾದಕ್ಕೆ ಎಡೆ ಮಾಡಿಕೊಡುವುದರಲ್ಲಿ ಅನುಮಾನವೇ ಇಲ್ಲ. ಒಟ್ಟಿನಲ್ಲಿ ಕಾಂಟ್ರೋವರ್ಸಿಯನ್ನು ಎನ್‌ಕ್ಯಾಶ್ ಮಾಡಿಕೊಳ್ಳುವ ಜಾಣ್ಮೆ ಈ ವರ್ಮಾರಿಗಿದೆ.