- Home
- Entertainment
- Sandalwood
- ರಾಜಸ್ಥಾನದಲ್ಲಿ ಡೆವಿಲ್ ಚಿತ್ರೀಕರಣ ಮುಗಿಸಿದ ದರ್ಶನ್: ಸಿನಿಮಾದ ವಿಲನ್ ಯಾರು ಗೊತ್ತಾ?
ರಾಜಸ್ಥಾನದಲ್ಲಿ ಡೆವಿಲ್ ಚಿತ್ರೀಕರಣ ಮುಗಿಸಿದ ದರ್ಶನ್: ಸಿನಿಮಾದ ವಿಲನ್ ಯಾರು ಗೊತ್ತಾ?
ರಾಜಸ್ಥಾನದ ಅಪರೂಪದ ಸ್ಥಳಗಳಲ್ಲಿ ವಾರದಿಂದ ನಡೆದ ‘ಡೆವಿಲ್’ ಚಿತ್ರೀಕರಣ ಮುಕ್ತಾಯ. ದರ್ಶನ್, ನಾಯಕಿ ರಚನಾ ರೈ ಮತ್ತಿತರರು ಭಾಗಿ. ಮಾಸಾಂತ್ಯಕ್ಕೆ ಹಾಡುಗಳ ಚಿತ್ರೀಕರಣವೂ ಅಂತ್ಯವಾಗುವ ನಿರೀಕ್ಷೆ.

ರಾಜಸ್ಥಾನದಲ್ಲಿ ನಡೆಯುತ್ತಿದ್ದ ‘ಡೆವಿಲ್’ ಸಿನಿಮಾದ ಶೂಟಿಂಗ್ ಮುಕ್ತಾಯಗೊಂಡಿದೆ ಎನ್ನಲಾಗಿದೆ. ರಾಜಸ್ಥಾನ ಹಾಗೂ ಉದಯಪುರದ, ಈವರೆಗೆ ಯಾವ ಸಿನಿಮಾಗಳಲ್ಲೂ ಕಾಣಿಸಿಕೊಳ್ಳದ ಅಪರೂಪದ ತಾಣಗಳಲ್ಲಿ ಕಳೆದೊಂದು ವಾರದಿಂದ ‘ಡೆವಿಲ್’ ಸಿನಿಮಾದ ಮೂರನೇ ಹಂತದ ಶೂಟಿಂಗ್ ಭರದಿಂದ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ದರ್ಶನ್ ಜೊತೆ ನಾಯಕಿ ರಚನಾ ರೈ, ಅಚ್ಯುತ್ ಕುಮಾರ್, ಮಹೇಶ್ ಮಂಜ್ರೇಕರ್, ಶರ್ಮಿಳಾ ಮಾಂಡ್ರೆ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಮೂಲಗಳ ಪ್ರಕಾರ ದರ್ಶನ್ ಮಾತಿನ ಭಾಗದ ಚಿತ್ರೀಕರಣ ಮುಕ್ತಾಯವಾಗಿದೆ.
ಏಪ್ರಿಲ್ ಕೊನೆಯಲ್ಲಿ ಹಾಡುಗಳ ಚಿತ್ರೀಕರಣ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಪ್ರಕಾಶ್ ವೀರ್ ನಿರ್ದೇಶನ, ನಿರ್ಮಾಣದ ಚಿತ್ರವಿದು. ಮಾಸಾಂತ್ಯಕ್ಕೆ ಹಾಡುಗಳ ಚಿತ್ರೀಕರಣವೂ ಅಂತ್ಯವಾಗುವ ನಿರೀಕ್ಷೆ.
ಡೆವಿಲ್‌ನಲ್ಲಿ ಬಾಲಿವುಡ್ ವಿಲನ್ ಮಹೇಶ್ ಮಂಜ್ರೇಕರ್: ಖ್ಯಾತ ಬಾಲಿವುಡ್ ನಟ ಮಹೇಶ್ ಮಂಜ್ರೇಕರ್ ದರ್ಶನ್ ನಟನೆಯ ‘ಡೆವಿಲ್’ ಸಿನಿಮಾಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಈ ಚಿತ್ರದಲ್ಲಿ ವಿಲನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ನಟ ಮಹೇಶ್ ಮಂಜ್ರೇಕರ್, ಇದೇ ಮೊದಲ ಸಲ ಕನ್ನಡ ಸಿನಿಮಾದಲ್ಲಿ ನಟಿಸುತ್ತಿದ್ದೇನೆ. ನನಗೆ ಸ್ಯಾಂಡಲ್‌ವುಡ್ ಚಿತ್ರಗಳಲ್ಲಿ ನಟಿಸಬಾರದು ಎಂದಿರಲಿಲ್ಲ. ಆದರೆ ಈವರೆಗೆ ಇಲ್ಲಿನವರು ನನ್ನನ್ನು ಸಂಪರ್ಕಿಸಿರಲಿಲ್ಲ.
ಡೆವಿಲ್ ಸಿನಿಮಾದ ನಿರ್ದೇಶಕ ಪ್ರಕಾಶ್ ವೀರ್ ಸಂಪರ್ಕಿಸಿ ನರೇಶನ್ ನೀಡಿದರು. ಮನಸ್ಸಿಗೆ ಹಿಡಿಸಿತು. ಒಪ್ಪಿ ನಟಿಸುತ್ತಿದ್ದೇನೆ. ಒಟ್ಟು 30 ದಿನಗಳ ಕಾಲ ಶೂಟಿಂಗ್‌ನಲ್ಲಿ ಭಾಗಿಯಾಗಲಿದ್ದೇನೆ. ಇಷ್ಟು ಹೇಳಿದರೇ ನಿಮಗೆ ನನ್ನ ಪಾತ್ರದ ಮಹತ್ವ ಏನು ಅಂತ ತಿಳಿಯಬಹುದು ಎಂದಿದ್ದಾರೆ.
ಸದ್ಯ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಗುರುತಿಸಿಕೊಂಡ ಕಾರಣ ಕಳೆದ 9 ತಿಂಗಳಿನಿಂದ ದರ್ಶನ್ ವಿಮಾನ ಏರಿರಲಿಲ್ಲ. ಜೈಲು ಸೇರಿದ ಬಳಿಕ ಇದೇ ಮೊದಲ ಬಾರಿ ಹೊರರಾಜ್ಯಕ್ಕೆ ಪ್ರಯಾಣಿಸುತ್ತಿದ್ದಾರೆ.