ತಮಿಳು ನಟ ಆರ್ಯ ಅಭಿನಯದ ವೆಟ್ಟುವಂ ಚಿತ್ರದ ಚಿತ್ರೀಕರಣದ ವೇಳೆ ಸ್ಟಂಟ್‌ಮ್ಯಾನ್ ರಾಜು ಅವರು ಕಾರು ಪಲ್ಟಿ ಸಾಹಸದ ಸಮಯದಲ್ಲಿ ದುರಂತವಾಗಿ ಸಾವನ್ನಪ್ಪಿದ್ದಾರೆ. ಈ ಘಟನೆಯನ್ನು ನಟ ವಿಶಾಲ್ ದೃಢಪಡಿಸಿದ್ದು, ಚಿತ್ರರಂಗದಲ್ಲಿ ಶೋಕ ಮಡುಗಟ್ಟಿದೆ.

ದಕ್ಷಿಣ ಭಾರತದ ಚಿತ್ರರಂಗದಲ್ಲಿ ಇಂದು ಬೆಳಗ್ಗೆ ಶ್ರೀನಿವಾಸರಾವ್ ಅವರ ನಿಧನದಿಂದಾಗಿ ತೆಲುಗು ಚಿತ್ರರಂಗವು ಶೋಕದಲ್ಲಿ ಮುಳುಗಿತ್ತು. ಇದೀಗ ತಮಿಳು ಸಿನಿಮಾದ ಸಾಹಸ ದೃಶ್ಯ ಚಿತ್ರೀಕರಣದ ವೇಳೆ ಸ್ಟಂಟ್ ಮಾಸ್ಟರ್ ನಿಧನರಾಗಿದ್ದಾರೆ. ಈ ಮೂಲಕ ತಮಿಳು ಚಿತ್ರರಂಗವೂ ಶೋಕಸಾಗರದಲ್ಲಿ ಮುಳುಗಿದೆ. ಈ ವಿಚಾರವನ್ನು ಸ್ವತಃ ಸ್ಟಾರ್ ನಟ ವಿಶಾಲ್ ಅವರು ದೃಢಪಡಿಸಿದ್ದಾರೆ.

ತಮಿಳು ಸ್ಟಾರ್ ನಟ ವಿಶಾಲ್ ಅವರು ನಟ ಆರ್ಯ ಅವರ ವೆಟ್ಟುವಂ ಚಿತ್ರದ ಚಿತ್ರೀಕರಣದ ವೇಳೆ ಸಾಹಸ ಕಲಾವಿದರೊಬ್ಬರು ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಿದ್ದಾರೆ. ಜುಲೈ 13 ರಂದು ಪಾ. ರಂಜಿತ್ ನಿರ್ದೇಶನದ ಆರ್ಯ ಅವರ ಚಿತ್ರದ ಸೆಟ್‌ನಲ್ಲಿ ಈ ದುರ್ಘಟನೆ ಸಂಭವಿಸಿದೆ. ಈ ವೇಳೆ ಕಾರು ಸೀಕ್ವೆನ್ಸ್ ದೃಶ್ಯವನ್ನು ಚಿತ್ರೀಕರಿಸಲಾಗುತ್ತಿತ್ತು. ಈ ವೇಳೆ ಕಾರು ಪಲ್ಟಿಯಾಗುವ ಸಾಹಸದಲ್ಲಿ ರಾಜು ಸಾವನ್ನಪ್ಪಿದ್ದಾರೆ ಎಂಬ ಮಾಹಿತಿಯನ್ನು ತಮಿಳು ನಟ ವಿಶಾಲ್ ಮಾಹಿತಿ ಹಂಚಿಕೊಂಡಿದ್ದಾರೆ.

ಪಾ.ರಂಜಿತ್ ನಿರ್ದೇಶನ ಹಾಗೂ ನಟ ಆರ್ಯಾ ಅವರ ಮುಂದಿನ ಚಿತ್ರ 'ವೆಟ್ಟುವಂ' ಚಿತ್ರದ ಶೂಟಿಂಗ್ ವೇಳೆ, ಕಾರ್ ಸ್ಟಂಟ್ ನಡೆಸುತ್ತಿದ್ದ ಪ್ರತಿಭಾವಂತ ಸ್ಟಂಟ್ ಕಲಾವಿದ ರಾಜು ಅಪಘಾತಕ್ಕೀಡಾಗಿ ಮೃತಪಟ್ಟ ದುಃಖಕರ ಘಟನೆ ಬೆಳಕಿಗೆ ಬಂದಿದೆ . 13 ಜುಲೈ ಬೆಳಗ್ಗೆ ಚಿತ್ರಶೂಟಿನಲ್ಲಿರುವ ಕಾರ್‌ಸ್ಟಂಟ್ ದೃಶ್ಯವೊಂದರಲ್ಲಿ, ಸ್ಟಂಟ್ ಮಾಡಿ ತೋರಿಸಿದ ಕ್ಷಣದಲ್ಲಿ ಸಂಭವಿಸಿದ ಅಪಘಾತದಲ್ಲಿ ಸ್ಟಂಟ್ ಕಲಾವಿದ್ದ ಎಸ್.ಎಂ. ರಾಜು ಮೃತಪಟ್ಟಿದ್ದಾರೆ . ಈ ಶಾಕ್ ಮಾಹಿತಿ ತಮಿಳ್ ಚಿತ್ರರಂಗವನ್ನು ಶೋಕದಲ್ಲಿ ಮುಳುಗುವಂತೆ ಮಾಡಿದೆ.

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿರುವ ಅವರು, ವೆಟ್ಟುವಂ ಚಿತ್ರಕ್ಕಾಗಿ ಕಾರು ಉರುಳಿಸುವ ದೃಶ್ಯವನ್ನು ಮಾಡುವಾಗ ಸ್ಟಂಟ್ ಕಲಾವಿದ ರಾಜು ಇಂದು ಬೆಳಿಗ್ಗೆ ನಿಧನರಾದರು ಎಂಬ ಅಂಶವನ್ನು ಅರಗಿಸಿಕೊಳ್ಳಲು ತುಂಬಾ ಕಷ್ಟವಾಗುತ್ತಿದೆ. ರಾಜು ಅವರನ್ನು ನಾನು ಹಲವು ವರ್ಷಗಳಿಂದ ತಿಳಿದಿದ್ದೇನೆ. ಮತ್ತು ಅವರು ನನ್ನ ಚಿತ್ರಗಳಲ್ಲಿ ಹಲವು ಅಪಾಯಕಾರಿ ಸಾಹಸಗಳನ್ನು ಮಾಡಿದ್ದಾರೆ. ಅವರು ತುಂಬಾ ಧೈರ್ಯಶಾಲಿ ವ್ಯಕ್ತಿಯಾಗಿದ್ದರು. 

ಅವರ ಸಾವಿಗೆ ನನ್ನ ತೀವ್ರ ಸಂತಾಪಗಳು ಮತ್ತು ಅವರ ಆತ್ಮಕ್ಕೆ ಶಾಂತಿ ಸಿಗಲಿ. ದೇವರು ಅವರ ಕುಟುಂಬಕ್ಕೆ ಅವರ ನಷ್ಟವನ್ನು ಭರಿಸುವ ಹೆಚ್ಚಿನ ಶಕ್ತಿಯನ್ನು ನೀಡಲಿ. ಇದು ಸಂತಾಪದ ಟ್ವೀಟ್ ಮಾತ್ರವಲ್ಲ, ಅವರ ಕುಟುಂಬದ ಭವಿಷ್ಯಕ್ಕಾಗಿ ಖಂಡಿತವಾಗಿಯೂ ಇರುತ್ತದೆ. ಒಂದೇ ಚಲನಚಿತ್ರೋದ್ಯಮದಿಂದ ಬಂದವರು ಮತ್ತು ಹಲವಾರು ಚಿತ್ರಗಳಿಗೆ ಅವರು ನೀಡಿದ ಕೊಡುಗೆಗಾಗಿ. ನನ್ನ ಹೃದಯಪೂರ್ವಕವಾಗಿ ನಾನು ಅವರಿಗೆ ನನ್ನ ಬೆಂಬಲವನ್ನು ನೀಡುತ್ತೇನೆ ಎಂದು ಹೇಳಿದ್ದಾರೆ.

Scroll to load tweet…